LIVE NOW
Published : Nov 08, 2026, 07:28 AM ISTUpdated : Nov 08, 2026, 07:59 AM IST

India Latest News Live: 100ನೇ ವರ್ಷಕ್ಕೆ ಅಡ್ವಾಣಿ; ರಾಷ್ಟ್ರ ಮೊದಲು ತತ್ವದ ಮೇಲೆ ಪಕ್ಷಕ್ಕೆ ಬುನಾದಿ ಹಾಕಿದ ಧೀಮಂತ

ಸಾರಾಂಶ

ಕೊಚ್ಚಿ: ಎಸ್‌ಐಆರ್‌ ಪ್ರಕ್ರಿಯೆ ರದ್ದು ಮಾಡಬೇಕು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು ಆಗ್ರಹಿಸಿ ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ಕಾರ್ಯಕರ್ತರು ಶನಿವಾರ ಪಕ್ಷದ ಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ನಟ ಪ್ರಕಾಶ್‌ ರಾಜ್‌ ನೇತೃತ್ವದಲ್ಲಿ ಕೊಚ್ಚಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಈ ವೇಳೆ ದೀಪ್ಕೆ ಅವರು, ‘ಜ್ಞಾನೇಶ್‌ ಪದತ್ಯಾಗದವರೆಗೆ ಹೋರಾಟ ನಡೆಯಲಿದೆ ಎಂದರು.

ಕೊಚ್ಚಿಯಲ್ಲಿ ‘ಜಂತರ್‌ಮಂತರ್‌ ‘ಅಭಿಯಾನದ ಭಾಗವಾಗಿ ಸಿಜೆಪಿ ಮರೈನ್‌ ಡ್ರೈವ್‌ನಲ್ಲಿ ಪ್ರತಿಭಟನಾ ರ್‍ಯಾಲಿ ಶನಿವಾರ ಹಮ್ಮಿಕೊಂಡಿತ್ತು. ಇದರಲ್ಲಿ ಸುಮಾರು 500 ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಪ್ರತಿಭಟನಾಕಾರರು ರಾಷ್ಟ್ರ ಧ್ವಜಗಳನ್ನು ಹಿಡಿದು ಜ್ಞಾನೇಶ್‌ ಕುಮಾರ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ದೀಪ್ಕೆ, ‘ಭಾರತದಲ್ಲಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆ ಸಿಗುವವರೆಗೂ ಜ್ಞಾನೇಶ್‌ ಕುಮಾರ್‌ ಅವರ ವಿರುದ್ಧ ಹೋರಾಟ ಮುಂದುವರೆಯುತ್ತದೆ. ಏಕೆಂದರೆ ಜ್ಞಾನೇಶ್‌ ಅವರ ಅಡಿಯಲ್ಲಿ ಚುನಾವಣೆಗಳನ್ನು ನಂಬಲು ಸಾಧ್ಯವಿಲ್ಲ. ಅದನ್ನು ಕೇವಲ ಒಂದು ಪಕ್ಷ ಸಹಾಯ ಆಗುವ ರೀತಿ ಮಾಡಿ ವಂಚಿಸುತ್ತಾರೆ’ ಎಂದು ಕಿಡಿಕಾರಿದರು.

07:59 AM (IST) Nov 08

100ನೇ ವರ್ಷಕ್ಕೆ ಅಡ್ವಾಣಿ; ರಾಷ್ಟ್ರ ಮೊದಲು ತತ್ವದ ಮೇಲೆ ಪಕ್ಷಕ್ಕೆ ಬುನಾದಿ ಹಾಕಿದ ಧೀಮಂತ

ಎಲ್.ಕೆ. ಅಡ್ವಾಣಿಯವರ 100ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಬರೆದ ಲೇಖನ ಇದು. ಅಡ್ವಾಣಿಯವರ ನಾಯಕತ್ವ, ಸರಳತೆ, ರಾಮಮಂದಿರ ರಥಯಾತ್ರೆ ಮತ್ತು ದೇಶದ ಮೇಲಿನ ಅವರ ಬದ್ಧತೆಯನ್ನು ಇಲ್ಲಿ ಸ್ಮರಿಸಲಾಗಿದೆ.

Read Full Story

More Trending News