ಮಹಿಳೆಯರಿಗೆ ಅಹಂ ಸಮಸ್ಯೆ, ಕರ್ನಲ್‌ ಆಗಲು ಅವರು ಅರ್ಹರಲ್ಲ: ಟಾಪ್‌ ಜನರಲ್‌ ವರದಿ

By Kannadaprabha News  |  First Published Nov 27, 2024, 8:53 AM IST

ಲೆಫ್ಟಿನೆಂಟ್ ಜನರಲ್ ರಾಜೀವ್ ಪುರಿ ಅವರು ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಮ್ ಚಂದರ್ ತಿವಾರಿ ಅವರಿಗೆ ಬರೆದ ಪತ್ರದಲ್ಲಿ "ಲಿಂಗ ಸಮಾನತೆ" ಬದಲಿಗೆ "ಲಿಂಗ ತಟಸ್ಥತೆ" ಯತ್ತ ಸೇನೆ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.


ನವದೆಹಲಿ (ನ.27): ಭಾರತೀಯ ಸೇನೆಯಲ್ಲಿ ಕರ್ನಲ್‌‌ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ನಿ.ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಪುರಿ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಆ ಹುದ್ದೆಗೇರಲು ಅರ್ಹರಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ.20ರಂದು ನಿವೃತ್ತರಾದ ಪುರಿ, ಈಶಾನ್ಯ ಕಮಾಂಡ್‌ನ ಮುಖ್ಯಾಧಿಕಾರಿಗೆ ತಮ್ಮ ವಿಮರ್ಶೆಗಳನ್ನೊಳಗೊಂಡ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ‘ಮಹಿಳಾ ಕರ್ನಲ್‌‌ಗಳಲ್ಲಿ ಅಹಂನ ಸಮಸ್ಯೆ ಹಾಗೂ ಸಹಾನುಭೂತಿಯ ಕೊರತೆಯಿದೆ. ಅವರಿಗೆ ನಾಯಕರಾಗಲು ತರಬೇತಿ ನೀಡಲಾಗಿಲ್ಲ. ಅವರು ಅತಿಯಾಗಿ ದೂರುವ ಪ್ರವೃತ್ತಿ ಹೊಂದಿದ್ದು, ಎಲ್ಲರೂ ತಾವು ಹೇಳಿದಂತೆ ಕೇಳಬೇಕು ಎಂದು ನಿರೀಕ್ಷಿಸುತ್ತಾರೆ. ಕಳೆದೊಂದು ವರ್ಷದಿಂದ ಮಹಿಳೆಯರು ಅಧಿಕಾರಿಗಳಾಗಿರುವ ಯೂನಿಟ್‌ಗಳಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿವೆ. ಕಿರಿಯರನ್ನು ಪ್ರೋತ್ಸಾಹಿಸುವ ಬದಲು ಅವಹೇಳನ ಮಾಡುತ್ತಾರೆ. ತಮ್ಮ ಸಣ್ಣ ಸಾಧನೆಗಳಿಗೂ ಪ್ರಶಂಸೆ ಬಯಸುತ್ತಾರೆ. ಆದ್ದರಿಂದ ಸೇನೆಯಲ್ಲಿ ಲಿಂಗ ಸಮಾನತೆಯ ಬದಲು ತಟಸ್ಥತೆಯತ್ತ ಗಮನ ಹರಿಸಬೇಕು’ ಎಂದು ಬರೆದಿದ್ದಾರೆ.

Latest Videos

undefined

ಇದರ ಬೆನ್ನಲ್ಲೇ, 2020ರಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶದನ್ವಯ ಮಹಿಳೆಯರನ್ನು ಉನ್ನತ ಹುದ್ದೆಗಳಿಗೆ ನೇಮಿಸಲಾಗುತ್ತಿದ್ದು, ಇದು ಮುಂದುವರೆಯಲಿದೆ ಎಂದು ಸೇನೆ ಸ್ಪಷ್ಟನೆ ನೀಡಿದೆ. ಜೊತೆಗೆ, ಪುರಿ ಅವರ ಅಭಿಪ್ರಾಯವನ್ನು ಪರಿಗಣಿಸಿ ತರಬೇತಿಯ ಗುಣಮಟ್ಟವನ್ನು ಸುಧಾರಿಸುವ ಭರವಸೆ ನೀಡಿದೆ.

Toll Plaza Exemptions: ಯಾರಿಗೆಲ್ಲಾ ಟೋಲ್‌ ಹಣ ಕಟ್ಟುವುದರಿಂದ ವಿನಾಯಿತಿ ಇದೆ?

ಲೆಫ್ಟಿನೆಂಟ್ ಜನರಲ್ ರಾಜೀವ್ ಪುರಿ ಅವರು ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಮ್ ಚಂದರ್ ತಿವಾರಿ ಅವರಿಗೆ ಬರೆದ ಪತ್ರದಲ್ಲಿ "ಲಿಂಗ ಸಮಾನತೆ" ಬದಲಿಗೆ "ಲಿಂಗ ತಟಸ್ಥತೆ" ಯತ್ತ ಸೇನೆ ಗಮನಹರಿಸಬೇಕು ಎಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಘಟಕಗಳಲ್ಲಿ ಅಧಿಕಾರಿ ನಿರ್ವಹಣಾ ಸಮಸ್ಯೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ತಿಂಗಳು 5500 ರೂಪಾಯಿ ಸಿಗುವ ಪೋಸ್ಟ್‌ ಆಫೀಸ್‌ ಯೋಜನೆಯಿದು!

ಮಹಿಳಾ ಅಧಿಕಾರಿಗಳು ಚೀಫ್‌ ಆಗಿರುವ ಯುನಿಟ್‌ಗಳಲ್ಲಿ ಕಳೆದ ಒಂದು ವರ್ಷಗಳಲ್ಲಿ ಅಧಿಕಾರಿಗಳ ಮ್ಯಾನೇಜ್‌ಮೆಂಟ್‌ ಸಮಸ್ಯೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಪರಸ್ಪರ ಗೌರವದ ಮೂಲಕ ಸಂಘರ್ಷ ಪರಿಹಾರಕ್ಕಿಂತ ಹೆಚ್ಚಾಗಿ ಶಕ್ತಿಯ ಮೂಲಕ ಸಂಘರ್ಷದ ಮುಕ್ತಾಯಕ್ಕೆ ಒತ್ತು ನೀಡಲಾಗುತ್ತದೆ.ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಪೂರ್ವಾಗ್ರಹ ಮತ್ತು ಅಪನಂಬಿಕೆ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
 

click me!