ಢಾಕಾ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಮನೆ ಎದುರು ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಜಮಾಯಿಸಿ ಯೂನಸ್ ವಿರುದ್ಧ ಪ್ರತಿಭಟನೆ ನಡೆಸಿದರು. ಪರಿಣಾಮ ಭದ್ರತಾ ಸಿಬ್ಬಂದಿ ಜೊತೆ ಸಂಘರ್ಷದಲ್ಲಿ 15 ಮಂದಿ ತೀವ್ರವಾಗಿ ಗಾಯಗೊಂಡರು.
ಬಾಂಗ್ಲಾ ಸರ್ಕಾರಿ ನೌಕರರಿಗೆ 7ನೇ ರಾಷ್ಟ್ರೀಯ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕೆಂದು ಢಾಕಾದ ಜಮುನಾದಲ್ಲಿರುವ ಯೂನಸ್ ಅಧಿಕೃತ ನಿವಾಸಕ್ಕೆ ನೌಕರರು ಮುತ್ತಿಗೆ ಹಾಕಿದರು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಜನರನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ 15 ಜನರು ಗಾಯಗೊಂಡಿದ್ದಾರೆ.
11:41 PM (IST) Feb 07
ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್‌ನ 100ನೇ ವರ್ಷದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಮಾತನಾಡಿದ RSS ಮುಖ್ಯಸ್ಥ ಸಂಘಟನೆ ಯಾರ ವಿರುದ್ಧವೂ ಅಲ್ಲ ಮತ್ತು ಅಧಿಕಾರ ಬಯಸುವುದಿಲ್ಲ ಎಂದು ಹೇಳಿದರು.
10:51 PM (IST) Feb 07
ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಅಜೇಯ 84 ರನ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಲದಿಂದ, ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿತು. 162 ರನ್‌ಗಳ ಗುರಿ ಬೆನ್ನತ್ತಿದ ಯುಎಸ್‌ಎ 132 ರನ್‌ಗಳಿಗೆ ತನ್ನ ಹೋರಾಟ ಮುಗಿಸಿತು.
10:10 PM (IST) Feb 07
ಉತ್ತರ ಪ್ರದೇಶದಲ್ಲಿ, ರೀಲ್ಸ್ ಮಾಡುವಾಗ ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ನೇಣು ಹಾಕಿಕೊಳ್ಳುವಂತೆ ವಿಡಿಯೋ ಚಿತ್ರೀಕರಿಸುತ್ತಿದ್ದಾಗ, ಆಕೆ ನಿಂತಿದ್ದ ಸ್ಟೂಲ್ ಜಾರಿ ನೇಣು ಬಿಗಿಗೊಂಡು ದುರಂತ ಸಂಭವಿಸಿದ್ದು, ಆಕೆಯ ಸಾವಿನಿಂದ ನಾಲ್ಕು ವರ್ಷದ ಮಗು ತಬ್ಬಲಿಯಾಗಿದೆ.
10:08 PM (IST) Feb 07
ದೇಶದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ಆರ್ಥಿಕ ನಷ್ಟ ಉಂಟುಮಾಡಿದ ಆರೋಪದ ಮೇಲೆ ಡಿವೈಎಸ್‌ಪಿ ಕಲ್ಪನಾ ವರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ಗಳಿಕೆ, ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ.
09:29 PM (IST) Feb 07
ವ್ಯಾಲೆಂಟೈನ್ಸ್ ವೀಕ್ 2026 ವಿಶೇಷ: ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್‌ನ ಅತ್ಯಂತ ವಿಶೇಷ ದಿನ. ನಿಮ್ಮ ಪ್ರಪೋಸಲ್ ಸ್ಮರಣೀಯವಾಗಬೇಕಾದರೆ, ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಬಾರದು. ಆ 5 ತಪ್ಪುಗಳು ಯಾವುವು ತಿಳಿಯೋಣ ಬನ್ನಿ
09:13 PM (IST) Feb 07
09:03 PM (IST) Feb 07
2026ರ ಒಳಗೆ ನಕ್ಸಲ್ ಚಟುವಟಿಕೆಯಿಂದ ದೇಶವನ್ನು ಮುಕ್ತ ಮಾಡುವ ಪಣ ತೊಟ್ಟಿದ್ದು, ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ಭಾಗವಾಗಿ ಛತ್ತೀಸ್‌ಗಢದಲ್ಲಿ 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರು ಶರಣಾಗಿದ್ದಾರೆ. ಶರಣಾದವರಲ್ಲಿ 34 ಮಹಿಳೆಯರೂ ಸೇರಿದ್ದಾರೆ.
06:58 PM (IST) Feb 07
06:55 PM (IST) Feb 07
India-US trade agreement details: ಭಾರತ ಮತ್ತು ಅಮೆರಿಕಾ ನಡುವಿನ ಹೊಸ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಅಮೆರಿಕಾದಿಂದ ಆಮದಾಗುವ ಹಾಗೂ ಭಾರತದಿಂದ ಅಮೆರಿಕಾಗೆ ಹಲವು ಉತ್ಪನ್ನಗಳಿಗೂ ಪರಸ್ಪರ ಸುಂಕ ವಿನಾಯಿತಿ ಸಿಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
06:30 PM (IST) Feb 07
ಎಂಜಲು ಕಾಸಿಗೆ ಯಾರ ಜೀವದ ಜೊತೆ ಬೇಕಾದರೂ ಚೆಲ್ಲಾಟವಾಡುವ ಪೊಲೀಸ್ ಇಲಾಖೆಯ ಅತ್ಯಂತ ಕ್ರೂರ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಡ್ರಗ್ಸ್ ಪೆಡ್ಲರ್‌ಗಳಿಂದ ಲಂಚ ಪಡೆದ ಪೊಲೀಸ್ ಅಧಿಕಾರಿಗಳು ಮಾಡಿರುವ ಘನಂದಾರಿ ಕೆಲಸ ನೋಡಿ!
06:02 PM (IST) Feb 07
ICC ಪುರುಷರ T20 ವಿಶ್ವಕಪ್ 2026: ಈ ಬಾರಿಯೂ ಟಿ20 ವಿಶ್ವಕಪ್ ಟೀಂ ಇಂಡಿಯಾ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬರೀ ಮಾತಲ್ಲ, ಅದಕ್ಕೆ 5 ಬಲವಾದ ಕಾರಣಗಳನ್ನೂ ಅವರು ನೀಡುತ್ತಿದ್ದಾರೆ.
05:44 PM (IST) Feb 07
ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ದುಬೈನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ ಭಾರತೀಯ ಮಹಿಳೆ ತನ್ನಲ್ಲಿದ್ದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸದ ಜೊತೆ ಎಸೆದಿದ್ದಾರೆ. ಮುಂದೇನಾಯಿತು?
05:41 PM (IST) Feb 07
ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಭಾರತದ ಪರ ಓಪನಿಂಗ್ ಮಾಡುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಕಳಪೆ ಫಾರ್ಮ್‌ನಿಂದಾಗಿ ಸಂಜು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಸಂಜು ಕ್ಷಮೆ ಕೇಳಿದ್ದಾರೆ ಎನ್ನುವ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ.
05:40 PM (IST) Feb 07
ಸದಾ ಸಿಡುಕಿನಿಂದ ಸುದ್ದಿಯಾಗುವ ಹಿರಿಯ ನಟಿ ಜಯಾ ಬಚ್ಚನ್‌ಗೆ ಬಾಲಿವುಡ್‌ನ ಕಿರಿಕ್ ನಟಿ ರಾಖಿ ಸಾವಂತ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದು, ರಾಖಿ ಸಲಹೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ರಾಖಿ ನೀಡಿದ ಸಲಹೆ ಏನು..?
05:10 PM (IST) Feb 07
ಬಿಸಿಸಿಐನ ಹೊಸ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ 'ಎ+' ಗ್ರೇಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಕೊಹ್ಲಿ ಮತ್ತು ರೋಹಿತ್ ಅವರನ್ನು 'ಬಿ' ಗ್ರೇಡ್‌ಗೆ ಇಳಿಸಲಾಗಿದ್ದು, ಶ್ರೇಯಸ್ ಅಯ್ಯರ್ ಮತ್ತೆ ಗುತ್ತಿಗೆ ಪಟ್ಟಿಗೆ ಮರಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
04:40 PM (IST) Feb 07
04:19 PM (IST) Feb 07
ಎಪ್ಸ್ಟೀನ್ ಫೈಲ್ಸ್ ಜಗತ್ತಿನ ಶ್ರೀಮಂತರ ಕರಾಳ ಮುಖವನ್ನು ಬಯಲು ಮಾಡಿದೆ. ಇದೇ ಹೊತ್ತಲ್ಲಿ, ರಾಹುಲ್ ಗಾಂಧಿಯವರದ್ದು ಎನ್ನಲಾದ ವಿಡಿಯೋಮತ್ತು ಈ ಫೈಲ್ನಲ್ಲಿ ಅವರ ಹೆಸರು ವೈರಲ್ ಆಗ್ತಿದೆ. ಏನಿದರ ಅಸಲಿಯತ್ತು?
03:20 PM (IST) Feb 07
03:01 PM (IST) Feb 07
ನಟಿ ಕಂಗನಾ ರಣಾವತ್ ಮತ್ತು ರಾಜಕಾರಣಿ ಚಿರಾಗ್ ಪಸ್ವಾನ್ ಸಂಸತ್ ಕಲಾಪಕ್ಕೆ ಒಟ್ಟಿಗೆ ಆಗಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಹಿಂದೆ ಕೂಡ ಇವರಿಬ್ಬರ ಫೋಟೋಗಳು ವೈರಲ್ ಆಗಿದ್ದು, ಇದೀಗ ಮತ್ತೆ ಇವರ ಜೋಡಿಯನ್ನು ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.
02:46 PM (IST) Feb 07
Aunty Love Case: ಸಮಾಜ ಎತ್ತ ಸಾಗುತ್ತಿದೆ ಎಂದು ಕೆಲವು ಘಟನೆಗಳು ನಮ್ಮನ್ನು ಪ್ರಶ್ನಿಸುವಂತೆ ಮಾಡುತ್ತವೆ. ಅದರಲ್ಲೂ ಅನೈತಿಕ ಸಂಬಂಧಗಳು ಮತ್ತು ಅವು ಸೃಷ್ಟಿಸುವ ಭಯಾನಕ ಸನ್ನಿವೇಶಗಳ ಬಗ್ಗೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಇಂತಹ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
02:44 PM (IST) Feb 07
2026ರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ, ನೆದರ್‌ಲೆಂಡ್ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಕೊನೆಯಲ್ಲಿ ಫಾಹೀಮ್ ಅಶ್ರಫ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
02:18 PM (IST) Feb 07
02:11 PM (IST) Feb 07
ಅ19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭರ್ಜರಿ ಗಿಫ್ಟ್, ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿದ ಭಾರತ 6ನೇ ಟ್ರೋಫಿ ಗೆದ್ದುಕೊಂಡು ದಾಖಲೆ ಬರೆದಿದೆ. ಈ ಸಾಧನೆಗೆ ಬಿಸಿಸಿಐ ಉಡುಗೊರೆ ನೀಡಿದೆ.
02:06 PM (IST) Feb 07
ಟಿ20 ವಿಶ್ವಕಪ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಅನ್ನು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಯ್ಕೆ ಮಾಡಿದ್ದಾರೆ. ಅಚ್ಚರಿಯೆಂದರೆ, ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದು, ಫಿನಿಶರ್ ರಿಂಕು ಸಿಂಗ್‌ರನ್ನು ಕೈಬಿಟ್ಟಿದ್ದಾರೆ. ಪಠಾಣ್ ಆಯ್ಕೆ ಮಾಡಿದ ತಂಡ ಇಲ್ಲಿದೆ ನೋಡಿ.
01:52 PM (IST) Feb 07
ಭಾರತೀಯ ಚಿತ್ರಕಲಾವಿದೆ ಮತ್ತು ಸಮಾಜ ಸುಧಾರಕಿ ರೂಬಲ್ ನಾಗಿ ಅವರು, ಸ್ಲಮ್‌ಗಳನ್ನು ಕಲಾತ್ಮಕವಾಗಿ ಪರಿವರ್ತಿಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದ ಸೇವೆಗಾಗಿ ಪ್ರತಿಷ್ಠಿತ ಜಾಗತಿಕ ಶಿಕ್ಷಕ ಪ್ರಶಸ್ತಿ 2026 ಅನ್ನು ಪಡೆದಿದ್ದಾರೆ.
12:46 PM (IST) Feb 07
2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವು ಕೀನ್ಯಾ ವಿರುದ್ಧ 260 ರನ್ ಗಳಿಸಿತ್ತು, ಇದು ಇಂದಿಗೂ ಟೂರ್ನಿಯ ಇತಿಹಾಸದಲ್ಲಿ ಅತಿಹೆಚ್ಚು ಸ್ಕೋರ್ ಆಗಿದೆ. ಸನತ್ ಜಯಸೂರ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಸಾಧ್ಯವಾಯಿತು. ಈ ದಾಖಲೆ ಇದುವರೆಗೂ ಬ್ರೇಕ್ ಆಗಿಲ್ಲ.
12:38 PM (IST) Feb 07
ಕೆಲವು ವರದಿಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ತಮ್ಮ ಮಾವ ಅಮಿತಾಭ್, ಅತ್ತೆ ಜಯಾ ಮತ್ತು ಪತಿ ಅಭಿಷೇಕ್‌ಗಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ. ಈ ನಾಲ್ವರ ಒಟ್ಟು ಆಸ್ತಿ ಮೌಲ್ಯದ ಮಾಹಿತಿ ಇಲ್ಲಿದೆ.
12:31 PM (IST) Feb 07
ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ ನೀಡಿದೆ. ಈ ಲೋಹಕ್ಕೆ ಬಾರಿ ಬೇಡಿಕೆ ವ್ಯಕ್ತವಾಗಲಿದೆ. ಹೂಡಿಕೆ ದೃಷ್ಟಿಯಿಂದಲೂ ಈ ಲೋಹ ಉತ್ತಮ ಆಯ್ಕೆಯಾಗಿದೆ.
12:15 PM (IST) Feb 07
11:53 AM (IST) Feb 07
ಬೆಂಗಳೂರು: 10ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ವೇಗಿ ಹರ್ಷಿತ್ ರಾಣಾ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಸಿರಾಜ್ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ.
11:47 AM (IST) Feb 07
ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತವು ಅಮೆರಿಕವನ್ನು ಎದುರಿಸಲಿದೆ. ಆದರೆ, ವೈರಲ್ ಜ್ವರದಿಂದಾಗಿ ಪ್ರಮುಖ ವೇಗದ ಬೌಲರ್ ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಗಾಯದಿಂದ ಹೊರಗುಳಿದಿದ್ದು, ತಂಡವು ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದೆ.
10:14 AM (IST) Feb 07
10:11 AM (IST) Feb 07
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ 'ಮಿಯಾ ಮುಸ್ಲಿಂ' ಹೇಳಿಕೆಗೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ 'ಎರಡು ರೂಪಾಯಿ' ಆಫರ್ ನೀಡಿ ಅಣಕವಾಡಿದ್ದಾರೆ.
09:21 AM (IST) Feb 07
08:52 AM (IST) Feb 07
ಹಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ದುಡ್ಡು ಬೇಕು, ಅದಕ್ಕಾಗಿಯೇ ಹಗಲಿರುಳು ದುಡಿಯುತ್ತಾರೆ. ಕೆಲವೊಮ್ಮೆ ಇದೇ ಹಣ ಕನಸಿನಲ್ಲೂ ಕಾಣಿಸಿಕೊಳ್ಳುತ್ತೆ. ಹಾಗಾದ್ರೆ ಕನಸಲ್ಲಿ ಹಣ ಕಂಡ್ರೆ ಏನರ್ಥ? ಇದು ಶುಭವೋ ಅಶುಭವೋ? ಸ್ವಪ್ನ ಶಾಸ್ತ್ರ ಹೇಳೋದೇನು?
07:42 AM (IST) Feb 07
ತಿರುಪತಿ ಲಡ್ಡು ಬೆರಕೆ ಪ್ರಕರಣದ ಕುರಿತು ಎಸ್‌ಐಟಿ ನಡೆಸಿದ ತನಿಖೆಯಲ್ಲಿ ರಾಸಾಯನಿಕ ಮತ್ತು ಪ್ರಾಣಿಗಳ ಕೊಬ್ಬು ಬೆರೆಸಿರುವ ಬಗ್ಗೆ ಸಾಕ್ಷ್ಯ ಸಿಕ್ಕಿದೆ ಎಂದು ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ಎನ್‌ಡಿಡಿಬಿ ವರದಿಯನ್ನು ಉಲ್ಲೇಖಿಸಿ ಅವರು ಈ ಮಾಹಿತಿ ನೀಡಿದ್ದಾರೆ. ವರದಿಯಲ್ಲೇನಿದೆ?
07:23 AM (IST) Feb 07
ಬಿಜೆಪಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತಿನ ಮೂಲಕ ಸುಳ್ಳನ್ನು ಸತ್ಯ ಮಾಡಲು ಹೊರಟಿದೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಮನಮೋಹನ್ ಸಿಂಗ್ ಕಾಲದ ಮನರೇಗಾ ಯೋಜನೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದು, ಗಾಂಧೀಜಿಯ ಸಿದ್ಧಾಂತ ಕೊಲ್ಲಲು ಬಿಜೆಪಿ ಮುಂದಾಗಿದೆ ಎಂದು ಟೀಕೆ.