ಮಂದಿರ ಐತಿಹಾಸಿಕ ಕ್ಷಣವೆಂದ ಪಾಕ್ ಕ್ರಿಕೆಟರ್,ಕನ್ನಡದಲ್ಲಿ ಅನುಷ್ಕಾ ಆನ್ಸರ್; ಆ.6ರ ಟಾಪ್ 10 ಸುದ್ದಿ!

By Suvarna NewsFirst Published Aug 6, 2020, 5:22 PM IST
Highlights

ರಾಮ ಮಂದಿರ ಭೂಮಿ ಪೂಜೆ ವೇಳೆ ಸ್ವ ಇಚ್ಚೆಯಿಂದ 250 ಮುಸ್ಲಿಮರು ಹಿಂದೂ ಧರ್ಮಕ್ಕೆ ಆಗಮಿಸಿದ್ದಾರೆ. ಇದರ ನಡುವೆ ಮುಸ್ಲಿಂ ಮೌಲ್ವಿಯೊಬ್ಬರು ರಾಮ ಮಂದಿರ ಕೆಡವಿ ಮಸೀದಿ ನಿರ್ಮಿಸುವುದಾಗಿ ವಿವಾದ ಸೃಷ್ಟಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗ ರಾಮ ಮಂದಿರ ಐತಿಹಾಸಿಕ ಕ್ಷಣ ಎಂದಿದ್ದಾರೆ.  ಕರಾಳವಳಿ, ಮಲೆನಾಡು ಸೇರಿದಂತೆ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಆತಂಕ ಹೆಚ್ಚಿಸಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳ ಪ್ರಶ್ನೆಗೆ ಕನ್ನದಲ್ಲಿ ಉತ್ತರಿಸಿದ್ದಾರೆ. ಆಗಸ್ಟ್ 6ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ರಾಮ ಮಂದಿರ ಭೂಮಿಪೂಜೆ ವೇಳೆ 250 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರ!...

ದೇಶದಲ್ಲಿ ಭವ್ಯ ರಾಮ ಮಂದಿರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಿಸಿದ್ದಾರೆ. ಹೀಗಿರುವಾಗ ರಾಜಸ್ಥಾನದಷ ಬರ್ಮರ್‌ನ ಸುಮಾರು 50 ಕುಟುಂಬದ 250 ಮಂದಿ ಇಸ್ಲಾಂನಿಂದ ಇಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅಲ್ಲದೇ ತಾವು ಮೂಲತಃ ಹಿಂದೂಗಳಾಗಿದ್ದು, ಯಾವುದೇ ಒತ್ತಾಯವಿಲ್ಲದೇ ಸ್ವಂತ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಕುಟುಂಬದ ಹಿರಿಯ ಸದಸ್ಯರು ತಿಳಿಸಿದ್ದಾರೆ.

ರಾಮ ಮಂದಿರ ಕೆಡವಿ ಮತ್ತೆ ಮಸೀದಿ ನಿರ್ಮಿಸುತ್ತೇವೆ; ಎಚ್ಚರಿಕೆ ನೀಡಿದ ಮುಸ್ಲಿಂ ಮೌಲ್ವಿ!...

ಐದು ಶತಮಾನಗಳ ವಿವಾದವೊಂದು ಬಗೆ ಹರಿದು ಇದೀಗ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸೋ ಮೂಲಕ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಶಿಲಾನ್ಯಾಸ ನಡೆದ ಮರುದಿನವೇ ಮುಸ್ಲಿಂ ಮೌಲ್ವಿಯೊಬ್ಬರು ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಿಸಲಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೋವಿಡ್‌ ಆಸ್ಪತ್ರೆಯಲ್ಲಿ ಬೆಂಕಿ, 8 ರೋಗಿಗಳು ಸಜೀವ ದಹನ!...

ಗುಜರಾತ್‌ನ ಅಹಮದಾಬಾದ್‌ನ ನವರಂಗಪುರದ ಕೊರೋನಾ ಚಿಕಿತ್ಸೆ ನೀಡುತ್ತಿದ್ದ ಶ್ರೇಯ್ ಆಸ್ಪತ್ರೆಯಲ್ಲಿ ಬುಧವಾರ ತಡ ರಾತ್ರಿ ಭಾರೀ ಅಗ್ನಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ಮಂದಿ ರೋಗಿಗಳು ಸಜೀವ ದಹನವಾಗಿದ್ದಾರೆ.


ಚೀನಾದಲ್ಲಿ ಮತ್ತೊಂದು ವೈರಸ್‌ ಪತ್ತೆ: 7 ಬಲಿ...

ಮಹಾಮಾರಿ ಕೊರೋನಾ ವೈರಸ್‌ನಿಂದ ಚೇತರಿಸಿಕೊಳ್ಳುವ ಮುನ್ನವೇ ಚೀನಾದ ಮೇಲೆ ಮತ್ತೊಂದು ವೈರಸ್‌ ದಾಳಿಯಿಟ್ಟಿದ್ದು, 7 ಜನರನ್ನು ಬಲಿ ಪಡೆದಿದೆ. ಈ ವೈರಸ್‌ ಅಪಾಯಕಾರಿ ಮಟ್ಟದಲ್ಲಿ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ: ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ ಪಾಕ್ ಕ್ರಿಕೆಟಿಗ..!...

ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕೊಂಡಾಡಿದ್ದಾರೆ. 

ಏಕದಿನ ರ‍್ಯಾಂಕಿಂಗ್ ಅಗ್ರ ಸ್ಥಾನ ಉಳಿಸಿಕೊಂಡ ಕೊಹ್ಲಿ-ರೋಹಿತ್...

ಇಂಗ್ಲೆಂಡ್-ಐರ್ಲೆಂಡ್ ನಡುವಿನ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮೊದಲೆರಡು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ತಲಕಾವೇರಿಯಲ್ಲಿ ಅರ್ಚಕರ ಮನೆ ಮೇಲೆ ಗುಡ್ಡ ಕುಸಿತ: ನಾಲ್ವರು ಕಾಣೆ...

ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. 

ಕನ್ನಡ ಸ್ವಲ್ಪ ಬರುತ್ತೆ, ಮಲ್ಲೇಶ್ವರಂ ಮಸಾಲ ದೋಸೆ ಬೇಕು; ನಟಿ ಅನುಷ್ಕಾ ಶರ್ಮಾ ಬಯಕೆ!...

ಗ್ಲಾಮರಸ್‌ ಹಾಗೂ ಡಿ-ಗ್ಲಾಮರಸ್ ಎರಡೂ ತರಹದ‌ ಪಾತ್ರದಲ್ಲಿ ಅಭಿನಯಿಸಿ, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ಅನುಷ್ಕಾ ಶರ್ಮಾ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ Q&A ಮಾಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  

56000 ದಾಟಿದ ಚಿನ್ನ ಸಾರ್ವಕಾಲಿಕ ದಾಖಲೆ: 73000ದ ಸನಿಹ ಬೆಳ್ಳಿ!...

ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆ ಉಂಟಾಗಿದ್ದು, ಬುಧವಾರ ದೆಹಲಿಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ ರೂ.1365 ಹಾಗೂ ಬೆಳ್ಳಿಯ ದರ ಕೆಜಿಗೆ 5975 ರೂ ಏರಿಕೆ ಕಂಡಿದೆ. ಆ ಮೂಲಕ ಚಿನ್ನದ ದರ 10 ಗ್ರಾಂಗೆ 56,181ಕ್ಕೆ ಮುಟ್ಟಿದರೆ, ಕೇಜಿ ಬೆಳ್ಳಿ ದರ 66,754ಕ್ಕೆ ಬಂದು ತಲುಪಿದೆ.

ಕೊರೋನಾ ವಾರಿಯರ್ ಆದ ನಿರ್ಮಾಪಕರ ಪುತ್ರಿ; 'ಸೌಂದರ್ಯ'ವತಿ ಹೇಗಿದ್ದಾಳೆ ನೋಡಿ!

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಜಗದೀಶ್‌ ಪುತ್ರಿ ಕಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್ ವಾರಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಮನೆಯಲ್ಲಿ ನಕಲಿ ಚೆಕ್ ಪ್ರಿಂಟ್ ಮಾಡಿ 4 ಕೋಟಿ ರೂ. ಪೊರ್ಶೆ ಕಾರು ಖರೀದಿಸಿದ ಖದೀಮ!...

ಕಾರು, ಐಷಾರಾಮಿ ಜೀವನಕ್ಕಾಗಿ ಹಲವರು ಕಳ್ಳತನ ಸೇರಿದಂತೆ ಅಡ್ಡ ದಾರಿ ಹಿಡಿದ ಘಟನೆಗಳು ಸಾಕಷ್ಟಿವೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ, ವಿಜ್ಞಾನಿಯೇ ತಲೆ ತಿರುಗುವ ಐಡಿಯಾ, ಪೊಲೀಸರ ದಿಕ್ಕನ್ನೇ ತಿರುಗಿಸುವ ಆಲೋಚನೆ ಮೂಲಕ ಕಳ್ಳತನ, ಮೋಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ಸಿಂಪಲ್ ಐಡಿಯಾ, ಅಷ್ಟೇ ಉತ್ತಮ ನಟನೆ ಮೂಲಕ ಜೇಬಲ್ಲಿ ಒಂದೂ ರೂಪಾಯಿ ಇಲ್ಲದೆ 4 ಕೋಟಿ ರೂಪಾಯಿ ಪೋರ್ಶೆ ಕಾರನ್ನು ಖರೀದಿಸಿದ್ದಾನೆ.

click me!