Published : Jul 09, 2026, 06:58 AM ISTUpdated : Jul 09, 2026, 11:46 PM IST

India Latest News Live: China Flood - ಚೀನಾದಲ್ಲಿ ಜಲಪ್ರಳಯ, ಫಾರ್ಮ್‌ನಿಂದ ತಪ್ಪಿಸಿಕೊಂಡ 900 ಹಾವುಗಳು! ವಿಡಿಯೋ ವೈರಲ್

ಸಾರಾಂಶ

ನವದೆಹಲಿ: ಹರ್ಯಾಣದಲ್ಲಿ ಸಂಚಾರಕ್ಕೆ ಸಿದ್ಧವಾಗಿರುವ ದೇಶದ ಮೊಟ್ಟ ಮೊದಲ ಹೈಡ್ರೋಜನ್‌ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಜು.17 ರಂದು ಚಾಲನೆ ನೀಡುವ ಸಾಧ್ಯತೆ ಇದೆ.

136 ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ರೈಲು ಹರ್ಯಾಣದ ಜಿಂದ್‌ ಮತ್ತು ಸೋನಿಪತ್ ನಡುವೆ ಸಂಚರಿಸಲಿದೆ. 10 ಬೋಗಿ ಹೊಂದಿರುವ ರೈಲು 682 ಸೀಟು ಹೊಂದಿದೆ. ಗಂಟೆಗೆ ಗರಿಷ್ಠ 75-120 ಕಿ.ಮೀ ವೇಗದಲ್ಲಿ ಚಲಿಸುವ ರೈಲು ಗರಿಷ್ಠ 2600 ಜನರನ್ನು ಹೊತ್ತೊಯ್ಯಬಲ್ಲದಾಗಿದೆ. ರೈಲು ಹೈಡ್ರೋಜನ್‌ ಫ್ಯೂಯೆಲ್‌ ಸೆಲ್‌ಗಳನ್ನು ಹೊಂದಿದ್ದು, ಅದು ಹೈಡ್ರೋಜನ್‌ ಅನ್ನು ವಿದ್ಯುತ್‌ ಆಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆ ವೇಳೆ ಅದು ನೀರಾವಿಯನ್ನು ಮಾತ್ರವೇ ಹೊರಸೂಸುತ್ತದೆ. ಹೀಗಾಗಿ ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ.

11:46 PM (IST) Jul 09

China Flood - ಚೀನಾದಲ್ಲಿ ಜಲಪ್ರಳಯ, ಫಾರ್ಮ್‌ನಿಂದ ತಪ್ಪಿಸಿಕೊಂಡ 900 ಹಾವುಗಳು! ವಿಡಿಯೋ ವೈರಲ್

ಚೀನಾದ ದಕ್ಷಿಣ ಭಾಗದಲ್ಲಿ ನೂರಾರು ಹಾವುಗಳು ಪ್ರವಾಹದ ನೀರಿನಲ್ಲಿ ಈಜುತ್ತಿರುವ ಒಂದು ಭಯಾನಕ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ.

Read Full Story

09:41 PM (IST) Jul 09

ಮುರುಗದಾಸ್ ಭೇಟಿಗೆ 1 ಲಕ್ಷ ಕೇಳಿದ್ರು, ಅಮ್ಮ ಮೈಮೇಲಿದ್ದ ಚಿನ್ನ ಬಿಚ್ಚಿಕೊಟ್ಟರು - ನಟಿ ಸ್ವಾಸಿಕಾ ಕಣ್ಣೀರಿನ ಕಥೆ

ಪ್ರೇಕ್ಷಕರ ನೆಚ್ಚಿನ ನಟಿಯರಲ್ಲಿ ಸ್ವಾಸಿಕಾ ಕೂಡ ಒಬ್ಬರು. ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿ, ನಂತರ ಸಿನಿಮಾಗಳಲ್ಲಿ ಮಿಂಚಿದ ಸ್ವಾಸಿಕಾ, ಅತ್ಯುತ್ತಮ ನಟಿ ಎಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.

Read Full Story

09:12 PM (IST) Jul 09

'Sorry Anand Mahindra Sir' ಎಂದ ನಿರ್ದೇಶಕ - Tech Mahindra ಉದ್ಯೋಗ ತೊರೆದು ಮೊದಲ ಸಿನಿಮಾದಲ್ಲೇ ಬ್ಲಾಕ್‌ಬಸ್ಟರ್!

2025ರಲ್ಲಿ ತೆರೆಕಂಡಿದ್ದ ತೆಲುಗು ಸಿನಿಮಾ 'ಲಿಟಲ್ ಹಾರ್ಟ್ಸ್' ವರ್ಷದ ಅಚ್ಚರಿ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ಈ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದವರು 27 ವರ್ಷದ ಯುವ ನಿರ್ದೇಶಕ ಸಾಯಿ ಮಾರ್ತಾಂಡ್.

Read Full Story

07:11 PM (IST) Jul 09

ರೈಲಿನಲ್ಲೇ ಹನಿಮೂನ್‌ ಮಾಡೋ ಕನಸು ಕಂಡಿದ್ದ ಜೋಡಿಗೆ ಶಾಕ್​ - ಅಲಂಕಾರಕ್ಕೆ ಅವಕಾಶ- ಅಧಿಕಾರಿಗಳು ಸಸ್ಪೆಂಡ್​

ನಾಂದೇಡ್​ಗ್ರಾಮ್​ ಎಕ್ಸ್‌ಪ್ರೆಸ್ ರೈಲಿನಲ್ಲಿ ದಂಪತಿಯೊಬ್ಬರು  ಹನಿಮೂನ್‌ಗಾಗಿ  ಎಸಿ ಕೋಚ್ ಅನ್ನು ಹೂವು ಮತ್ತು ಬಲೂನ್‌ಗಳಿಂದ ಅಲಂಕರಿಸಿದ್ದರು. ಈ ವಿಡಿಯೋ ವೈರಲ್ ಆದ ನಂತರ, ಭಾರತೀಯ ರೈಲ್ವೆ ಇದನ್ನು ಭದ್ರತಾ ಲೋಪವೆಂದು ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.

Read Full Story

06:22 PM (IST) Jul 09

ಗೂಳಿ-ಹುಲಿ ನಡುವೆ ಯೋಧನಾದ ಕಿಯಾರಾ ಪತಿ ಸಿದ್ಧಾರ್ಥ್ - 'ದಿ ವಾನ್' ಪೋಸ್ಟರ್ ನೋಡಿದ್ರಾ?

The Vvaan: ಕಿಯಾರಾ ಅಡ್ವಾಣಿ ಪತಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ 'ದಿ ವಾನ್' ಚಿತ್ರಕ್ಕೆ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಸಿನಿಮಾವು 2026ರ ಸೆಪ್ಟೆಂಬರ್ 25 ರಂದು ತೆರೆಗೆ ಬರಲಿದೆ.

Read Full Story

05:07 PM (IST) Jul 09

'ಧುರಂಧರ್' ಸಿನಿಮಾ ಬಾಲಿವುಡ್‌ನ ಕ್ರಿಯೇಟಿವಿಟಿಯನ್ನೇ ಬದಲಿಸಿದೆ - ಸೈಫ್ ಅಲಿ ಖಾನ್ ಮೆಚ್ಚುಗೆ

Saif Ali Khan: ಸೈಫ್ ಅಲಿ ಖಾನ್ ಪ್ರಕಾರ, 'ಧುರಂಧರ್' ಸಿನಿಮಾ ಬಾಲಿವುಡ್ ಮೇಲೆ ದೊಡ್ಡ ಪರಿಣಾಮ ಬೀರಿದೆ. ನಟರು ಮತ್ತು ನಿರ್ದೇಶಕರು ಸಿನಿಮಾ ಬಗ್ಗೆ ಯೋಚನೆ ಮಾಡುವ ರೀತಿಯನ್ನೇ ಇದು ಬದಲಾಯಿಸಿದೆ.

Read Full Story

04:43 PM (IST) Jul 09

ರೈಲಿನಲ್ಲಿ ಯಾವ ಆಹಾರ ಹೆಚ್ಚು ಆರ್ಡರ್ ಆಯ್ತು? ಸ್ವಿಗ್ಗಿ ವರದಿಯಲ್ಲಿ ಇಂಟ್ರೆಸ್ಟಿಂಗ್ ಮಾಹಿತಿ

ಟ್ರೈನ್ ಪ್ರಯಾಣದ ವೇಳೆ ಊಟ-ತಿಂಡಿಗಾಗಿ ಇನ್ಮುಂದೆ ಸ್ಟೇಷನ್‌ಗಳನ್ನೇ ನೆಚ್ಚಿಕೊಳ್ಳಬೇಕಿಲ್ಲ. ಸ್ವಿಗ್ಗಿ ಆ್ಯಪ್‌ನಲ್ಲಿಯೇ ನಿಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಬಹುದು. ಸ್ವಿಗ್ಗಿಯ 'ಫುಡ್ ಆನ್ ಟ್ರೈನ್' ಫೀಚರ್ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

 

Read Full Story

03:44 PM (IST) Jul 09

BSNLನಿಂದ ಕ್ರಾಂತಿಕಾರಿ ಮೊಬೈಲ್ ಆವಿಷ್ಕಾರ; ನೆಟ್‌ವರ್ಕ್‌ ಬೇಡವೇ ಬೇಡ, ಬೆಲೆ ಮಾತ್ರ 1.34 ಲಕ್ಷ!

BSNL ತನ್ನ ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ಫೋನ್ ಲಾಂಚ್ ಮಾಡಿದೆ. ಬೆಲೆ ಬರೋಬ್ಬರಿ 1.34 ಲಕ್ಷ ರೂಪಾಯಿ ಆಗಿದೆ. ಹಾಗಂತ ಈ ಫೋನ್ ಎಲ್ಲರೂ ಖರೀದಿಸುವಂತಿಲ್ಲ. ಒಂದು ವೇಳೆ ಖರೀದಿಸಿದ್ರೂ ಅದಕ್ಕೆ ಅದರದ್ದೇ ಆದ ನೀತಿ, ನಿಯಮಗಳು ಇವೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ. 

Read Full Story

03:41 PM (IST) Jul 09

36 ಸ್ಟಾರ್ ಆಟಗಾರರು, 6 ಬಲಿಷ್ಠ ತಂಡಗಳು - ವರ್ಲ್ಡ್ ಪ್ಯಾಡೆಲ್ ಲೀಗ್‌ಗೆ ವೇದಿಕೆ ಸಜ್ಜು

‘ವರ್ಲ್ಡ್ ಪ್ಯಾಡೆಲ್ ಲೀಗ್’ (WPL) ತನ್ನ ನಾಲ್ಕನೇ ಆವೃತ್ತಿಯೊಂದಿಗೆ ಮರಳುತ್ತಿದ್ದು, ಆಗಸ್ಟ್ 12 ರಿಂದ 16, 2026ರವರೆಗೆ ಮುಂಬೈನ ಡೋಮ್, ಎಸ್‌ವಿಪಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಲೀಗ್‌ನಲ್ಲಿ ಆರು ಬಲಿಷ್ಠ ಫ್ರಾಂಚೈಸಿ ತಂಡಗಳು ಮತ್ತು ವಿಶ್ವದ 36 ಅಗ್ರಗಣ್ಯ ಆಟಗಾರರು ಭಾಗವಹಿಸಲಿದ್ದು, ಭಾರತದಲ್ಲಿ ಪ್ಯಾಡೆಲ್ ಕ್ರೀಡೆಯ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಇದು ಬಿಂಬಿಸುತ್ತದೆ.
Read Full Story

03:37 PM (IST) Jul 09

ರೈಲ್ವೆ ಇಲಾಖೆಯಲ್ಲಿ ಸುರಕ್ಷತೆ ಬಲಪಡಿಸಲು ಮೆಗಾ ಭರ್ತಿ - 4,098 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸಚಿವಾಲಯ ಅಸ್ತು!

ರೈಲ್ವೆ ಸಚಿವಾಲಯವು ದೇಶಾದ್ಯಂತ ರೈಲ್ವೆ ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು 4,098 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದೆ. ಜೂನಿಯರ್ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಒಳಗೊಂಡ ಈ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯು ಜುಲೈ 21 ರಿಂದ ಪ್ರಾರಂಭವಾಗಲಿದೆ.

Read Full Story

02:46 PM (IST) Jul 09

Ind vs Eng 4th T20I - ಸಂಜು ಸ್ಯಾಮ್ಸನ್‌ ನಾಲ್ಕನೇ ಟಿ20 ಮ್ಯಾಚ್ ಆಡೋದು ಫಿಕ್ಸ್, ಹಾಗಿದ್ರೆ ಗೇಟ್‌ಪಾಸ್ ಯಾರಿಗೆ?

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಮಹತ್ವದ ಪಂದ್ಯಕ್ಕೆ ಬ್ರಿಸ್ಟೊಲ್‌ನ ಕೌಂಟಿ ಗ್ರೌಂಡ್ ಆತಿಥ್ಯ ವಹಿಸಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ, ಇಂದಿನ ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

 

Read Full Story

02:44 PM (IST) Jul 09

Toxic Movie - ಯಶ್‌, ಕಿಯಾರಾ ಅಡ್ವಾನಿ ಅತಿಯಾದ ರೊಮ್ಯಾನ್ಸ್; ಕೊನೆಗೂ ರಿಯಾಕ್ಟ್ ಮಾಡಿದ ಪತಿ Sidharth Malhotra

Yash Toxic Movie: ನಟ ಯಶ್‌ ನಟನೆಯ 'ಟಾಕ್ಸಿಕ್' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದೇ ತಡ, ಇಡೀ ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಬಿದ್ದಿದೆ! ನಟಿ ಕಿಯಾರಾ ಅಡ್ವಾಣಿ, ಯಶ್‌ ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸಿದ್ದಾರ್ಥ್‌ ಮಲ್ಹೋತ್ರ ಏನಂದ್ರು?

Read Full Story

01:51 PM (IST) Jul 09

ಜಸ್ಟ್ 76 ರನ್‌ಗೆ ಮಕಾಡೆ ಮಲಗಿದ್ಕೆ ಕುಂಬ್ಳೆ ಕಿಡಿ ಕಿಡಿ -ಮ್ಯಾನೇಜ್ಮೆಂಟ್ ವಿರುದ್ಧ ಸ್ಫೋಟಕ ಹೇಳಿಕೆ

ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಪ್ರಶ್ನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸತತ ಸೋಲುಗಳ ಬಗ್ಗೆ ಪ್ರಶ್ನೆ ಮಾಡಿರುವ ಅವರು, ಸೋಲು ಎಲ್ಲಿಂದ ಆಯಿತು ಅನ್ನೋದನ್ನು ವಿವರಿಸಿದ್ದಾರೆ. ಕುಂಬ್ಳೆ ಏನು ಹೇಳಿದರು ಅನ್ನೋದ್ರ ವಿವರ ಇಲ್ಲಿದೆ.. 

Read Full Story

01:22 PM (IST) Jul 09

55 ರೂ.ಯ Jio ಪ್ಲಾನ್‌ಗೆ ಏರ್‌ಟೆಲ್‌ನಿಂದ 15 ರೂ. ಪ್ಯಾಕ್; 168GB ಡೇಟಾ, 18 OTTಗೆ ಆಕ್ಸೆಸ್

ಜಿಯೋ ತನ್ನ ಗ್ರಾಹಕರಿಗಾಗಿ ಕೇವಲ 55 ರೂಪಾಯಿಯ ಹೊಸ ಎಂಟರ್‌ಟೈನ್‌ಮೆಂಟ್ ಪ್ಯಾಕ್ ಅನ್ನು ಪರಿಚಯಿಸಿದೆ. ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿಯೊಂದಿಗೆ 1000ಕ್ಕೂ ಅಧಿಕ ಟಿವಿ ಚಾನೆಲ್‌ಗಳ ಆಕ್ಸೆಸ್ ನೀಡುತ್ತದೆ. ಆದರೆ, ಇದರಲ್ಲಿ ಕಾಲಿಂಗ್ ಅಥವಾ ಡೇಟಾ ಸೌಲಭ್ಯಗಳು ಲಭ್ಯವಿರುವುದಿಲ್ಲ.
Read Full Story

01:18 PM (IST) Jul 09

DRDO Ghatak UCAV - ಅಮೆರಿಕದ B2 ಬಾಂಬರ್‌ಗೆ ಸೆಡ್ಡು, ರಾಡರ್‌ಗೆ ಸಿಗೋಲ್ಲ, ಪೈಲಟ್ ಬೇಕಿಲ್ಲ, ಇದರ ತಾಕತ್ತು ಹೇಗಿದೆ ಗೊತ್ತಾ?

DRDO Ghatak UCAV: ಭಾರತ ತನ್ನ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಹಲವು ಮಹತ್ವದ ಯೋಜನೆಗಳಿಗೆ ಕೈಹಾಕಿದೆ. ಈಗ DRDO ಅತ್ಯಾಧುನಿಕ ಸ್ಟೆಲ್ತ್ ಡ್ರೋನ್ (UCAV) ಅಭಿವೃದ್ಧಿಗೆ ವೇಗ ನೀಡಿದೆ. ಪೈಲೆಟ್ ಬೇಕಿಲ್ಲ, ರಾಡಾರ್ ಕಣ್ಣಿಗೂ ಸಿಗೋಲ್ಲ, ಹೇಗಿದೆ ಗೊತ್ತಾ ಘಾತಕ್ ತಾಕತ್ತು?

Read Full Story

01:16 PM (IST) Jul 09

30 ನಿಮಿಷ ಸಿಂಹದ ಕೈಗೆ ಸಿಕ್ಕರೂ, ಬದುಕಿ ಬಂದ ರೈತನ ಮೈನವಿರೇಳುವ ಸ್ಟೋರಿ- ಬೆಚ್ಚಿಬೀಳೋ ವಿಡಿಯೋ ವೈರಲ್​

ಗುಜರಾತ್‌ನ ಭಾವನಗರದಲ್ಲಿ, ರೈತನೊಬ್ಬನ ಮೇಲೆ ಸಿಂಹವೊಂದು ದಾಳಿ ಮಾಡಿ ಸುಮಾರು 30 ನಿಮಿಷಗಳ ಕಾಲ ಆತನ ಕಾಲನ್ನು ದವಡೆಯಲ್ಲಿ ಹಿಡಿದುಕೊಂಡಿತ್ತು. ಆದರೆ, ಆ ರೈತ ಅಸಾಧಾರಣ ಧೈರ್ಯ ಪ್ರದರ್ಶಿಸಿ, ಸಿಂಹವನ್ನು ಶಾಂತಗೊಳಿಸಲು ಪ್ರಯತ್ನಿಸಿ, ಅಂತಿಮವಾಗಿ ಅದರಿಂದ ಜೀವಸಹಿತ ಪಾರಾಗಿ ಬಂದಿದ್ದಾನೆ.
Read Full Story

12:58 PM (IST) Jul 09

2ನೇ ಬಾರಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಲರ್ಸ್'​ ಸ್ವಾತಿ - ಖ್ಯಾತ ನಿರ್ದೇಶಕನ ಜೊತೆ ಮದುವೆ

'ಕಲರ್ಸ್' ಖ್ಯಾತಿಯ ನಟಿ ಸ್ವಾತಿ ರೆಡ್ಡಿ ಅವರು 'ಮಂತ್ ಆಫ್ ಮಧು' ಚಿತ್ರದ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಂದಿಗೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಪೈಲಟ್ ವಿಕಾಸ್ ವಾಸು ಅವರಿಂದ ಡಿವೋರ್ಸ್​ ಪಡೆದಿದ್ದ ಸ್ವಾತಿ, ಇದೀಗ ತಮ್ಮದೇ ಸಿನಿಮಾ ನಿರ್ದೇಶಕರ ಕೈಹಿಡಿದಿದ್ದಾರೆ.

Read Full Story

12:22 PM (IST) Jul 09

India-Australia Summit - ಭಾರತ-ಆಸ್ಟ್ರೇಲಿಯಾ ದೋಸ್ತಿಗೆ ಹೊಸ ಬಲ, ಈ ಒಪ್ಪಂದಿಂದ ಚೀನಾ-ಪಾಕಿಸ್ತಾನಕ್ಕೆ ನಡುಕ!

ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್ ಅವರ ವಾರ್ಷಿಕ ಶೃಂಗಸಭೆ ಮುಕ್ತಾಯ. ಉಭಯ ದೇಶಗಳ ವ್ಯೂಹಾತ್ಮಕ ಪಾಲುದಾರಿಕೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ರಕ್ಷಣೆ, ಭದ್ರತೆ, ವ್ಯಾಪಾರ, ಇಂಧನ, ತಂತ್ರಜ್ಞಾನ, ಮುಕ್ತ ಇಂಡೋ-ಪೆಸಿಫಿಕ್ ವಲಯದ ಸಹಕಾರ ಈ ಸಭೆಯ ಪ್ರಮುಖ ಅಜೆಂಡಾಗಳಾಗಿದ್ದವು.

Read Full Story

12:12 PM (IST) Jul 09

ಮಿಯಾಮಿ ವ್ಯಾಲಿ ಆಸ್ಪತ್ರೆಯ 19 ದಾದಿಯರು ಏಕಕಾಲಕ್ಕೆ ಗರ್ಭಿಣಿ! ಹಳೆ ದಾಖಲೆ ಪುಡಿ ಪುಡಿ!

ಅಮೆರಿಕದ ಮಿಯಾಮಿ ವ್ಯಾಲಿ ಆಸ್ಪತ್ರೆಯ ಹೆರಿಗೆ ವಿಭಾಗದ 19 ದಾದಿಯರು ಏಕಕಾಲದಲ್ಲಿ ಗರ್ಭಿಣಿಯಾಗುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 2019ರಲ್ಲಿ 11 ದಾದಿಯರು ಗರ್ಭಿಣಿಯಾಗಿದ್ದ ದಾಖಲೆಯನ್ನು ಮುರಿದಿರುವ ಈ ಘಟನೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

12:00 PM (IST) Jul 09

ಭಾರತದ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ನಮ್ಮ ಬೆಂಗಳೂರು ಅಲ್ಲ, ಮುಂಬೈ ಕೂಡಾ ಅಲ್ಲ..!

ಬೆಂಗಳೂರು: ಭಾರತದ ಅತ್ಯಂತ ಸಂಪತ್ಭರಿತ ಪ್ರದೇಶ ಯಾವುದು ಎಂದರೆ ಥಟ್ಟನೆ ನೆನಪಾಗುವುದು ನಮ್ಮ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು, ವಾಣಿಜ್ಯ ನಗರಿ ಮುಂಬೈ ಹಾಗೆ ರಾಷ್ಟ್ರ ರಾಜಧಾನಿ ನವದೆಹಲಿ. ಆದರೆ ದೇಶದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

 

Read Full Story

11:33 AM (IST) Jul 09

ನಕಲಿ ಶಿಕ್ಷಕರ ವಿರುದ್ಧ ಬೃಹತ್ ಕಾರ್ಯಾಚರಣೆ.. ಒಟ್ಟು 3035 ಶಿಕ್ಷಕರು ವಜಾ

ಬಿಹಾರದಲ್ಲಿ ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿ ಶಿಕ್ಷಕರಾಗಿ ನೇಮಕಗೊಂಡಿದ್ದ 3,035 ಮಂದಿಯನ್ನು ಶಿಕ್ಷಣ ಇಲಾಖೆ ಸೇವೆಯಿಂದ ವಜಾಗೊಳಿಸಲು ನಿರ್ಧರಿಸಿದೆ. 2006 ಮತ್ತು 2015ರ ನಡುವೆ ನಡೆದ ಈ ನೇಮಕಾತಿ ಹಗರಣದಲ್ಲಿ, ತಪ್ಪಿತಸ್ಥರಿಂದ ಅವರು ಪಡೆದ ಸಂಪೂರ್ಣ ಸಂಬಳವನ್ನು ಬಡ್ಡಿ ಸಮೇತ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ.
Read Full Story

11:03 AM (IST) Jul 09

14 ವರ್ಷದ ಹಿಂದೆ ಹೆತ್ತವರ ಬಲಿ ಪಡೆದಿದ್ದ ಆನೆ, ಈಗ ಮತ್ತೆ ಸೇಡು ತೀರಿಸಿಕೊಂಡಿದೆ, ಇಲ್ಲಿವರೆಗೆ 25 ಮಂದಿ ಬಲಿ

ಪ್ರಾಣಿಗಳು ಸೇಡು ತೀರಿಸಿಕೊಳ್ಳುತ್ವಾ? ಒಂಟಿ ಸಲಗವೊಂದು (Elephant attack) 14 ವರ್ಷದಲ್ಲಿ ಒಂದೇ ಕುಟುಂಬದ ಮೇಲೆ 2 ಬಾರಿ ದಾಳಿ ನಾಲ್ವರ ಬಲಿ ಪಡೆದಿದೆ. ಈ ಕುಟುಂಬದ ಮೇಲೆ ಅದೇನು ದ್ವೇಷ ಇತ್ತೋ ಗೊತ್ತಿಲ್ಲ. ಆನೆ ದಾಳಿಗೆ ಸಂಬಂಧಿಸಿದ ರೋಚಕ ಸ್ಟೋರಿ ಇಲ್ಲಿದೆ.

Read Full Story

10:54 AM (IST) Jul 09

ಇಂಗ್ಲೆಂಡ್ ಎದುರಿನ ನಾಲ್ಕನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಆ ಒಂದು ಬದಲಾವಣೆ ಮಾಡಿ ಎಂದ ಪಾರ್ಥಿವ್ ಪಟೇಲ್!

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಭಾರತ, ಸರಣಿ ಉಳಿಸಿಕೊಳ್ಳಲು ನಾಲ್ಕನೇ ಪಂದ್ಯ ಗೆಲ್ಲಲೇಬೇಕಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್, ತಂಡದ ಬ್ಯಾಟಿಂಗ್ ಸಮತೋಲನಕ್ಕಾಗಿ ಶಿವಂ ದುಬೆ ಬದಲು ಬಲಗೈ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Read Full Story

10:16 AM (IST) Jul 09

ಫಿಫಾ ವಿಶ್ವಕಪ್‌ನಲ್ಲಿ ಹೆಚ್ಚಾದ ರೆಫ್ರಿ ವಿವಾದ - ಟೂರ್ನಿಯೇ ಫಿಕ್ಸ್‌ ಆಗಿದೆ ಎಂದ ಈಜಿಫ್ಟ್ ಆಟಗಾರ!

ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ರೆಫ್ರಿಗಳ ತೀರ್ಪುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಅರ್ಜೆಂಟೀನಾ-ಈಜಿಪ್ಟ್‌ ಪಂದ್ಯದಲ್ಲಿನ ತಾರತಮ್ಯದ ಆರೋಪಗಳ ಬೆನ್ನಲ್ಲೇ, ಫ್ರಾನ್ಸ್‌-ಮೊರಾಕ್ಕೊ ಕ್ವಾರ್ಟರ್ ಫೈನಲ್‌ ಪಂದ್ಯಕ್ಕೆ ಐವರು ಅರ್ಜೆಂಟೀನಾದ ರೆಫ್ರಿಗಳನ್ನೇ ನೇಮಿಸಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.
Read Full Story

10:04 AM (IST) Jul 09

FIFA World Cup 2026 - ಬಲಿಷ್ಠ 8 ತಂಡಗಳ ನಡುವೆ ಇನ್ನು ಕ್ವಾರ್ಟರ್‌ ಕದನ

23ನೇ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಅಂತಿಮ ಹಂತ ತಲುಪಿದ್ದು, 8 ತಂಡಗಳು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿವೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಫ್ರಾನ್ಸ್‌, ಇಂಗ್ಲೆಂಡ್‌, ಸ್ಪೇನ್‌ ಸೇರಿದಂತೆ ಬಲಿಷ್ಠ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಲಿದ್ದು, ಈ ಹಂತದಲ್ಲಿ ಯುರೋಪ್‌ನ 6 ತಂಡಗಳು ಪ್ರಾಬಲ್ಯ ಮೆರೆದಿವೆ.
Read Full Story

09:46 AM (IST) Jul 09

UDISE+ 2025-26 Report - ಸರ್ಕಾರಿ ಶಾಲೆ ದಾಖಲಾತಿ 2 ವರ್ಷದಲ್ಲಿ 86 ಲಕ್ಷದಷ್ಟು ಇಳಿಕೆ!

ಶೈಕ್ಷಣಿಕ ವರ್ಷ 2023-24 ಮತ್ತು 2025-26ರ ನಡುವೆ (2 ವರ್ಷದಲ್ಲಿ) ದೇಶದಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 86 ಲಕ್ಷದಷ್ಟು ಇಳಿಕೆಯಾಗಿದೆ. ಅತ್ತ ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ 88 ಮಕ್ಕಳು ಸೇರಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

Read Full Story

09:39 AM (IST) Jul 09

ಆಪ್ತ ಸ್ನೇಹಿತನ ಮೃತದೇಹ ಹೊತ್ತು ಕಣ್ಣೀರು ಇಟ್ಟ ರಶೀದ್ ಖಾನ್.. ಫೋಟೋಗಳು

ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಪಾರ್ಥಿವ ಶರೀರ ಕಾಬೂಲ್‌ಗೆ ತಲುಪಿತು. ಕುಟುಂಬಸ್ಥರು ಮತ್ತು ಸಹ ಆಟಗಾರರು ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.

Read Full Story

08:17 AM (IST) Jul 09

US Iran Tension again - 'ಸ್ವಲ್ಪ ಸಮಯದ ಹಿಂದೆ ನನಗೆ ಕರೆ ಬಂತು..' ಇರಾನ್ ಮೇಲೆ ದಾಳಿ ಬೆನ್ನಲ್ಲೇ ಟ್ರಂಪ್ ಶಾಕಿಂಗ್ ಹೇಳಿಕೆ!

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ, ಅಮೆರಿಕವು ಇರಾನ್ ವಿರುದ್ಧ ಕ್ಷಿಪಣಿ ದಾಳಿಗಳನ್ನು ಆರಂಭಿಸಿದೆ. ಈ ಮಿಲಿಟರಿ ಕ್ರಮಗಳು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತಿನ ಸಮರಕ್ಕೂ ಕಾರಣವಾಗಿದೆ.
Read Full Story

07:37 AM (IST) Jul 09

Belagavi border dispute - ಕರ್ನಾಟಕದಲ್ಲಿನ ಮರಾಠಿ ಹೋರಾಟಗಾರರ ಪರ ಮಹಾರಾಷ್ಟ್ರ ಸಿಎಂ ಘೋಷಣೆ! ಸುಪ್ರೀಂಗೆ ಅರ್ಜಿ

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಸುಪ್ರೀಂಕೋರ್ಟ್‌ನಲ್ಲಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ, ಕರ್ನಾಟಕದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ

Read Full Story

More Trending News