ಪುನೀತ್‌ನಂತೆ ನನಗೂ ಹಾರ್ಟ್ ಅಟ್ಯಾಕ್ ಆಗಿತ್ತು, ಅದು ನಮ್ಮ ಹೆರಿಡಿಟರಿ ಸಮಸ್ಯೆ: ವಿನೋದ್ ರಾಜ್!

Published : Nov 28, 2024, 03:00 PM ISTUpdated : Nov 28, 2024, 09:03 PM IST
ಪುನೀತ್‌ನಂತೆ ನನಗೂ ಹಾರ್ಟ್ ಅಟ್ಯಾಕ್ ಆಗಿತ್ತು, ಅದು ನಮ್ಮ ಹೆರಿಡಿಟರಿ ಸಮಸ್ಯೆ: ವಿನೋದ್ ರಾಜ್!

ಸಾರಾಂಶ

ನಟ ವಿನೋದ್ ರಾಜ್ ಅವರು ಕಲಾಮಾಧ್ಯಮ ಸಂದರ್ಶನದಲ್ಲಿ.. 'ಪುನೀತ್ ರಾಜ್‌ಕುಮಾರ್ ಅವರಿಗೆ ಆದಂತೆ ನನಗೂ ಕೂಡ 47ನೇ ವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ ಆಗಿತ್ತು. ಅದು ಹೆರಿಡಿಟರಿ ಸಮಸ್ಯೆ, ಹೊಡಿತದೆ ಅದು. ಮೂಲನೇ ಸರಿಯಿಲ್ಲ...

ಕನ್ನಡದ ನಟ ಹಾಗೂ ನಟಿ ಲೀಲಾವತಿ (Leelavathi) ಮಗ ವಿನೋದ್‌ ರಾಜ್ (Vinod Raj) ಅವರು ಕಲಾಮಾಧ್ಯಮ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಹತ್ತು ಹಲವು ಸೀಕ್ರೆಟ್‌ಗಳನ್ನು ಬಹಿರಂಗ ಮಾಡಿರುವದು ಗೊತ್ತೇ ಇದೆ. ಅವರು ಕಲಾಮಾಧ್ಯಮದ ನಿರೂಪಕ ಪರಮ್ ಜೊತೆ ಮಾತನಾಡುತ್ತ ತಮಗೂ ಕೂಡ ಹಾರ್ಟ್ ಅಟ್ಯಾಕ್ ಆಗಿತ್ತು ಎಂಬ ಸಂಗತಿ ಬಹಿರಂಗ ಪಡಿಸಿದ್ದಾರೆ. ಅಮ್ಮ ಲೀಲಾವತಿಯವರನ್ನು ಮಾತುಮಾತಿಗೂ ನೆನಪಿಸಿಕೊಳ್ಳುವ ವಿನೋದ್ ರಾಜ್ ಅವರು, ಅಮ್ಮ ಮಾಡಿಟ್ಟು ಹೋಗಿದ್ದನ್ನು ನಾನು ಮ್ಯಾನೇಜ್ ಮಾಡುತ್ತಿದ್ದೇನೆ ಅಷ್ಟೇ ಅಂದಿದ್ದಾರೆ.  

ಹಾಗಿದ್ದರೆ ನಟ ವಿನೋದ್ ರಾಜ್ ಅವರು ಕಲಾಮಾಧ್ಯಮ ಸಂದರ್ಶನದಲ್ಲಿ ಅದೇನು ಹೇಳಿದ್ದಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.. ವಿನೋದ್ ರಾಜ್ ಅವರು 'ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಆದಂತೆ ನನಗೂ ಕೂಡ 47ನೇ ವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ ಆಗಿತ್ತು. ಅದು ಹೆರಿಡಿಟರಿ ಸಮಸ್ಯೆ, ಹೊಡಿತದೆ ಅದು. ಮೂಲನೇ ಸರಿಯಿಲ್ಲ. ಅದು ಮ್ಯಾನ್ಯುಫ್ಯಾಕ್ಚರ್ ಡಿಫೆಕ್ಟಾ? ಏನಪ್ಪಾ ಭಗವಂತ.. ' ಎಂದಿದ್ದಾರೆ.

ಮನೆಯಲ್ಲಿ ಎರಡು ನಾಯಿಗಳಿವೆ ಅಷ್ಟೇ; 'ತಬ್ಬಲಿ' ವಿನೋದ್ ರಾಜ್ ಕಣ್ಣೀರು ಹಾಕಿದ್ದೇಕೆ?

ಜೊತೆಗೆ, ಈಗಲೂ ನಾನು ಹಾರ್ಟ್‌ಗೆ ಸಂಬಂಧಿಸಿದ ಮಾತ್ರೆ ತೆಗೆದುಕೊಳ್ಳುತ್ತಲೇ ಇದ್ದೇನೆ. ದಿನಕ್ಕೆ 11-12 ಮಾತ್ರೆ ತಗೋತಾ ಇದೀನಿ. ನಾವೆಲ್ಲ ಒಂಥರಾ ಆಲ್ ಇಂಡಿಯಾ ಹಾರ್ಟ್ ಅಟ್ಯಾಕ್ ಕಂಪನಿ ಅಧ್ಯಕ್ಷರಾಗ್ಬಿಟ್ಟಿದೀವಿ ನಾವೆಲ್ಲಾ..' ಎಂದಿದ್ದಾರೆ. ಜೊತೆಗೆ, ಹೈ ಪ್ರೊಟೀನ್ ಜೀನ್ಸ್ ಇರುತ್ತೆ, ಅದೇನೂ ಮಾಡಕೋಗಾಲ್ಲ. ಊಟ ಮಾಡ್ಲೇಬೇಕು ಅನ್ನೋ ಎಂಜೈಮ್ಸ್ ಕ್ರಿಯೇಟ್ ಮಾಡುತ್ತೆ ಅದು, ಅವ್ರ ತಪ್ಪಲ್ಲ ಅದು.

ನಮಗೆ ಅರಿವಲ್ಲದೇ ನಾವು ಅದನ್ನು ತಿನ್ಬೇಕು ಅನ್ನೋ ತರ ಆಗಿದೆ. ಆವಾಗ ನಾವು ಸೆನ್ಸ್ ಇಟ್ಕೊಂಡು ಫುಡ್‌ ಬ್ಯಾಲೆನ್ಸ್ ಮಾಡ್ಬೇಕು, ಇಲ್ಲಾ ಅಂದ್ರೆ ಕಷ್ಟ ಆಗುತ್ತೆ ಅಷ್ಟೇ..' ಎಂದಿದ್ದಾರೆ ವಿನೋದ್ ರಾಜ್. ಅಂದಹಾಗೆ, ಬಹುತೇಕರಿಗೆ ಗೊತ್ತಿರುವಂತೆ ವಿನೋದ್ ರಾಜ್ ಹಾಗೂ ಲೀಲಾವತಿ ಮನೆ ಬೆಂಗಳೂರಿನ ನೆಲಮಂಗಲದ ಸಮೀಪ ಸೋಲದೇವನಹಳ್ಳಿಯಲ್ಲಿದೆ.

ಆಟದಲ್ಲಿ ಸೋತಿದ್ದಕ್ಕೆ ವಿಷ್ಣುವರ್ಧನ್‌ ನೋಡಿಕೊಂಡು ಹೋದ ಸುಹಾಸಿನಿ!

ಅಲ್ಲಿ ನಟ ಲೀಲಾವತಿಯವರ ತೋಟ ಹಾಗೂ ಮನೆ ಇದೆ. ಲೀಲಾವತಿ ಅಗಲಿದ ಮೇಲೆ ಅವರ ಮಗ ವಿನೋದ್ ರಾಜ್ ಅವರು 'ತಾಯಿಗೆ ತಕ್ಕ ಮಗ'ನಾಗಿ ಅಮ್ಮ ಮಾಡಿಟ್ಟ ಆಸ್ತಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ, ಅಮ್ಮನ ಮಾತಿನಂತೆ ಸುತ್ತಮುತ್ತಲಿನ ಜನರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಅಷ್ಟೇ ಅಲ್ಲ, ಸ್ವಂತ ಹಣದಲ್ಲಿ ಸರ್ಕಾರಿ ರಸ್ತೆಯನ್ನು ರಿಪೇರಿ ಮಾಡಿಸಿ ಮಾದರಿ ಎನಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ