ಹೊಸ ಪ್ರಶ್ನೆ ಎಂಬಂತೆ ಅವರು ನಟ ಸುದೀಪ್ ಅವರಿಗೆ ಆ ಪ್ರಶ್ನೆ ಕೇಳಿದ್ದಾರೆ. ಸುದೀಪ್ 'ಈಗಾಗ್ಲೇ ಬಹಳಷ್ಟು ಸಾರಿ ಹೇಳಿದ್ದೇನೆ' ಎಂದು ಮತ್ತೆ ಹೇಳಿದ್ದಾರೆ. ಹಾಗಿದ್ದರೆ 'ಗೌರಿ' ನಟ ಸಮರ್ಜಿತ್ ಲಂಕೇಶ್ ಏನ್ ಕೇಳಿದ್ದಾರೆ ಅಂದ್ರೆ..
ಸ್ಯಾಂಡಲ್‌ವುಡ್ ಹೊಸ ಯಂಗ್ & ಎನರ್ಜಿಟಿಕ್ ಹೀರೋ ಸಮರ್ಜಿತ್ ಲಂಕೇಶ್ (Samarjit Lankesh) ಅವರು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಪ್ರಶ್ನೆ ಕೇಳಿದ್ದಾರೆ. ಅದೇ ಹಳೆಯ ಪ್ರಶ್ನೆ ಹಾಗೂ ಉತ್ತರವೇ ಆಗಿದ್ದರೂ ಕೂಡ, ನ್ಯೂಯಾರ್ಕ್‌ನಲ್ಲಿದ್ದು ಇತ್ತೀಚೆಗೆ ಬೆಂಗಳೂರಿಗೆ ಬಂದು ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿರುವ ನಟ ಸಮರ್ಜಿತ್ ಲಂಕೇಶ್ ಅವರಿಗೆ ಅದು ಗೊತ್ತಿಲ್ಲದ ಸಂಗತಿ ಎನ್ನಬಹುದು.
ಹೊಸ ಪ್ರಶ್ನೆ ಎಂಬಂತೆ ಅವರು ನಟ ಸುದೀಪ್ ಅವರಿಗೆ ಆ ಪ್ರಶ್ನೆ ಕೇಳಿದ್ದಾರೆ, ಸುದೀಪ್ 'ಈಗಾಗ್ಲೇ ಬಹಳಷ್ಟು ಸಾರಿ ಹೇಳಿದ್ದೇನೆ' ಎಂದು ಮತ್ತೆ ಹೇಳಿದ್ದಾರೆ. ಹಾಗಿದ್ದರೆ 'ಗೌರಿ' ನಟ ಸಮರ್ಜಿತ್ ಏನ್ ಕೇಳಿದ್ದಾರೆ ಅಂದ್ರೆ, 'ನನ್ನ ಮೆಚ್ಚಿನ ಕಲಾವಿದರು ನೀವು.. ನಿಮ್ಮ ಮೆಚ್ಚಿನ ಕಲಾವಿದರು ಯಾರು?..' ಎಂಬ ಪ್ರಶ್ನೆಯನ್ನು ಕನ್ನಡದ ಕಿಚ್ಚನಿಗೆ ಕೇಳಿದ್ದಾರೆ. ಅದಕ್ಕೆ ಸುದೀಪ್ ಉತ್ತರ.. 'ವಿಷ್ಣು ಸರ್..'
ಪುನೀತ್‌ಗೆ ಆದಂತೆ ನನಗೂ ಹಾರ್ಟ್ ಅಟ್ಯಾಕ್ ಆಗಿತ್ತು, ಅದು ಹೆರಿಡಿಟರಿ ಸಮಸ್ಯೆ: ವಿನೋದ್ ರಾಜ್!
ವಿಷ್ಣು ಸರ್ ಕನ್ನಡದಲ್ಲಿ ನನ ಆಲ್ ಟೈಂ ಪೇವರೆಟ್. ಇದ್ನ ನಾನು ಎಲ್ಲಾ ಕಡೆ ಹೇಳಿದೀನಿ. ನನ್ನ ಲೈಪಲ್ಲಿ ನಾನು ತುಂಬಾ ಕಮ್ಮಿ ಜನಕ್ಕೆ, ಅಂದ್ರೆ ಇಬ್ರಿಗೆ ಮಾತ್ರ ಬಾಸ್ ಅಂತ ಕರೆದಿರೋದು. ಒಬ್ರು ನಮ್ ತಂದೆ, ಇನ್ನೊಬ್ರು ವಿಷ್ಣು ಸರ್. ಅವ್ರು ನಟ ಅನ್ನೋದಕ್ಕಿಂತ ಹೆಚ್ಚಾಗಿ ನಂಗೆ ಇಷ್ಟವಾಗಿದ್ದು ಅವ್ರ ವ್ಯಕ್ತಿತ್ವ, ಪರ್ಸನಾಲಿಟಿ. ಈ ಗತ್ತು ಅಂತೆಲ್ಲ ಹೇಳ್ತೀವಲ್ಲಾ, ಅದು. ಅವ್ರು ನನ್ ಫೇವರೆಟ್ ವ್ಯಕ್ತಿ ಯಾವತ್ತೂ..' ಎಂದಿದ್ದಾರೆ ನಟ ಕಿಚ್ಚ ಸುದೀಪ್.
ನಟ ಸಮರ್ಜಿತ್ ಅವರು ಇಂದ್ರಜಿತ್ ಲಂಕೇಶ್ ಪುತ್ರ ಎಂಬುದು ಬಹುತೇಕರಿಗೆ ಗೊತ್ತು. ಈ ಹ್ಯಾಂಡ್‌ಸಮ್ ಹುಡುಗ ಸಮರ್ಜಿತ್ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ನಟನೆ, ಸಾಹಸ ಮತ್ತು ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ. ಹಲವು ಜಾಹೀರಾತುಗಳ ಮೂಲಕ ನಟನಾ ಅನುಭವ ಪಡೆದಿರುವ ಇವರು ತಮ್ಮ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಕನ್ನಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ.
ಆಟದಲ್ಲಿ ಸೋತಿದ್ದಕ್ಕೆ ವಿಷ್ಣುವರ್ಧನ್ ನೋಡಿಕೊಂಡು ಹೋದ ಸುಹಾಸಿನಿ!
ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರವು ಅಪಾರ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಗಳಿಕೆ ಹಾಗೂ ಜನಮೆಚ್ಚುಗೆ ಗಳಿಸಲಿಲ್ಲ. ಈ ಚಿತ್ರದ 'ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ..' ಸಾಂಗ್ ಭಾರೀ ಫೇಮಸ್ ಆಗಿತ್ತು. ಆದರೆ ಆ ಹಾಡು ಕೂಡ ಚಿತ್ರದ ಯಶಸ್ಸಿಗೆ ಡೋರ್ ಆಗಲಿಲ್ಲ. ಈಗ ಕನ್ನಡದ ನಟ ಸಮರ್ಜಿತ್ ಲಂಕೇಶ್ ಅವರು ಹಿಂದಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಅಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನು ಕಿಚ್ಚ ಸುದೀಪ್ ಪರಿಚಯ ಅನಗತ್ಯ. ಆದರೆ, ಇತ್ತೀಚಿನ ಅಪ್ಡೇಟ್ ಪ್ರಕಾರ, ಸುಧಿಪ್ ನಟನೆಯ ಮುಂಬರುವ 'ಮ್ಯಾಕ್ಸ್' ಚಿತ್ರವು ಡಿಸೆಂಬರ್ 25ರ 'ಕ್ರಿಸ್‌ಮಸ್' ದಿನದಂದು (25 December 2024) ಬಿಡುಗಡೆ ಘೋಷಿಸಿದೆ. ಈ ಚಿತ್ರದಲ್ಲಿ ನಟಿ ವರಲಕ್ಷ್ಮೀ ಶರತ್‌ಕುಮಾರ್ ಅವರು ಕಿಚ್ಚ ಸುದೀಪ್ ಅವರಿಗೆ ಜೋಡಿಯಾಗಿದ್ದಾರೆ. ಈ ಚಿತ್ರವು ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದು, ಬಿಡುಗಡೆ ಬಳಿಕ ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ವರ್ಷದ ಕೊನೆಯಲ್ಲಿ ಕಿಚ್ಚ-ಉಪ್ಪಿ ಭಾರೀ ಬಾಕ್ಸಾಫೀಸ್ ವಾರ್!