ನವದೆಹಲಿ (ಜ.16): ಮುಂಬೈ: 74 ಸಾವಿರ ಕೋಟಿ ರು. ಬಜೆಟ್ ಗಾತ್ರದಿಂದಾಗಿ ದೇಶದ ಶ್ರೀಮಂತ ನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ. ಜೊತೆಗೆ ಇದೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಹುದ್ದೆ ಲಭ್ಯವಾಗುವ ಸಾಧ್ಯತೆ ಕಂಡುಬಂದಿದೆ. ಮತ್ತೊಂದೆಡೆ 30 ವರ್ಷಗಳಲ್ಲೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಬಣದ ಶಿವಸೇನೆ ಅಧಿಕಾರದಿಂದ ವಂಚಿತವಾಗುವತ್ತ ಹೆಜ್ಜೆ ಹಾಕಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..

10:04 AM (IST) Jan 16
1962ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಬರೋಬ್ಬರಿ 600 ಕೆ.ಜಿ.ಚಿನ್ನ ಹಾಗೂ ಮೂರು ಖಾಸಗಿ ವಿಮಾನವನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ರಾಣಿ ಕಾಮಸುಂದರಿ ದೇವಿ( 96) ನಿಧನರಾಗಿದ್ದಾರೆ.
09:34 AM (IST) Jan 16
ಬಿಸಿಬಿ ನಿರ್ದೇಶಕ ನಜ್ಮುಲ್ ಇಸ್ಲಾಂ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ ಬಾಂಗ್ಲಾ ಕ್ರಿಕೆಟಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದ ಬಾಂಗ್ಲಾ ಪ್ರೀಮಿಯರ್ ಲೀಗ್ ಪಂದ್ಯಗಳು ಮುಂದೂಡಿಕೆಯಾಗಿದ್ದು, ಆಟಗಾರರು ತಮ್ಮ ಬೇಡಿಕೆ ಈಡೇರದಿದ್ದರೆ ಲೀಗ್ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ,
09:01 AM (IST) Jan 16
ಐಸಿಸಿ ಅಂಡರ್-19 ಏಕದಿನ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೆನಿಲ್ ಪಟೇಲ್ ಮಾರಕ ಬೌಲಿಂಗ್ ದಾಳಿಗೆ (6 ವಿಕೆಟ್) ತತ್ತರಿಸಿದ ಯುಎಸ್‌ಎ 107 ರನ್‌ಗಳಿಗೆ ಆಲೌಟ್ ಆಯಿತು. ಅಭಿಗ್ಯಾನ್ ಅಜೇಯ 42 ರನ್‌ಗಳ ನೆರವಿನಿಂದ ಭಾರತ ಗೆದ್ದಿತು.
07:55 AM (IST) Jan 16
ಕೇವಲ ಗಾಳಿ ಮತ್ತು ನೌಕಾಯಾನದ ಪರದೆಗಳ (Sails) ಸಹಾಯದಿಂದ ಸಾಗಿದ ಈ ನೌಕೆಯು, ‘ವಿರುದ್ಧ ದಿಕ್ಕಿನ ಗಾಳಿ, ಗಾಳಿಯಿಲ್ಲದ ಶಾಂತ ಸ್ಥಿತಿ (Dead calms), ಭೋರ್ಗರೆಯುವ ಅಲೆಗಳು ಮತ್ತು ಆಧುನಿಕ ಹಡಗು ಸಂಚಾರ ಮಾರ್ಗಗಳ’ ಅಡಚಣೆ ಸೇರಿದಂತೆ ಹಲವು ಸವಾಲುಗಳನ್ನು ಈ ನೌಕೆಯು ಎದುರಿಸಬೇಕಾಯಿತು.
07:55 AM (IST) Jan 16
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಹ್ಯಾಕಾಶ ಯಾನಿಯೊಬ್ಬರನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ತುರ್ತು ಕಾರ್ಯಾಚರಣೆಯೊಂದರಲ್ಲಿ ಯಶಸ್ವಿಯಾಗಿ ಭೂಮಿಗೆ ಮರಳಿ ಕರೆತಂದಿದೆ.
07:54 AM (IST) Jan 16
ಗುರುವಾರ ನಡೆದ ಮುಂಬೈ ಸೇರಿದಂತೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಲಾದ ಅಳಿಸಲು ಆಗದ ಇಂಕಿನ ಗುರುತು ಅಳಿಸಿ ಹೋಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
07:54 AM (IST) Jan 16
ಪ್ರಯಾಣಿಕರ ರೈಲಿನ ಟಿಕೆಟ್ ದರ ನಿಗದಿ ಹೇಗೆ ಮಾಡಲಾಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಅದು ವ್ಯಾಪಾರದ ಸೀಕ್ರೆಟ್. ಈ ದರ ನಿಗದಿ ಪ್ರಕ್ರಿಯೆಗೆ ಮಾಹಿತಿ ಹಕ್ಕುಗಳ ಕಾಯ್ದೆಯಿಂದ ರಕ್ಷಣೆ ಇದೆ ಎಂದು ಭಾರತೀಯ ರೈಲ್ವೆಯು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ತಿಳಿಸಿದೆ.
07:54 AM (IST) Jan 16
ಇರಾನ್‌ನೊಂದಿಗೆ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ, ತನ್ನ ನೌಕಾಪಡೆಯ ಮುಂಚೂಣಿ ದಾಳಿಯ ನೌಕೆಗಳನ್ನು ಅಮೆರಿಕ ಸರ್ಕಾರವು ಮಧ್ಯಪ್ರಾಚ್ಯದತ್ತ ರವಾನಿಸಿದೆ. ಇದರೊಂದಿಗೆ ಇರಾನ್ ಮೇಲೆ ಅಮೆರಿಕದ ದಾಳಿ ಮತ್ತಷ್ಟು ಸನ್ನಿಹಿತವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.
07:53 AM (IST) Jan 16
ನಮಗೆ ಗ್ರೀನ್‌ಲ್ಯಾಂಡ್ ಬೇಕೇ ಬೇಕು ಎಂದು ಅಮೆರಿಕ ಪಟ್ಟು ಹಿಡಿದು ಕೂತಿರುವ ನಡುವೆಯೇ ಅಮೆರಿಕದ್ದೇ ನೇತೃತ್ವ ಹೊಂದಿರುವ ನ್ಯಾಟೋ ಮಿಲಿಟರಿ ಕೂಟದ ಭಾಗವಾಗಿರುವ ಫ್ರಾನ್ಸ್, ಜರ್ಮನಿ ಸೇರಿ ಇತರೆ ಯುರೋಪಿಯನ್ ದೇಶಗಳು ಗ್ರೀನ್‌ಲ್ಯಾಂಡ್ ರಕ್ಷಣೆಗಾಗಿ ತಮ್ಮ ಸೇನೆಯನ್ನು ಕಳುಹಿಸಿಕೊಟ್ಟಿವೆ
07:53 AM (IST) Jan 16
ಭಾರತದ ಮುಂಚೂಣಿ ಕಾರು ಮತ್ತು ಎಸ್‌ಯುವಿಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., (ಟಿಎಂಪಿವಿ) ಹೆಚ್ಚು ವೇಗ, ಹೆಚ್ಚು ಸ್ಮಾರ್ಟ್ ಹೊಂದಿರುವ ಹೊಸ ಟಾಟಾ ‘ಪಂಚ್ ಕಮಾಂಡ್ ಮ್ಯಾಕ್ಸ್’ ಎಂಬ ಹೆಸರಿನ ಕಾರು ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
07:52 AM (IST) Jan 16
ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಶಾಂತಿಯುತ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ.
07:52 AM (IST) Jan 16
ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ’ವು, ನಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಾನವಾದ ಮುರೀದ್ಕೆ ಮಸೀದಿಯನ್ನು ನಾಮಾವಶೇಷ ಮಾಡಿತ್ತು ಎಂದು ಸ್ವತಃ ಲಷ್ಕರ್ ಉಗ್ರ ಹಫೀಜ್ ಅಬ್ದುಲ್ ರೌಫ್ ಒಪ್ಪಿಕೊಂಡಿದ್ದಾನೆ.
07:52 AM (IST) Jan 16
ಎಲಾನ್ ಮಸ್ಕ್ ಒಡೆತನದ ಎಐ ಚಾಟ್‌ಬಾಟ್ ಗ್ರೋಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಎಡಿಟ್ ಮಾಡುತ್ತಿರುವ ಕುರಿತು ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾದ ಬೆನ್ನಲ್ಲೇ, ಯಾವುದೇ ನೈಜ ವ್ಯಕ್ತಿಯ ಚಿತ್ರವನ್ನು ಬೆತ್ತಲೆ/ಅಶ್ಲೀಲಗೊಳಿಸುವ ಆಯ್ಕೆಯನ್ನು ಗ್ರೋಕ್‌ನಿಂದ ತೆಗೆದುಹಾಕಲು ನಿರ್ಧರಿಸಿದೆ.
07:51 AM (IST) Jan 16
ಕ್ಷಣಕ್ಷಣಕ್ಕೂ ಅಮೆರಿಕ ದಾಳಿಯ ಭೀತಿ ಹೆಚ್ಚಾಗುತ್ತಿರುವ ನಡುವೆಯೇ ಇರಾನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ವಿಮಾನದ ಮೂಲಕ ತವರಿಗೆ ಕರೆತರಲು ಭಾರತ ಸರ್ಕಾರ ಸಜ್ಜಾಗಿದೆ. ಎಲ್ಲವೂ ಅಂದುಕೊಂಡರೆ ನಡೆದರೆ ಮೊದಲ ತಂಡ ಶುಕ್ರವಾರ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.
07:51 AM (IST) Jan 16
ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಹತ್ಯೆಯ ಬೆದರಿಕೆ ಹಾಕಿದೆ. ಈ ಬಾರಿ ಗುಂಡು ಗುರಿ ತಪ್ಪಲ್ಲ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಎಚ್ಚರಿಕೆ ನೀಡಿದೆ.
07:50 AM (IST) Jan 16
ರಷ್ಯಾ ತೈಲ ಖರೀದಿ ವಿಷಯ ಉಭಯ ದೇಶಗಳ ನಡುವೆ ಬಿಕ್ಕಟ್ಟು, ತೆರಿಗೆ ದಾಳಿಗೆ ಕಾರಣವಾದ ಹೊರತಾಗಿಯೂ ಅಮೆರಿಕ ಮತ್ತು ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಎರಡೂ ಕಡೆಯವರು ಸಿದ್ಧವಾದಾಗ ಅದನ್ನು ಘೋಷಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿದೆ.