ಮುಂಬೈ: ಆಟೋ-ರಿಕ್ಷಾ, ಟ್ಯಾಕ್ಸಿ ಮತ್ತು ಆ್ಯಪ್-ಆಧರಿತ ಕ್ಯಾಬ್ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಮುಂಬೈನ ನಾಲ್ವರು ಕ್ಯಾಬ್ ಚಾಲಕರು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರದ ಈ ನಿಯಮವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), ವಿಧಿ 19 (ವೃತ್ತಿ ಸ್ವಾತಂತ್ರ್ಯ) ಹಾಗೂ ವಿಧಿ 21ರ ಅಡಿ (ಜೀವಿಸುವ ಹಕ್ಕು) ಸಿಗುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯು ಚಾಲನಾ ಪರವಾನಗಿ ನೀಡಲು ಯಾವುದೇ ನಿರ್ದಿಷ್ಟ ಭಾಷಾ ಅರ್ಹತೆಯನ್ನು ಕಡ್ಡಾಯಗೊಳಿಸಿಲ್ಲ ಮತ್ತು ಈ ಆಧಾರದ ಮೇಲೆ ಪರವಾನಗಿ ರದ್ದುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ನಿಯಮಕ್ಕೆ ತಡೆ ನೀಡುವಂತೆ ಕೋರಲಾಗಿದೆ.
11:07 PM (IST) Aug 26
ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿಯಾಗಿದ್ದು, ತಿಹಾರ್ ಜೈಲಿನ ಒಳಗಿದ್ದೂ ತನ್ನ ವಂಚನೆಯ ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಜಾರಿ ನಿರ್ದೇಶನಾಲಯವು ಆತನ ಐಷಾರಾಮಿ ಆಸ್ತಿಗಳನ್ನು ಜಪ್ತಿ ಮಾಡಿದ್ದರೂ, ಆತ ದೊಡ್ಡ ಮೊತ್ತದ ಹಣಕಾಸಿನ ಹೂಡಿಕೆಯ ಆಫರ್‌ಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿದ್ದಾನೆ.
10:51 PM (IST) Aug 26
09:51 PM (IST) Aug 26
Prabhas Spirit ಸಿನಿಮಾದ ಕಂಟೆಂಟ್‌ನಿಂದಾಗಿ ಅದಕ್ಕೆ 'ಎ' ಸರ್ಟಿಫಿಕೇಟ್ ಖಚಿತ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ. ಅಲ್ಲದೆ, 2027ರ ಮಾರ್ಚ್ 5ರ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
09:19 PM (IST) Aug 26
Kollywood Actor Rajinikanth ಅವರ ಪಕ್ಕವೇ ವಿಮಾನದಲ್ಲಿ ಕುಳಿತುಕೊಂಡ ನಟಿ ಕಯಾದು ಲೋಹರ್ ಫುಲ್ ಎಕ್ಸೈಟ್ ಆಗಿದ್ದಾರೆ. ಈ ಅಪರೂಪದ ಕ್ಷಣದ ಸೆಲ್ಫಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಯಾದು, ‘ನಾನು ಇನ್ನೂ ಕನಸು ಕಾಣುತ್ತಿದ್ದೇನೆ’ ಎಂದಿದ್ದಾರೆ.
09:09 PM (IST) Aug 26
ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಹರ್ಷಿತ್ ರಾಣಾ ಬೆಂಗಳೂರಿನಲ್ಲಿ ಕಠಿಣ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ. 2027ರ ವಿಶ್ವಕಪ್ ಮತ್ತು 2026ರ ಏಷ್ಯನ್ ಗೇಮ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಮೂವರು ವೇಗಿಗಳ ಫಿಟ್‌ನೆಸ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ.
08:47 PM (IST) Aug 26
ಸೂರ್ಯಕುಮಾರ್ ಯಾದವ್ ಅವರು ಆಕಾಶ್ ಚೋಪ್ರಾ ಅವರ ಟಾಕ್ ಶೋನಲ್ಲಿ ಪಾಕಿಸ್ತಾನ ಪಂದ್ಯದ ಒತ್ತಡ ಮತ್ತು ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದರು. ಇನ್ನೂ ಏನು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್? ಈ ಸ್ಟೋರಿಯಲ್ಲಿದೆ ಮಾಹಿತಿ
07:09 PM (IST) Aug 26
South Indian Actresses: ಸ್ಟಾರ್ ಹೀರೋಯಿನ್ಸ್ ಇಮೇಜ್ ಉಳಿಸಿಕೊಳ್ಳುವುದಕ್ಕಿಂತ ಉತ್ತಮ ಕಥೆ ಹಾಗೂ ನೆನಪಿನಲ್ಲಿ ಉಳಿಯುವ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ಈ ನಟಿಯರ ಆಯ್ಕೆ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್‌ಗೆ ನಾಂದಿ ಹಾಡುತ್ತಿದೆ.
06:51 PM (IST) Aug 26
ವಾಸ್ತು ಪ್ರಕಾರ, ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಆರ್ಥಿಕ ಸಮಸ್ಯೆಗಳನ್ನು ತರಬಹುದು. ಅದರಲ್ಲೂ ಮನೆಯ ಮುಖ್ಯ ದ್ವಾರದ ಮುಂದೆ ಕೆಲವು ವಸ್ತುಗಳನ್ನು ತಪ್ಪಿಯೂ ಇಡಬಾರದು.
06:35 PM (IST) Aug 26
Kollywood Actress Nayanthara: ಒಂದು ಕಾಲದಲ್ಲಿ ಸೆಟ್‌ನಲ್ಲಿ ಚಿಕ್ಕ ಮಗುವಿನಂತೆ ತುಂಟಾಟ ಮಾಡುತ್ತಿದ್ದ ಈ ನಟ ಇಂದು ಪ್ಯಾನ್ ಇಂಡಿಯಾ ಬ್ರ್ಯಾಂಡ್ ಆಗಿ ಬೆಳೆದಿರುವುದನ್ನು ಕಂಡು ನಯನತಾರಾ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದ್ದರು.
06:16 PM (IST) Aug 26
ರಾಜಮಂಡ್ರಿ ಬಳಿ ಗೋದಾವರಿ ನದಿಗೆ ಜಿಗಿದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೂಟಿಂಗ್ ಕೋಚ್ ಸಾಧಿಕ್ ಖಾನ್ ಎಂಬಾತನ ಮಾನಸಿಕ ಹಿಂಸೆ, ಆಸ್ತಿ ಕಬಳಿಸುವ ಸಂಚು ಹಾಗೂ ಕೊಲೆ ಬೆದರಿಕೆಯೇ ಈ ದುರಂತಕ್ಕೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.
05:26 PM (IST) Aug 26
Telugu Actress Samantha ತಮ್ಮ ಪೋಸ್ಟ್‌ನಲ್ಲಿ, ಪ್ರತಿಯೊಂದು ಗರ್ಭಧಾರಣೆಯ ಅನುಭವವೂ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ತಾವು ಮಾಡುತ್ತಿರುವ ವ್ಯಾಯಾಮಗಳು ತಮ್ಮ ದೇಹ, ಅನುಭವ ಮತ್ತು ಗರ್ಭಾವಸ್ಥೆಗೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
05:21 PM (IST) Aug 26
05:10 PM (IST) Aug 26
'ಆಗಸ್ಟ್ 25 ಬಿಗ್ ರಿವೀಲ್' ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸಿದ ವ್ಯಕ್ತಿಯೊಬ್ಬ, ದೊಡ್ಡ ರಹಸ್ಯ ಬಯಲು ಮಾಡುವುದಾಗಿ ನಂಬಿಸಿದ್ದ. ವಿಡಿಯೋ ನೋಡಲು ತಲಾ 500 ರೂ. ಪಡೆದು, ಕೊನೆಗೆ ಕೇವಲ ಮೋಟಿವೇಷನಲ್ ವಿಡಿಯೋ ಪೋಸ್ಟ್ ಮಾಡಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
05:07 PM (IST) Aug 26
ಹಾಕಿ ವಿಶ್ವಕಪ್‌ನಿಂದ ಭಾರತ ತಂಡ ಹೊರಬಿದ್ದ ನಂತರ, ಮಾಜಿ ನಾಯಕರಾದ ಪಿಆರ್ ಶ್ರೀಜೇಶ್ ಮತ್ತು ವೀರೇನ್ ರಸ್ಕಿನ್ಹಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಪ್ರದರ್ಶನ ಮತ್ತು ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿರುವ ಅವರು, ಈ ಸೋಲಿನ ಹೊಣೆಯನ್ನು ಯಾರು ಹೊರಬೇಕು ಎಂದು ಕೇಳಿದ್ದಾರೆ.
04:41 PM (IST) Aug 26
ಟಿಬೆಟ್‌ನಿಂದ ಹರಿದುಬಂದ ಭೋಟೆಕೋಶಿ ನದಿ ಪ್ರವಾಹಕ್ಕೆ ನೇಪಾಳದಲ್ಲಿ 105 ಭಾರತೀಯರು ಸೇರಿದಂತೆ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹದಲ್ಲಿ 16 ಜನರು ಸಾವನ್ನಪ್ಪಿದ್ದು, ಹಲವಾರು ಜಲವಿದ್ಯುತ್ ಯೋಜನೆಗಳು ಮತ್ತು ರಸ್ತೆಗಳು ಧ್ವಂಸಗೊಂಡಿವೆ.
04:33 PM (IST) Aug 26
Irumudi ಚಿತ್ರಕ್ಕೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಮೆಚ್ಚುಗೆಯೂ ಸಿಕ್ಕಿದೆ. ಸಿನಿಮಾ ವೀಕ್ಷಿಸಿದ ಬಳಿಕ ರಶ್ಮಿಕಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ‘ಇರುಮುಡಿ’ ಚಿತ್ರತಂಡವನ್ನು ಮನಸಾರೆ ಕೊಂಡಾಡಿದ್ದಾರೆ.
04:06 PM (IST) Aug 26
ಆಂಡ್ರಾಯ್ಡ್ 17 ಫೋನ್ ಕಳ್ಳತನವಾದರೂ ನಿಮ್ಮ ಡೇಟಾವನ್ನು ರಕ್ಷಿಸಲು 'ಐಡೆಂಟಿಟಿ ಚೆಕ್' ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..
03:29 PM (IST) Aug 26
ಹಿಂದೂಗಳ ಮದುವೆಯಲ್ಲಿ ಮಾಂಗಲ್ಯ ಧಾರಣೆ ಅನ್ನೋದು ತುಂಬಾನೇ ಪ್ರಮುಖವಾದ ಘಟ್ಟ. ಇದು ನಡೆದರೆ ವಧು-ವರರು ಅಧಿಕೃತವಾಗಿ ಗಂಡ-ಹೆಂಡತಿ ಆದಂತೆ. ವರನು ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟು ಹಾಕುತ್ತಾನೆ. ಇದರ ಹಿಂದಿನ ಅರ್ಥ ಮತ್ತು ಪರಮಾರ್ಥ ಏನು ಗೊತ್ತಾ?
03:24 PM (IST) Aug 26
01:34 PM (IST) Aug 26
01:32 PM (IST) Aug 26
ಐಐಟಿ ದೆಹಲಿಯ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಸಾವಿನ ಕುರಿತ ಪ್ರತಿಭಟನೆಗೆ ಜೆಎನ್‌ಯು ನಂತಹ ಹೊರಗಿನ ಕ್ಯಾಂಪಸ್‌ಗಳಿಂದ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಇದು ನಮ್ಮ ಒಗ್ಗಟ್ಟನ್ನು ಮುರಿಯುತ್ತಿದೆ ಎಂದು ಐಐಟಿ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
12:27 PM (IST) Aug 26
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್, ಇದೀಗ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.
12:19 PM (IST) Aug 26
11:32 AM (IST) Aug 26
ಮಲಯಾಳಂ ಚಿತ್ರರಂಗವು ಸಣ್ಣ ಕಥೆಯನ್ನಿಟ್ಟುಕೊಂಡು ಅದ್ಭುತ ಸಿನಿಮಾ ಮಾಡುವಲ್ಲಿ ನಿಪುಣವಾಗಿದೆ. ನೀವು ಡಬಲ್ ಥ್ರಿಲ್ಲರ್ ಅನುಭವ ನೀಡುವ ಮಲಯಾಳಂ ಸಿನಿಮಾಗಳ ಹುಡುಕಾಟದಲ್ಲಿದ್ದರೆ, ಈ 5 ಚಿತ್ರಗಳನ್ನು ನಿಮ್ಮ ವಾಚ್ ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.
11:28 AM (IST) Aug 26
10:26 AM (IST) Aug 26
ನವದೆಹಲಿ: ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ. ಆದರೆ ಮುಂದಿನ ಸೀಸನ್ ಟೂರ್ನಿಗೂ ಮುನ್ನ ಧೋನಿ ಹಾಗೂ ಸಿಎಸ್‌ಕೆ ಫ್ರಾಂಚೈಸಿ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ.
09:02 AM (IST) Aug 26
08:54 AM (IST) Aug 26
ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಈಶಾನ್ಯ ವಲಯವನ್ನು ಇನ್ನಿಂಗ್ಸ್ ಅಂತರದಿಂದ ಮಣಿಸಿದ ಪೂರ್ವ ವಲಯ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದು ಪಂದ್ಯದಲ್ಲಿ ಪಶ್ಚಿಮ ಹಾಗೂ ಉತ್ತರ ವಲಯಗಳ ನಡುವೆ ಜಯಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಂದ್ಯ ರೋಚಕ ಘಟ್ಟ ತಲುಪಿದೆ.
08:28 AM (IST) Aug 26
ಗಾಲ್ವಾನ್ ಕಣಿವೆ ಘರ್ಷಣೆಯ ನಂತರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿದ್ದಾರೆ. ಈ ಸಭೆಯಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ, ಗಡಿ ವಿವಾದ ಮತ್ತು ದ್ವಿಪಕ್ಷೀಯ ಸಹಕಾರದ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
07:06 AM (IST) Aug 26