Published : Jul 29, 2026, 07:02 AM ISTUpdated : Jul 29, 2026, 11:42 PM IST

India Latest News Live: ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?

ಸಾರಾಂಶ

ನವದೆಹಲಿ: ಜು.20ರಂದು ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆಯಾಗಿರುವುದನ್ನು ಖಂಡಿಸಿ ಒಗ್ಗಟ್ಟು ಪ್ರದರ್ಶಿಸಲು ನಿವೃತ್ತ ಪೊಲೀಸರ ಸಂಘಟನೆ ಆಗಿರುವ ದೆಹಲಿ ಪೊಲೀಸ್‌ ಫೆಡರೇಶನ್‌ ಜು.31ಕ್ಕೆ ಪ್ರತಿಭಟನೆ ನಡೆಸಲು ಮುಂದಾಗಿದೆ.

ಈ ಕುರಿತು ಫೆಡರೇಶನ್, ಅನುಮತಿ ಕೋರಿ ದೆಹಲಿ ಪೊಲೀಸ್‌ ಕಮಿಷನರ್‌ ಅನುರಾಗ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದು, ಜು.31ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ತನಕ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿಸುವಂತೆ ಕೋರಿದೆ. ವಿದ್ಯಾರ್ಥಿಗಳ ಧರಣಿ ಸಂದರ್ಭದಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರ ತ್ಯಾಗ ಗುರುತಿಸಲು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

11:42 PM (IST) Jul 29

ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?

ಟಾಲಿವುಡ್‌ನ ಸ್ಟಾರ್ ನಿರ್ದೇಶಕ ರಾಜಮೌಳಿ ಸಿನಿಮಾಗಳು ನೂರಾರು, ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಇಂತಹ ಬೃಹತ್ ಚಿತ್ರಗಳನ್ನು ಮಾಡುವ ಜಕ್ಕಣ್ಣ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?

Read Full Story

10:51 PM (IST) Jul 29

ಪವನ್ ಕಲ್ಯಾಣ್ ಪತ್ನಿ ಹೆಸರು ಬದಲಾವಣೆ.. ಅನ್ನಾ ಲೆಝ್ನೋವಾ ಹೊಸ ಹೆಸರೇನು ಗೊತ್ತಾ?

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಝ್ನೋವಾ ಅಂತಾನೇ ಎಲ್ಲರಿಗೂ ಗೊತ್ತು. ಆದರೆ, ಅವರು ಈಗ ಅಧಿಕೃತವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅವರ ಹೊಸ ಹೆಸರೇನು ಅಂತ ತಿಳಿದುಕೊಳ್ಳೋಣ ಬನ್ನಿ.

Read Full Story

10:28 PM (IST) Jul 29

ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್​ ಸಂಸತ್ತಿಗೆ ಎಂಟ್ರಿ - ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನೀಟ್ ಪತ್ರಿಕೆ ಸೋರಿಕೆ ಚರ್ಚೆಯ ವೇಳೆ ಸಂಸತ್ತಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಗಂಭೀರ ಭದ್ರತಾ ವಿಷಯಗಳಿದ್ದಾಗ ಮಾತ್ರ ಕಾಣಿಸಿಕೊಳ್ಳುವ ದೋವಲ್ ಅವರ ಈ ಭೇಟಿಯು, ನೀಟ್ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡದಂತಹ ರಾಷ್ಟ್ರೀಯ ಭದ್ರತೆಯ ಆಯಾಮವಿರಬಹುದೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
Read Full Story

10:11 PM (IST) Jul 29

ಟ್ರಕ್‌, ಬಸ್‌ ವಿಭಾಗವನ್ನು 525 ಕೋಟಿಗೆ ಮಾರಾಟ ಮಾಡಲಿರುವ ಮಹೀಂದ್ರಾ & ಮಹೀಂದ್ರಾ!

ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಟ್ರಕ್ ಮತ್ತು ಬಸ್ ವಿಭಾಗವನ್ನು  ₹525 ಕೋಟಿಗೆ  'ಎಸ್‌ಎಮ್‌ಎಲ್‌ ಮಹೀಂದ್ರಾ'ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಬೃಹತ್ ಪುನರ್ರಚನೆಯು ಕಂಪನಿಯ ವಾಣಿಜ್ಯ ವಾಹನಗಳ ಉದ್ಯಮವನ್ನು ಒಂದೇ ಸೂರಿನಡಿ ತಂದು, ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ.

Read Full Story

08:47 PM (IST) Jul 29

ಹಿಂದೂ ಆಗಿ ಹುಟ್ಟಿ, ಕ್ರಿಶ್ಚಿಯನ್ ಆಗಿ, ಪ್ರೀತಿಗಾಗಿ ಇಸ್ಲಾಂಗೆ ಮತಾಂತರವಾದ ಈ ನಟಿ ಯಾರು ಗೊತ್ತೇ!

ತನ್ನ ವಿವಾದಾತ್ಮಕ ವೈಯಕ್ತಿಕ ಜೀವನದಿಂದಲೇ ಸದಾ ಸುದ್ದಿಯಲ್ಲಿರುವ ಈ ನಟಿ, ಹಲವು ಬಾರಿ ಧರ್ಮ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ, ನಂತರ ಇಸ್ಲಾಂಗೆ ಮತಾಂತರಗೊಂಡರು.

Read Full Story

08:18 PM (IST) Jul 29

ಅಮೆರಿಕದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಗುಜರಾತ್​ ಸುಂದರಿಗೆ Mrs. Earth Elite ಕಿರೀಟ - ಯಾರೀಕೆ

ಗುಜರಾತ್​ನ ಭೂಮಿಕಾ ಶಜ್ವಾನಿ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 'ಮಿಸೆಸ್ ಅರ್ಥ್ ಎಲೈಟ್ 2026' ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದಿದ್ದಾರೆ. ಈ ಗೆಲುವು ಸೌಂದರ್ಯದ ಜೊತೆಗೆ ಆತ್ಮವಿಶ್ವಾಸ, ನಾಯಕತ್ವ ಹಾಗೂ ಮಹಿಳಾ ಸಬಲೀಕರಣದಂತಹ ಜವಾಬ್ದಾರಿಯ ಮಹತ್ವ ಸಾರುತ್ತದೆ.

Read Full Story

07:45 PM (IST) Jul 29

ಪ್ರಪೋಸಲ್ಸ್‌ ಬರ್ತಿದ್ರೂ ಜಿರಳೆ ದೀಪ್ಕೆ ಇನ್ನೂ ಮದ್ವೆಯಾಕಾಗಿಲ್ಲ? ಶಾಕಿಂಗ್‌ ಸತ್ಯ ರಿವೀಲ್‌ ಮಾಡಿದ ಅಮ್ಮ

'ಕಾಕ್ರೋಚ್‌ ಜನತಾ ಪಕ್ಷ'ದಿಂದ ಫೇಮಸ್ ಆದ ಅಭಿಜೀತ್‌ ದೀಪ್ಕೆಗೆ ಸಾಕಷ್ಟು ಮದುವೆ ಪ್ರಪೋಸಲ್‌ಗಳು ಬರುತ್ತಿವೆ. ಆದರೂ 30 ವರ್ಷವಾದ ದೀಪ್ಕೆ ಯಾಕೆ ಮದುವೆಯಾಗುತ್ತಿಲ್ಲ ಎಂಬ ರಹಸ್ಯವನ್ನು ಅವರ ತಾಯಿ ಅನಿತಾ ದೀಪ್ಕೆ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?

Read Full Story

06:01 PM (IST) Jul 29

'ನೀಲಿ ಬಣ್ಣದ್ದು ಟಾಯ್ಲೆಟ್‌ಗೆ...' - RAF ಯುನಿಫಾರ್ಮ್‌ ಬಣ್ಣ ಅಪಹಾಸ್ಯ ಮಾಡಿದ್ದ CJP ಇನ್‌ಫ್ಲುಯೆನ್ಸರ್‌ ಶ್ರದ್ಧಾ ಸಿಂಗ್‌ ಫುಲ್‌ ಟ್ರೋಲ್‌!

ಇನ್‌ಫ್ಲುಯೆನ್ಸರ್ ಶ್ರದ್ಧಾ ಸಿಂಗ್, RAF ಯೋಧರ ನೀಲಿ ಸಮವಸ್ತ್ರವನ್ನು ಲೇವಡಿ ಮಾಡಿದ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ವೀಡಿಯೋ ವೈರಲ್ ಆಗಿ ತೀವ್ರ ಟ್ರೋಲಿಂಗ್ ಎದುರಿಸಿದ ಅವರು, ತಮ್ಮ ತಪ್ಪಿನ ಅರಿವಾಗಿ ವೀಡಿಯೋ ಡಿಲೀಟ್ ಮಾಡಿ ಸ್ಪಷ್ಟನೆ ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕಡಿಮೆಯಾಗಿಲ್ಲ.

Read Full Story

04:43 PM (IST) Jul 29

ಅಲ್ಲು ಅರ್ಜುನ್‌ಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಮಮೆಂಟೋ ಗೌರವದ ಶ್ರೀರಕ್ಷೆ!

ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ನಟ ಅಲ್ಲು ಅರ್ಜುನ್‌ ಅವರಿಗಿಘ ಶ್ರೀಗಳ ಶ್ರೀರಕ್ಷೆ ಸಿಕ್ಕಿದೆ.

Read Full Story

04:20 PM (IST) Jul 29

ODI ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಶುಭ್‌ಮನ್ ಗಿಲ್! ಟಿ20ಯಲ್ಲಿ 230 ಸ್ಥಾನ ಜಿಗಿದ ವೈಭವ್ ಸೂರ್ಯವಂಶಿ

ನೂತನ ಐಸಿಸಿ ರ್‍ಯಾಂಕಿಂಗ್‌ನಲ್ಲಿ, ಭಾರತದ ನಾಯಕ ಶುಭ್‌ಮನ್ ಗಿಲ್ ಏಕದಿನ ಬ್ಯಾಟಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಮಿಂಚಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಟಿ20 ರ್‍ಯಾಂಕಿಂಗ್‌ನಲ್ಲಿ 230 ಸ್ಥಾನಗಳ ಭರ್ಜರಿ ಜಿಗಿತ ಕಂಡಿದ್ದಾರೆ. ತಿಲಕ್ ವರ್ಮಾ ಮತ್ತು ಶ್ರೇಯಸ್ ಅಯ್ಯರ್ ಕೂಡ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ.
Read Full Story

03:55 PM (IST) Jul 29

HCL ಟೆಕ್ ವಾರ್ಷಿಕೋತ್ಸವದಲ್ಲಿ CEO ವೇದಿಕೆ ಏರುತ್ತಿದ್ದಂತೆಯೇ ಮುಜುಗರ, ಸಂಭ್ರಮದ ಮಧ್ಯೆ ನೌಕರರ ಪ್ರತಿಭಟನೆ, ವಿಡಿಯೋ ವೈರಲ್!

ಎಚ್‌ಸಿಎಲ್ ಟೆಕ್ನಾಲಜೀಸ್‌ನ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ, ಸಿಇಒ ಸಿ. ವಿಜಯಕುಮಾರ್ ವೇದಿಕೆಗೆ ಬರುತ್ತಿದ್ದಂತೆ ನೂರಾರು ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು. ಈ ಅನಿರೀಕ್ಷಿತ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಟಿ ವಲಯದಲ್ಲಿನ ವೇತನದ ಕುರಿತ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

03:53 PM (IST) Jul 29

10 ವರ್ಷ ಜೈಲು 10 ಕೋಟಿ ರೂ ದಂಡ, ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್

ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಮಂಡಿಸಿದ ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್ ಆಗಿದೆ. ವಿಪಕ್ಷಗಳ ಭಾರಿ ಗದ್ದಲದ ನಡುವೆ ಧ್ವನಿಮತದ ಮೂಲಕ ಬಿಲ್ ಪಾಸ್ ಮಾಡಲಾಗಿದೆ.

Read Full Story

03:26 PM (IST) Jul 29

ಕಾರಣವಿಲ್ಲದೆ ಉದ್ಯೋಗಿಯ ಹಠಾತ್ ವಜಾ, ಸೋತ ಕಂಪೆನಿಯಿಂದ ಗೆದ್ದ ಮಹಿಳೆಗೆ 19 ಲಕ್ಷ ರೂ. ಗರಿಷ್ಠ ಪರಿಹಾರ!

ಸಿಂಗಾಪುರದಲ್ಲಿ, ಪ್ರೊಬೇಷನ್ ಅವಧಿ ಮುಗಿದ ನಂತರ ಮಹಿಳಾ ಅಧಿಕಾರಿಯೊಬ್ಬರನ್ನು ಅನ್ಯಾಯವಾಗಿ ವಜಾಗೊಳಿಸಿದ ಕಂಪನಿಗೆ ಉದ್ಯೋಗ ಹಕ್ಕು ನ್ಯಾಯಮಂಡಳಿ ದಂಡ ವಿಧಿಸಿದೆ. ಉದ್ಯೋಗಿಯ ಕಳಪೆ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಲು ವಿಫಲವಾದ ಕಂಪನಿಗೆ, ಸಂತ್ರಸ್ತೆಗೆ ಸುಮಾರು 19 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
Read Full Story

03:17 PM (IST) Jul 29

ಪ್ರತಿದಿನ ಕಣ್ಣಿಗೆ ಮೇಕಪ್ ಮಾಡಿಕೊಳ್ಳೋದ್ರಿಂದ ಅಪಾಯ ಗ್ಯಾರಂಟಿ! ವೈದ್ಯರು ಹೇಳೋದೇನು?

ಪ್ರತಿದಿನ ಕಣ್ಣಿನ ಮೇಕಪ್ ಮಾಡುವುದರಿಂದ 'ಮೈಬೋಮಿಯನ್' ಗ್ರಂಥಿಗಳು ಬ್ಲಾಕ್ ಆಗಿ ಕಣ್ಣುಗಳು ಒಣಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಉತ್ತಮ ಗುಣಮಟ್ಟದ ಉತ್ಪನ್ನಗಳ ಬಳಕೆ, ಮಲಗುವ ಮುನ್ನ ಮೇಕಪ್ ತೆಗೆಯುವುದು ಮತ್ತು ಮೇಕಪ್ ಬ್ರಷ್‌ಗಳನ್ನು ಸ್ವಚ್ಛವಾಗಿಡುವುದು ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯ.
Read Full Story

01:37 PM (IST) Jul 29

ಜಸ್ಪ್ರೀತ್ ಬುಮ್ರಾ ಕಡೆಗಣಿಸಿ, ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಪ್ಲೇಯಿಂಗ್ XI ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಆಯ್ಕೆಯ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ನಾಲ್ವರು ಸ್ಪಿನ್ನರ್‌ಗಳನ್ನು ಒಳಗೊಂಡಿರುವ ಈ ತಂಡದಲ್ಲಿ, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.
Read Full Story

01:28 PM (IST) Jul 29

Gaumutra Jibe ಐಐಟಿ ನಿರ್ದೇಶಕನಿಗೆ ಗೋಮೂತ್ರ ತಜ್ಞ ಎಂದು ಪೇಚಿಗೆ ಸಿಲುಕಿದ ಪ್ರಿಯಾಂಕಾ ಗಾಂಧಿ, ಏನಿದು ಜಟಾಪಟಿ

ಪರೀಕ್ಷಾ ಸುಧಾರಣೆಗೆ ಕೇಂದ್ರ ಸರ್ಕಾರ ರಚಿಸಿದ ಹೈಪವರ್ ಟಾಸ್ಕ್ ಫೋರ್ಸ್‌ನಲ್ಲಿರುವ ಐಐಟಿ ಮಡ್ರಾಸ್ ನಿರ್ದೇಶಕ ವಿ ಕಾಮಕೋಟಿ ಸದಸ್ಯರಾಗಿದ್ದಾರೆ. ಇದೇ ಕಾಮಕೋಟಿ ವಿರುದ್ದ ಪ್ರಿಯಾಂಕಾ ಗಾಂಧಿ ನಾಲಗೆ ಹರಿಬಿಟ್ಟಿದ್ದಾರೆ. ವಿ ಕಾಮಕೋಟಿ ಸಾಧನೆಗಳೇನು?

Read Full Story

12:45 PM (IST) Jul 29

ಬಿಲ್ಕಿಸ್ ಬಾನು ಕೇಸ್ - ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಹೇಳಿಕೆಗೆ ಕಾಂಗ್ರೆಸ್ ಬೆಂಬಲ, ಲೋಕಸಭೆಯಲ್ಲಿ ಗದ್ದಲ

ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಟೀಕೆ. ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಸಮರ್ಥನೆ. ಇದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪ್ರಿಯಾಂಕಾ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಕ್ಷಮೆ ಕೇಳಬೇಕು ಎಂದು ಜೋಷಿ, ರಿಜಿಜು ಆಗ್ರಹಿಸಿದ್ದಾರೆ.

Read Full Story

12:42 PM (IST) Jul 29

ರಜತ್ ಪಾಟೀದಾರ್‌ ಜತೆ ಈತನ ಹೋಲಿಕೆ ಸಾಧ್ಯವೇಯಿಲ್ಲ; ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗನ ಖಡಕ್ ಮಾತು!

ಮಾಜಿ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್, ಭಾರತ ಟಿ20 ತಂಡಕ್ಕೆ ರಜತ್ ಪಾಟೀದಾರ್ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ತಿಲಕ್ ವರ್ಮಾ ಅವರ ಸ್ಥಿರತೆಯ ಬಗ್ಗೆ ಪ್ರಶ್ನಿಸಿರುವ ಅವರು, ಪಾಟೀದಾರ್ ಅವರ ನಾಯಕತ್ವ ಮತ್ತು ಸ್ಪೋಟಕ ಬ್ಯಾಟಿಂಗ್ ಅನ್ನು ಉಲ್ಲೇಖಿಸಿ ಅವಕಾಶ ನೀಡಲು ಆಗ್ರಹಿಸಿದ್ದಾರೆ.
Read Full Story

12:41 PM (IST) Jul 29

ಒಬ್ಬರಿಗೆ ಒಂದು ಕಾರು ಮಾತ್ರ ಹೆಚ್ಚುವರಿ ವಾಹನ ಬಳಕೆಗೆ ಬ್ರೇಕ್, ಕೇಂದ್ರದಿಂದ ಹೊಸ ನೀತಿ ಜಾರಿ

ಒಬ್ಬರಿಗೆ ಒಂದು ಕಾರು ಮಾತ್ರ ಬಳಕೆ. ಕೇಂದ್ರ ಸರ್ಕಾರ ದಿಢೀರ್ ಹೊಸ ನೀತಿಯನ್ನು ಜಾರಿಗೆ ತಂದಿದೆ.ಹಿರಿಯ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಹೆಚ್ಚುವರಿ ವಾಹನ ಬಳಕೆಗೆ ಕೇಂದ್ರ ಸರ್ಕಾರ ತಡೆ ಹಾಕಿದೆ. ಏನಿದು ಹೊಸ ನಿಯಮ?

Read Full Story

12:30 PM (IST) Jul 29

ಸಾಲದ ಸುಳಿಯಲ್ಲಿದ್ದ ದಂಪತಿ ಬದುಕನ್ನೇ ಬದಲಿಸಿದ ಮೆಟ್ಟಿಲ ಕೆಳಗಿನ ಹಳೆ ಬಣ್ಣದ ಡಬ್ಬ

ಆರ್ಥಿಕ ಸಂಕಷ್ಟದಲ್ಲಿದ್ದ ಬ್ರಿಟನ್ ಮೂಲದ ದಂಪತಿಗೆ ತಮ್ಮ ಹಳೆಯ ಮನೆಯ ಮೆಟ್ಟಿಲುಗಳ ಕೆಳಗೆ ನಿಧಿಯೊಂದು ಪತ್ತೆಯಾಗಿದೆ. 1970ರ ದಶಕದ ಬ್ರಿಟಿಷ್ ಕರೆನ್ಸಿಗಳಿದ್ದ ಪೇಂಟ್ ಡಬ್ಬವು ಸಿಕ್ಕಿದ್ದು, ಈ ಹಣದಿಂದ ದಂಪತಿ ತಮ್ಮ ಸಾಲವನ್ನು ತೀರಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.
Read Full Story

12:17 PM (IST) Jul 29

ಅವಿವಾಹಿತ ಜೋಡಿಗಳು OYO ರೂಮ್‌ ಬುಕ್‌ ಮಾಡೋದು ಕಾನೂನುಬದ್ಧವೇ? ನಿಮ್ಮ ಹಕ್ಕುಗಳ ಬಗ್ಗೆ ಮಾಹಿತಿ

ಭಾರತದಲ್ಲಿ ವಯಸ್ಕ ಅವಿವಾಹಿತ ಜೋಡಿಗಳು ಹೋಟೆಲ್ ಅಥವಾ OYO ರೂಮ್‌ಗಳಲ್ಲಿ ತಂಗುವುದು ಸಂಪೂರ್ಣ ಕಾನೂನುಬದ್ಧವಾಗಿದೆ. ಇಬ್ಬರು ವಯಸ್ಕರು ತಮ್ಮ ಒಪ್ಪಿಗೆಯಿಂದ ಒಟ್ಟಿಗೆ ತಂಗಿದ್ದರೆ, ಪೊಲೀಸರು ಯಾವುದೇ ಬಲವಾದ ಕಾರಣವಿಲ್ಲದೆ ಅವರಿಗೆ ಕಿರುಕುಳ ನೀಡಲು ಸಾಧ್ಯವಿಲ್ಲ. ರೂಮ್ ಬುಕ್ ಮಾಡುವಾಗ 'Couples Allowed' ಮತ್ತು 'Local ID Accepted' ಫಿಲ್ಟರ್‌ಗಳನ್ನು ಪರಿಶೀಲಿಸುವುದು ಉತ್ತಮ.
Read Full Story

12:17 PM (IST) Jul 29

ದೊಡ್ಡ ಆಘಾತ.. ಕಾರು ಕಳ್ಳತನ ಮಾಡಿದ್ದಕ್ಕೆ 2.68 ಲಕ್ಷ ರೂಪಾಯಿ ದಂಡ!

ಹೈದರಾಬಾದ್‌ನ ಪಬ್ ಒಂದರಲ್ಲಿ ವ್ಯಾಲೆಟ್ ಪಾರ್ಕಿಂಗ್‌ಗೆ ನೀಡಿದ್ದ ಬಿಎಂಡಬ್ಲ್ಯು ಕಾರು ಕಳುವಾದ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಾಹನದ ಕಳ್ಳತನಕ್ಕೆ ಪಬ್ ಆಡಳಿತ ಮಂಡಳಿಯೇ ಜವಾಬ್ದಾರಿ ಎಂದು ಸ್ಪಷ್ಟಪಡಿಸಿ, 'ಸೇವೆಯಲ್ಲಿನ ನ್ಯೂನತೆ' ಎಂದು ಪರಿಗಣಿಸಿ ಮಾಲೀಕರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
Read Full Story

11:43 AM (IST) Jul 29

ಬೆಂಗಳೂರಿನಿಂದ 10 ಗಂಟೆ ದೂರದಲ್ಲಿಯೇ ಸಿಗುತ್ತವೆ ಅತ್ಯಂತ ಕಡಿಮೆ ಬೆಲೆಗೆ ಮುತ್ತುಗಳು

ಇದು ಭಾರತದ  'ಮುತ್ತಿನ ನಗರಿ' ಎಂದು ಪ್ರಸಿದ್ಧವಾಗಿದೆ. ಪರ್ಷಿಯನ್ ಕೊಲ್ಲಿಯಿಂದ ಮುತ್ತುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಇದು ಮುತ್ತಿನ ವ್ಯಾಪಾರದ ಪ್ರಮುಖ ಕೇಂದ್ರವಾಯಿತು. ಈ ನಗರ ಬೆಂಗಳೂರಿನಿಂದ 10  ಗಂಟೆಯ ದೂರದಲ್ಲಿದೆ. ಈ ನಗರಕ್ಕೆ ನೀವು ಬಸ್, ರೈಲು ಮತ್ತು ವಿಮಾನದ ಮೂಲಕ ಹೋಗಬಹುದಾಗಿದೆ .

Read Full Story

11:41 AM (IST) Jul 29

ವೆಸ್ಟ್‌ ಇಂಡೀಸ್ ಎದುರು ಪಾಕಿಸ್ತಾನಕ್ಕೆ ಹೀನಾಯ ಸೋಲು; ಬಾಬರ್ ಅಜಂ ಕ್ಯಾಪ್ಟನ್ ಆಗುತ್ತಿದ್ದಂತೆ ಪಾಕಿಸ್ತಾನ ದಿವಾಳಿ!

ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 90 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ, ಪಾಕಿಸ್ತಾನವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
Read Full Story

10:58 AM (IST) Jul 29

ಚಿನ್ನದ ಪದಕದ ಹಿಂದಿನ ಕಣ್ಣೀರ ಕಥೆ - ಮಧ್ಯರಾತ್ರಿ ಪತಿಯ ಮನೆಯಿಂದ ನಗ್ನವಾಗಿ ಹೊರಬಿದ್ದಿದ್ದ ಶರ್ಮಿಳಾ ಈಗ ಸ್ವರ್ಣ ಸಾಧಕಿ!

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಶರ್ಮಿಳಾ ಧನ್ಕರ್, ಮಹಿಳೆಯರ ಶಾಟ್‌ಪುಟ್‌ ಎಫ್‌57 ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ. ಪೋಲಿಯೋ, ಕೌಟುಂಬಿಕ ದೌರ್ಜನ್ಯದಂತಹ ಅನೇಕ ಸಂಕಷ್ಟಗಳನ್ನು ಎದುರಿಸಿದ ಅವರು, ಕ್ರೀಡೆಯ ಮೂಲಕ ತಮ್ಮ ಬದುಕನ್ನು ಮರುರೂಪಿಸಿಕೊಂಡು ಸ್ಪೂರ್ತಿದಾಯಕ ಸಾಧನೆ ಮಾಡಿದ್ದಾರೆ.
Read Full Story

10:50 AM (IST) Jul 29

Googleನ ಗಂಟೆಯ ಸಂಪಾದನೆ ಗೊತ್ತಾ? ಎಷ್ಟು ಸೆಕೆಂಡ್‌ಗೆ ಒಂದು ಕೋಟಿ ಹಣ ಗಳಿಸುತ್ತೆ?

ಗೂಗಲ್‌ನ ಪೋಷಕ ಕಂಪನಿ ಆಲ್ಫಾಬೆಟ್‌ನ ವಾರ್ಷಿಕ ಆದಾಯ 25 ಲಕ್ಷ ಕೋಟಿ ರೂ. ದಾಟುತ್ತದೆ. ಜಾಹೀರಾತು, ಯೂಟ್ಯೂಬ್ ಮತ್ತು ಇತರ ಸೇವೆಗಳಿಂದ ಹಣ ಗಳಿಸುವ ಗೂಗಲ್, ಎಷ್ಟು ಸೆಕೆಂಡುಗಳಲ್ಲಿ ಕೋಟಿ ರೂಪಾಯಿ ಸಂಪಾದಿಸುತ್ತೆ?

Read Full Story

10:23 AM (IST) Jul 29

ಶಾಕಿಂಗ್ - ಇರಾನ್ ನಾಶವೇ ಕೊನೆಯ ಆಯ್ಕೆ ಎಂದ ಇಸ್ರೇಲ್, ಟ್ರಂಪ್ ಜೊತೆ ನೆತನ್ಯಾಹು ರಹಸ್ಯ ಮಾತುಕತೆ!

ಅಮೆರಿಕ-ಇರಾನ್ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನ ಭೇಟಿಯಾಗಿರುವುದು ಜಾಗತಿಕ ಸಂಚಲನ ಮೂಡಿಸಿದೆ.

Read Full Story

07:10 AM (IST) Jul 29

ಪೆಲೆಟ್‌ ಗನ್‌ ಬಳಕೆ ಮಾಡಿದ್ಯಾಕೆ? ದೆಹಲಿ ಪೊಲೀಸ್‌ ಕಡತದಿಂದ ಮಾಹಿತಿ ಬಹಿರಂಗ, CJP ಎಚ್ಚರಿಕೆ

ಕಾಕ್ರೋಚ್‌ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಕ್ರಿಮಿನಲ್ ಹಿನ್ನೆಲೆ ಇಲ್ಲದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಘಟನೆಯ ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಲು ಮತ್ತು ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸುವ ಬಗ್ಗೆಯೂ ನ್ಯಾಯಾಲಯ ಒಲವು ವ್ಯಕ್ತಪಡಿಸಿದೆ.

Read Full Story

More Trending News