LIVE NOW
Published : Sep 09, 2026, 07:31 AM ISTUpdated : Sep 09, 2026, 11:13 PM IST

India News Live: ಆಪಲ್‌ನಿಂದ ಐಫೋನ್ 18 ಪ್ರೊ ಮತ್ತು 18 ಪ್ರೊ ಮ್ಯಾಕ್ಸ್ ರಿಲೀಸ್ - ಪರಿಚಯವಾಯ್ತು 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ!

ಸಾರಾಂಶ

‘2014ರ ನಂತರ ನಾವು 50,000 ಆಧುನಿಕ ರೈಲ್ವೆ ಬೋಗಿಗಳನ್ನು ನಿರ್ಮಿಸಿದ್ದೇವೆ. ಆದರೆ ಹಿಂದಿನ ಸರ್ಕಾರದ (ಕಾಂಗ್ರೆಸ್‌) ಕೈಲಿ 50,000 ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಲಿಲ್ಲ. ಇದೀಗ ಅಭಿವೃದ್ಧಿಯನ್ನು ಕಂಡು ಮತ್ತೆ ಅತೃಪ್ತ ಆತ್ಮಗಳು ಅಥವಾ ಅತೃಪ್ತ ಅಂಕಲ್‌ಗಳು (ನಾರಾಜ್‌ ಫೂಫಾ) ಅರಚಲು ಆರಂಭಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ವಿರುದ್ಧ ಮಂಗಳವಾರವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ವಿಪಕ್ಷಗಳನ್ನು ‘ಅತೃಪ್ತ ಆತ್ಮಗಳು’ ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಅದೇ ಪದಬಳಕೆಯ ಮೂಲಕ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.

ಗುಜರಾತಿನ ವಡೋದರಾದಲ್ಲಿ ಒಟ್ಟು 35,000 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ದೇಶದ ಸಾರಿಗೆ ಮತ್ತು ವಾಣಿಜ್ಯ ರಂಗದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವ 2,800 ಕಿ.ಮೀ. ಉದ್ದದ ಬೃಹತ್ ‘ಮೀಸಲು ಸರಕು ಸಾಗಣೆ ಕಾರಿಡಾರ್’ ಯೋಜನೆಯನ್ನೂ ಲೋಕಾರ್ಪಣೆಗೊಳಿಸಿದರು.

11:13 PM (IST) Sep 09

ಆಪಲ್‌ನಿಂದ ಐಫೋನ್ 18 ಪ್ರೊ ಮತ್ತು 18 ಪ್ರೊ ಮ್ಯಾಕ್ಸ್ ರಿಲೀಸ್ - ಪರಿಚಯವಾಯ್ತು 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ!

ಆಪಲ್ ಸಂಸ್ಥೆಯು ತನ್ನ ಹೊಸ 'ಐಫೋನ್ 18 ಪ್ರೊ' ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಫೋನ್‌ಗಳು ಐಫೋನ್ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಟರಿ, ಮೊದಲ 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ, ಮತ್ತು ಅತ್ಯಾಧುನಿಕ 2nm 'A20 ಪ್ರೊ' ಚಿಪ್‌ಸೆಟ್ ಅನ್ನು ಹೊಂದಿವೆ.

Read Full Story

10:33 PM (IST) Sep 09

ವಿಡಿಯೋ ವೈರಲ್ ಆಗಿದ್ದಕ್ಕೆ ಕರುಳಕುಡಿ ಎಂದೂ ನೋಡದೆ ಮಗಳನ್ನೇ ಕೊಂದ ತಂದೆ, ಅಣ್ಣ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಕ್ಕೆ ಕುಟುಂಬದ ಮರ್ಯಾದೆಗೆ ಅಂಜಿ ಅಹಮದಾಬಾದ್‌ನಲ್ಲಿ 22 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಅಣ್ಣನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕೊಲೆಯನ್ನು ಹಿಟ್ ಆ್ಯಂಡ್ ರನ್ ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಆರೋಪಿಗಳ ಕಳ್ಳಾಟವನ್ನು ಬಯಲಿಗೆಳೆದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Read Full Story

10:22 PM (IST) Sep 09

ಇನ್‌ಸ್ಟಾಗ್ರಾಮ್‌ನಲ್ಲಿ ₹1,545 ಅನಾರ್ಕಲಿ ಡ್ರೆಸ್‌ ಬುಕ್ ಮಾಡಿ ಮೋಸ ಹೋದ ಮಹಿಳೆಗೆ ₹16,000 ಪರಿಹಾರಕ್ಕೆ ಕೋರ್ಟ್ ಆದೇಶ!

ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ನೋಡಿ 1,545 ರೂ. ಪಾವತಿಸಿ ಅನಾರ್ಕಲಿ ಡ್ರೆಸ್ ಆರ್ಡರ್ ಮಾಡಿದ ಮಹಿಳೆಗೆ, ಆನ್‌ಲೈನ್ ಸ್ಟೋರ್ ವಂಚನೆ ಎಸಗಿದೆ. ತಿಂಗಳುಗಟ್ಟಲೆ ಡ್ರೆಸ್ ತಲುಪಿಸದ ಕಾರಣ, ಕಣ್ಣೂರು ಜಿಲ್ಲಾ ಗ್ರಾಹಕ ಆಯೋಗವು ಸ್ಟೋರ್‌ಗೆ ಹಣ ಹಿಂತಿರುಗಿಸಿ, 15,000 ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
Read Full Story

08:15 PM (IST) Sep 09

ಜೋ ರೂಟ್‌ ಮತ್ತೊಂದು ಇತಿಹಾಸ; ಸ್ಟೀವ್‌ ವಾ-ಪಾಂಟಿಂಗ್‌ ಹಿಂದಿಕ್ಕಿದ ಇಂಗ್ಲೆಂಡ್‌ ಸ್ಟಾರ್‌

ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್, ಪಾಕಿಸ್ತಾನ ವಿರುದ್ಧ ತಮ್ಮ 169ನೇ ಟೆಸ್ಟ್ ಪಂದ್ಯವನ್ನಾಡುವ ಮೂಲಕ, ಅತಿ ಹೆಚ್ಚು ಟೆಸ್ಟ್ ಆಡಿದವರ ಪಟ್ಟಿಯಲ್ಲಿ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಜೇಮ್ಸ್ ಆಂಡರ್ಸನ್ ನಂತರದ ಸ್ಥಾನ ಪಡೆದಿದ್ದಾರೆ.

Read Full Story

06:55 PM (IST) Sep 09

ದಕ್ಷಿಣ ಬ್ರೆಜಿಲ್‌ನಲ್ಲಿ ಅಪರೂಪದ ಪಳೆಯುಳಿಕೆ ಪತ್ತೆ - ಡೈನೋಸಾರ್‌ ಡೈನೋಸಾರ್‌ಗಳ ಆರಂಭಿಕ ವಿಕಾಸದ ಹೊಸ ರಹಸ್ಯ ಬೆಳಕಿಗೆ

ದಕ್ಷಿಣ ಬ್ರೆಜಿಲ್‌ನಲ್ಲಿ ಪತ್ತೆಯಾದ 'ಸಿಲೆಸೆಲಿಡಾ ಅಕ್ರಿಸ್ಟಾಟಾ' ಎಂಬ ಹೊಸ ಪ್ರಭೇದದ ಪಳೆಯುಳಿಕೆಯು, ಆರ್ಕೋಸಾರ್ ವಂಶಾವಳಿಯ ಆರಂಭಿಕ ವಿಕಾಸದ ಮೇಲೆ ಬೆಳಕು ಚೆಲ್ಲಿದೆ. ಮಧ್ಯ ಟ್ರಯಾಸಿಕ್ ಯುಗದ ಈ ಸರೀსೃಪದ ವಿಶಿಷ್ಟ ಅಂಗರಚನೆಯು, ಡೈನೋಸಾರ್‌ಗಳು ಮತ್ತು ಮೊಸಳೆಗಳ ಪೂರ್ವಜರ ಅಧ್ಯಯನಕ್ಕೆ ಹೊಸ ದಿಕ್ಕು ತೋರಿದೆ.
Read Full Story

06:34 PM (IST) Sep 09

ಕಿಡ್ನಿ ಕಾಯಿಲೆ ಸೈಲೆಂಟ್ ಕಿಲ್ಲರ್! ಈ 5 ಸಿಂಪಲ್‌ ಟೆಸ್ಟ್‌ಗಳಿಂದ ಆರಂಭದಲ್ಲೇ ಪತ್ತೆ ಹಚ್ಚಬಹುದು..!

ಹೃದಯ ಮತ್ತು ಕಿಡ್ನಿ ಕಾಯಿಲೆಗಳಿಗೆ ನಿಕಟ ಸಂಬಂಧವಿದೆ. ಹೃದಯದ ಸಮಸ್ಯೆ ಇರುವವರಲ್ಲಿ ಕಿಡ್ನಿ ಕಾಯಿಲೆಯು ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ, ನಿಯಮಿತ ರಕ್ತ ಮತ್ತು ಮೂತ್ರ ಪರೀಕ್ಷೆಗಳ ಮೂಲಕ ಕಿಡ್ನಿ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆಹಚ್ಚಿ, ಗಂಭೀರ ಅಪಾಯವನ್ನು ತಪ್ಪಿಸಬಹುದು.
Read Full Story

06:24 PM (IST) Sep 09

'ಸರ್‌ ತನ್‌ ಸೇ ಜುದಾ' ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಘೋಷಣೆ, ಕ್ರಿಮಿನಲ್‌ ಮೌಲಾನಾ ತೌಕೀರ್ ಜಾಮೀನು ಅರ್ಜಿ ವಜಾ!

ಬರೇಲಿ ಹಿಂಸಾಚಾರ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾದ ತೌಕೀರ್ ರಜಾ ಖಾನ್ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. 'ಸರ್‌ ತನ್ ಸೆ ಜುದಾ' ಘೋಷಣೆಯು ದೇಶದ ಕಾನೂನಿಗೆ ನೇರ ಸವಾಲಾಗಿದ್ದು, ಸಶಸ್ತ್ರ ದಂಗೆಗೆ ಪ್ರಚೋದಿಸುತ್ತದೆ ಎಂದು ನ್ಯಾಯಾಲಯ ಕಟುವಾಗಿ ಹೇಳಿದೆ.

Read Full Story

05:24 PM (IST) Sep 09

'ತಾಯಿಯ ಕಾಲಿಗೆ ಬಿದ್ದು ಮಾಡಿದ ತಪ್ಪಿಗೆ ಕ್ಷಮೆ ಕೇಳು' ಆಸ್ತಿ ಕಬಳಿಸಲು ಯತ್ನಿಸಿದ ಮಗನಿಗೆ ಸುಪ್ರೀಂ ಕೋರ್ಟ್‌ ಮಾನವೀಯತೆಯ ಪಾಠ!

ಆಸ್ತಿ ವಿವಾದದಲ್ಲಿ ಹೆತ್ತವರನ್ನೇ ನ್ಯಾಯಾಲಯಕ್ಕೆ ಎಳೆದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮೊದಲು ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಬುದ್ಧಿಮಾತು ಹೇಳಿದ ನ್ಯಾಯಪೀಠ, ಮಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
Read Full Story

05:23 PM (IST) Sep 09

ಬಿಸಿಸಿಐಗೆ ಬಿಗ್‌ ಶಾಕ್‌? ರಾಷ್ಟ್ರೀಯ ಕ್ರೀಡಾ ನೀತಿ ವ್ಯಾಪ್ತಿಗೆ ಯಾಕೆ ತರಬಾರದು ಎಂದ ಸುಪ್ರೀಂ ಕೋರ್ಟ್‌

ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ರಾಷ್ಟ್ರೀಯ ಕ್ರೀಡಾ ನೀತಿಯ ವ್ಯಾಪ್ತಿಗೆ ಯಾಕೆ ತರಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಲೋಧಾ ಸಮಿತಿ ಶಿಫಾರಸುಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ವಿಚಾರಣೆಯಲ್ಲಿ, ಪದಾಧಿಕಾರಿಗಳ ಸೇವಾ ನಿಯಮಗಳ ಬಗ್ಗೆಯೂ ಕೋರ್ಟ್ ಸ್ಪಷ್ಟನೆ ಕೇಳಿದ್ದು, ಇದು ಬಿಸಿಸಿಐ ಆಡಳಿತದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ.
Read Full Story

05:03 PM (IST) Sep 09

Success Story - ಟಾಯ್ಲೆಟ್​ ಕ್ಲೀನ್​ ಮಾಡ್ತಿದ್ದ ಮಹಿಳೆ, ಇಂದು ಅದೇ ಬ್ಯಾಂಕ್ ಮ್ಯಾನೇಜರ್​- SBI ಉದ್ಯೋಗಿ ಯಶೋಗಾಥೆ

ಪ್ರತಿಕ್ಷಾ ತೋಂಡ್ವಾಲ್ಕರ್ ಅವರು ಪತಿಯ ಮರಣದ ನಂತರ, ತಾವು ಕಸಗುಡಿಸುತ್ತಿದ್ದ ಎಸ್‌ಬಿಐ ಬ್ಯಾಂಕ್‌ನಲ್ಲಿಯೇ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ತಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ, ಅವರು ಅದೇ ಬ್ಯಾಂಕ್‌ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ (AGM) ಹುದ್ದೆಗೆ ಏರಿದರು. ಈ ಕಥೆಯು ಧೈರ್ಯ ಮತ್ತು ದೃಢಸಂಕಲ್ಪದಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಫೂರ್ತಿಯಾಗಿದೆ.
Read Full Story

04:53 PM (IST) Sep 09

ಮೆಟಾದಿಂದ ಲೇ-ಆಫ್ ಆಗಿದ್ದೇ ಲಕ್ ತಂದಿತು! 3 ತಿಂಗಳಲ್ಲಿ ₹25 ಲಕ್ಷ ಹೆಚ್ಚುವರಿ ಗಳಿಸಿದ ಟೆಕ್ಕಿಯ ಕಥೆ ವೈರಲ್!

ಮೆಟಾ ಸಂಸ್ಥೆಯಿಂದ ವಜಾಗೊಂಡ ಮಾಜಿ ಉದ್ಯೋಗಿಯೊಬ್ಬರು, ಲೇ-ಆಫ್ ಅವಧಿಯಲ್ಲೇ ಹೊಸ ಉದ್ಯೋಗ ಪಡೆದು ಆರ್ಥಿಕವಾಗಿ ಲಾಭ ಗಳಿಸಿದ್ದಾರೆ. ಹೊಸ ಕಂಪನಿಯ ಸಂಬಳದ ಜೊತೆಗೆ ಮೆಟಾದಿಂದ ಪರಿಹಾರ, 3 ತಿಂಗಳ ವೇತನ ಮತ್ತು ಸ್ಟಾಕ್ ವೆಸ್ಟ್ ಪಡೆದು, ಸುಮಾರು ₹25 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಹಣ ಗಳಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ತಂತ್ರಜ್ಞಾನ ಕಂಪನಿಗಳ ಲೇ-ಆಫ್ ನೀತಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

04:36 PM (IST) Sep 09

TTD - ದೇಶದಲ್ಲಿಯೇ ಮೊದಲು, ತಿರುಮಲ ತಿಮ್ಮಪ್ಪನ ನೋಡಲು ಬರುವ ಭಕ್ತರಿಗೆ ವಿಮೆ ಸೌಲಭ್ಯ

ತಿರುಮಲ ಶ್ರೀವಾರಿ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಟಿಟಿಡಿ ಆಡಳಿತ ಮಂಡಳಿಯು ಹೊಸ ವಿಮಾ ಸೌಲಭ್ಯವನ್ನು ಘೋಷಿಸಿದೆ. ಈ ಯೋಜನೆಯಡಿ, ಅಪಘಾತದಲ್ಲಿ ಮರಣ ಹೊಂದಿದ ಭಕ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಹಾಗೂ ತಿರುಮಲದಲ್ಲಿ ಸಹಜವಾಗಿ ಮರಣ ಹೊಂದಿದವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ವಿಮೆ ನೀಡಲು ನಿರ್ಧರಿಸಲಾಗಿದೆ.
Read Full Story

04:33 PM (IST) Sep 09

ರಸ್ತೆ ಅಗಲೀಕರಣಕ್ಕೆ ಒಪ್ಪದ ಉಜ್ಜಯಿನಿಯ ಹನುಮಾನ್; ಗುಡಿ ತೆರವುಗೊಂಡರೂ ಕದಲದ ಆಂಜನೇಯ

ಮಧ್ಯಪ್ರದೇಶದ ಪವಿತ್ರ ನಗರಿ ಉಜ್ಜಯಿನಿಯಲ್ಲಿ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಛತ್ರಿ ಚೌಕ್ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಸ್ಥಳಾಂತರಿಸಲು ಮುಂದಾಗಿದ್ದ 150 ವರ್ಷಗಳ ಇತಿಹಾಸವಿರುವ ಖಡೆ ಹನುಮಾನ್ (ನಿಂತಿರುವ ಆಂಜನೇಯ) ವಿಗ್ರಹವು ಇಂಚೂ ಕದಲದೆ ಇದ್ದ ಜಾಗದಲ್ಲೇ ಗಟ್ಟಿಯಾಗಿ ನಿಂತಿದೆ. ಈ ಕುರಿತ ಒಂದು ರಿಪೋರ್ಟ್‌ ಇಲ್ಲಿದೆ.

Read Full Story

04:31 PM (IST) Sep 09

ಕನ್ನಡಿಗ ಪಡಿಕ್ಕಲ್, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಜತ್ ಪಾಟೀದಾರ್, ಪಾಂಡ್ಯಗೂ ಚಾನ್ಸ್‌..! ಆಸೀಸ್‌ ಸರಣಿಗೆ ಬಿಸಿಸಿಐನಿಂದ ತಂಡ ಪ್ರಕಟ

ಮುಂಬರುವ ಆಸ್ಟ್ರೇಲಿಯಾ 'ಎ' ವಿರುದ್ಧದ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳಿಗೆ ಬಿಸಿಸಿಐ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಮಲ್ಟಿ ಡೇ ಪಂದ್ಯಗಳಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ನಾಯಕರಾದರೆ, ಏಕದಿನ ಸರಣಿಗೆ ಋತುರಾಜ್ ಗಾಯಕ್ವಾಡ್ ಸಾರಥ್ಯ ವಹಿಸಲಿದ್ದಾರೆ. ಈ ಎಲ್ಲಾ ಪಂದ್ಯಗಳು ಪುದುಚೆರಿಯಲ್ಲಿ ನಡೆಯಲಿವೆ.
Read Full Story

03:57 PM (IST) Sep 09

ಮಾರುಕಟ್ಟೆಯಲ್ಲಿ ಧರೆಗುರುಳಿದ ಇನ್ಫೋಸಿಸ್‌, ಒಂದೇ ವಾರದಲ್ಲಿ 40 ಸಾವಿರ ಕೋಟಿ ನಷ್ಟ!

ಇನ್ಫೋಸಿಸ್ ಶೇರುಗಳು ಸತತ ಆರನೇ ದಿನವೂ ಕುಸಿತ ಕಂಡು, ಮಾರುಕಟ್ಟೆ ಬಂಡವಾಳದಲ್ಲಿ ₹40,000 ಕೋಟಿಗೂ ಅಧಿಕ ನಷ್ಟವಾಗಿದೆ. ಈ ಕುಸಿತಕ್ಕೆ ಎಐ-ಆಧಾರಿತ ಬೆಲೆ ಇಳಿಕೆ ಮತ್ತು ಕೆಲವು ವಲಯಗಳಲ್ಲಿನ ಬೇಡಿಕೆಯ ಮಂದಗತಿ ಪ್ರಮುಖ ಕಾರಣಗಳಾಗಿವೆ. ಜೆಪಿ ಮಾರ್ಗನ್ ಸಂಸ್ಥೆಯು 'ನ್ಯೂಟ್ರಲ್' ರೇಟಿಂಗ್ ನೀಡಿದೆ.
Read Full Story

03:26 PM (IST) Sep 09

ಅತ್ತಿಗೆ ಸಾನಿಯಾ ಜತೆ ಟ್ವಿನ್ಸ್ ರೀತಿ ಡ್ರೆಸ್ ಮಾಡಿಕೊಂಡ ಸಾರಾ ತೆಂಡೂಲ್ಕರ್..! ಯಾರ ದೃಷ್ಟಿಯೂ ಬೀಳದಿರಲಿ ಎಂದ ಫ್ಯಾನ್ಸ್

ಸಾರಾ ತೆಂಡೂಲ್ಕರ್ ಮತ್ತು ಅವರ ಅತ್ತಿಗೆ ಸಾನಿಯಾ ಚಾಂದೋಕ್ ಅವರು ಫ್ಯಾಮಿಲಿ ಸೆಲಿಬ್ರೇಷನ್‌ಗಾಗಿ ಟ್ವಿನ್ಸ್ ರೀತಿ ಡ್ರೆಸ್ ಮಾಡಿಕೊಂಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ಗೆಟ್ ರೆಡಿ ವಿತ್ ಅಸ್' ಶೀರ್ಷಿಕೆಯ ಈ ವಿಡಿಯೋದಲ್ಲಿ ಅವರ ತಮಾಷೆಯ ಬಾಂಧವ್ಯವು ನೆಟ್ಟಿಗರ ಮನಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

03:01 PM (IST) Sep 09

4500KM ದೂರದಿಂದ ಭಾರತದ ಕಾಡಿಗೆ ಬಂದಿದ್ದು ಹೇಗೆ ಅಪರೂಪದ ಒರಾಂಗುಟಾನ್? ಅತಿದೊಡ್ಡ ಸಮಸ್ಯೆ ಯಾಕೆ?

ಒಡಿಶಾದ ಬಾಲಸೋರ್ ಜಿಲ್ಲೆಯ ಅರಣ್ಯದಲ್ಲಿ ಐದು ಒರಾಂಗುಟಾನ್ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಭಾರತದಲ್ಲಿ ಕಂಡುಬರದ ಈ ಪ್ರಾಣಿಗಳು ಇಲ್ಲಿಗೆ ಹೇಗೆ ಬಂದವು ಎಂಬುದು ನಿಗೂಢವಾಗಿದ್ದು, ಇದು ಅಕ್ರಮ ಕಳ್ಳಸಾಗಣೆ ಜಾಲದ ಕೃತ್ಯವಿರಬಹುದೆಂದು ಶಂಕಿಸಿ ತನಿಖೆ ನಡೆಸಲಾಗುತ್ತಿದೆ.
Read Full Story

01:34 PM (IST) Sep 09

Kia Car Offers - ಕಿಯಾ ಕಾರ್‌ಗಳ ಮೇಲೆ ಭರ್ಜರಿ ಹಬ್ಬದ ಆಫರ್! ₹1.5 ಲಕ್ಷದವರೆಗೆ ರಿಯಾಯಿತಿ ಘೋಷಣೆ

ಹಬ್ಬದ ಸೀಸನ್ ಪ್ರಯುಕ್ತ ಕಿಯಾ ಇಂಡಿಯಾ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್ ಅಡಿಯಲ್ಲಿ ಗ್ರಾಹಕರು ಬರೋಬ್ಬರಿ 1.5 ಲಕ್ಷದವರೆಗೆ ಉಳಿತಾಯ ಮಾಡಬಹುದಾಗಿದ್ದು, ಯಾವ ಮಾಡೆಲ್ ಮೇಲೆ ಈ ದೊಡ್ಡ ರಿಯಾಯಿತಿ ಲಭ್ಯವಿದೆ ಎಂಬ ಕುತೂಹಲ ಹೆಚ್ಚಾಗಿದೆ.
Read Full Story

01:14 PM (IST) Sep 09

PF ಅಕೌಂಟ್ ಇರುವವರಿಗೆ ಕೇಂದ್ರದ ಗುಡ್‌ನ್ಯೂಸ್; ಈ ಸಿಂಪಲ್ ಕೆಲಸ ಮಾಡಿ, ಖಾತೆಗೆ ಬೀಳುತ್ತೆ 15 ಸಾವಿರ ರೂ.

ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇಪಿಎಫ್‌ಓ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ₹15,000 ಲಾಭ ಪಡೆಯಲು, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಡಿಬಿಟಿ ಸೌಲಭ್ಯ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಆರ್ಥಿಕ ನೆರವು ಕೈತಪ್ಪಲಿದೆ.
Read Full Story

01:04 PM (IST) Sep 09

'ನಮಗೆ ಟ್ರೋಫಿ ಬೇಡ, ಭಾರತವನ್ನು ಸೋಲಿಸಬೇಕಷ್ಟೇ' - ವಹಾಬ್ ರಿಯಾಜ್ ಎದುರು ನೋವು ಹೊರಹಾಕಿದ ಪಾಕಿಸ್ತಾನ ಅಭಿಮಾನಿ

ಮಹಿಳಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸಿದ ಬಳಿಕ, ಅಭಿಮಾನಿಯೊಬ್ಬರು ಕೋಚ್ ವಹಾಬ್ ರಿಯಾಜ್ ಬಳಿ ಭಾರತವನ್ನು ಸೋಲಿಸುವಂತೆ ಮನವಿ ಮಾಡಿದ್ದಾರೆ. ನಮಗೆ ಏಷ್ಯಾಕಪ್ ಟ್ರೋಫಿಗಿಂತ ಭಾರತದ ವಿರುದ್ಧದ ಗೆಲುವೇ ಮುಖ್ಯ ಎಂದು ಹತಾಶೆಯಿಂದ ಕೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
Read Full Story

12:15 PM (IST) Sep 09

ಎಂಎಸ್ಸಿ ಪದವೀಧರೆಯ ಹಾಲಿನ ಕ್ರಾಂತಿ - 23ರ ವಯಸ್ಸಲ್ಲೇ ಕೋಟಿಯ ಒಡತಿ! ಯುವತಿಯ ರೋಚಕ ಸ್ಟೋರಿ

ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದ ಮಹಾರಾಷ್ಟ್ರದ ಶ್ರದ್ಧಾ ಧವನ್, ಉದ್ಯೋಗ ಅರಸದೆ ತಂದೆಯ ಎಮ್ಮೆ ಸಾಕಣೆ ಉದ್ಯಮವನ್ನು ಮುಂದುವರಿಸಿದರು. ತಮ್ಮ ಛಲ ಮತ್ತು ಶ್ರದ್ಧೆಯಿಂದ, 2 ಎಮ್ಮೆಗಳಿಂದ ಆರಂಭವಾದ ಪುಟ್ಟ ಹಟ್ಟಿಯನ್ನು 80 ಎಮ್ಮೆಗಳ ಬೃಹತ್ ಡೈರಿ ಫಾರ್ಮ್ ಆಗಿ ಪರಿವರ್ತಿಸಿ, ಇಂದು ಕೋಟಿಗೂ ಅಧಿಕ ಆದಾಯ ಗಳಿಸುವ ಮೂಲಕ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.
Read Full Story

12:04 PM (IST) Sep 09

ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ಯಾವಾಗಿನಿಂದ ಆರಂಭ? ಎಲ್ಲಿ ನೇರ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಮೂರು ಪಂದ್ಯಗಳ ಹೈವೋಲ್ಟೇಜ್ ಟಿ20 ಸರಣಿ ಆಯೋಜನೆಗೊಂಡಿದೆ. ಸೆಪ್ಟೆಂಬರ್ 13 ರಿಂದ ದೆಹಲಿಯಲ್ಲಿ ಆರಂಭವಾಗಲಿರುವ ಈ ಸರಣಿಯಲ್ಲಿ ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ಇದು ಮುಂಬರುವ ಏಷ್ಯನ್ ಗೇಮ್ಸ್‌ಗೆ ಪೂರ್ವಭಾವಿ ಪಂದ್ಯವಾಗಿರಲಿದೆ.
Read Full Story

11:59 AM (IST) Sep 09

Oracle layoffs - ಉದ್ಯೋಗ ಕಡಿತದ ನಡುವೆಯೇ ಒರಾಕಲ್ ಷೇರು ಗಗನಕ್ಕೆ! ಟೆಕ್ಕಿಗಳಿಗೆ ಶಾಕ್, ಹೂಡಿಕೆದಾರರಿಗೆ ಜಾಕ್‌ಪಾಟ್

ಟೆಕ್ ದೈತ್ಯ ಒರಾಕಲ್ ಕಂಪನಿಯು ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದು ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ. ಇದೇ ಸಮಯದಲ್ಲಿ, OpenAI ಜೊತೆಗಿನ AI ಮತ್ತು ಕ್ಲೌಡ್ ಒಪ್ಪಂದದಿಂದಾಗಿ ಕಂಪನಿಯ ಷೇರು ಮೌಲ್ಯವು ಗಗನಕ್ಕೇರುತ್ತಿದೆ, ಇದು ಕಂಪನಿಯ ದ್ವಂದ್ವ ನೀತಿ ತೋರಿಸುತ್ತದೆ.

Read Full Story

10:03 AM (IST) Sep 09

ರೈಲ್ವೆ ಕ್ರಾಂತಿ - ವಂದೇ ಭಾರತ್ ಸ್ಲೀಪರ್‌ನ ಹೊಸ ಪರ್ವ! ಬರೋಬ್ಬರಿ 260 ಹೊಸ ರೈಲಿಗೆ ಬೇಡಿಕೆ, ಯಾರಿಗೆಷ್ಟು ಗುತ್ತಿಗೆ?

ಭಾರತದಲ್ಲಿ 'ವಂದೇ ಭಾರತ್' ಯೋಜನೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಸ್ಲೀಪರ್ ಆವೃತ್ತಿಯ ರೈಲುಗಳ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಚೆನ್ನೈನ ICF, BEML, ಕೈನೆಟ್ ರೈಲ್ವೆ ಸೊಲ್ಯೂಷನ್ಸ್, ಮತ್ತು BHEL-ತಿತಾಘರ್ ಒಕ್ಕೂಟದಂತಹ ಸಂಸ್ಥೆಗಳು ಒಟ್ಟು 260 ಹೊಸ ಸ್ಲೀಪರ್ ರೈಲುಗಳನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿವೆ. ಈ ಮೂಲಕ ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರಿಗೆ ಆರಾಮದಾಯಕ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ.
Read Full Story

09:33 AM (IST) Sep 09

ದುಲೀಪ್‌ ಟ್ರೋಫಿ ಫೈನಲ್‌ - ಈಸ್ಟ್‌ ಝೋನ್‌ ಗೆಲುವಿನ ಸನಿಹ; ಸೌತ್‌ ಝೋನ್‌ಗೆ ಬಿಗ್‌ ಶಾಕ್‌

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ನೇತೃತ್ವದ ಪೂರ್ವ ವಲಯ ತಂಡವು 708 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ, ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯವು 242 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಮೂಲಕ ಪೂರ್ವ ವಲಯ 14 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ.
Read Full Story

09:10 AM (IST) Sep 09

200MP Camera - ಅತಿ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಕ್ಯಾಮೆರಾ ಫೋನ್‌ಗಳು ಯಾವುವು? ಇಲ್ಲಿದೆ ನೋಡಿ ಕಂಪ್ಲೀಟ್ ಲಿಸ್ಟ್

ಸ್ಮಾರ್ಟ್‌ಫೋನ್‌ಗಳಲ್ಲಿ 200MP ಕ್ಯಾಮೆರಾಗಳ ಬಳಕೆ ಹೆಚ್ಚಾಗಿದ್ದು, ಪ್ರೀಮಿಯಂನಿಂದ ಹಿಡಿದು ಬಜೆಟ್ ಫೋನ್‌ಗಳವರೆಗೆ ಲಭ್ಯವಿದೆ. ಈ ಲೇಖನವು ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ, ವಿವೋ X300 ಅಲ್ಟ್ರಾ, ಮತ್ತು ರೆಡ್‌ಮಿ ನೋಟ್ 15 ಪ್ರೊ ನಂತಹ ಪ್ರಮುಖ 200MP ಫೋನ್‌ಗಳ ವೈಶಿಷ್ಟ್ಯಗಳು ಮತ್ತು ಬೆಲೆಗಳನ್ನು ವಿವರಿಸುತ್ತದೆ.
Read Full Story

07:33 AM (IST) Sep 09

ಮೋದಿ ಕಾರ್ಯಕ್ರಮದೊಳಕ್ಕೆ ನುಗ್ಗಿದ ಗನ್ ಮ್ಯಾನ್ ಅರೆಸ್ಟ್, PMO ಅಧಿಕಾರಿ ಸೋಗಿನಲ್ಲಿ ಬಂದ ಇಬ್ಬರು

ಮುಂಬೈ (ಸೆ.08) ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭದ್ರತಾ ಆತಂಕ ಘಟನೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುವ ಮೊದಲೇ ಭದ್ರತಾ ಪಡೆಗಳು ಇಬ್ಬರನ್ನು ಅರೆಸ್ಟ್ ಮಾಡಿದೆ. ಈ ಪೈಕಿ ಒರ್ವನಿಂದ ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯದ ಐಡಿ ಕಾರ್ಡ್ ಬಳಸಿ ಮೋದಿ ಕಾರ್ಯಕ್ರಮದ ಪ್ರದೇಶಕ್ಕೆ ಆಗಮಿಸಿದ್ದರು. ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಭದ್ರತಾ ಪಡೆಗಳು ಅರೆಸ್ಟ್ ಮಾಡಿ ವಿಚಾರಣೆ ತೀವ್ರಗೊಳಿಸಿದೆ.

NMACC ಆಯೋಜಿಸಲಾಗಿದ್ದ ಕಾರ್ಯಕ್ರಮ

ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (NMACC) ಆಯೋಜಿಸಲಾಗಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇಂದು (ಸೆ.08) ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರ ರಾತ್ರಿ ವೇಳೆ ಇಬ್ಬರನ್ನು ಭದ್ರತಾ ಪಡೆಗಳು ಅರೆಸ್ಟ್ ಮಾಡಿದೆ. ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಬಾಡಿಗಾರ್ಡ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಓರ್ವನಿಂದ ಒಂದು ಲೈಲೆನ್ಸ್ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.

Read Full Story

07:33 AM (IST) Sep 09

ಕಷ್ಟಪಟ್ಟು ದುಡಿದ ಹಣದಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ - ಬಾಕ್ಸ್‌ನಲ್ಲಿ ಸಗಣಿ ತುಂಬಿ ಪಾರ್ಸಲ್ ಮಾಡಿದ್ರು

ಗ್ರೇಟರ್ ನೋಯ್ಡಾ: ಆನ್‌ಲೈನ್ ಶಾಪಿಂಗ್ ಮಾಡುವವರು ಎಚ್ಚರ! ಇಲ್ಲೊಬ್ಬ ಯುವಕ ತನಗೆ ಬೇಕಾದ ಎಲೆಕ್ಟ್ರಾನಿಕ್ ಸಾಧನವನ್ನು ಆರ್ಡರ್ ಮಾಡಿ ಹಣ ಪಾವತಿಸಿದ್ದಕ್ಕೆ ಪ್ರತಿಯಾಗಿ ಬಂದ ಪಾರ್ಸೆಲ್‌ನಲ್ಲಿ ಸಗಣಿ ಕಂಡುಬಂದಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ವಂಚನೆ ಪ್ರಕರಣ ಈಗ ಸೈಬರ್ ಸೆಲ್ ಮೆಟ್ಟಿಲೇರಿದೆ.

ನಡೆದಿದ್ದೇನು?

ಗ್ರೇಟರ್ ನೋಯ್ಡಾದ ಸಮಸಪುರ ಗ್ರಾಮದ ನಿವಾಸಿ ಆಕಾಶ್ ನಾಗರ್ ಎಂಬುವವರು ಇತ್ತೀಚೆಗೆ ಒಂದು ವೆಬ್‌ಸೈಟ್ ಮೂಲಕ ಆಂಡ್ರಾಯ್ಡ್ ಸಾಧನ (Android Device) ಆರ್ಡರ್ ಮಾಡಿದ್ದರು. ಇದಕ್ಕಾಗಿ ಬೇಕಾದ ಸಂಪೂರ್ಣ ಹಣವನ್ನು ಅವರು ಬುಕಿಂಗ್ ಸಮಯದಲ್ಲಿಯೇ ಆನ್‌ಲೈನ್ ಮೂಲಕ ಪಾವತಿಸಿದ್ದರು.

Read Full Story

More Trending News