'ರಜನಿಕಾಂತ್ ಹಾಗು ನಾನು ಚೆನೈನಲ್ಲಿ ನಟನಾ ತರಬೇತಿ ಸ್ಕೂಲಿಗೆ ಒಟ್ಟಿಗೇ ಸೇರಿಕೊಂಡಿದ್ದೆವು. ಅಲ್ಲಿ ಒಟ್ಟಿಗೇ ಇರುತ್ತಿದ್ದ ನಾವು ಆತ್ಮೀಯ ಸ್ನೇಹಿತರು. ಈಗಲೂ ಕೂಡ ಸಿಕ್ಕಾಗ ಅದೇ ಸ್ನೇಹ-ಸಂಬಂಧ ಉಳಿದುಕೊಂಡಿದೆ. ಆದರೆ, ಇಂದು ಆತ ಸೂಪರ್ ಸ್ಟಾರ್...
ಕನ್ನಡದ ಹಿರಿಯ ನಟ ಅಶೋಕ್ (Ashok) ಅವರು ಸಂದರ್ಶನದಲ್ಲಿ ಮಾತನಾಡಿದ್ದು ಬಹಳಷ್ಟು ವೈರಲ್ ಆಗುತ್ತಿದೆ. ರಂಗನಾಯಕಿ, ತಾಯಿಯ ಮಡಿಲಲ್ಲಿ, ಭಾಗ್ಯವಂತರು, ಧರ್ಮಸೆರೆ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟ ಅಶೋಕ್ ಅವರು ಅಪರೂಪಕ್ಕೆ ಎಂಬಂತೆ ಮಾತನಾಡಿದ್ದಾರೆ. ಅಶೋಕ್ ಹಾಗೂ ಏಷ್ಯಾದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಿಬ್ಬರೂ ಒಂದು ಕಾಲದಲ್ಲಿ ಸಹಪಾಠಿಗಳು, ಆತ್ಮೀಯ ಸ್ನೇಹಿತರು ಎಂಬ ಸಂಗತಿ ಅಚ್ಚರಿ ಎನಿಸಿದರೂ ಸತ್ಯ!
ಈ ಬಗ್ಗೆ ಮಾತನಾಡುತ್ತ ಅಶೋಕ್ ಅವರು 'ರಜನಿಕಾಂತ್ ಹಾಗು ನಾನು ಚೆನೈನಲ್ಲಿ ನಟನಾ ತರಬೇತಿ ಸ್ಕೂಲಿಗೆ ಒಟ್ಟಿಗೇ ಸೇರಿಕೊಂಡಿದ್ದೆವು. ಅಲ್ಲಿ ಒಟ್ಟಿಗೇ ಇರುತ್ತಿದ್ದ ನಾವು ಆತ್ಮೀಯ ಸ್ನೇಹಿತರು. ಈಗಲೂ ಕೂಡ ಸಿಕ್ಕಾಗ ಅದೇ ಸ್ನೇಹ-ಸಂಬಂಧ ಉಳಿದುಕೊಂಡಿದೆ. ಆದರೆ, ಇಂದು ಆತ ಸೂಪರ್ ಸ್ಟಾರ್. ಅಂದು ಆತ ನಾನು ವಜ್ರಮುನಿ ತರಾನೇ ಪ್ರಭಾಕರ್ ತರಾನೋ ಇಲ್ಲ ಶಕ್ತಿ ಪ್ರಸಾದ್ ತರಾನೋ ವಿಲನ್ ಆಗ್ತೀನಿ, ನೀನು ಹೀರೋ ಆಗ್ತೀಯ.. ನೀನು ನನ್ನ ಮ್ಯಾನೇಜರ್ ಆಗಿ ಇಟ್ಕೋಬೇಕು ಅಂದಿದ್ದ..' ಎಂದಿದ್ದಾರೆ.
ಸಮರ್ಜಿತ್ ಲಂಕೇಶ್‌ಗೆ ಹಳೇ ಸಂಗತಿ ಹೊಸದಾಗಿ ಹೇಳಿದ ಕಿಚ್ಚ ಸುದೀಪ್!
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಟ ಅಶೋಕ್ 'ಅವ್ನು ಇಷ್ಟು ದೊಡ್ಡ ಸ್ಟಾರ್ ಆಗ್ತಾನೆ ಅಂತ ನಾನು ಹಾಗಿರಲಿ, ಸ್ವತಃ ಆತನೇ ಅಂದುಕೊಂಡಿರಲಿಲ್ಲ. ಚೆನ್ನೈ ಆಕ್ಟಿಂಗ್ ಸ್ಕೂಲ್ ಮುಗಿದ ಮೇಲೆ ಜೀವನ ನಮ್ಮಿಬ್ಬರನ್ನೂ ಬೇರೆಬೇರೆ ಕಡೆ ಕರೆದುಕೊಂಡು ಹೋಯ್ತು. ಆದರೆ, ಅಂದು ನೋಡಿದಾಗ ಅವನು ಈ ಮಟ್ಟಕ್ಕೆ ಬೆಳೆಇದ್ದು ಆಶ್ಚರ್ಯ ಹುಟ್ಟಿಸುತ್ತದೆ. ಆತನಲ್ಲಿ ಈ ಮಟ್ಟಿಗೆ ಬೆಳೆಯುವ ವಿಶೇಷ ಗುಣ ಅಂದು ಕಾಣಿಸುತ್ತಿರಲಿಲ್ಲ. ಆದರೆ, ಎಲ್ಲ ತರಹದ ಪಾತ್ರ ಮಾಡುವಂತಹ ಸಾಮರ್ಥ್ಯ, ಸ್ಪಾರ್ಕ್ ಇತ್ತು..' ಎಂದಿದ್ದಾರೆ ಅಶೋಕ್.
ನನಗೆ ರಜನಿಕಾಂತ್ ಬೆಳವಣಿಗೆ ಒಂದು ಪವಾಡ ಅಂತಲೇ ಅನ್ನಿಸುತ್ತದೆ. ಆ ಬಗ್ಗೆ ನಾವಿಬ್ಬರೂ ಈಗ ಸಿಕ್ಕಾಗಲೂ ಕೂಡ ಮಾತನಾಡಿಕೊಳ್ಳುತ್ತೇವೆ. ಆತ 'ನನಗೆ ಅವರು ಅವಕಾಶ ಕೊಟ್ಟರು, ಸಿನಿಮಾ ಸಕ್ಸಸ್ ಆಯ್ತು. ನಾನು ಇಷ್ಟು ಅವಕಾಶ, ಪ್ರೀತಿ ಸಿಉತ್ತೆ ಅಂತ ಅಂದುಕೊಂಡಿರಲಿಲ್ಲ. ದೇವರು ಕೊಟ್ಟಿದ್ದು ಎಲ್ಲವೂ, ಅವನೇ ನನ್ನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾನೆ ಅಂತಾನೆ' ಎಂದಿದ್ದಾರೆ ನಟ ಅಶೋಕ್.
ಪುನೀತ್‌ನಂತೆ ನನಗೂ ಹಾರ್ಟ್ ಅಟ್ಯಾಕ್ ಆಗಿತ್ತು, ಅದು ನಮ್ಮ ಹೆರಿಡಿಟರಿ ಸಮಸ್ಯೆ: ವಿನೋದ್ ರಾಜ್!
ಆದರೆ ನಟ ಅಶೋಕ್ ಅದೊಂದು ವಿಷಯ ಹೇಳಲು ಮರೆಯಲಿಲ್ಲ. ರಜನಿಕಾಂತ್ ತರ ಬೇರೆ ಯಾರೇ ಬೆಳೆದಿದ್ದರೂ ಈಗಲೂ ಅಷ್ಟು ಸಿಂಪಲ್ ಇರೋದು ಕಷ್ಟವೇ ಅನ್ನಿಸುತ್ತದೆ. ಅಷ್ಟು ಹಣ, ಕೀರ್ತಿ ಎಲ್ಲವೂ ಇದ್ದಾಗ ಬೇರೆ ಯಾರೇ ಆದರೂ ಇನ್ನೂ ಹೆಚ್ಚಿನ ಅದೂ ಇದೂ ಸುಖವನ್ನು ಅರಿಸಿಕೊಂಡು ಹೋಗುತ್ತಿದ್ದರು. ಎಲ್ಲೋ ಏನೋ ಇದೆ ಅಂತ ಸುಖ ಅರಸಿಕೊಂಡು ಹೋಗಿ ಅದೆಷ್ಟೂ ಸ್ಟಾರ್‌ಗಳು ಅವನತಿ ಹೊಂದಿದ್ದಾರೆ. ಆದರೆ ನಟ ರಜನಿ ಹಾಗಲ್ಲ..' ಎಂದಿದ್ದಾರೆ ಅಶೋಕ್.