ಸೆಂಟ್ರಲ್ ವಿಸ್ತಾ ತಡೆ ನಿವಾರಿಸಿದ ಕೋರ್ಟ್, ಮದ್ಯ ಖರೀದಿಗೆ ಲಸಿಕೆ ಸರ್ಟಿಫಿಕೇಟ್; ಮೇ.31ರ ಟಾಪ್ 10 ಸುದ್ದಿ

By Suvarna NewsFirst Published May 31, 2021, 4:47 PM IST
Highlights

ಸೆಂಟ್ರಲ್ ವಿಸ್ತಾ ಯೋಜನೆಗೆ ಇದ್ದ ತಡೆಯವನ್ನು ಹೈಕೋರ್ಟ್ ನಿವಾರಣೆ ಮಾಡಿದೆ. ರಾಜ್ಯದಲ್ಲಿ ಜೂನ್ 7ರ ಬಳಿಕ ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಮದ್ಯ ಖರೀದಿಗೆ ಕೋವಿಡ್ ಲಸಿಕೆ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ. ರಶ್ಮಿಕಾ ಮಂದಣ್ಣ ಕಾಲೇಜ್ ಡೇಸ್ ಫೋಟೋ, ಕೋವಿಡ್ ಚೇತರಿಸಿಕೊಂಡವರಲ್ಲಿ ಹಾರ್ಟ್ ಆ್ಯಟಾಕ್ ಸೇರಿದಂತೆ ಮೇ.31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಮದ್ಯ ಖರೀದಿಗೆ ಕೋವಿಡ್ ಲಸಿಕೆ ಸರ್ಟಿಫಿಕೇಟ್ ಕಡ್ಡಾಯ; ಅಚ್ಚರಿ ತಂದ ನೋಟಿಸ್!...

ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ಎಲ್ಲಾ ಮದ್ಯದ ಅಂಗಡಿಗಳ ಮುಂದೆ ಹಾಕಿರುವ  ನೋಟಿಸ್ ಕುಡುಕರ ಆಕ್ರೋಶ ಹೆಚ್ಚಿಸಿದೆ.  ಕೊರೋನಾ ಲಸಿಕೆ ಸರ್ಟಿಫಿಕೇಟ್ ಇದ್ದವರಿಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ಎಂದು ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳ ಮುಂದೆ ನೋಟಿಸ್ ಅಂಟಿಸಿದ್ದಾರೆ. 

ಅಪ್ಪಾ ಲವ್ ಯು ಅಪ್ಪಾ' ಸೈಕಲ್ ಗರ್ಲ್‌ ಜ್ಯೋತಿ ತಂದೆ ಹೃದಯಾಘಾತದಿಂದ ನಿಧನ...

ಕಳೆದ ವರ್ಷ ಲಾಕ್ ಡೌನ್ ನಲ್ಲಿ ಗಾಯಾಳು ತಂದೆ ಮೋಹನ್ ಪಾಸ್ವಾನ್ ಅವರನ್ನು  ಸೈಕಲ್ ನಲ್ಲಿ ಕೂರಿಸಿಕೊಂಡು 200 ಕಿ.ಮೀ ಕ್ರಮಿಸಿದ್ದ  ಬಾಲಕಿಗೆ ಈ ವರ್ಷ ಆಘಾತ.  ಬಾಲಕಿ ತಂದೆಯನ್ನು ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಜೂ.7ರ ಬಳಿಕವೂ ಲಾಕ್‌ಡೌನ್ ಫಿಕ್ಸ್!?...

ಕರುನಾಡಲ್ಲಿ ಲಾಕ್ ಡೌನ್ ಮತ್ತೆ ಫಿಕ್ಸ್..!? ಸಾಧ್ಯತೆ ಇದೆ. ಸದ್ಯ ಜೂನ್ 7 ರವರೆಗೆ ಲಾಕ್‌ಡೌನ್ ಇದ್ದು ಬಳಿಕವೂ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸೋದು ಖಚಿತ ಎನ್ನಲಾಗಿದೆ.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಹೆಚ್ಚುತ್ತಿದೆ ಸ್ಟ್ರೋಕ್, ಹಾರ್ಟ್‌ ಆ್ಯಟಾಕ್!...

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಅಡ್ಡಪರಿಣಾಮಗಳ ಪಟ್ಟಿ ಬೆಳೆಯುತ್ತಲೇ ಇದೆ. ಕೋವಿಡ್ ಸೋಂಕಿತರಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ವೈದ್ಯರ ಅಧ್ಯಯನ ವರದಿಯಲ್ಲಿ ಕೋವಿಡ್ ಗುಣಮುಖರಾದವರಿಗೆ ಸ್ಟ್ರೋಕ್ ಹಾಗೂ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಸೆಂಟ್ರಲ್‌ ವಿಸ್ತಾ ಅಗತ್ಯ, ಕೆಲಸ ಮುಂದುವರೆಸಿ: 1 ಲಕ್ಷ ದಂಡ, ಅರ್ಜಿ ರದ್ದುಗೊಳಿಸಿದ ಕೋರ್ಟ್!...

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸೆಂಟ್ರಲ್ ವಿಸ್ತಾ ಕಾಮಕಾರಿ ತಡೆಯುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದ ದೆಹಲಿ ಹೈಕೋರ್ಟ್‌ ಸೆಂಟ್ರಲ್ ವಿಸ್ತಾ ಯೋಜನೆ ಅತೀ ಅಗತ್ಯ, ಹೀಗಾಗಿ ಇದರ ಕಾಮಗಾರಿ ಮುಂದುವರೆಸಿ ಎಂದು ಆದೇಶಿಸಿದೆ. 

2-3 ದಿನದಲ್ಲಿ ಇನ್ನೊಂದು ಆರ್ಥಿಕ ಪ್ಯಾಕೇಜ್‌: ಸಿಎಂ ಯಡಿಯೂರಪ್ಪ!...

ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದವರಿಗೆ ಎರಡನೇ ಹಂತದ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಐಸಿಸಿ ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಟೀಂ ಇಂಡಿಯಾ ಜೆರ್ಸಿ ಅನಾವರಣ!...

ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡದ ಜೆರ್ಸಿ ಅನಾವರಣಗೊಂಡಿದೆ

ರಶ್ಮಿಕಾ ಮಂದಣ್ಣ ಕಾಲೇಜ್‌ ಡೇಸ್‌ ಪೋಟೋಗಳೀಗ ವೈರಲ್!...

ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ತಮ್ಮ ಹಳೇ ಫೋಟೋ ಹಾಗೂ ಈಗಿನ ಟ್ರೆಂಡ್ ಫೋಟೋ ಹಂಚಿಕೊಂಡು ಬದಲಾವಣೆ ಹೇಗಿದೆ ಹೇಳಿ, ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ರಶ್ಮಿಕಾ ಅಭಿಮಾನಿಯೂ ಇಂಥದ್ದೇ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ರಶ್ಮಿಕಾ ಕಾಲೇಜ್‌ನಲ್ಲಿ ಹೀಗಿದ್ರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. 

ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!...

ಎಲ್‌ಜಿ ಕಂಪನಿ ಸ್ಮಾರ್ಟ್‌ಫೋನ್ ಉತ್ಪಾದನಾ ವಿಭಾಗವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಏಪ್ರಿಲ್‌ನಲ್ಲೇ ಪ್ರಕಟಿಸಿದೆ. ದಕ್ಷಿಣ ಕೊರಿಯಾದಲ್ಲಿ ಎಲ್‌ಜಿ ಬಳಕೆದಾರರನ್ನು ಸೆಳೆಯಲು ಆಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ವಿಶೇಷ ಆಫರ್‌ ಪ್ರಕಟಿಸಿವೆ. ಎಲ್‌ಜಿ ಬಳಕೆದಾರರು ತಮ್ಮ ಹಳೆಯ ಫೋನ್‌ಗಳನ್ನು ಹೊಸ ಆಪಲ್ ಅಥವಾ ಸ್ಯಾಮ್ಸಂಗ್ ಫೋನ್‌ಗಳಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

ಮಹಾರಾಷ್ಟ್ರ ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ರಾಜ್ಯವಾಗುತ್ತಾ?...

2025ರ ಹೊತ್ತಿಗೆ ರಾಜ್ಯದ ಒಟ್ಟು ವಾಹನಗಳ ಪೈಕಿ ಶೇ.10ರಷ್ಟು ಎಲೆಕ್ಟ್ರಿಕ್ ವಾಹನಗಳು ನೋಂದಣಿ ಮಾಡುವ ಗುರಿಯನ್ನು ಹಾಕಿಕೊಂಡಿರುವ ಮಹಾರಾಷ್ಟ್ರ ಸರ್ಕಾರವು, ದೇಶದ ಪ್ರಮುಖ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದಕ ರಾಜ್ಯವಾಗುವ ಉದ್ದೇಶವನ್ನು ಹೊಂದಿದೆ. ಈ ಬಗ್ಗೆ ಇವಿ ನೀತಿಯನ್ನು ಮರುರೂಪಿಸುತ್ತಿದೆ ಮಹಾರಾಷ್ಟ್ರ ಸರ್ಕಾರ.

click me!