ಶಂಕರ್‌ ನಾಗ್ ಸಾವು ಪೂರ್ವ ನಿರ್ಧಾರಿತ, ಅವ್ರು ಮುನ್ಸೂಚನೆ ಕೊಟ್ಟಿದ್ದರು: ಅನಂತ್‌ ನಾಗ್!

By Shriram Bhat  |  First Published Nov 28, 2024, 10:17 PM IST

ಅನಂತ್‌ ನಾಗ್ ಅವರು ಸಂದರ್ಶನವೊಂದರಲ್ಲಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಅವರ ತಮ್ಮ, ಕನ್ನಡದ ಮೇರು ನಟ-ನಿರ್ದೇಶಕ ಶಂಕರ್‌ ನಾಗ್ ಬಗ್ಗೆ ಮಾತನ್ನಾಡಿದ್ದಾರೆ. ಶಂಕರ್‌ ನಾಗ್ ಸಾವು..


ಹಿರಿಯ ನಟ ಅನಂತ್‌ ನಾಗ್ (Anant Nag) ಅವರು ಸಂದರ್ಶನವೊಂದರಲ್ಲಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಅವರ ತಮ್ಮ, ಕನ್ನಡದ ಮೇರು ನಟ-ನಿರ್ದೇಶಕ ಶಂಕರ್‌ ನಾಗ್ (Shankar Nag) ಬಗ್ಗೆ ಮಾತನ್ನಾಡಿದ್ದಾರೆ. ಶಂಕರ್‌ ನಾಗ್ ಸಾವು ಪೂರ್ವ ನಿರ್ಧಾರಿತ. ಅದು ಯಾರಿಂದ ಹೇಗೇ ಸಂಭವಿಸಿರಲಿ, ಅದು ಮೊದಲೇ ನಿರ್ಧಾರ ಆಗಿ ಹೋಗಿತ್ತು. ಏಕೆಂದರೆ, ಅದನ್ನು ಸರಿಯಾಗಿ 2 ವರ್ಷ ಮೊದಲೇ ಮಾತಾಜಿಯವರು ಮುನ್ಸೂಚನೆ ನೀಡಿದ್ದರು' ಎಂದಿದ್ದಾರೆ. ಡೀಟೇಲ್ಸ್ ಮುಂದೆ ಇದೆ, ನೋಡಿ.. 

'ನಾನು ಆನಂದಾಶ್ರಮದ ಕುರಿತು ಹೇಳಿದ್ದೆ. ಕಾಸರಗೋಡು ಜಿಲ್ಲೆ.. ಮಾತಾಜಿ ಕೃಷ್ಣಾಬಾಯಿ ಅಂತ ಅವ್ರು. ನಮ್ ತಾಯಿಯವ್ರು ಅವರ ಆಶ್ರಯದಲ್ಲೇ ಬೆಳೆದಿದ್ದು.. ನಮ್ಮ ತಂದೆ ತೀರಿಕೊಂಡ ಮೇಲೆ ಕೂಡ ನಮ್ಮ ತಾಯಿ ಅಲ್ಲೇ ಆನಂದಾಶ್ರಮಕ್ಕೆ ಹೋಗಿ ಮಾತಾಜಿ ಅವ್ರ ಜೊತೆನಲ್ಲೇ ಇದ್ರು.. ಒಂದು ದಿನ ಮಾತಾಜಿಯವ್ರು ನನ್ ಕರೆದು 'ಅನಂತ್‌ಜೀ ಇಲ್ಲಿ ಬಾ..' ಅಂದ್ರು. ನಾನು 'ಏನು ಮಾತಾಜಿ..' ಅಂದಿದ್ದಕ್ಕೆ, 'ಇನ್ನು ರಾಮ ನಾಮ ಹೆಚ್ಚು ಮಾಡು.. ಪ್ರಸಾದ ಹಂಚೋಕೆ ಸಿದ್ಧತೆ ಮಾಡ್ಕೋ ಅಂದ್ರು.. 

Latest Videos

undefined

ನೀನು ಹೀರೋ ಆಗ್ತೀಯ, ನನ್ನ ಮ್ಯಾನೇಜರ್ ಆಗಿ ಇಟ್ಕೋ ಅಂದಿದ್ದ ರಜನಿಕಾಂತ್; ನಟ ಅಶೋಕ್!

ನಾನು 'ಏನು ಮಾತಾಜಿ.. ಯಾರು, ಯಾರು.. ಏನು..' ಎಂದಿದ್ದಕ್ಕೆ 'ಯಾರು, ಏನು ಅಂತೆಲ್ಲ.. ಈಗ ಹೇಳಿದ್ದೇ ಹೆಚ್ಚಾಯ್ತು.. ಯಾವಾಗ ಅಂದ್ರೆ, ಇವತ್ತು 1988ರ ವಿಜಯದಶಮಿ. ಮುಂದಿನ ವರ್ಷ ಅಲ್ಲ, ಅದಕ್ಕೂ ಮುಂದಿನ ವರ್ಷ 1990ರ ವಿಜಯದಶಮಿ ದಿವಸ.. ಅದಕ್ಕೇ ನೀನು ಪ್ರಸಾದ ಹಂಚೋಕೆ ನೀನು ಸಿದ್ಧತೆ ಮಾಡ್ಕೋ..' ಅಂದ್ರು. ನಾನು 'ಅದೇ ಯಾರು, ಏನು..' ಅಂತಂದ್ರೆ, ಅದಕ್ಕೇನೂ ಹೇಳ್ಲಿಲ್ಲ.. 

ಅವ್ರು ಹೀಗೆ ಮುನ್ಸೂಚನೆ ಕೊಟ್ಟಿದ್ದು 1988ರಲ್ಲಿ. ಅದರ ಮರು ವರ್ಷ, ಅಂದ್ರೆ 1989ರಲ್ಲಿ ಮಾತಾಜಿಯವರೇ ಹೊರಟುಹೋಗ್ಬಿಟ್ರು.. ಆ ವರ್ಷ, ಅಂದ್ರೆ 1989ರ ವಿಜಯದಶಮಿ ಸಮೀಪ ನಮ್ಮಅಮ್ಮ ನಮಗೆ ಕಾಲ್ ಮಾಡಿ, ನೀವಿಬ್ರೂ ಬನ್ನಿ ಇಲ್ಲಿಗೆ ಅಂತ ಹೇಳಿದ್ರು ಕಾಲ್ ಮಾಡಿ, ನಾನು ಹಾಗು ಶಂಕರ ಇಬ್ರೂ ಹೋಗಿದ್ವಿ.. ಅಗ ನಮ್ಗೆ ನಮ್ಮಮ್ಮ ಈ ಸಂಗ್ತಿ ಏನೂ ಹೇಳಿಲ್ಲ.. ಆದ್ರೆ, 1990ರ ವಿಜಯದಶಮಿ ದಿನ ಶಂಕರ್‌ ಅಪಘಾತದಲ್ಲಿ ತೀರಿ ಹೋಗ್ಬಿಟ್ಟ. 

ಪುನೀತ್‌ನಂತೆ ನನಗೂ ಹಾರ್ಟ್ ಅಟ್ಯಾಕ್ ಆಗಿತ್ತು, ಅದು ನಮ್ಮ ಹೆರಿಡಿಟರಿ ಸಮಸ್ಯೆ: ವಿನೋದ್ ರಾಜ್!

ಆವತ್ತು ಅಮ್ಮಂಗೆ ಕಾಲ್ ಮಾಡಿ ಹೇಳಿದಾಗ, ಅಮ್ಮ 'ಹೌದು ಕಣೋ, ಮಾತಾಜಿಯವ್ರು ಎರಡು ವರ್ಷ ಮುಂಚೆನೇ ಹೇಳಿದ್ದರು. ನಾನೇ ಮರೆತುಹೋಗ್ಬಿಟ್ಟಿದ್ದೆ..' ಅಂದ್ರು. ಅಲ್ಲಿಗೆ ಶಂಕರನ ಕಥೆ ಎಲ್ಲಾ ಮುಗಿದುಹೋಗಿತ್ತು..' ಎಂದಿದ್ದಾರೆ ಶಂಕರ್‌ನಾಗ್ ಅಣ್ಣ ಅನಂತ್‌ ನಾಗ್. ನಟ ಅನಂತ್‌ ನಾಗ್ ಅವರು ತಮ್ಮ ಪ್ರೀತಿಯ ಸಹೋದರ ಶಂಕರ್ ನಾಗ್ ಬಗ್ಗೆ 'ನನ್ನ ಪ್ರೀತಿಯ ಶಂಕರ' ಹೆಸರಿನ ಒಂದು ಪುಸ್ತಕ ಬರೆದಿದ್ದಾರೆ. ಅದರಲ್ಲಿ ಅವರು ತಮ್ಮನ ಜೊತೆಗಿನ ಒಡನಾಟ ಹಾಗು ತಮ್ಮ ಕುಟುಂಬದ ಬಗ್ಗೆ ಬಹಳಷ್ಟನ್ನು ಬರೆದುಕೊಂಡಿದ್ದಾರೆ. 

click me!