‘ನಾನೇ ಗೆದ್ದೆ’ ಟ್ರೋಲ್ ಮಾಡಿದವರಿಗೆ ರಶ್ಮಿಕಾ ಮಾಸ್ಟರ್ ಪಂಚ್!

By Web DeskFirst Published Nov 3, 2019, 8:20 PM IST
Highlights

ಟ್ರೋಲ್ ಮಾಡಿದವರಿಗೂ ರಶ್ಮಿಕಾ ಮಂದಣ್ಣ ಧನ್ಯವಾದ/ ನನ್ನ ಬಗ್ಗೆ ನೀವು ಯೋಚಿಸುತ್ತಿದ್ದೀರಾ, ನಿಮ್ಮ ಸಮಯ ನನಗೆ ನೀಡಿದ್ದಕ್ಕೆ ಧನ್ಯವಾದ/ ಪೊಗರು ಚಿತ್ರದ ಡೈಲಾಗ್ ನಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದ ರಶ್ಮಿಕಾ

ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚಿನ ಟ್ರೋಲ್ ಗೆ ಒಳಗಾಗುವ ರಶ್ಮಿಕಾ ಮಂದಣ್ಣ ಸುಮ್ಮನೆ ಕೂರುವವರಲ್ಲ. ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಗೊತ್ತಿಲ್ಲದೆ ತಮಿಳು ವೇದಿಕೆಯಲ್ಲಿ ತಡಬಡಾಯಿಸಿದ್ದನ್ನು ದೊಡ್ಡ ಸುದ್ದಿ ಮಾಡಿಕೊಂಡಿದ್ದರು.

ಸ್ಯಾಂಡಲ್‌ವುಡ್ ಮಾಸ್ ಮ್ಯಾನ್ ಧ್ರುವ ಸರ್ಜಾ ವರ್ಷಗಳ ಕಾಲ 'ಪೊಗರು' ಚಿತ್ರದಲ್ಲಿ ತೊಡಗಿಸಿಕೊಂಡು ಈಗ ರಿಲೀಸ್‌ಗೆ ರೆಡಿಯಾಗಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಇಂಗ್ಲೀಷ್ ಟೀಚರ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿನ ಡೈಲಾಗೊಂದು ದೊಡ್ಡ ಸುದ್ದಿ ಮಾಡಿತ್ತು.

ರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ, ಒಂದೇ ದಿನ ಧಮಾಕಾ!

'ಅಡ್ರಸ್ ತಿಳ್ಕೊಂಡು ಸರ್ವಿಸ್ ಮಾಡೋಕೆ ನಾನು ಕೊರಿಯರ್ ಹುಡುಗ ಏನೋ? ಫೈಟರ್. ಹೊಡೆದ್ರೆ ಯಾವನೂ ಅಡ್ರೆಸ್‌ ಗೂ ಸಿಗೋಲ್ಲ. ಹೋಗಿ ಅವನಿಗೆ ನನ್ನ ಅಡ್ರೆಸ್ ಹೇಳು' ಎಂದು ಸಾಲುದ್ದ ಪಂಚ್ ಡೈಲಾಗ್ ಹೇಳುತ್ತಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದವು.

ಪಟಾಕಿ ಅಂಟಿಸುತ್ತಿದ್ದ ಧ್ರುವ ಜತೆ ರಶ್ಮಿಕಾ ಇಂಗ್ಲೀಷ್ ನಲ್ಲಿ ಮಾತನಾಡಿಸುತ್ತಾರೆ. ಅದಕ್ಕೆ ಧ್ರುವ 'ಇಂಗ್ಲೀಷೂ...? ಲೇ ಮಾತೃ ಭಾಷೆ.. ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು' ಎಂದು ರಶ್ಮಿಕಾಗೆ ಡೈಲಾಗ್ ಹೇಳುತ್ತಾರೆ. ಈ ಡೈಲಾಗ್ ನಂತರ ಸೋಶಿಯಲ್ ಮೀಡಿಯಾದ ಟ್ರೋಲ್‌ ಗೆ ಆಹಾರವಾಗಿತ್ತು.

ಕನ್ನಡದ ಭಾಷೆ ವಿಷಯ ಇಟ್ಟುಕೊಂಡು ರಶ್ಮಿಕಾರ ಕಾಲೆಳೆದವರಿಗೆ ಮಂದಣ್ಣ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ.ನಾವು ಈಗ 'ಮಾತೃಭಾಷೆ ಬಿಟ್ಟವರು ಮೂರುಬಿಟ್ಟವರಿಗಿಂತ ದೊಡ್ಡವರು' ಡೈಲಾಗ್ ಅನ್ನು ಯಾಕೆ ಹೇಳಿಸಿದ್ದೇವೆ ಎಂಬುದರ ಕುರಿತು ಚರ್ಚೆ ಮಾಡುತ್ತಿದ್ದೇವೆ. ಅನೇಕರು ರಶ್ಮಿಕಾ ಮಂದಣ್ಣನ ಬಗ್ಗೆ ಒಳ್ಳೆಯವರಾ ಅಥವಾ ಕೆಟ್ಟವರ ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಇಲ್ಲಿ ರಶ್ಮಿಕಾ ಗೆದ್ದಿದ್ದಾಳೆ ಎನ್ನುವುದೇ ಉತ್ತರವಾಗುತ್ತದೆ. ನನ್ನ ಬಗ್ಗೆ ಯೋಚಿಸಲು ನಿಮ್ಮ ಸಮಯವನ್ನು ನೀಡಿದಕ್ಕೆ ಧನ್ಯವಾದ ಎನ್ನುತ್ತ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.

click me!