Official Language India ಸಂಸ್ಕೃತಕ್ಕೆ ಅಧಿಕೃತ ಭಾಷೆ ಮಾನ್ಯತೆ ನೀಡಬೇಕು,ಉಡುಪಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಒತ್ತಾಯ!

Published : Dec 09, 2021, 06:55 PM ISTUpdated : Dec 09, 2021, 07:36 PM IST
Official Language India ಸಂಸ್ಕೃತಕ್ಕೆ ಅಧಿಕೃತ ಭಾಷೆ ಮಾನ್ಯತೆ ನೀಡಬೇಕು,ಉಡುಪಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಒತ್ತಾಯ!

ಸಾರಾಂಶ

ಹಿಂದಿ ಭಾಷೆ ಅಧಿಕೃತಕ್ಕೆ ದಕ್ಷಿಣ ಭಾರತದ ವಿರೋಧ ವಿರೋಧ, ಗೊಂದಲದ ನಡುವೆ ಸುಬ್ರಮಣಿಯನ್ ಸ್ವಾಮಿ ಸಲಹೆ ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ, ಅಧಿಕೃತ ಮಾನ್ಯತೆಗೆ ಅರ್ಹ  

ಉಡುಪಿ(ಡಿ.09):  ದೇಶದಲ್ಲಿ ಹಲವು ದಶಕಗಳಿಂದ ಅಧಿಕೃತ ಭಾಷೆ ಚರ್ಚೆ ನಡೆಯುತ್ತಲೇ ಇದೆ.. ಉತ್ತರ ಭಾರತದ(India) ಬಹುತೇಕ ರಾಜ್ಯಗಳು ಹಿಂದಿ ಭಾಷೆಗೆ(Hindi Language) ಒಕೆ ಎಂದಿದ್ದರೆ, ದಕ್ಷಿಣ ಭಾರತ ಹಿಂದಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಈ ವಿರೋಧ, ಚರ್ಚೆ, ಗೊಂದಲದ ನಡುವೆ ಬಿಜೆಪಿ ನಾಯಕ, ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಮಹತ್ವದ ಸಲಹೆ ನೀಡಿದ್ದಾರೆ. ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ(Sanskrit). ಹೀಗಾಗಿ ಸಂಸ್ಕೃತ ಭಾಷೆಗೆ ಅಧಿಕೃತ ಮಾನ್ಯತೆ(Official language) ನೀಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಯೋದಿಸಿದ ವಿಶ್ವರ್ಪಣಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಬ್ರಮಣಿಯನ್ ಸ್ವಾಮಿ(subramanian swamy), ಉತ್ತರ ಹಾಗೂ ದಕ್ಷಿಣ ಭಾರತ ಸೇರಿದಂತೆ ಅಖಂಡ ಭಾರತಕ್ಕೆ ಒಪ್ಪುವ ಸಲಹೆ ನೀಡಿದ್ದಾರೆ. ನಮ್ಮ ದೇಶದಲ್ಲಿರುವ ಎಲ್ಲಾ ಭಾಷೆಗಳು ದೇವನಾಗರಿ ಲಿಪಿ ಬಳಕೆ ಮಾಡುತ್ತವೆ. ಈ ದೇವನಾಗರಿ ಲಿಪಿ ಮೂಲ ಸಂಸ್ಕೃತವಾಗಿದೆ. ಯೋಗಾಭ್ಯಾಸಕ್ಕೆ ಸಂಬಂಧಿಸಿದ ಎಲ್ಲಾ ಸಾಹಿತ್ಯವೂ ಸಂಸ್ಕೃತದಲ್ಲಿದೆ ಎಂದು ಸ್ವಾಮಿ ಹೇಳಿದ್ದಾರೆ.

ಅಮೆರಿಕನ್ ಸಿಂಗರ್ ತೋಳಲ್ಲಿ ಸಂಸ್ಕೃತ ಟ್ಯಾಟೂ

ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡುವುದರಿಂದ ಈಗಾಗಲೇ ನಶಿಸಿ ಹೋಗುತ್ತಿರುವ ಸಂಸ್ಕೃತ ಭಾಷೆಗೆ ಜೀವ ಬರಲಿದೆ. ಸಂಸ್ಕೃತ ಭಾಷೆ ಉಳಿಯಲು ಇದು ನೆರವಾಗುತ್ತದೆ. ಇಷ್ಟೇ ಅಲ್ಲ ಹಿಂದೂಗಳನ್ನು(Hindu) ಒಗ್ಗೂಡಿಸಲು ಸಂಸ್ಕೃತ ಭಾಷೆ ನೆರವಾಗಲಿದೆ. ಇಷ್ಟೇ ಅಲ್ಲ ದೇಶದ ಜನರಲ್ಲಿ ಏಕತಾ ಮನೋಭಾವ ಸೃಷ್ಟಿಸಲು ಸಂಸ್ಕೃತ ನೆರವಾಗಲಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಅಧಿಕೃತ ಭಾಷೆ ಮಾನ್ಯತೆ ನೀಡಿ ಎಲ್ಲಾ ಶಾಲೆಗಳನ್ನು(Schools) ಸಂಸ್ಕೃತವನ್ನು ಕಲಿಸಬೇಕು. ಇದರಿಂದ ಮಕ್ಕಳಲ್ಲಿ ಮಾನಸಿಕ ಬೆಳವಣಿಗೆಗೆ(Mental Development) ಸಹಕಾರ ನೀಡಲಿದೆ.  ಲಂಡನ್‌ನ ಕೆಲ ಪ್ರಮುಖ ಶಾಲೆಗಳನ್ನು ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಕಲಿಸಲಾಗುತ್ತದೆ. 6 ರಿಂದ 12 ವಯಸ್ಸಿನ ಮಕ್ಕಳಿಗೆ ಸಂಸ್ಕೃತ ಶಿಕ್ಷಣ ನೀಡಲಾಗುತ್ತದೆ. ಮಾನಸಿಕ ಬೆಳವಣಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಲಂಡನ್ ಈಗಾಗಲೇ ಸ್ಪಷ್ಟಪಡಿಸಿದೆ. ಹಲವು ದೇಶಗಳಲ್ಲಿ ಸಂಸ್ಕೃತ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಕೃತದಿಂದ ಭಾರತದ ಪ್ರಾಚೀನ ಪರಂಪರೆ, ಭವ್ಯ ಇತಿಹಾಸ ಹಾಗೂ ಗತಭವೈಭವ ಮರುಕಳಿಸಲಿದೆ. ಸಂಸ್ಕೃತ ಸಾಹಿತ್ಯ ಭಾರತದಲ್ಲಿ ಪಸರಿಲಲಿದೆ. ಭಾರತದ ಮೂಲ ಅಡಗಿರುವ ಸಂಸ್ಕೃತವೇ ಭಾರತದ ಅಧಿಕೃತ ಭಾಷೆ ಮಾನ್ಯತೆ ಅರ್ಹ ಎಂದು ಸ್ವಾಮಿ ಹೇಳಿದ್ದಾರೆ.

2000 ವರ್ಷ ಬಳಿಕವೂ ಚೀನಾದಲ್ಲಿ ಸಂಸ್ಕೃತ ಜನಪ್ರಿಯ: ಚೀನೀ ಪಂಡಿತ!

ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಹೇರಿಕೆ ಎಂದು ಹಲವು ಹೋರಾಟಗಳನ್ನೇ ಮಾಡಿದೆ. ತಮಿಳುನಾಡಿನಲ್ಲಿ ಕೆಲ ಪಕ್ಷಗಳು ಇದೇ ಹೋರಾಟದ ಮೂಲಕ ಅಸ್ತತ್ವ ಪಡೆದುಕೊಂಡಿದೆ. ಇದರ ನಡುವೆ ಸಂಸ್ಕೃತ ಭಾಷೆಗೆ ಮಾನ್ಯತೆ ನೀಡಲು ಸ್ವಾಮಿ ಒತ್ತಾಯಿಸಿದ್ದಾರೆ.

ಇದೇ ವೇಳೆ ಮಹಿಳೆಯರಿಗೆ ರಕ್ಷಣೆಗೆ ಹಿಂದೂ ಸಮಾಜ ಮುಂದಾಗಬೇಕು ಎಂದು ಕರೆನೀಡಿದ್ದಾರೆ. ಮಹಿಳೆಯರು ಪುರಷರ ರೀತಿ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ.  ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಸಮಾನತೆ ಹಾಗೂ ವಿಶೇಷ ಗೌರವ ನೀಡಲಾಗಿದೆ. ಆದರೆ ಇಂದಿನ ಸಮಾಜದಲ್ಲಿ ಅದೇ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ದೌರ್ಜನ್ಯ ಮಾಡಲಾಗುತ್ತಿದೆ ಎಂದು ಸ್ವಾಮಿ ಹೇಳಿದ್ದಾರೆ.

ಭಾರತದ ಮೂಲದ ವೈದ್ಯ ಈಗ ನ್ಯೂಝಿಲೆಂಡ್ ಸಂಸದ: ಸಂಸ್ಕೃತದಲ್ಲಿ ಪ್ರಮಾಣ ವಚನ

ಭಾರತದಲ್ಲಿ ಬಹುತೇಕ ಎಲ್ಲಾ ಧರ್ಮದ ಜನರಿದ್ದಾರೆ. ಅವರು ತಮ್ಮ ತಮ್ಮ ಧರ್ಮಗಳನ್ನು ಪಾಲಿಸುತ್ತಾರೆ. ಆಚರಣೆ ಮಾಡುತ್ತಾರೆ. ಇಷ್ಟೊಂದು ಧಾರ್ಮಿಕ ವೈವಿದ್ಯತೆ ಇತರ ಎಲ್ಲಿಯೂ ಸಿಗುವುದಿಲ್ಲ. ನಮ್ಮ ಸಂಸ್ಕೃತಿಯ ನಿಜವಾದ ಅರ್ಥವನ್ನು ಪಸರಿಸುವ ಅವಶ್ಯಕತೆ ಇದೆ. ಶ್ರೀಕೃಷ್ಣ ಹೇಳಿದಂತೆ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದು ಸ್ವಾಮಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್