ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಗುರುವಾರ ತಡರಾತ್ರಿ ತಮ್ಮ ನಿರಶನವನ್ನು ಅಂತ್ಯಗೊಳಿಸಿದ್ದಾರೆ.
ವಾಂಗ್ಚುಕ್ ಅವರು ಚಿಕಿತ್ಸೆ ಪಡೆಯುತ್ತಿರುವ ಗುರುಗ್ರಾಮದ ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಮನವೊಲಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.
ಮಧ್ಯರಾತ್ರಿ ಮೋದಿ ಸೆಲ್ಫಿ ವಿಡಿಯೋ ಸಂದೇಶ
ಮತ್ತೊಂದೆಡೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜಿರಳೆ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆ ತೀವ್ರಗೊಂಡಿರುವಾಗಲೇ ಗುರುವಾರ ಮಧ್ಯರಾತ್ರಿ ಸುಮಾರು 3 ನಿಮಿಷಗಳ ಸೆಲ್ಫಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
07:41 PM (IST) Jul 24
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಕಂಟೆಂಟ್ ಕ್ರಿಯೇಷನ್ ತಾಣವಾಗಿ ಮಾರ್ಪಟ್ಟಿದೆ.ಇವರ ವೀಡಿಯೊಗಳು ಹೋರಾಟಕ್ಕೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಚಾರ ನೀಡುತ್ತಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
07:38 PM (IST) Jul 24
ಇಂದು (ಜು.24) ರಾತ್ರಿ ಗಂಟೆಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಹಲವು ಘೋಷಣೆಗಳು ಹೊರಬೀಳಲಿದೆ. ನೀಟ್ ಪೇಪರ್ ಲೀಕ್ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನ್ ನಡೆ ತೀವ್ರ ಕುತೂಹಲ ಕೆರಳಿಸಿದೆ.
07:22 PM (IST) Jul 24
ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆಲ್ಲುವ ಮೂಲಕ ಶ್ರೇಯಸ್ ಅಯ್ಯರ್ ಹೊಸ ದಾಖಲೆ ಬರೆದಿದ್ದಾರೆ. ಸತತ 8 ಟಿ20 ಪಂದ್ಯಗಳಲ್ಲಿ ಟಾಸ್ ಗೆದ್ದ ಅವರು, ಈ ಹಿಂದೆ 7 ಬಾರಿ ಟಾಸ್ ಗೆದ್ದಿದ್ದ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.
06:35 PM (IST) Jul 24
ನೀಟ್-ಯುಜಿ ಅಕ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರಾಜೀನಾಮೆಯ ಬದಲು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
06:06 PM (IST) Jul 24
05:46 PM (IST) Jul 24
ಸೂತ್ರ ಕತ್ತರಿಸಿದ ಗಾಳಿಪಟದಂತಾಗಿರುವ ಮೋನಾಲಿಸಾ ಬಾಳು ಈಗ ಕಾನೂನು ಹೋರಾಟ ಮತ್ತು ಪೊಲೀಸ್ ರಕ್ಷಣೆಯ ನೆರಳಿನಲ್ಲಿ ಸಾಗುತ್ತಿದೆ. ಗ್ಲಾಮರ್ ಪ್ರಪಂಚದ ಮಿಂಚು ಹರಿಸಬೇಕಿದ್ದ ಹುಡುಗಿ, ಇಂದು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿರುವುದು ವಿಪರ್ಯಾಸವೇ ಸರಿ!
05:05 PM (IST) Jul 24
04:52 PM (IST) Jul 24
04:41 PM (IST) Jul 24
04:31 PM (IST) Jul 24
ದೇಶದಲ್ಲಿ ಹೆಚ್ಚುತ್ತಿರುವ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರವು 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024'ಕ್ಕೆ ಕಠಿಣ ತಿದ್ದುಪಡಿ ತರಲು ಮುಂದಾಗಿದೆ.
04:24 PM (IST) Jul 24
04:08 PM (IST) Jul 24
ಒಬ್ಬ ಪ್ರಯಾಣಿಕ ಬರೆದ ಒಂದು ತಮಾಷೆಯ ಮತ್ತು ಗಂಭೀರವಾದ ಪತ್ರವು ಭಾರತೀಯ ರೈಲ್ವೆಯ ಇತಿಹಾಸವನ್ನೇ ಬದಲಿಸಿತು. ಆ ಪತ್ರ ಯಾವುದು? ಅದನ್ನು ಬರೆದವರು ಯಾರು? ಇಲ್ಲಿದೆ ಕುತೂಹಲಕಾರಿ ಮಾಹಿತಿ. ಇಲ್ಲಿದೆ..
04:01 PM (IST) Jul 24
ವಾಸ್ತವವಾಗಿ ಜನವರಿ 9ರಂದೇ ಪೊಂಗಲ್ ಹಬ್ಬಕ್ಕೆ ಬರಬೇಕಿದ್ದ ಈ ಚಿತ್ರ, ಸೆನ್ಸಾರ್ ಮಂಡಳಿಯ ತಕರಾರಿನಿಂದ ವಿಳಂಬವಾಯಿತು. ಚಿತ್ರದ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆ ಎಂಬ ದೂರಿನ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಹೋರಾಟವೇ ನಡೆದಿತ್ತು. ಕೊನೆಗೂ ಎಲ್ಲಾ ಕಾನೂನು ಸಮರಗಳನ್ನು ಗೆದ್ದು ಸಿನಿಮಾ ಈಗ ಜನರ ಮುಂದೆ ಬಂದಿದೆ.
03:42 PM (IST) Jul 24
03:38 PM (IST) Jul 24
ಬೆಂಗಳೂರು: ಅಮೆರಿಕ ಹಾಗೂ ಇರಾನ್ ನಡುವಿನ ಯುದ್ದ ಭೀತಿಯ ಪರಿಣಾಮ ಸತತ ಏರಿಕೆಯತ್ತ ಮುಖಮಾಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಕುಸಿತ ಕಂಡಿದೆ. ಜುಲೈ 24ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ
02:08 PM (IST) Jul 24
ನಟ ಯಶ್ ಅವರು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಟಾಕ್ಸಿಕ್ ಸಿನಿಮಾದ ಆ ಡೈಲಾಗ್ ಅವರನ್ನು ಬಿಟ್ಟೂಬಿಡದೇ ಹಿಂಬಾಲಿಸುತ್ತಿದೆ. ಸದ್ಯಕ್ಕೆ ಈ ಡೈಲಾಗ್ 'ಯುವಜನತೆಯ ಮಂತ್ರ' ಎನ್ನುವಂತಾಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಅದ್ಯಾವ ಡೈಲಾಗ್ ಯುಥ್ ಸಮೂಹವನ್ನು ಸೆಳೆಯಲಿದೆಯೋ ಏನೋ!?
01:59 PM (IST) Jul 24
01:55 PM (IST) Jul 24
ಬೆಂಗಳೂರು: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಟಿ20 ಸರಣಿ ಘೋಷಣೆಯಾಗಿದೆ. ಇದೀಗ ಭಾರತದಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಟಿ20 ಪಂದ್ಯಗಳು ನಡೆಯಲಿವೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
01:37 PM (IST) Jul 24
ದೇಶಾದ್ಯಂತ ಪರೀಕ್ಷಾ ಪೇಪರ್ ಲೀಕ್ ಹಗರಣಗಳು ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆಯಂತಿರುವ ಮತ್ತೊಂದು ಘಟನೆ ರಜಾಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷಾ ಕೊಠಡಿಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಾ ರೆಡ್‌ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ!
01:19 PM (IST) Jul 24
01:09 PM (IST) Jul 24
01:07 PM (IST) Jul 24
ಸದ್ಯಕ್ಕೆ ಗಾಂಧಿನಗರದ ಗಲ್ಲಿಯಿಂದ ಸೋಶಿಯಲ್ ಮೀಡಿಯಾದವರೆಗೆ ಚರ್ಚೆಯಾಗುತ್ತಿರೋದು ಒಂದೇ ವಿಷಯ... "ಯಾರಪ್ಪಾ ಆ ಹೊಸ ಸ್ಪರ್ಧಿಗಳು?" ಅಂತ. ಕೆಲವು ಫೇಮಸ್ ರೀಲ್ಸ್ ಸ್ಟಾರ್‌ಗಳು, ವಿವಾದಾತ್ಮಕ ನಾಯಕರು ಮತ್ತು ಸೀರಿಯಲ್ ತಾರೆಯರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಬಿಗ್‌ಬಾಸ್ ಅಂದ್ರೆ ಅಲ್ಲಿ ಸರ್ಪ್ರೈಸ್ ಇರಲೇಬೇಕಲ್ವಾ?
12:24 PM (IST) Jul 24
12:08 PM (IST) Jul 24
11:49 AM (IST) Jul 24
ಟೀಮ್ ಇಂಡಿಯಾದ ಯುವ ವೇಗಿ ಎದುರಾಳಿ ಬ್ಯಾಟರ್‌ಗಳ ಪಾಲಿನ 'ಸ್ಪೀಡ್ ಗನ್' ಮಯಾಂಕ್ ಯಾದವ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಮಯಾಂಕ್ ತಮ್ಮ ಹಳೆಯ ಲಯಕ್ಕೆ ಮರಳಿರುವುದನ್ನು ಸಾರಿದ್ದಾರೆ.
11:28 AM (IST) Jul 24
11:20 AM (IST) Jul 24
11:04 AM (IST) Jul 24
10:37 AM (IST) Jul 24
10:33 AM (IST) Jul 24
09:45 AM (IST) Jul 24
ಸನ್ ರೈಸರ್ಸ್ ಮಾಲೀಕಿ ಕಾವ್ಯ ಮಾರನ್ ಅವರಂತೆ, ಶಾರೂಖ್ ಖಾನ್ ಮಾಲೀಕತ್ವದ ಟ್ರಿನಿಬಾಗೋ ನೈಟ್ ರೈಡರ್ಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಾಗಿ ಪಾಕಿಸ್ತಾನಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಉಳಿಸಿಕೊಂಡಿದೆ.
09:01 AM (IST) Jul 24
ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯವಾಗಿದೆ. ಬೆನ್ನಲ್ಲೇ ಪ್ರೀತಿಯ ಸೋನಂ ಜೀ ತೂಕ ಹೆಚ್ಚಿಸಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
08:50 AM (IST) Jul 24
08:19 AM (IST) Jul 24