ನವದೆಹಲಿ: ಕಠಿಣ ಮತ್ತು ಅಪರೂಪದ ಇಂಗ್ಲಿಷ್ ಪದಗಳ ಬಳಕೆಯಿಂದಲೇ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇದೀಗ ರಾಜಕೀಯ ವಲಯದಲ್ಲಿ ಬಳಸಲಾಗುವ ‘ಗೋದಿ ಮೀಡಿಯಾ’ ಹಾಗೂ ‘ಅಂಧಭಕ್ತ’ ಪದಗಳಿಗೆ ಹೊಸ ಇಂಗ್ಲಿಷ್ ಪರ್ಯಾಯ ಪದ ಪರಿಚಯಿಸಿದ್ದಾರೆ. ಈ ಪದಗಳಿಗೆ ಬದಲಾಗಿ "Quockerwodger" (ಕ್ವಾಕರ್‌ವಾಡ್ಜರ್) ಎಂಬ ವಿಭಿನ್ನ ಪದ ಬಳಸುವಂತೆ ಸಲಹೆ ನೀಡಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರನ್ನು ‘ಅಂಧಭಕ್ತರು’, ‘ಗೋದಿ’, ''ಹಣ ಪಡೆದು ಕೆಲಸ ಮಾಡುವವರು'' ಮುಂತಾದ ಪದಗಳಿಂದ ಕರೆಯುವುದರಿಂದ ಬೇಸರವಾಗಿದ್ದರೆ, ‘ಕ್ವಾಕರ್‌ವಾಡ್ಜರ್’ (ರಾಜಕೀಯ ಕೈಗೊಂಬೆ ಎಂದರ್ಥ) ಪದ ಪರ್ಯಾಯವಾಗಬಹುದು ಹೇಳಿದ್ದಾರೆ.
‘ಬೇರೊಬ್ಬ ವ್ಯಕ್ತಿಯ ನಿಯಂತ್ರಣದಲ್ಲಿದ್ದು, ಅವರ ಸೂಚನೆಯಂತೆ ವರ್ತಿಸುವ ರಾಜಕೀಯ ಕೈಗೊಂಬೆ ಅಥವಾ ವ್ಯಕ್ತಿಯನ್ನು ‘ಕ್ವಾಕರ್‌ವಾಡ್ಜರ್’ ಎಂದು ಕರೆಯಲಾಗುತ್ತದೆ. ಇದು ನಮ್ಮ ಕಾಲದ ಪದ. ಕಳೆದ 12 ವರ್ಷಗಳಲ್ಲಿ ಆಡಳಿತ ಪಕ್ಷ ಇಂತಹ ಕೆಲವರನ್ನು ಸೃಷ್ಟಿಸಿದೆ ಎಂದು ನನಗನಿಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.
08:43 AM (IST) Nov 05
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ಜಯ ಸಾಧಿಸಿದ್ದು, ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಎಲಾನ್ ಮಸ್ಕ್ ಅವರ ಕೋಟ್ಯಂತರ ರೂಪಾಯಿ ಖರ್ಚಿನ ನಡುವೆಯೂ ಭಾರತೀಯ ಮೂಲದ ಹಲವು ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ.
08:29 AM (IST) Nov 05
ನಿಮಗೆ ಗೊತ್ತಾ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರಿಗೂ ಕೋಪ ಬರ್ತಿತ್ತಂತೆ. ಒಮ್ಮೆ ಅವರು ಕ್ಯಾಪ್ಟನ್ ಆಗಿದ್ದಾಗ ಪಂದ್ಯ ಸೋತಿದ್ದಕ್ಕೆ ಹೇಗೆ ಸೇಡು ತೀರಿಸಿಕೊಂಡಿದ್ದರಂತೆ ಗೊತ್ತಾ? ಅವರೇ ಬರೆದಿರುವ ಆತ್ಮಕತೆಯಲ್ಲಿ ಇದು ಬಹಿರಂಗ ಆಗಿದೆ.