ನವದೆಹಲಿ: ಇತ್ತೀಚೆಗಷ್ಟೇ ಆನ್‌ಲೈನ್‌ನಲ್ಲಿ ಸ್ಥಾಪನೆಗೊಂಡು ಭಾರೀ ಸದ್ದು ಮಾಡಿದ್ದ ಯುವ ನೇತಾರ ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ ಶನಿವಾರ ಮೊದಲ ಬಾರಿ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ನೀಟ್ ಹಾಗೂ ಇತರ ಪರೀಕ್ಷಾ ಅಕ್ರಮ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೀಪ್ಕೆ ನೇತೃತ್ವದಲ್ಲಿ ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಿದರು. ಈ ವೇಳೆ ಲಡಾಖ್ ಹೋರಾಟಗಾರ ಸೋನಂ ವಾಂಗ್ಚುಕ್ ಸಾಥ್ ನೀಡಿದರು.

10:58 PM (IST) Jun 07
ನಾಸಾ ಮಹತ್ವದ ಎಚ್ಚರಿಕೆ ನೀಡಿದೆ. ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಜೂನ್ 8 ರಂದು ಭೂಮಿಗೆ ಸೌರ ಬಿರುಗಾಳಿ ಅಪ್ಪಳಿಸಲಿದೆ. ಭಾರತದ ಕೆಲ ಪ್ರದೇಶಗಳಿಗೂ ಸೌರ ಕಾಂತೀಯ ಬಿರುಗಾಳಿ ಭೀತಿ ಇದೆ ಎಂದು ನಾಸಾ ಮಹತ್ವದ ಎಚ್ಚರಿಕೆ ನೀಡಿದೆ.
10:22 PM (IST) Jun 07
ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಇದೀಗ ಇರುವೆ ಪಕ್ಷಗಳು ಹುಟ್ಟಿಕೊಂಡಿದೆ. ಬಿಜೆಪಿ ಮಾಜಿ ನಾಯಕ ಇದೀಗ ಚೀಂಟಿ ಜನತಾ ಪಾರ್ಟಿ ಆರಂಭಿಸಿದ್ದಾರೆ. 2027ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ.
09:32 PM (IST) Jun 07
ಎಸ್.ಎಸ್. ರಾಜಮೌಳಿ ಅವರ ಮುಂಬರುವ ಮಹೋನ್ನತ ಸಿನಿಮಾ 'ವಾರಣಾಸಿ' ಬಗ್ಗೆ ಹೊಸ ಕ್ರೇಜ್ ಶುರುವಾಗಿದೆ. ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್, ರಾಮಾಯಣದಿಂದ ಸ್ಫೂರ್ತಿ ಪಡೆದ 30 ನಿಮಿಷಗಳ ಯುದ್ಧದ ದೃಶ್ಯದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.
09:00 PM (IST) Jun 07
ರಾಷ್ಟ್ರ ಪ್ರಶಸ್ತಿ ವಿಜೇತನ ನಟ ಸಲೀಂ ಕುಮಾರ್ ಅಂತ್ಯಕ್ರಿಯೆ ವೇಳೆ ನೋವಿನ ಘಟನೆ ನಡೆದಿದೆ. ಕುಟುಂಬಕ್ಕೆ ಅಂತಿಮ ನಮನ ಸಲ್ಲಿಸಲು ಪಾಪರಾಜಿಗಳು ಬಿಡದೆ ಮುಗಿಬಿದ್ದ ಘಟನೆ ನಡೆದಿದೆ. ಇದರಿಂದ ಸಲೀಂ ಮಗ ಸಹನೆ ಕಳೆದುಕೊಂಡು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
08:14 PM (IST) Jun 07
'ಪೆದ್ದಿ' ಚಿತ್ರಕ್ಕೂ ಪೈರಸಿ ಕಾಟ ತಪ್ಪಿಲ್ಲ. ಬಿಡುಗಡೆಗೂ ಮುನ್ನ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ರಾಮ್ ಚರಣ್ ತಂಡಕ್ಕೆ ಶಾಕ್ ತಪ್ಪಲಿಲ್ಲ. 'ಪೆದ್ದಿ' ಚಿತ್ರದ ಎಚ್‌ಡಿ ಗುಣಮಟ್ಟದ ಪೈರಸಿ ಕಾಪಿ ಲೀಕ್ ಆಗಿದೆ. ಈಗ ನಿರ್ಮಾಪಕರು ಏನು ಮಾಡಲಿದ್ದಾರೆ?
08:11 PM (IST) Jun 07
ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೇವಲ ಲಾರೆನ್ಸ್ ಹೆಸರಷ್ಟೇ ಕೇಳಿಬರುತ್ತಿಲ್ಲ. ಈ ರೇಸ್‌ನಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ತ್ರಿಶಾ ಮತ್ತು ಮಾಜಿ ಐಎಎಸ್ ಅಧಿಕಾರಿ ಇರೈಯನ್ಬು ಅವರ ಹೆಸರುಗಳು ಕೂಡ ಮುಂಚೂಣಿಯಲ್ಲಿವೆ. ಒಂದು ವೇಳೆ ತ್ರಿಶಾ ಮತ್ತು ಲಾರೆನ್ಸ್ ಇಬ್ಬರೂ ಅಖಾಡಕ್ಕೆ ಇಳಿದರೆ?
08:10 PM (IST) Jun 07
ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕನಾದ ಹಿಂದಿನ ರಹಸ್ಯ ಬಯಲಾಗಿದೆ.ಬಿಸಿಸಿಐ ಆಯ್ಕೆ ಸಮಿತಿ ಜೊತೆಗಿನ ಮಾತುಕತೆಯೂ ಬಹಿರಂಗವಾಗಿದೆ. ಸೂರ್ಯಕುಮಾರ್ ಯಾದವ್ ಬದಲು ಅಯ್ಯರ್‌ಗೆ ನಾಯಕತ್ವ ಸಿಕ್ಕಿದ ಕಹಾನಿ.
07:22 PM (IST) Jun 07
ತಮ್ಮ 'ಭಾರತ್ ಭಾಗ್ಯ ವಿಧಾತ' ಚಿತ್ರದ ಪ್ರಚಾರದ ವೇಳೆ ಮಾತನಾಡಿರುವ ನಟಿ ಕಂಗನಾ ರಣಾವತ್, ನರ್ಸ್‌ಗಳ ಸದ್ಯದ ಯೂನಿಫಾರ್ಮ್ ಬ್ರಿಟಿಷರ ಕಾಲದ ಸಂಕೇತವಾಗಿದೆ. ಇದನ್ನು 'ಭಾರತೀಕರಣ'ಗೊಳಿಸಬೇಕು. ನರ್ಸ್‌ಗಳ ಇಷ್ಟದಂತೆ ಹೊಸ ಡ್ರೆಸ್ ಕೋಡ್ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
06:26 PM (IST) Jun 07
ಮೋಹನ್‌ಲಾಲ್ ಅಭಿನಯದ 'ದೃಶ್ಯಂ 3' ಕನ್ನಡ ಮತ್ತು ತೆಲುಗಿನಲ್ಲಿ ರಿಮೇಕ್ ಆಗದಿರುವ ಕಾರಣವನ್ನು ನಿರ್ದೇಶಕ ಜೀತು ಜೋಸೆಫ್ ಬಹಿರಂಗಪಡಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಸ್ಥಳೀಯ ಸ್ಟಾರ್‌ಗಳ ಇಮೇಜ್‌ಗೆ..
06:09 PM (IST) Jun 07
1997ರಲ್ಲಿ 'ಯಶ್ವಂತ್' ಸಿನಿಮಾ ಶೂಟಿಂಗ್ ವೇಳೆ, ಅಳುವ ದೃಶ್ಯ ಸಹಜವಾಗಿ ಬರಲಿ ಅಂತ ಸಹನಟ ನಾನಾ ಪಾಟೇಕರ್ ನನ್ನ ಕೆನ್ನೆಗೆ ಹೊಡೆದಿದ್ದರು. ಇದಕ್ಕೆ ಪ್ರತಿಯಾಗಿ ನಾನೂ ಅವರ ಕೆನ್ನೆಗೆ ಹೊಡೆದೆ ಎಂದು ನಟಿ ಮಧುಬಾಲಾ ಇದೀಗ ಬಹಿರಂಗಪಡಿಸಿದ್ದಾರೆ.
05:04 PM (IST) Jun 07
ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾಕ್ಕೆ ವಿವಾದಗಳು ಬೆನ್ನು ಬಿಡುತ್ತಿಲ್ಲ. ಜಾನ್ವಿ ನಟನೆಯ ದೃಶ್ಯವೊಂದರ ಬಗ್ಗೆ ಎದ್ದಿದ್ದ ಗಲಾಟೆ ತಣ್ಣಗಾಗುವ ಮುನ್ನವೇ, ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಕೊರಿಯೋಗ್ರಾಫರ್ ಚಿತ್ರತಂಡದಲ್ಲಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
05:02 PM (IST) Jun 07
04:24 PM (IST) Jun 07
ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುವುದರ ಜೊತೆಗೆ, ಒಂದು ದೊಡ್ಡ ವಿವಾದದ ಕೇಂದ್ರಬಿಂದು ಕೂಡ ಆಗಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ಅವರ..
04:02 PM (IST) Jun 07
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ 10 ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡಿದ್ದು, ಆಭರಣ ಖರೀದಿಸುವವರು ಇದೀಗ ನಿಧಾನವಾಗಿ ಬಂಗಾರದ ಅಂಗಡಿಗಳತ್ತ ಮುಖ ಮಾಡಲಾರಂಭಿಸಿದ್ದಾರೆ.
03:39 PM (IST) Jun 07
ಕಣ್ಣು ಬಿಟ್ಟ ಕಾಜೋಲ್ ಗೆ ತಾನು ಎಲ್ಲಿದ್ದೇನೆ ಎನ್ನುವುದೇ ಮರೆತು ಹೋಗಿತ್ತು. ಅವರು ತಮ್ಮ ಸುತ್ತಲೂ ಇದ್ದವರನ್ನು ವಿಚಿತ್ರವಾಗಿ ನೋಡತೊಡಗಿದರು. ಆಶ್ಚರ್ಯವೆಂದರೆ, ತನ್ನ ಆಪ್ತ ಸ್ನೇಹಿತ ಶಾರುಖ್ ಖಾನ್ ಅವರನ್ನೂ ಕಾಜೋಲ್ ಗುರುತಿಸಲಿಲ್ಲ. ಆದರೆ, ಆ ನಟ ಮಾತ್ರ ನೆನಪಿನಲ್ಲಿದ್ದರು!
03:23 PM (IST) Jun 07
Instagram subscription price: ಇನ್‌ಸ್ಟಾಗ್ರಾಮ್ ಹೊಸ ಫೀಚರ್ ಬಿಟ್ಟಿದೆ. ಇದಕ್ಕೆ ಭಾರತದಲ್ಲಿ ಭಾರತದಲ್ಲಿ ಇನ್‌ಸ್ಟಾಗ್ರಾಮ್ ಪ್ಲಸ್ ಎಂಬ ಹೊಸ Subscription ಕೊಡಲಾಗ್ತಿದೆ. ಜಾಹೀರಾತುಗಳ ಮೇಲೆ ಹೆಚ್ಚು ಡಿಪೆಂಡ್ ಆಗೋದು ಬೇಡ ಎಂದು ಹೀಗೆ ಮಾಡಲಾಗಿದೆ. ಹಾಗಾದರೆ ಇದರಿಂದ ಏನು ಲಾಭ ಸಿಗುತ್ತೆ?
03:11 PM (IST) Jun 07
ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಆಯ್ಕೆಯಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ನಡುವೆ ವೈಭವ್ ನೀಡಿದ ಹೇಳಿಕೆಯೂ ಭಾರಿ ವೈರಲ್ ಆಗುತ್ತಿದೆ. ಅದರಲ್ಲೂ ಐಪಿಎಲ್ ಹರಾಜಿನ ಕುರತು ಸ್ಫೋಟಕ ಹೇಳಿಕೆ ನೀಡಿದ್ದಾರೆ.
01:51 PM (IST) Jun 07
ಮುಂಬೈ: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಶ್ರೇಯಸ್ ಅಯ್ಯರ್‌ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ.
12:55 PM (IST) Jun 07
12:19 PM (IST) Jun 07
11:32 AM (IST) Jun 07
ಕೆಲವರು ಗುಲಾಬ್ ಜಾಮೂನ್ ಜೊತೆ ಐಸ್‌ಕ್ರೀಂ ಸವಿಯುತ್ತಾರೆ, ಇನ್ನು ಕೆಲವರು ಫ್ರೂಟ್ ಸಲಾಡ್ ಜೊತೆ ಮಿಕ್ಸ್ ಮಾಡುತ್ತಾರೆ. ಆದರೆ, ಬಿಸಿ ಬಿಸಿ ಅನ್ನಕ್ಕೆ ಐಸ್‌ಕ್ರೀಂ ಹಾಕಿಕೊಂಡು ತಿನ್ನುವವರನ್ನು ಎಲ್ಲಾದರೂ ನೋಡಿದ್ದೀರಾ? ಹೌದು, ಈ ನಟಿ ಅನ್ನದ ಜೊತೆ ಐಸ್ ಕ್ರೀಂ ಮಿಕ್ಸ್ ಮಾಡಿ ತಿಂತಾರೆ!
11:05 AM (IST) Jun 07
ಬೆಂಗಳೂರು: ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್, ಟಿ20 ತಂಡದಿಂದ ಹೊರಬಿದ್ದಿದ್ದಾರೆ. ಇದರ ಜತೆಗೆ ಭಾರತ ಟಿ20 ತಂಡದ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಇದೆಲ್ಲದರ ನಡುವೆ ಆಯ್ಕೆ ಸಮಿತಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನದು, ನೋಡೋಣ ಬನ್ನಿ.
10:09 AM (IST) Jun 07
ಸೈಬರ್ ಕಳ್ಳರು '2 ನಿಮಿಷದ ವಿಡಿಯೋ' ಎಂಬ ಹೆಸರಿನಲ್ಲಿ ಲಿಂಕ್ ಕಳುಹಿಸಿ ಹೊಸ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್‌ಗೆ ಮಾಲ್‌ವೇರ್ ಸೇರಿ ಬ್ಯಾಂಕ್ ಖಾತೆಯಲ್ಲಿನ ಹಣ ಸಂಪೂರ್ಣ ಖಾಲಿಯಾಗುವ ಅಪಾಯವಿದೆ.
09:48 AM (IST) Jun 07
ಮುಂಬೈ: ಜೂನ್ 13ರಿಂದ ಆರಂಭವಾಗಲಿರುವ ಆಫ್ಘಾನಿಸ್ತಾನ ಎದರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಕೊಹ್ಲಿ ಸ್ಥಾನಕ್ಕೆ ಇದೀಗ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ತಂಡ ಕೂಡಿಕೊಂಡಿದ್ದಾರೆ.
09:29 AM (IST) Jun 07
07:44 AM (IST) Jun 07
06:32 AM (IST) Jun 07
ಪ್ರಧಾನಿ ನರೇಂದ್ರ ಮೋದಿಯವರ ಯೋಗ ಗುರು ಹಾಗೂ ಬೆಂಗಳೂರಿನ ಎಸ್-ವ್ಯಾಸ ಸಂಸ್ಥಾಪಕರಾದ ಡಾ. ಎಚ್. ಆರ್. ನಾಗೇಂದ್ರ ಅವರು ಜೂ.21 ರಂದು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ.
06:23 AM (IST) Jun 07
06:04 AM (IST) Jun 07