ಪೆಹಲ್ಗಾಂ ದಾಳಿ: ಜಿಪ್‌ಲೈನ್ ಸವಾರಿ ವಿಡಿಯೋದಲ್ಲಿ ಅನುಮಾನ ಮೂಡಿಸಿದ ಆಪರೇಟರ್ ಘೋಷಣೆ

Published : Apr 29, 2025, 08:10 AM ISTUpdated : Apr 29, 2025, 08:33 AM IST
ಪೆಹಲ್ಗಾಂ ದಾಳಿ: ಜಿಪ್‌ಲೈನ್ ಸವಾರಿ ವಿಡಿಯೋದಲ್ಲಿ ಅನುಮಾನ ಮೂಡಿಸಿದ ಆಪರೇಟರ್ ಘೋಷಣೆ

ಸಾರಾಂಶ

ಪೆಹಲ್ಗಾಂ ದಾಳಿಗೆ ಸ್ಥಳೀಯರ ಕುಮ್ಮಕ್ಕು ಕುರಿತು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರವಾಸಿಗನೊಬ್ಬರ ಜಿಪ್‌ಲೈನ್ ಸವಾರಿ ವಿಡಿಯೋ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಉಗ್ರರ ದಾಳಿ ನಡುವೆ ಪ್ರವಾಸಿಗನ ಜಿಪ್‌ಲೈನ್ ಸವಾರಿಗೆ ಕಳುಹಿಸಿದ ಆಪರೇಟರ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ.

ನವದೆಹಲಿ(ಏ.29): ಪಹಲ್ಗಾಂ ಉಗ್ರ ದಾಳಿ ಹಿಂದೆ ಸ್ಥಳೀಯರ ಕುಮ್ಮಕ್ಕಿನ ಶಂಕೆ ವ್ಯಕ್ತವಾಗಿರುವ ನಡುವೆಯೇ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಅದರಲ್ಲಿ ಪ್ರವಾಸಿಗರೊಬ್ಬರನ್ನು ಜಿಪ್‌ಲೈನ್‌ ಸವಾರಿಗೆ ಕಳುಹಿಸುವ ಮುನ್ನವೇ ಗುಂಡಿನ ಸದ್ದು ಕೇಳಿಸಿದರೂ ನಿರ್ವಾಹಕ ಅಲ್ಲಾ ಹು ಅಕ್ಬರ್‌ ಕೂಗಿ ಸುಮ್ಮನಾಗಿರುವುದು ಸೆರೆಯಾಗಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಗುಜರಾತ್‌ ಮೂಲದ ಪ್ರವಾಸಿಗರನ್ನು ಜಿಪ್‌ಲೈನ್ ಸವಾರಿಗೆ ಕಳುಹಿಸುವಾಗ ನಿರ್ವಾಹಕ ಹಿಂದಿನಿಂದ ಗುಂಡಿನ ಸದ್ದು ಕೇಳಿಸಿದೆ. ಮಾತ್ರವಲ್ಲದೇ ಅಷ್ಟರಲ್ಲಾಗಲೇ ಭಯೋತ್ಪಾದಕ ದಾಳಿಗೆ ಬೆದರಿ ಪ್ರವಾಸಿಗರು ಅಲ್ಲಿಂದ ಭಯದಿಂದ ಓಡಲು ಶುರು ಮಾಡಿದ್ದರು.

 ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲ, ರಾಜ್ಯ ಸ್ಥಾನಮಾನ ಕೇಳಲ್ಲ; ಸಿಎಂ ಓಮರ್ ಭಾವುಕ

ಹೀಗಿದ್ದರೂ ಜಿಪ್‌ಲೈನ್ ನಿರ್ವಾಹಕ ಪ್ರವಾಸಿಗರನ್ನು ರಕ್ಷಿಸಿದೇ ಅಲ್ಲಾ ಹು ಅಕ್ಬರ್‌ ಎಂದು ಘೋಷಣೆ ಕೂಗಿ ಸುಮ್ಮನಾಗಿದ್ದಾನೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದ ಬಹುತೇಕರು ಅಲ್ಲಿ ಉಗ್ರ ದಾಳಿ ನಡೆಯುವುದು ಆ ನಿರ್ವಾಹಕನಿಗೆ ಮೊದಲೇ ಗೊತ್ತಿತ್ತು ಎಂದು ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅಹಮದಾಬಾದ್‌ ಮೂಲದ ಪ್ರವಾಸಿಗ ಗುಂಡಿನ ದಾಳಿಯ ಅರಿವಿಲ್ಲದೇ ಜಪ್‌ಲೈನ್‌ ಸವಾರಿ ಪೂರ್ಣಗೊಳಿಸಿದ್ದಾನೆ. ಈ ವೇಳೆ ಆತ ಮಾಡಿದ ಸೆಲ್ಫಿ ವಿಡಿಯೋದಲ್ಲಿ ಉಗ್ರರ ದಾಳಿ, ಪ್ರಯಾಣಿಕರು ಓಡುತ್ತಿರುವ ದೃಶ್ಯ ಸೆರೆಯಾಗಿದೆ.

ಜಿಪ್‌ಲೈನ್‌ ಮೂಲಕ ವಿಡಿಯೋ ಮಾಡುತ್ತಾ ಸಾಗಿದ ಪ್ರವಾಸಿಗೆ ಕೆಲ ಹೊತ್ತಿನಲ್ಲಿ ಉಗ್ರ ದಾಳಿ ಅರಿವಾಗಿದೆ. ಜಿಪ್‌ಲೈನ್ ಸವಾರಿ ಅಂತ್ಯಗೊಂಡ ಬೆನ್ನಲ್ಲೇ ಛಂಗನೆ ಹಾರಿ ಕುಟುಂಬದತ್ತ ಧಾವಿಸಿದ್ದಾನೆ. ಬಳಿಕ ಒಂದಂಡೆ ಉಗ್ರರು ಹಂತ ಹಂತವಾಗಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಪತ್ನಿ ಹಾಗೂ ಕುಂಟಬವನ್ನು ಕರೆದುಕೊಂಡು ಓಡಲು ಶುರುು ಮಾಡಿದ್ದಾನೆ. ಮುಖ್ಯದ್ವಾರ ಬಳಿ ಬಂದಾಗ ಸ್ಥಳೀಯರೊಬ್ಬರು ನೆರವು ನೀಡಿದ್ದಾರೆ. ನೆರವಿನಿಂದ ಆದಷ್ಟು ಬೇಗ ದಾಳಿ ನಡೆಯುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಭಾರತೀಯ ಸೇನೆ ನೆರವಿಗೆ ಧಾವಿಸಿದೆ. ಗುಂಡಿನ ದಾಳಿ ನಡೆದ 25 ನಿಮಿಷದಲ್ಲಿ ಭಾರತೀಯ ಸೇನೆ ಆಗಮಿಸಿ ಹಲವರನ್ನು ರಕ್ಷಿಸಿದೆ ಎಂದು ಪ್ರವಾಸಿಗ ಹೇಳಿದ್ದಾನೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ