- Home
- Sports
- Cricket
- 'ನನ್ನನ್ನು ನಂಬಿದವರಲ್ಲಿ ಕ್ಷಮೆ ಕೇಳ್ತೀನಿ'; ಕಳಪೆ ಆಟಕ್ಕೆ ಸಂಜು ಸ್ಯಾಮ್ಸನ್ ಕ್ಷಮೆ ಕೇಳಿದ್ರಾ? ಸತ್ಯಾಂಶ ಏನು?
'ನನ್ನನ್ನು ನಂಬಿದವರಲ್ಲಿ ಕ್ಷಮೆ ಕೇಳ್ತೀನಿ'; ಕಳಪೆ ಆಟಕ್ಕೆ ಸಂಜು ಸ್ಯಾಮ್ಸನ್ ಕ್ಷಮೆ ಕೇಳಿದ್ರಾ? ಸತ್ಯಾಂಶ ಏನು?
ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಭಾರತದ ಪರ ಓಪನಿಂಗ್ ಮಾಡುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಕಳಪೆ ಫಾರ್ಮ್‌ನಿಂದಾಗಿ ಸಂಜು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಸಂಜು ಕ್ಷಮೆ ಕೇಳಿದ್ದಾರೆ ಎನ್ನುವ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ.

ಟಿ20 ವಿಶ್ವಕಪ್ ಆಡುವ ಹನ್ನೊಂದರ ಬಳಗದಲ್ಲಿ ಸಂಜು ಸ್ಥಾನ ಪಡೆಯೋದೇ ಡೌಟ್
ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಸಂಜು ಸ್ಯಾಮ್ಸನ್ ಪ್ರಮುಖ ಓಪನರ್ ಆಗಿ ಆಯ್ಕೆಯಾಗಿದ್ದರು. ಆದರೆ, ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಸಂಜು ನಿರಾಸೆ ಮೂಡಿಸಿದ್ದರಿಂದ, ಇದೀಗ ಟಿ20 ವಿಶ್ವಕಪ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದೇ ಡೌಟ್ ಎನ್ನಲಾಗ್ತಿದೆ.
ಸಂಜು ಹಿಂದಿಕ್ಕಿದ ಇಶಾನ್ ಕಿಶನ್!
ಸಂಜು ಐದು ಪಂದ್ಯಗಳಲ್ಲಿ ಓಪನರ್ ಆಗಿ ಆಡಿ ಕೇವಲ 46 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ, ಸಂಜುಗೆ ಬ್ಯಾಕಪ್ ಆಗಿ ಬಂದ ಇಶಾನ್ ಕಿಶನ್, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು. ಕಿಶನ್ ಕೇವಲ ನಾಲ್ಕು ಪಂದ್ಯಗಳಿಂದ 215 ರನ್ ಚಚ್ಚಿದರು. ಇದರಲ್ಲಿ ತಿರುವನಂತಪುರಂನ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಗಳಿಸಿದ ಶತಕವೂ ಸೇರಿದೆ.
ಅಭ್ಯಾಸ ಪಂದ್ಯದಲ್ಲೂ ಮಿಂಚಿದ ಇಶಾನ್ ಕಿಶನ್
ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಇಶಾನ್ ಅರ್ಧಶತಕ ಗಳಿಸಿದರು. ಈ ಪಂದ್ಯದಲ್ಲಿ ಸಂಜುಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ಕಿಶನ್ ಓಪನರ್ ಆಗಲಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ.
സഞ്ജു മാപ്പ് പറഞ്ഞോ?
ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಈ ನಡುವೆಯೇ, ಸಂಜು ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಪೋಸ್ಟ್‌ನಲ್ಲಿ ಸಂಜು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಬರೆಯಲಾಗಿದೆ.
ಆ ಪೋಸ್ಟ್‌ನಲ್ಲಿ ಏನಿದೆ?
'ನನ್ನನ್ನು ನಂಬಿದ ಎಲ್ಲರಲ್ಲೂ ನಾನು ಕ್ಷಮೆ ಕೇಳುತ್ತೇನೆ, ನನಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ನನಗೆ ಮತ್ತೊಂದು ಅವಕಾಶ ನೀಡುತ್ತದೆಯೇ ಎಂದು ತಿಳಿದಿಲ್ಲ. ಆದರೂ ನಾನು ನನ್ನ ತಂಡವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇನೆ.' ಎನ್ನುವ ಪೋಸ್ಟರ್ ವೈರಲ್ ಆಗುತ್ತಿದೆ.
ಇದೊಂದು ಸುಳ್ಳು ಸುದ್ದಿ
ಆದರೆ, ಈ ಸಂದೇಶ ನಕಲಿ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಸಂಜು ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಸಂಜು ಅವರ ಇನ್‌ಸ್ಟಾಗ್ರಾಮ್, ಎಕ್ಸ್, ಫೇಸ್‌ಬುಕ್‌ನಂತಹ ಯಾವುದೇ ಅಧಿಕೃತ ಖಾತೆಗಳಲ್ಲಿ ಇಂತಹ ಪೋಸ್ಟ್ ಇಲ್ಲ. ಇದು ಸಂಜು ವಿರೋಧಿಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಲು ಮಾಡುತ್ತಿರುವ ಪ್ರಯತ್ನ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

