Published : May 11, 2025, 12:07 AM IST

Operation Sindoor Live: ಸಾಗರದಲ್ಲಿ ಸುನಾಮಿ ಎಬ್ಬಿಸಬಲ್ಲ ಶಸ್ತ್ರಾಸ್ತ್ರಗಳಿವು! ವಿಶ್ವದ ಈ 2 ದೇಶಗಳು ಮಾತ್ರ ಹೊಂದಿವೆ!

ಸಾರಾಂಶ

ನವದೆಹಲಿ: ಭಾರತದ ದಾಳಿಯಿಂದ ಕೆಂಗಟ್ಟ ಪಾಕಿಸ್ತಾನ ಕದನ ವಿರಾಮ ಘೋಷಿಸುವಂತೆ ಅಮೆರಿಕ ಮುಂದೆ ಹೋಗಿ ಅಂಗಲಾಚಿತ್ತು. ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾಗಿತ್ತು. ಆದ್ರೆ ಕದನ ವಿರಾಮ ಘೋಷಣೆಯಾದ ನಾಲ್ಕು ಗಂಟೆಯಲ್ಲಿ ಪಾಕಿಸ್ತಾನ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸಿ, ಭಾರತದತ್ತ ಡ್ರೋನ್ ದಾಳಿ ನಡೆಸಿತ್ತು. ಜಮ್ಮು, ಕಾಶ್ಮೀರ, ರಾಜಸ್ಥಾನ, ಪಂಜಾಬ್ ರಾಜ್ಯಗಳತ್ತ ಸಾಲು ಸಾಲು ಪಾಕ್ ಡ್ರೋನ್‌ಗಳು ಹಾರಿ ಬಂದಿದ್ದವು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಭಾರತದ ವಿದೇಶಾಂಗ ಕಾರ್ಯದರ್ಶಿ, ವಿಕ್ರಂ ಮಿಸ್ರಿ ಸೇನೆಗೆ ಫ್ರೀ ಹ್ಯಾಂಡ್ ನೀಡಲಾಗಿದೆ. ಪಾಕಿಸ್ತಾನದಿಂದಲೇ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಇತ್ತ ರಜೆ ಮೇಲೆ ಊರುಗಳಿಗೆ ಬಂದಿದ್ದ ಸೈನಿಕರು ಮತ್ತೆ ಹಿಂದಿರುಗುತ್ತಿದ್ದಾರೆ. ತಡರಾತ್ರಿಯೇ ಸೇನಾಧಿಕಾರಿಗಳು ತುರ್ತು ಸಭೆಯನ್ನು ನಡೆಸಿದ್ದಾರೆ. 

Operation Sindoor Live: ಸಾಗರದಲ್ಲಿ ಸುನಾಮಿ ಎಬ್ಬಿಸಬಲ್ಲ ಶಸ್ತ್ರಾಸ್ತ್ರಗಳಿವು! ವಿಶ್ವದ ಈ 2 ದೇಶಗಳು ಮಾತ್ರ ಹೊಂದಿವೆ!

11:56 PM (IST) May 11

ಸಾಗರದಲ್ಲಿ ಸುನಾಮಿ ಎಬ್ಬಿಸಬಲ್ಲ ಶಸ್ತ್ರಾಸ್ತ್ರಗಳಿವು! ವಿಶ್ವದ ಈ 2 ದೇಶಗಳು ಮಾತ್ರ ಹೊಂದಿವೆ!

2025ರ ಮೇ ತಿಂಗಳ ಭಾರತ-ಪಾಕಿಸ್ತಾನ ಸಂಘರ್ಷವು S-400, ರಫೇಲ್, ಮತ್ತು ಸುನಾಮಿ ಆಯುಧಗಳಂತಹ ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಗೆ ಸಾಕ್ಷಿಯಾಯಿತು. ಈ ಘರ್ಷಣೆಯು ಜಾಗತಿಕ ಭದ್ರತೆ ಮತ್ತು ಶಸ್ತ್ರಾಸ್ತ್ರ ಪೈಪೋಟಿಯ ಮೇಲೆ ಗಂಭೀರ ಪರಿಣಾಮ ಬೀರಿದೆ.

ಪೂರ್ತಿ ಓದಿ

11:25 PM (IST) May 11

22400% Return! 5 ವರ್ಷದಲ್ಲಿ ಕೋಟ್ಯಧಿಪತಿಯನ್ನಾಗಿ ಮಾಡಿದ 4 ರೂಪಾಯಿ ಷೇರು

PG Electroplast Ltd ಕಳೆದ 5 ವರ್ಷಗಳಲ್ಲಿ ಹೂಡಿಕೆದಾರರಿಗೆ 22,400% ಲಾಭ ತಂದುಕೊಟ್ಟಿದೆ. ₹3.59 ಇದ್ದ ಷೇರು ₹807.60 ತಲುಪಿದೆ. 1:10 ಸ್ಟಾಕ್ ಸ್ಪ್ಲಿಟ್‌ನಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭ.

ಪೂರ್ತಿ ಓದಿ

11:01 PM (IST) May 11

ನಮ್ಮ ಕೆಲಸ ಶತ್ರು ಗುರಿಯನ್ನು ಹೊಡೆಯುವುದು, ಹೆಣಗಳನ್ನು ಎಣಿಸುವುದಲ್ಲ: ಏರ್ ಮಾರ್ಷಲ್ ಎ.ಕೆ. ಭಾರ್ತಿ

ಆಪರೇಷನ್ ಸಿಂಧೂರ್ ಬ್ರೀಫಿಂಗ್‌ನಲ್ಲಿ ಏರ್ ಮಾರ್ಷಲ್ ಎ.ಕೆ. ಭಾರ್ತಿಯವರ "ನಮ್ಮ ಕೆಲಸ ಗುರಿಯನ್ನು ಹೊಡೆಯುವುದು, ದೇಹಗಳನ್ನು ಎಣಿಸುವುದಲ್ಲ" ಎಂಬ ಹೇಳಿಕೆ ವೈರಲ್ ಆಗಿದ್ದು, ಭಾರತವು ನಿಖರ ದಾಳಿಗಳು ಮತ್ತು ಮಿಲಿಟರಿ ದೃಢಸಂಕಲ್ಪದ ಮೇಲೆ ಕೇಂದ್ರೀಕರಿಸಿದೆ ಎಂದು ಒತ್ತಿಹೇಳುತ್ತದೆ.

ಪೂರ್ತಿ ಓದಿ

10:08 PM (IST) May 11

ಆಪರೇಷನ್ ಸಿಂದೂರ್ ನಂತರ ಪಾಕಿಸ್ತಾನದ ಸ್ಥಿತಿ ಏನಾಗಿದೆ? ನಿಮ್ಮ 5 ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ 

ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಆಪರೇಷನ್ ಸಿಂದೂರ್ ನಲ್ಲಿ ಉಗ್ರ ನೆಲೆಗಳ ನಾಶ, ಸೈನಿಕರ ಸಾವು, ಬಳಸಿದ ಶಸ್ತ್ರಾಸ್ತ್ರಗಳು ಸೇರಿದಂತೆ 5 ಪ್ರಮುಖ ಪ್ರಶ್ನೆಗಳಿಗೆ ಭಾರತೀಯ ಸೇನೆ ಉತ್ತರಿಸಿದೆ. ಕಾರ್ಯಾಚರಣೆಯ ಗೌಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವು ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಪೂರ್ತಿ ಓದಿ

09:09 PM (IST) May 11

ಉಗ್ರರು & ಅವರ ಹಿತೈಷಿಗಳಿಗೆ ಭಾರತ ಕಳುಹಿಸಿದ ಸಂದೇಶ ಕೇಳಿ ಪತರುಗುಟ್ಟಿದ ಪಾಕ್! ಏನಿದು ಮೆಸೇಜ್?

ಇಂದಿನ ಸುದ್ದಿಗೋಷ್ಠಿ ಬೆನ್ನಲ್ಲೇ  ಪಾಕಿಸ್ತಾನದಲ್ಲಿರುವ ಉಗ್ರರು ಮತ್ತು ಅವರ ಹಿತೈಷಿಗಳಿಂದ ಭಾರತದಿಂದ ಖಡಕ್ ಸಂದೇಶವೊಂದನ್ನು ರವಾನಿಸಲಾಗಿದೆ. ಅ ಸಂದೇಶದಲ್ಲಿ ಏನಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಪೂರ್ತಿ ಓದಿ

08:26 PM (IST) May 11

ಪಾಕ್‌ಗೆ ಭಾರತ ಕೊಟ್ಟ ತಿರುಗೇಟಿಗೆ ಶಾಕ್ ಆಗಿತ್ತು ಅಮೆರಿಕಾ? ಮಧ್ಯಸ್ಥಿಕೆಗೆ ಬಂದ ಹಿಂದಿನ ಕಾರಣ ಇಲ್ಲಿದೆ

ಭಾರತವು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ನಂತರ, ಅಮೆರಿಕ ತಕ್ಷಣವೇ ಮಧ್ಯಸ್ಥಿಕೆ ವಹಿಸಲು ಪ್ರಾರಂಭಿಸಿತು.

ಪೂರ್ತಿ ಓದಿ

07:39 PM (IST) May 11

Parenting Tips: ಯುದ್ಧ ಪರಿಸ್ಥಿತಿ ವೇಳೆ ಭಯಗೊಳ್ಳದಂತೆ ಮಕ್ಕಳ ಮನಸನ್ನು ಶಾಂತವಾಗಿರಿಸಲು ಇಷ್ಟು ಮಾಡಿ!

ಯುದ್ಧದಂಥ ಪರಿಸ್ಥಿತಿ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವರ ವಯಸ್ಸಿಗೆ ತಕ್ಕಂತೆ ಮಾತನಾಡಿ, ಭಯಾನಕ ಸುದ್ದಿಗಳಿಂದ ದೂರವಿಡಿ ಮತ್ತು ನಿಯಮಿತ ದಿನಚರಿಯನ್ನು ಕಾಪಾಡಿಕೊಳ್ಳಿ. ಆಟಪಾಠಗಳು ಮತ್ತು ಸಕಾರಾತ್ಮಕತೆಯಿಂದ ಅವರ ಮನಸ್ಸನ್ನು ಶಾಂತವಾಗಿರಿಸಿ.

ಪೂರ್ತಿ ಓದಿ

07:28 PM (IST) May 11

ಪಾಕ್ ವಾಯುನೆಲೆಗಳ ಮೇಲೆ ಭಾರತದಿಂದ ನಿಖರ ದಾಳಿ: ಫೋಟೋಗಳಲ್ಲಿ ನೋಡಿ

ಆಪರೇಷನ್ ಸಿಂದೂರದಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಿಖರ ದಾಳಿ ನಡೆಸಿ, ಪ್ರಮುಖ ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ. ಭೋಲಾರಿ, ಜಾಕೋಬಾಬಾದ್, ಸರ್ಗೋಧಾ ಮತ್ತು ನೂರ್ ಖಾನ್ ವಾಯುನೆಲೆಗಳು ಈ ದಾಳಿಗೆ ಒಳಗಾಗಿವೆ.

ಪೂರ್ತಿ ಓದಿ

06:59 PM (IST) May 11

ಡಿಜಿಎಂಒ ಜಂಟೀ ಪತ್ರಿಕಾಗೋಷ್ಠಿ: ಭಾರತದ ದಾಳಿಯಿಂದ 35ಕ್ಕೂ ಹೆಚ್ಚು ಪಾಕ್‌ ಸೇನಾಧಿಕಾರಿಗಳ ಸಾವು

ಪಹಲ್ಗಾಮ್ ದಾಳಿಯ ನಂತರ, ಭಾರತವು ಆಪರೇಷನ್ ಸಿಂದೂರ್ ಅಡಿಯಲ್ಲಿ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಿತು. ಈ ನಿಖರ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ದಾಳಿಗಳನ್ನು ಭಾರತ ಯಶಸ್ವಿಯಾಗಿ ವಿಫಲಗೊಳಿಸಿದೆ.

ಪೂರ್ತಿ ಓದಿ

06:51 PM (IST) May 11

'ಬದುಕಿ, ಬದುಕಲು ಬಿಡಿ' ಕದನ ವಿರಾಮ ಬಗ್ಗೆ ಉತ್ತರ ಪ್ರದೇಶದ ಮೌಲನಾ ಹೇಳಿದ್ದು ಪಾಕಿಸ್ತಾನಕ್ಕಾ? ಭಾರತಕ್ಕಾ?

ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಒಪ್ಪಂದವು ಧನಾತ್ಮಕ ಬದಲಾವಣೆ ತೋರಿಸುತ್ತಿದೆ. ದೇವಬಂದಿ ಸಿದ್ಧಾಂತದ ವಿದ್ವಾಂಸ ಮೌಲಾನಾ ಖಾರಿ ಇಶಾಕ್ ಗೋರಾ ಅವರು ಈ ಕದನ ವಿರಾಮವನ್ನು ಮಾನವೀಯತೆಯ ಪ್ರಾರ್ಥನೆಯ ಫಲವೆಂದು ಬಣ್ಣಿಸಿದ್ದಾರೆ. ಆದರೆ, ಕದನ ವಿರಾಮ ಜಾರಿಯಾದ ಬಳಿಕವೂ ಪಾಕಿಸ್ತಾನದಿಂದ ಡ್ರೋನ್ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.

ಪೂರ್ತಿ ಓದಿ

06:40 PM (IST) May 11

ಗಡಿಯತ್ತ ಹೊರಟಿದ್ದ ಸೈನಿಕನ ಬಳಿ ಲಂಚ ಕೇಳಿದ TTE: ಮುಂದೇನಾಯ್ತು ಅಂತ ವಿಡಿಯೋ ನೋಡಿ

ಕರ್ತವ್ಯಕ್ಕೆ ತೆರಳುತ್ತಿದ್ದ ಸೈನಿಕನ ಬಳಿ ಟಿಕೆಟ್ ಪರಿಶೀಲಕ ಲಂಚ ಕೇಳಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಲಂಚ ಕೇಳಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸೈನಿಕ ತುರ್ತಾಗಿ ಗಡಿಗೆ ತೆರಳಬೇಕಿದ್ದರಿಂದ ಸಾಮಾನ್ಯ ಟಿಕೆಟ್ ಪಡೆದಿದ್ದರು.

ಪೂರ್ತಿ ಓದಿ

05:07 PM (IST) May 11

ಪಾಕ್‌ ಲೀಗ್ ಆತಿಥ್ಯಕ್ಕೆ ಯುಎಇ ನಿರಾಕರಿಸುವುದರ ಹಿಂದೆ ಜಯ್‌ ಶಾ ಪಾತ್ರ!

ಯುದ್ಧ ಪರಿಸ್ಥಿತಿಯಿಂದಾಗಿ ಪಾಕಿಸ್ತಾನ ತನ್ನ PSL ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಯತ್ನಿಸಿತು, ಆದರೆ ಯುಎಇ ಆತಿಥ್ಯ ವಹಿಸಲು ನಿರಾಕರಿಸಿತು. ಈ ನಿರ್ಧಾರದ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಐಸಿಸಿ ಮುಖ್ಯಸ್ಥ ಜಯ್ ಶಾ ಅವರ ಪ್ರಭಾವವಿದೆ ಎಂದು ವರದಿಯಾಗಿದೆ.

ಪೂರ್ತಿ ಓದಿ

05:02 PM (IST) May 11

ಅಲ್ಲಿಂದ ಗುಂಡು ಬಂದ್ರೆ, ಇಲ್ಲಿಂದಲೂ ಗುಂಡು ಸಿಡಿಯುತ್ತೆ; ಯಾರ ಮಧ್ಯಸ್ಥಿಕೆಯೂ ಬೇಡ; ಪ್ರಧಾನಿ ಮೋದಿ

ಪಾಕಿಸ್ತಾನದಿಂದ ಗುಂಡು ಬಂದರೆ, ಭಾರತದಿಂದ ಬಾಂಬ್ ಹೋಗಲಿದೆ ಎಂದು ಪ್ರಧಾನಿ ಮೋದಿ ಸೇನೆಗೆ ಸೂಚನೆ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದೇ ಭಾರತದ ಗುರಿಯಾಗಿದ್ದು, ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತ್ರ ಮಾತುಕತೆ ನಡೆಸಲು ಸಿದ್ಧ ಎಂದಿದ್ದಾರೆ.

ಪೂರ್ತಿ ಓದಿ

04:51 PM (IST) May 11

ಪಾಕಿಸ್ತಾನ ಸೇನೆ ಸರ್ಕಾರ ಮಾತು ಕೇಳಲ್ಲ, ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ; ಸಚಿವ ಜೋಶಿ

ಪಾಕಿಸ್ತಾನದಲ್ಲಿ ಸೈನ್ಯವೇ ಪ್ರಬಲವಾಗಿದ್ದು ಚುನಾಯಿತ ಸರ್ಕಾರದ ಮಾತು ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಬಲವಾದ ನಿಲುವು ತೆಗೆದುಕೊಂಡಿದ್ದು, ರಕ್ಷಣಾ ಪಡೆಗಳಿಗೆ ಮುಕ್ತ ಹಸ್ತ ನೀಡಲಾಗಿದೆ.

ಪೂರ್ತಿ ಓದಿ

04:48 PM (IST) May 11

ರೋಹಿತ್ ಶರ್ಮಾ ನಿವೃತ್ತಿ ಬೆನ್ನಲ್ಲೇ ಈ ಆಟಗಾರನಿಗೆ ಜಾಕ್‌ಪಾಟ್, ಇಂಗ್ಲೆಂಡ್ ಸರಣಿಗೆ ಆಯ್ಕೆ?

ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ಸಾಯಿ ಸುದರ್ಶನ್ ಆಡುವ ಸಾಧ್ಯತೆ ಇದೆ. ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸುದರ್ಶನ್, ಆರಂಭಿಕ ಅಥವಾ ಮೂರನೇ ಕ್ರಮಾಂಕದಲ್ಲಿ ಆಡಬಹುದು. ರೋಹಿತ್ ಶರ್ಮಾ ನಿವೃತ್ತಿ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ಅವಕಾಶ ಲಭ್ಯವಾಗುವ ಸಾಧ್ಯತೆಯಿದೆ.

ಪೂರ್ತಿ ಓದಿ

03:48 PM (IST) May 11

ಅಂತ್ಯಕ್ರಿಯೆಯ ಚಿತೆಯ ಬೂದಿ ಇದೆ, ಜಗತ್ತು ಸಿಂದೂರವನ್ನು ಕೇಳುತ್ತಿದೆ; ಕೊನೆಗೂ ಮೌನ ಮುರಿದ Amitabh Bachchan

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆಯ ಧೈರ್ಯವನ್ನು ಅಮಿತಾಬ್ ಬಚ್ಚನ್ ಶ್ಲಾಘಿಸಿದ್ದಾರೆ, 'ಆಪರೇಷನ್ ಸಿಂಧೂರ'ವನ್ನು ಗೌರವಿಸುತ್ತಾ ಕ್ರೌರ್ಯವನ್ನು ಖಂಡಿಸಿದ್ದಾರೆ ಮತ್ತು ರಾಷ್ಟ್ರೀಯ ರಕ್ಷಣೆ ಮತ್ತು ದೃಢಸಂಕಲ್ಪವನ್ನು ಒತ್ತಿ ಹೇಳಿದ್ದಾರೆ.

 

ಪೂರ್ತಿ ಓದಿ

03:02 PM (IST) May 11

ಭಾರತದ ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ; ಪಾಕ್‌ಗೆ ಎಚ್ಚರಿಕೆ ಕೊಟ್ಟ ವಾಯುಪಡೆ!

ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನ ಕುರಿತು ವಾಯುಪಡೆ ಮಾಹಿತಿ ನೀಡಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಸದ್ಯದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

ಪೂರ್ತಿ ಓದಿ

02:27 PM (IST) May 11

ವರ ಮಾಡಿದ ಒಂದು ತಮಾಷೆಯಿಂದ ಮದುವೆ ಮುರಿದುಕೊಂಡು ಹೋದ ವಧು!

ವರನ ಜನ್ಮದಿನದ ತಮಾಷೆಯ ಮಾತಿನಿಂದಾಗಿ ವಧು ಮದುವೆಯನ್ನು ಮುರಿದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವರನು ತನ್ನ ಜನ್ಮ ದಿನಾಂಕವನ್ನು ತಪ್ಪಾಗಿ ಹೇಳಿದ್ದರಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ.

ಪೂರ್ತಿ ಓದಿ

12:57 PM (IST) May 11

ರಾಜೇಶ್‌ ಕಾಲ್ರಾ ವಿಶೇಷ ಲೇಖನ: ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?

ಯುದ್ಧ ಮುಂದುವರೆಸಿ ಪಿಒಕೆ(ಪಾಕ್‌ ಆಕ್ರಮಿತ ಕಾಶ್ಮೀರ)ಯನ್ನೂ ಯಾಕೆ ವಶಪಡಿಸಿಕೊಳ್ಳಬಾರದು? ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಬಹುತೇಕರು ಎಡವುತ್ತಿರುವುದು ಇಲ್ಲೇ. ಪಾಕಿಸ್ತಾನ ಒಂದು ವಿಫಲವಾಗಿರುವ ದೇಶ. 
 

ಪೂರ್ತಿ ಓದಿ

12:45 PM (IST) May 11

ಮತ್ತೆ ಯಾವತ್ತೂ ಪಾಕ್‌ಗೆ ಹೋಗಲ್ಲ ಎಂದ ಡ್ಯಾರಿಲ್‌ ಮಿಚೆಲ್‌, ಬಿಕ್ಕಿಬಿಕ್ಕಿ ಅತ್ತ ಕರ್ರನ್‌!

ಪಾಕಿಸ್ತಾನ ಸೂಪರ್ ಲೀಗ್ ನಿಂದ ದುಬೈಗೆ ಸ್ಥಳಾಂತರಗೊಂಡ ಆಟಗಾರರು ಪಾಕಿಸ್ತಾನಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಟೂರ್ನಿ ವೇಳೆ ಉಂಟಾದ ಭದ್ರತಾ ಆತಂಕಗಳಿಂದಾಗಿ ಆಟಗಾರರು ಭಯಭೀತರಾಗಿದ್ದಾರೆ ಎಂದು ವರದಿಯಾಗಿದೆ.

ಪೂರ್ತಿ ಓದಿ

12:30 PM (IST) May 11

ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು: ವಿಂಗ್‌ ಕಮಾಂಡರ್‌ ಸುದರ್ಶನ್‌

ಸಾಮಾನ್ಯವಾಗಿ ಯುದ್ಧ ನಡೆಯುವುದು ಸಂಪತ್ತಿನ ಕೊಳ್ಳೆಗಾಗಿ ಅಥವಾ ಭೂಮಿಗಾಗಿ. ಪಾಕಿಸ್ತಾನದಂಥ ಭಿಕಾರಿ ದೇಶದಲ್ಲಿ ಏನು ಸಂಪತ್ತಿದೆ ಎಂದು ನಾವು ದೋಚಲಿಕ್ಕೆ ಹೋಗಬೇಕು. 

ಪೂರ್ತಿ ಓದಿ

12:27 PM (IST) May 11

ವೈರಲ್ ವಿಡಿಯೋ: ಮಳೆಯಿಂದ ತನ್ನ ಕಾವಾಡಿಗ ಮಹಿಳೆಯನ್ನು ರಕ್ಷಿಸಿದ ಆನೆಗಳು!

ಕಾವಾಡಿಗ ಮಹಿಳೆಯೊಬ್ಬರು ಎರಡು ಆನೆಗಳ ನಡುವೆ ನಿಂತು ತನ್ನ ರೈನ್‌ಕೋಟ್ ಹಾಕಿಕೊಳ್ಳುತ್ತಿದ್ದಾಗ, ಗುಡುಗು-ಮಿಂಚು ಸಹಿತ ಮಳೆ ಸುರಿಯಲಾರಂಭಿಸಿತು. ಆಗ ಆನೆಗಳು ಮಹಿಳೆಗೆ ಮಳೆಯಿಂದ ರಕ್ಷಣೆ ನೀಡಿವೆ. ಈ ಘಟನೆ ಆನೆಗಳ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತದೆ.

ಪೂರ್ತಿ ಓದಿ

12:08 PM (IST) May 11

ಕಾಶ್ಮೀರ ವಿವಾದ ಎಂದಿಗೂ ಮುಗಿಯದ ಸಮಸ್ಯೆ, ಅದಕ್ಕೂ ಪರಿಹಾರವಿದೆ: ಟ್ರಂಪ್ ಟ್ವೀಟ್‌

ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಉಭಯ ದೇಶಗಳ ನಾಯಕತ್ವವನ್ನು ಶ್ಲಾಘಿಸಿರುವ ಅವರು, ಕದನ ವಿರಾಮದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಪೂರ್ತಿ ಓದಿ

11:44 AM (IST) May 11

ಭಾರತ ಟೆಸ್ಟ್ ನಾಯಕ ಯಾರು? ಗಿಲ್, ಪಂತ್ ಗೆ ಅವಕಾಶ?

ರೋಹಿತ್ ಶರ್ಮಾ ನಿವೃತ್ತಿಯಿಂದಾಗಿ ಭಾರತ ಟೆಸ್ಟ್ ತಂಡದ ನಾಯಕತ್ವ ಹುದ್ದೆ ಖಾಲಿಯಾಗಿದ್ದು, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ನಾಯಕತ್ವದ ಮುಂಚೂಣಿಯಲ್ಲಿದ್ದಾರೆ. ಬುಮ್ರಾ ಮತ್ತು ರಾಹುಲ್ ಕೂಡ ಪರಿಗಣನೆಯಲ್ಲಿದ್ದರೂ, ಗಿಲ್ ನಾಯಕ ಮತ್ತು ಪಂತ್ ಉಪನಾಯಕರಾಗುವ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್ ಸರಣಿಗೆ ಮುನ್ನ ಮೇ 23 ರಂದು ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಪೂರ್ತಿ ಓದಿ

11:26 AM (IST) May 11

ಭಾರತದಲ್ಲಿ ಬ್ರಹ್ಮೋಸ್ ಕ್ಷಿಪಣಿ ಘಟಕ ಉದ್ಘಾಟನೆ; ಪಾಕಿಸ್ತಾನಕ್ಕೆ ಮುಂದೈತೆ ಮಾರಿಹಬ್ಬ!

ಲಕ್ನೋದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಬ್ರಹ್ಮೋಸ್ ಕ್ಷಿಪಣಿ ಘಟಕ ಉದ್ಘಾಟನೆ. ಈ ಘಟಕವು ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಸ್ವಾವಲಂಬನೆಯತ್ತ ಒಂದು ಹೆಜ್ಜೆಯಾಗಿದೆ.

ಪೂರ್ತಿ ಓದಿ

11:18 AM (IST) May 11

ಉಗ್ರರ ನೆಲೆಗೇ ಗುರಿಯಿಟ್ಟು ನಾಶ ಮಾಡಿದ 'ರಫೇಲ್​ ಜೆಟ್'​ಗೆ ಗಂಟೆಯೊಂದಕ್ಕೆ ಅಬ್ಬಾ ಇಷ್ಟು ಇಂಧನ ಬೇಕಾ?

ಪಾಕಿಸ್ತಾನದ ಉಗ್ರರ ನೆಲೆಗೇ  ಗುರಿಯಿಟ್ಟು ಉಡೀಸ್​ ಮಾಡಿದ ಆಪರೇಷನ್ ಸಿಂದೂರ ನಾಯಕ  ರಫೇಲ್ ಜೆಟ್​ ಗಂಟೆಗೆ ಎಷ್ಟು ಇಂಧನ ತೆಗೆದುಕೊಳ್ಳತ್ತೆ​ ಗೊತ್ತಾ| ಅಬ್ಬಬ್ಬಾ ಎನ್ನುವ ಮಾಹಿತಿ ಇಲ್ಲಿದೆ...   

ಪೂರ್ತಿ ಓದಿ

09:58 AM (IST) May 11

India Pak ಕದನವಿರಾಮ ಬೆನ್ನಲ್ಲೇ ತೈವಾನ್ ಸುತ್ತ ಚೀನಾದ ಮಿಲಿಟರಿ ಚಟುವಟಿಕೆ ಹೆಚ್ಚಳ! ಯಾಕೆ?

ತೈವಾನ್ ಸುತ್ತ ಚೀನಾದ ಮಿಲಿಟರಿ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಿವೆ. ಚೀನಾದ ವಿಮಾನಗಳು, ನೌಕಾಪಡೆ ಹಡಗುಗಳು ಮತ್ತು ಅಧಿಕೃತ ಹಡಗುಗಳು ತೈವಾನ್ ಪ್ರದೇಶದ ಸುತ್ತ ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ತೈವಾನ್ ರಕ್ಷಣಾ ಸಚಿವಾಲಯವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಪೂರ್ತಿ ಓದಿ

09:52 AM (IST) May 11

ಇದೇ ಕಾರಣಕ್ಕಾಗಿ ಟೆಸ್ಟ್‌ಗೆ ಗುಡ್‌ ಬೈ ಹೇಳಲು ಕೊಹ್ಲಿ ನಿರ್ಧಾರ! ಕೊನೆಗೂ ಬಯಲಾಯ್ತು ಹೊಸ ಅಪ್‌ಡೇಟ್?

ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಬಿಸಿಸಿಐಗೆ ಈ ಬಗ್ಗೆ ಮಾಹಿತಿ ನೀಡಿರುವ ಕೊಹ್ಲಿ, ಮುಂಬರುವ ಇಂಗ್ಲೆಂಡ್ ಸರಣಿಯ ಮೊದಲು ನಿವೃತ್ತಿ ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಮನವಿ ಮಾಡಲಾಗಿದೆ.

ಪೂರ್ತಿ ಓದಿ

09:25 AM (IST) May 11

ರಾಜ್ಯದ ರೈತರಿಗೆ ಸಿಹಿ ಸುದ್ದಿ; 16 ವರ್ಷಗಳ ಬಳಿಕ ಅತಿ ಬೇಗನೇ ಮುಂಗಾರು ಮಳೆ ಆರಂಭ

ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ಮುಂಗಾರು ಮಳೆ 5 ದಿನ ಮುಂಚಿತವಾಗಿ, ಅಂದರೆ ಮೇ 27 ರಂದು ಕೇರಳ ತೀರವನ್ನು ತಲುಪುವ ನಿರೀಕ್ಷೆಯಿದೆ. ಇದು 16 ವರ್ಷಗಳ ನಂತರ ಮೊದಲ ಬಾರಿಗೆ ಮುಂಗಾರು ಮಳೆ ಬೇಗನೆ ಆರಂಭವಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ದಕ್ಷಿಣ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ.

ಪೂರ್ತಿ ಓದಿ

09:21 AM (IST) May 11

ವಿರಾಮ ಬಳಿಕ ಶೀಘ್ರ ಐಪಿಎಲ್ ಕದನ ಪುನಾರಂಭ? ಇಂದು ಬಿಸಿಸಿಐ ಮಹತ್ವದ ಸಭೆ

ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಗಳನ್ನು ಪುನಾರಂಭಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಆಯಾಯ ನಗರಗಳಲ್ಲೇ ಪಂದ್ಯಗಳು ನಡೆಯುವ ಸಾಧ್ಯತೆಗಳಿದ್ದು, ಮೇ 15ರಿಂದ ಪಂದ್ಯಗಳು ಆರಂಭವಾಗಬಹುದು.

ಪೂರ್ತಿ ಓದಿ

08:26 AM (IST) May 11

ಭಾರತ-ಪಾಕ್ ಯು ದ್ಧ ಸನ್ನಿವೇಶ: ರಜೆ ಮೊಟಕುಗೊಳಿಸಿ ದಿಢೀರ್ ಕರ್ತವ್ಯಕ್ಕೆ ವಾಪಸಾದ ಹಾಸನ 5 ಯೋಧರು

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ಭವಿಸಿರುವ ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಐವರು ಯೋಧರು ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಹೊಳೆನರಸೀಪುರ ಮತ್ತು ಅರಸೀಕೆರೆ ತಾಲ್ಲೂಕಿನ ಈ ಯೋಧರ ಕ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

ಪೂರ್ತಿ ಓದಿ

08:00 AM (IST) May 11

ಪುಲ್ವಾಮಾ ದಾಳಿ ಮಾಡಿಸಿದ್ದು ನಾವು: ಇದೇ ಮೊದಲ ಬಾರಿ ಒಪ್ಪಿಕೊಂಡ ಪಾಕಿಸ್ತಾನ

ಭಾರತದ 40 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದಾಳಿ ಮಾಡಿಸಿದ್ದು ನಾವು ಎಂದು ಇದೇ ಮೊದಲ ಬಾರಿ ಪಾಕಿಸ್ತಾನ ಒಪ್ಪಿಕೊಂಡಿದೆ. 

ಪೂರ್ತಿ ಓದಿ

07:47 AM (IST) May 11

ಪಾಕ್ ಶರಣಾಗತಿಯ ಇತಿಹಾಸ: ಭಾರತೀಯ ಸೇನೆಯ ಅಪ್ರತಿಮ ಸಾಹಸ

1947ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧಗಳಲ್ಲಿ ಕೆಲವು ಬಾರಿ ಕದನ ವಿರಾಮ ಜಾರಿಯಿಂದ ಯುದ್ಧ ಅಂತ್ಯವಾಗಿದ್ದರೆ, ಕೆಲಸ ಸಂದರ್ಭದಲ್ಲಿ ಪಾಕ್ ಸೋತು ಶರಣಾಗಿತ್ತು. ಇವುಗಳ ಕಿರು ವಿವರ ವಿವರ ಇಲ್ಲಿದೆ.

ಪೂರ್ತಿ ಓದಿ

07:34 AM (IST) May 11

ಕದನವಿರಾಮ ಬೆನ್ನಲ್ಲೇ ಕೇಂದ್ರ ಸಚಿವರ ಜತೆ ಮೋದಿ ಸಭೆ: ಜಾಗತಿಕ ನಾಯಕರ ಹರ್ಷ

ಕದನ ವಿರಾಮ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ್ದಾರೆ.

ಪೂರ್ತಿ ಓದಿ

07:03 AM (IST) May 11

ಪಾಕಿಸ್ತಾನ ರಕ್ತದಾಹಕ್ಕೆ ಅಧಿಕಾರಿ, ಯೋಧ ಸೇರಿ 7 ಬಲಿ: ಕ್ಷಿಪಣಿ, ಡ್ರೋನ್‌ ಭಾಗಗಳು ಪತ್ತೆ

ಭಾರತ ನೀಡುವ ಪ್ರತೀಕಾರದ ಹೊಡೆತ ಸಹಿಸುವುದು ಅಸಾಧ್ಯವೆಂದು ತಿಳಿದರೂ, ಪಾಕಿಸ್ತಾನ ಹಗಲು-ರಾತ್ರಿ ಅಪ್ರಚೋದಿತ ದಾಳಿ ಮುಂದುವರೆಸಿದೆ. 

ಪೂರ್ತಿ ಓದಿ

06:46 AM (IST) May 11

ಭೂಸೇನೆಯನ್ನೂ ಸಜ್ಜುಗೊಳಿಸುತ್ತಿದೆ ಪಾಕ್‌: ಭಾರತ ಸೇನಾಧಿಕಾರಿಗಳಿಂದ ಸ್ಫೋಟಕ ಮಾಹಿತಿ

ಸೈನ್ಯವನ್ನು ಸಜ್ಜುಗೊಳಿಸುವ ಪಾಕಿಸ್ತಾನದ ನಿರ್ಧಾರವು ಆಕ್ರಮಣಕಾರಿ ಉದ್ದೇಶವನ್ನು ಸೂಚಿಸುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ ಭಾರತೀಯ ಪಡೆಗಳು ಇದಕ್ಕೆ ಉತ್ತರಿಸಲು ಸಿದ್ಧವಾಗಿವೆ ಮತ್ತು ಜಾಗರೂಕವಾಗಿವೆ ಎಂದು ಸ್ಪಷ್ಟಪಡಿಸಿದೆ.

ಪೂರ್ತಿ ಓದಿ

06:34 AM (IST) May 11

8500 ಕೋಟಿ ಐಎಂಎಫ್‌ ಸಾಲದ ಭಿಕ್ಷೆಗಾಗಿ ಕದನ ವಿರಾಮಕ್ಕೆ ಒಪ್ಪಿದ್ದ ಪಾಕಿಸ್ತಾನ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‍ ಅವರು ಪಾಕಿಸ್ತಾನಕ್ಕೆ 8500 ಕೋಟಿ ರು. ಐಎಂಎಫ್‌ ಸಾಲ ಕೊಡಿಸಲು ನೆರವಾಗುವ ಷರತ್ತು ಹಾಕಿ ಕದನ ವಿರಾಮಕ್ಕೆ ಒಪ್ಪಿಸಿದರು ಎಂದು ತಿಳಿದು ಬಂದಿದೆ. 

ಪೂರ್ತಿ ಓದಿ

05:49 AM (IST) May 11

ಸಿಂಧು ನದಿ ಒಪ್ಪಂದಕ್ಕೆ ತಡೆ ರದ್ದಿಲ್ಲ: ಪಾಕ್‌ ಉಗ್ರವಾದ ನಿಲ್ಲಿಸುವವರೆಗೆ ಮುಂದುವರಿಕೆ

ಭಾರತ-ಪಾಕ್‌ ಕದನ ವಿರಾಮ ಘೋಷಣೆ ಆಗಿದ್ದರೂ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ದಂಡನಾತ್ಮಕ ಕ್ರಮಗಳು ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ. 
 

ಪೂರ್ತಿ ಓದಿ

05:26 AM (IST) May 11

ಭಾರತ ಮೇಲೆ ದಾಳಿಗೆ ಬಳಸುತ್ತಿದ್ದ ಪಾಕಿಸ್ತಾನದ 8 ವಾಯು ನೆಲೆಗಳೇ ಧ್ವಂಸ

ಭಾರತ ಹಾಗೂ ಪಾಕಿಸ್ತಾನದ ನಡುವೆ ಸಮರ ಮತ್ತೊಂದು ಹಂತ ತಲುಪಿದ್ದು,- ಪಾಕಿಸ್ತಾನದಿಂದ ಭಾರತದ 4 ವಾಯುನೆಲೆಗಳ ಮೇಲೆ ದಾಳಿ ಯತ್ನ ನಡೆದಿದೆ. 

ಪೂರ್ತಿ ಓದಿ

05:12 AM (IST) May 11

ಪಾಕಿಸ್ತಾನದಿಂದ ಎಸ್‌- 400 ಕ್ಷಿಪಣಿ ನಾಶ ಸುಳ್ಳು: ಆದಂಪುರದಲ್ಲಿ ಹಾನಿಯಾಗಿಲ್ಲ

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಪಾಕಿಸ್ತಾನವು ಭಾರತದ ಎಸ್‌- 400 ಕ್ಷಿಪಣಿಯನ್ನು ನಾಶಪಡಿಸಿದ್ದೇವೆ. ವಾಯುನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. 

ಪೂರ್ತಿ ಓದಿ

More Trending News