ತಾಯಿಗೆ ಅನಾರೋಗ್ಯ. ಆದರೆ ದುಡಿದು ಕಷ್ಟಪಟ್ಟು ಓದಿಸಿದ ಮಗಳನ್ನು ಪೊಲೀಸ್ ಆಗಿ ನೋಡುವಾಸೆ. ಆದರೆ ಪುತ್ರಿ ನಿರುದ್ಯೋಗಿ. ತಾಯಿ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಈಕೆ ಪೊಲೀಸ್ ಯೂನಿಫಾರ್ಮ್ ತೊಟ್ಟು ಆಗಮಿಸಿದ್ದಾಳೆ. ಆದರೆ ಈಕೆಯ ಲೆಕ್ಕಾಚಾರ ಉಲ್ಟಾ ಆಗಿದೆ.
ಭೋಪಾಲ್(ನ.24) ಮಗಳು ಪೊಲೀಸ್ ಅಧಿಕಾರಿಯಾಗಬೇಕು ಅನ್ನೋ ಕಸನು ಕಂಡಿದ್ದ ತಾಯಿ ಮಗಳನ್ನು ಕಷ್ಟಟ್ಟು ಓದಿಸಿದ್ದಾರೆ. ಆದರೆ ಮಗಳು ಪೊಲೀಸ್ ಪರೀಕ್ಷೆ ಬರೆದಿದ್ದೇನೆ, ಫಿಸಿಕಲ್ ಟೆಸ್ಟ್ ಪಾಸಾಗಿದ್ದೇನೆ, ಶೀಘ್ರದಲ್ಲೇ ತರಬೇತಿಗೆ ಕರೆಯುತ್ತಾರೆ ಎಂದೆಲ್ಲಾ ಕತೆ ಹೇಳಿದ್ದಾಳೆ. ಪ್ರತಿ ಒಂದಲ್ಲಾ ಒಂದು ಕತೆ ಹೇಳಿ ತಾಯಿಯನ್ನು ಸಮಾಧಾನ ಪಡಿಸಿದ್ದಳು. ಇದರ ನಡುವೆ ತಾಯಿ ಆರೋಗ್ಯ ಕ್ಷೀಣಿಸ ತೊಡಗಿದೆ. ಮಗಳನ್ನು ಪೊಲೀಸ್ ಯೂನಿಫಾರ್ಮ್‌ನಲ್ಲಿ ನೋಡಲು ಆಸೆ ಪಟ್ಟಿದ್ದಾರೆ. ಅನಾರೋಗ್ಯ ಪೀಡಿತ ತಾಯಿಗಾಗಿ ಈಕೆ ಪೊಲೀಸ್ ವೇಷದಲ್ಲಿ ಬಂದಿದ್ದಾಳೆ. ಪೊಲೀಸ್ ಯೂನಿಫಾರ್ಮ ಧರಿಸಿದ ಆಗಮಿಸಿದ ಈಕೆ, ತಾಯಿಯ ಬಿಪಿ ಶುಗರ್ ಹೆಚ್ಚಿಸಿದ ಘಟನೆ ಮಧ್ಯಪ್ರದೇಶ ಭೋಪಾಲ್ ನಗರದಲ್ಲಿ ನಡೆದಿದೆ.
28 ವರ್ಷದ ಶಿವಾನಿ ಚೌವ್ಹಾಣ್‌ಗೆ ಯಾವುದೇ ಕೆಲಸವಿಲ್ಲ. ಈಕೆ ಭೋಪಾಲ್ ನ್ಯೂ ಸಿಟಿ ಮಾರ್ಕೆಟ್‌ನಲ್ಲಿ ಎಎಸ್‌ಪಿ ಪೊಲೀಸ್ ಅಧಿಕಾರಿ ಯೂನಿಫಾರ್ಮ್‌ನಲ್ಲಿ ತಿರುಗಾಡಿದ್ದಾಳೆ. ಅದೇ ಗತ್ತು ಗಾಂಭೀರ್ಯದಲ್ಲಿ ತಿರುಗಾಡಿದ್ದಾಳೆ. ಇದೇ ಮಾರ್ಕೆಟ್‌ನಲ್ಲಿ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಪೇದೆ ಈ ಹಿರಿಯ ನಕಲಿ ಪೊಲೀಸ್ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಅಶೋಕ ಚಿಹ್ನ ಸೇರಿದಂತೆ ಪೊಲೀಸ್ ಯೂನಿಫಾರ್ಮ್‌ನಲ್ಲಿ ಬಹುತೇಕ ಪಕ್ಕ ಇದೆ. ಆದರೆ ಕೆಲ ಪ್ರಮುಖ ಅಂಶಗಳು ಮಿಸ್ಸಿಂಗ್. ಮತ್ತೊಂದೆಡೆ ಈ ರೀತಿಯ ಲೇಡಿ ಪೊಲೀಸ್ ಅಧಿಕಾರಿ ತನ್ನ ಸ್ಟೇಶನ್ ಹಾಗೂ ಅಕ್ಕಪಕ್ಕದ ಸ್ಟೇಶನ್‌ನಲ್ಲಿ ಇಲ್ಲ ಅನ್ನೋದು ಮನಗಂಡ ಮಹಿಳಾ ಪೊಲೀಸ್ ಪೇದೆ ಅನುಮಾನ ಹೆಚ್ಚಾಗಿದೆ.
undefined
ಪ್ರೀತಿ ಪಾತ್ರರ ಮರಣವೇ ಟಾರ್ಗೆಟ್, ಹೊಸ ಅಂತ್ಯಸಂಸ್ಕಾರ ಸೈಬರ್ ಕ್ರೈಂನಲ್ಲಿ ಸಿಲುಕಬೇಡಿ ಎಚ್ಚರ!
ಶಿವಾನಿ ಚೌವ್ಹಾಣ್ ಧರಿಸಿದ ಪೊಲೀಸ್ ಯೂನಿಫಾರ್ಮ್ ನೇಮ್ ಪ್ಲೇಟ್ ಕಳೆಗಿನ ನಂಬರ್ ಮಹಿಳಾ ಪೊಲೀಸ್ ಪೇದೆಯ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಮಹಿಳಾ ಪೊಲೀಸ್ ತಕ್ಷಣ ಟಿಟಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಸಿಟಿ ನ್ಯೂ ಮಾರ್ಕೆಟ್‌ಗೆ ಆಗಮಿಸಿದ್ದಾರೆ. ಶಿವಾನಿ ಚೌವ್ಹಾಣ್ ಬಳಿ ಪೊಲೀಸರು ಪ್ರಶ್ನಿಸಿದಾಗ 2020ರಲ್ಲಿ ಪೊಲೀಸ್ ಫೋರ್ಸ್ ಸೇರಿಕೊಂಡಿರುವುದಾಗಿ ಹೇಳಿದ್ದಾಳೆ. ಎರಡೇ ವರ್ಷದಲ್ಲಿ ಪ್ರಮೋಶನ್ ಆಗಿರುವುದಾಗಿ ಹೇಳಿಕೊಂಡಿದ್ದಾಳೆ. ಈಕೆಯ ಉತ್ತರ ಕೇಳಿಕೊಂಡ ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ಆರಂಭಿಸಿದಾಗ ತಾನು ಪೊಲೀಸ್ ಯೂನಿಫಾರ್ಮ್ ತೊಟ್ಟಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ಯಾವುದೇ ಪೊಲೀಸ್ ಇಲಾಖೆಗೆ ಸೇರಿಕೊಂಡಿಲ್ಲ. ಪೊಲೀಸ್ ಕೆಲಸ ಸಿಕ್ಕಿಲ್ಲ. ತಾನು ನಿರುದ್ಯೋಗಿ ಎಂದು ಹೇಳಿಕೊಂಡಿದ್ದಾಳೆ. ಪೊಲೀಸ್ ಯೂನಿಫಾರ್ಮ್ ತೊಟ್ಟು ಯಾರಿಂದ ವಸೂಲಿ ಮಾಡಲಾಗಿದೆ? ಎನೆಲ್ಲಾ ವಂಚನೆ ನಡೆಸಲಾಗಿದೆ ಅನ್ನೋ ವಿಚಾರಣೆ ಆರಂಭಗೊಂಡಿತು. ಈ ವೇಳೆ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ಖುಷಿಪಡಿಸಲು ಈ ರೀತಿ ನಾಟಕ ಆಡಿರುವುದಾಗಿ ಹೇಳಿದ್ದಾಳೆ.
ಅಶೋಕ ಚಿಹ್ನೆ, ಸಾರ್ವಜನಿಕ ಸೇವೆಯ ಅಧಿಕಾರಿಯ ಯೂನಿಫಾರ್ಮ್ ಬಳಸಿರುವುದು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 205ರ ಅಡಿ ಪ್ರಕಾರ ಶಿಕ್ಷಾರ್ಹ ಅಪರಾಧಾಗಿದೆ. ಹೀಗಾಗಿ ಈಕೆಯ ವಿರುದ್ಧ 205ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಷ್ಟೇ ಅಲ್ಲ ಶಿವಾನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಾಯಿಯನ್ನು ಖುಷಿಪಡಿಸಲು ಪೊಲೀಸ್ ಯೂನಿಫಾರ್ಮ್ ಹಾಕಿದ್ದರೆ, ಸಿಟಿ ಮಾರ್ಕೆಟ್‌ಗೆ ಬಂದಿದ್ದೇಕೆ ಅನ್ನೋ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಈಕೆಯ ಹಿನ್ನಲೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದುವರೆಗೆ ಈಕೆಯ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇನ್ನು ಈಕೆಯ ಗ್ರಾಮದಲ್ಲೂ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಂಡ ಉದಾಹರಣೆ ಇಲ್ಲ ಅನ್ನೋದು ಗೊತ್ತಾಗಿದೆ. ಸದ್ಯ ತನಿಖೆ ಮುಂದುವರಿದಿದೆ. ಪೊಲೀಸ್ ಸಮವಸ್ತ್ರ ತೊಟ್ಟ ಯುವತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ನಕ್ಸಲ್ ದಾಳಿ ಪ್ಲಾನ್ ಮಾಡಿರಲಿಲ್ಲ, ವಿಕ್ರಂ ಗೌಡ ಎನ್‌ಕೌಂಟರ್ ಫೇಕ್ ಅಲ್ಲ: ಡಿಜಿಪಿ