ಚಿತ್ರ ವಿಮರ್ಶೆ: ಆದ್ಯ

By Kannadaprabha News  |  First Published Feb 22, 2020, 9:51 AM IST

ಸಿಗದ ಪ್ರೀತಿಯ ನೆನಪಲ್ಲೇ ಬೇಯುತ್ತಾ ನಾಯಕ ಚಿರು ವಿದೇಶಕ್ಕೆ ಹಾರಿ ನೆಲೆಯಾಗಿರುತ್ತಾನೆ. ಮುಂಜಾನೆಯೊಂದರಲ್ಲಿ ವಾಟ್ಸಪ್ ವಾಯ್ಸ್ ಮೆಸೇಜೊಂದು ಬಂದು ಆತ ಬೆಂಗಳೂರಿಗೆ ಹಾರಿ ಬರುತ್ತಾನೆ. ಹಾಗೆ ವಾಯ್ಸ್ ಮೆಸೇಜ್ ಮಾಡಿ ಸಹಾಯ ಕೇಳಿದ್ದು ಹಳೆಯ ಪ್ರೇಯಸಿ ಸಂಗೀತ.


ಕೆಂಡಪ್ರದಿ

 

Tap to resize

Latest Videos

ಹೀಗೆ ದೂರದಿಂದ ಹಾರಿ ಬಂದು ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿದು ಹಳೆ ಪ್ರೇಯಸಿಗೆ ನೆರವಾಗುತ್ತೇನೆ ಎಂದುಕೊಂಡವನು ಇನ್ನಷ್ಟು ಸಂಕೀರ್ಣ ಸಮಸ್ಯೆಗಳ ಸುಳಿಗೆ ಸಿಲುಕುತ್ತಾನೆ. ಹೀಗೆ ಸಿಲುಕಿಕೊಂಡವನ ಸುತ್ತ ಮಾಫಿಯಾಗಳು, ಪೊಲೀಸ್ ವ್ಯವಸ್ಥೆ, ತಂದೆಯ ಸಿಟ್ಟು, ತಾಯಿ ಆಕ್ರಂದನ, ಸುಳ್ಳುಗಳ ಸರಮಾಲೆ, ಸತ್ಯದ ಹುಡುಕಾಟ ಹೆಣೆದುಕೊಳ್ಳುತ್ತವೆ. ಹೀಗೆ ಹೆಣೆದುಕೊಂಡ ಘಟನೆಗಳ ಬಿಡಿಸುತ್ತಾ ಸಾಗುವ ನಾಯಕ ಒಂದು ಹಂತದ ವರೆಗೆ ಚಿತ್ರದ ಮೇನ್ ಪಿಲ್ಲರ್. ಇದೇ ಹೊತ್ತಿಗೆ ತಿರುವೊಂದು ಎದುರಾಗಿ ಚಿತ್ರದ ಅಸಲಿ ಪಿಲ್ಲರ್ ಬೇರೆಯೇ ಇದೆ ಎನ್ನಿಸಲು ಶುರುವಾಗುತ್ತದೆ. ಅಷ್ಟರ ಮಟ್ಟಿಗೆ ಚೈತನ್ಯ ಚಿತ್ರಕ್ಕೆ ಚೈತನ್ಯ ತುಂಬಿದ್ದಾರೆ.

ಚಿತ್ರ ವಿಮರ್ಶೆ: ಪಾಪ್‌ಕಾರ್ನ್‌ ಮಂಕಿ ಟೈಗರ್

ಚಿತ್ರವನ್ನು ಯಾವುದೇ ಮುಲಾಜಿಗೆ ಒಳಗಾಗದೇ ಎರಡು ತುಂಡುಗಳಾಗಿ ಕತ್ತರಿಸಬಹುದು. ಒಂದರಲ್ಲಿ ಸಂಗೀತ ಭಟ್ ಪ್ರಧಾನವಾದರೆ ಮತ್ತೊಂದರಲ್ಲಿ ಶ್ರುತಿ ಹರಿಹರನ್ ಪ್ರಧಾನ. ಇವರಿಬ್ಬರ ನಡುವಿನ ಸೇತುವೆ ಯಾಗಿ ತೆರೆಯ ಮೇಲೆ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದರೆ ತೆರೆ ಮರೆಯಲ್ಲಿಯೇ ‘ಆದ್ಯ’ ಎನ್ನುವ ಹೆಣ್ಣುಮಗಳು ಬಂದು ಹೋಗುತ್ತಿರುತ್ತಾಳೆ. ಅಲ್ಲಿಗೆ ಆದ್ಯಳನ್ನು ಹುಡುಕುತ್ತಾ ಹೋಗುವ ನಾಯಕ ಹಲವು ಅವತಾರಗಳನ್ನು ಎತ್ತುತ್ತಾ ಸತ್ಯವನ್ನು ಹುಡುಕುತ್ತಿರುತ್ತಾನೆ. ಡೆಲ್ಯೂಷನ್ ಡಿಸಾರ್ಡರ್ ಎನ್ನುವ ಮಾನಸಿಕ ರೋಗಕ್ಕೆ ತುತ್ತಾಗಿರುವ ಶ್ರುತಿ ಹರಿಹರನ್ ಒಂದು ಮುಖದಲ್ಲಿ ಪೊಲೀಸ್ ಅಧಿಕಾರಿಯಾಗಿ, ಮತ್ತೊಂದು ಮುಖದಲ್ಲಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್

ಇನ್ನೊಂದು ಕಡೆ ಸಂಗೀತ ಮಗುವನ್ನು ಕಳೆದುಕೊಂಡ ತಾಯಿಯಾಗಿ, ತನ್ನ ಮಗುವನ್ನು ಹುಡುಕುವುದಕ್ಕಾಗಿ ಹಳೆಯ ಪ್ರೇಮಿಯ ಸಹಾಯ ಪಡೆದಿರುತ್ತಾಳೆ. ಹೀಗೆ ವಿದೇಶದಲ್ಲಿ ಇರುವ ಹಳೆಯ ಪ್ರಿಯಕರನನ್ನು ಕೋರಲು ಒಂದು ಕಾರಣವಿದೆ. ಆ ಕಾರಣ ಕ್ಲೈಮ್ಯಾಕ್ಸ್ನಲ್ಲಿ ರವೀಲ್ ಆಗುತ್ತದೆ. ಪ್ರಧಾನವಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವ ಚಿತ್ರದಲ್ಲಿ ಕೆಲವಷ್ಟು ತಿರುವುಗಳಿವೆ. ಆ ತಿರುವುಗಳೇ ನೋಡುಗನನ್ನು ಹಿಡಿದಿಡುತ್ತವೆ. ರವಿಶಂಕರ್ ಗೌಡ ಅವರ ಖಡಕ್ ಡೈಲಾಗ್, ಪ್ರಮುಖರೆಲ್ಲರ ನಟನೆ ಚಿತ್ರದ ಮೂಲ ಸೆಲೆ.

ಕೆಲವು ಕಡೆ ಒಳ್ಳೆಯ ಸೆಳೆತ ಇದ್ದರೂ ದೃಶ್ಯಗಳ ಎಳೆತ ಅತಿಯಾದಂತೆ ಇದೆ. ಸಂಗೀತಕ್ಕೆ, ಕ್ಯಾಮರಾ ವರ್ಕ್‌ಗೆ ಅಷ್ಟೇನು ಮಹತ್ವ ಸಿಕ್ಕಿಲ್ಲ. ಇನ್ನು ಆದ್ಯ ಒಂದು ಫ್ಯಾಮಿಲಿ ಒಟ್ಟಾಗಿ ಕುಳಿತು ನೋಡಿ ಸಂತೋಷಪಡುವ ಸಿನಿಮಾ ಹೌದು. ತೆಲುಗಿನ ‘ಕ್ಷಣಂ’ ಸಿನಿಮಾದ ಅಫಿಷಿಯಲ್ ರಿಮೇಕ್ ಚಿತ್ರ ಇದಾಗಿದ್ದು, ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಕಳೆ ತಂದುಕೊಟ್ಟಿದ್ದಾರೆ. 

click me!