LIVE NOW
Published : Jul 23, 2026, 05:18 AM ISTUpdated : Jul 23, 2026, 10:22 PM IST

India Latest News Live: ಸೇಫ್ಟಿಯಲ್ಲಿ ಹೊಸ Maruti Brezza Facelift ಕ್ರಾಂತಿ, 5 ಸ್ಟಾರ್‌ BNCAP ರೇಟಿಂಗ್‌ನೊಂದಿಗೆ ಆಗಲಿದೆ ಲಾಂಚ್‌

ಸಾರಾಂಶ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆಯನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ‘ವಿದ್ಯಾರ್ಥಿಗಳ ಅಭಿಯಾನ’ದ ಬಗ್ಗೆ ಸರ್ಕಾರ ಅತ್ಯಂತ ಸಂವೇದನಾಶೀಲವಾಗಿದೆ ಮತ್ತು ಸಿಜೆಪಿ ಜೊತೆಗೆ ಮಾತುಕತೆಗೆ ಸರ್ಕಾರ ಮುಕ್ತವಾಗಿದೆ. ಆದರೆ ವಿಪಕ್ಷಗಳು ದೇಶದ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಸುಳ್ಳು ನಿರೂಪಣೆ ಮಾಡುತ್ತಿದೆ ಎಂದು ಆರೋಪಿಸಿದೆ.

ಈ ನಡುವೆ ಬಿಜೆಪಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಜೆಪಿ ನಾಯಕ ಅಭಿಜಿತ್‌ ದೀಪ್ಕೆ, ‘ನಾವು ಸರ್ಕಾರದ ಜೊತೆಗೆ ಮಾತುಕತೆಗೆ ಸಿದ್ಧ. ಆದರೆ ಅದು ಯಾವುದೇ ಸಚಿವರ ಮನೆಯಲ್ಲಿ ಆಗಿರಬಾರದು. ಬದಲಾಗಿ ಯಾವುದಾದರೂ ತಟಸ್ಥ ಸ್ಥಳದಲ್ಲಿ ಆಗಿರಬೇಕು’ ಎಂದು ಹೇಳಿದ್ದಾರೆ.

10:22 PM (IST) Jul 23

ಸೇಫ್ಟಿಯಲ್ಲಿ ಹೊಸ Maruti Brezza Facelift ಕ್ರಾಂತಿ, 5 ಸ್ಟಾರ್‌ BNCAP ರೇಟಿಂಗ್‌ನೊಂದಿಗೆ ಆಗಲಿದೆ ಲಾಂಚ್‌

ಮಾರುತಿ ಸುಜುಕಿ ತನ್ನ ಜನಪ್ರಿಯ ಬ್ರೆಝಾ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೆ ಸಿದ್ಧಪಡಿಸಿದ್ದು, ಇದು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಈ ನೂತನ ಮಾದರಿಯು ವೆಂಟಿಲೇಟೆಡ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾದಂತಹ ಪ್ರೀಮಿಯಂ ಫೀಚರ್‌ಗಳೊಂದಿಗೆ ಬರಲಿದೆ.

Read Full Story

10:05 PM (IST) Jul 23

'ಸೋನಮ್‌, ಇಟ್ಸ್‌ ಡನ್‌ ಬ್ರೋ' ವಾಂಗ್ಚುಕ್‌ಗೆ ಸಲ್ಲು ಮನವಿ; ವಿದ್ಯಾರ್ಥಿಗಳಿಗೆ ಪ್ರತಿಭಟನೆ ಅಂತ್ಯಗೊಳಿಸಲು ಹೇಳಿದ ಸಲ್ಮಾನ್‌ ಖಾನ್‌

ನೀಟ್ ಪರೀಕ್ಷೆ ಸೋರಿಕೆ ಖಂಡಿಸಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ನಟ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ಪ್ರಧಾನಿಯವರೇ ಭರವಸೆ ನೀಡಿರುವುದರಿಂದ ಹೋರಾಟವನ್ನು ಅಂತ್ಯಗೊಳಿಸುವಂತೆ ವಾಂಗ್ಚುಕ್ ಅವರಿಗೆ ಮನವಿ ಮಾಡಿದ್ದಾರೆ.

Read Full Story

09:00 PM (IST) Jul 23

ಸರ್ಕಾರದ ಬಿಗ್‌ ಆಕ್ಷನ್‌, ಸಿಜೆಪಿ ಹಿಂಸಾಚಾರದಲ್ಲಿ ಭಾಗಿಯಾದವರ ಪಾಸ್‌ಪೋರ್ಟ್‌ ಕ್ಯಾನ್ಸಲ್‌?

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರ, ದೆಹಲಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗುರುತಿಸಿ, ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ.

Read Full Story

08:13 PM (IST) Jul 23

ಸಚಿನ್‌ ದಾಖಲೆ ಮುರಿದು ವೈಭವ್‌ ಸೂರ್ಯವಂಶಿ ಚರಿತ್ರೆ, ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ನಿಟ್ಟುಸಿರು ಬಿಟ್ಟ ಶ್ರೇಯಸ್‌ ಅಯ್ಯರ್‌

15 ವರ್ಷದ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20ಯಲ್ಲಿ ಅರ್ಧಶತಕ ಗಳಿಸಿದ ಜಗತ್ತಿನ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Read Full Story

07:29 PM (IST) Jul 23

ಜಸ್ಟ್‌ 18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ, ಸಿಕ್ಸರ್‌ ಎಷ್ಟಿತ್ತು?

15 ವರ್ಷದ ಭಾರತೀಯ ಯುವ ಆಟಗಾರ ವೈಭವ್ ಸೂರ್ಯವಂಶಿ, ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Read Full Story

07:06 PM (IST) Jul 23

Negative Energy - ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಅಂತ ತಿಳಿಯೋದು ಹೇಗೆ? ಇದರಿಂದ ಆಗುವ ಸಮಸ್ಯೆಗಳೇನು?

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ, ಮನೆಯ ವಾತಾವರಣ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾದರೆ ಸಮಸ್ಯೆಗಳು ತಪ್ಪಿದ್ದಲ್ಲ ಎನ್ನುತ್ತಾರೆ ಪಂಡಿತರು. ಹಾಗಾದ್ರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ತಿಳಿಯುವುದು ಹೇಗೆ? ನೋಡೋಣ

Read Full Story

06:38 PM (IST) Jul 23

CJP ಪ್ರತಿಭಟನಾಕಾರರಿಂದ ಕಲ್ಲು ತೂರಾಟ - ಗರ್ಭಿಣಿ ಪೊಲೀಸ್​ ಅಧಿಕಾರಿ ಮಗು ಸಾವು- ಏನಿದರ ಅಸಲಿಯತ್ತು

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದ್ದು, ಈ ವೇಳೆ ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡು ಮಗುವನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ನಿಜವಾಗಿಯೂ ಆಗಿದ್ದೇನು? ಏನಿದರ ಅಸಲಿತ್ತು?

Read Full Story

05:40 PM (IST) Jul 23

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಭಾರತ ತಂಡ ಆಯ್ಕೆ ಮಾಡಿದ ಯುವರಾಜ್ ಸಿಂಗ್! ಆದ್ರೆ ಈ ಮ್ಯಾಚ್‌ ವಿನ್ನರ್‌ಗಿಲ್ಲ ಸ್ಥಾನ

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ 2027ರ ಏಕದಿನ ವಿಶ್ವಕಪ್‌ಗೆ ತಮ್ಮ ಸಂಭಾವ್ಯ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಶುಭ್‌ಮನ್ ಗಿಲ್‌ಗೆ ನಾಯಕತ್ವ ನೀಡಿದ್ದು, ಅನುಭವಿ ವೇಗಿ ಹಾಗೂ ಮ್ಯಾಚ್ ವಿನ್ನರ್ ಮೊಹಮ್ಮದ್ ಶಮಿಯನ್ನು ತಂಡದಿಂದ ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.
Read Full Story

05:23 PM (IST) Jul 23

ಭಾರತದ 'ಆಪರೇಷನ್ ಸಿಂಧೂರ್' ಅದ್ಭುತ ಯಶಸ್ಸು, ಪಾಕ್ ಸೇನೆ ಸುಳ್ಳು ಹೇಳ್ತಿದೆ - ಇಮ್ರಾನ್ ಖಾನ್ ಸಹೋದರಿ ಸ್ಫೋಟಕ ಹೇಳಿಕೆ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ನೊರೀನ್ ನಿಯಾಜಿ, ಭಾರತದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಯಶಸ್ಸನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸೇನೆಯ ಸೋಲನ್ನು ಮುಚ್ಚಿಹಾಕಲು ಪಾಕಿಸ್ತಾನ ಸುಳ್ಳು ಹೇಳುತ್ತಿದೆ ಮತ್ತು ಇಸ್ರೇಲ್ ಅನ್ನು ಗುರುತಿಸಲು ರಹಸ್ಯವಾಗಿ ಒಪ್ಪಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಪಾಕಿಸ್ತಾನದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
Read Full Story

04:36 PM (IST) Jul 23

CJP Propest - ಕಾಕ್ರೋಚ್ ಪ್ರತಿಭಟನೆಯಲ್ಲಿ ಗಮನ ಸೆಳೆದ ಸೋನಿಯಾ ಸೆಹ್ರಾವತ್​ ಯಾರು? ಯಾಕಿಷ್ಟು ಚರ್ಚೆ

ದೆಹಲಿ ಪ್ರತಿಭಟನೆಯ ವೇಳೆ ಆರ್‌ಎಎಫ್ ಅಧಿಕಾರಿ ಸೋನಿಯಾ ಸೆಹ್ರಾವತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಜಿರಳೆ ಚಿತ್ರವು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರನ್ನು ಅವಮಾನಿಸಲಾಗಿದೆ ಎಂಬ ಆರೋಪದ ನಡುವೆ, ಅವರ ಹಿನ್ನೆಲೆ ಮತ್ತು ಸರ್ಕಾರಿ ನೌಕರರ ಸಾಮಾಜಿಕ ಮಾಧ್ಯಮ ಬಳಕೆಯ ನಿಯಮಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.
Read Full Story

04:03 PM (IST) Jul 23

ಭಾರತಕ್ಕೆ ಲಗ್ಗೆ ಇಟ್ಟ ಐಷಾರಾಮಿ ಎಲೆಕ್ಟ್ರಿಫೈಡ್ ಮರ್ಸಿಡಿಸ್, ಕಾರಿನ ದುಡ್ಡಲ್ಲಿ ಬೆಂಗಳೂರಲ್ಲಿ ಸೈಟ್ ತೆಗೆದು ಮನೆ ಕಟ್ಟಬಹುದು!

ಮರ್ಸಿಡಿಸ್-ಬೆನ್ಜ್ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಫೈಡ್ ಎಎಂಜಿ ಇ-ಕ್ಲಾಸ್, 'ಮರ್ಸಿಡಿಸ್-ಎಎಂಜಿ ಇ 53 ಹೈಬ್ರಿಡ್ 4ಮ್ಯಾಟಿಕ್+' ಅನ್ನು ಬಿಡುಗಡೆ ಮಾಡಿದೆ. ಈ ಐಷಾರಾಮಿ ಕಾರು ಶಕ್ತಿಶಾಲಿ 3.0-ಲೀಟರ್ ಇಂಜಿನ್   ಮತ್ತು ಕೇವಲ ಎಲೆಕ್ಟ್ರಿಕ್ ಮೋಡ್‌ನಲ್ಲಿ 100 ಕಿ.ಮೀ. ವರೆಗೆ ಚಲಿಸುತ್ತದೆ.

Read Full Story

03:48 PM (IST) Jul 23

ದೇಶಾದ್ಯಂತ 629 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಿಳಂಬ - 103 ಗುತ್ತಿಗೆದಾರರು ಬ್ಲ್ಯಾಕ್‌ಲಿಸ್ಟ್‌

ದೇಶದಲ್ಲಿ 629 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನಿಗದಿತ ಸಮಯ ಮೀರಿ ವಿಳಂಬವಾಗಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಕಳಪೆ ಕಾಮಗಾರಿ ನಡೆಸಿದ 103 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ..

Read Full Story

03:42 PM (IST) Jul 23

'ನಾನು ಅವನಿಗೆ ಹೆಚ್ಚಿಗೆ.....' - ಜಿಂಬಾಬ್ವೆ ಎದುರಿನ ಮೊದಲ ಮ್ಯಾಚ್‌ಗೂ ಮುನ್ನ ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ

ಹರಾರೆ: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ, ಇಂದಿನಿಂದ ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.

Read Full Story

02:23 PM (IST) Jul 23

ಜನರನ್ನು ಮೂರ್ಖರನ್ನಾಗಿಸಬೇಡಿ, ನಾಟಕ ಬೇಡ - ರಾಹುಲ್ ಗಾಂಧಿ ವಿರುದ್ಧ ಸೋನಂ ವಾಂಗ್ಚುಕ್​ ಪತ್ನಿ ಕಿಡಿಕಿಡಿ

ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ನಡೆಸಿದ ನೀಟ್ ಹಗರಣ ಸಂಬಂಧಿತ ಪ್ರತಿಭಟನೆಯನ್ನು ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಟೀಕಿಸಿದ್ದಾರೆ. ಈ ಪ್ರತಿಭಟನೆಯು "ಪ್ರಾಮಾಣಿಕವಲ್ಲ" ಎಂದಿರುವ ಅವರು, ರಾಜಕಾರಣಿಗಳು ವಾಂಗ್ಚುಕ್ ಅವರ ಖ್ಯಾತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೇರಬೇಕಿತ್ತು ಎಂದು ಹೇಳಿದ್ದಾರೆ.
Read Full Story

02:04 PM (IST) Jul 23

ಮಧುಚಂದ್ರದ ರಕ್ತ ಕಥೆ - ಸೋನಂ ಜಾಮೀನು ರದ್ದು- 3 ವಾರಗಳ ಒಳಗೆ ಶರಣು; 'ಸುಪ್ರೀಂ'​ ಹೇಳಿದ್ದೇನು?

ಹನಿಮೂನ್​ಗೆಂದು ಕರೆದೊಯ್ದು ಪತಿಯನ್ನೇ ಕೊಲೆ ಮಾಡಿಸಿದ ಆರೋಪ ಹೊತ್ತಿರುವ ಸೋನಮ್ ರಘುವಂಶಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಮೂರು ವಾರಗಳಲ್ಲಿ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣವನ್ನು ಆರು ತಿಂಗಳೊಳಗೆ ಇತ್ಯರ್ಥಪಡಿಸುವಂತೆಯೂ ಪರೋಕ್ಷವಾಗಿ ಸೂಚನೆ ನೀಡಿದೆ.
Read Full Story

01:32 PM (IST) Jul 23

FIFA Team Of The Tournament - ಫಿಫಾ ವಿಶ್ವಕಪ್‌ ಇಲೆವೆನ್‌ ಪ್ರಕಟ - ಹ್ಯಾರಿ ಕೇನ್‌, ಯಮಾಲ್‌ ಔಟ್‌!

ಫಿಫಾ, ವಿಶ್ವಕಪ್ ಟೂರ್ನಿಯ ಅತ್ಯುತ್ತಮ ತಂಡವನ್ನು ಪ್ರಕಟಿಸಿದೆ. ಸ್ಪೇನ್ ಮತ್ತು ಫ್ರಾನ್ಸ್‌ನಿಂದ ತಲಾ ಮೂವರು ಆಟಗಾರರು ಹಾಗೂ ಅರ್ಜೆಂಟೀನಾದಿಂದ ಇಬ್ಬರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಫಿಫಾ ವಿಶ್ವಕಪ್‌ ಟೀಂ ಆಫ್‌ ದಿ ಟೂರ್ನಮೆಂಟ್‌ನಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ ಬನ್ನಿ.

Read Full Story

01:23 PM (IST) Jul 23

ಪಶ್ಚಿಮ ಏಷ್ಯಾ ಯುದ್ಧದ ಬಿಸಿ - ಭಾರತದ ದೈತ್ಯ ತೈಲ ಕಂಪನಿ ಬಿಪಿಸಿಎಲ್, ಎಚ್‌ಪಿಸಿಎಲ್ ಕೋಟ್ಯಂತರ ರೂಪಾಯಿ ಭಾರಿ ನಷ್ಟ!

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾದ ಕಾರಣ, ದೇಶೀಯ ಇಂಧನ ದರಗಳನ್ನು ಹೆಚ್ಚಿಸದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಚ್‌ಪಿಸಿಎಲ್ ₹12,265 ಕೋಟಿ ಮತ್ತು ಬಿಪಿಸಿಎಲ್ ₹3,962.13 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿವೆ.
Read Full Story

12:56 PM (IST) Jul 23

'ಶ್ರೀರಾಮನ ನಿಂದಿಸೋದು' -ಡೆಲ್ಲಿ ಪ್ರತಿಭಟನೆ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿರುವ ಅವರು, ಭಾರತದಲ್ಲಿ ನಡೆಯುವ ಪ್ರತಿಭಟನೆಗಳ ಹಿಂದೆ ಒಂದು ನಿರ್ದಿಷ್ಟ ಸ್ಕ್ರಿಪ್ಟ್ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

Read Full Story

12:56 PM (IST) Jul 23

ಜಿಂಬಾಬ್ವೆ ಎದುರು ಮೂವರ ಪಾದಾರ್ಪಣೆಗೆ ವೇದಿಕೆ ಸಜ್ಜು! ಭಾರತ-ಜಿಂಬಾಬ್ವೆ ಮ್ಯಾಚ್ ಆರಂಭದ ಸಮಯದಲ್ಲೂ ಮಹತ್ವದ ಬದಲಾವಣೆ

ಇಂದು ಹರಾರೆಯಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡದಲ್ಲಿ ರಿಂಕು ಸಿಂಗ್ ಕಮ್‌ಬ್ಯಾಕ್ ಮಾಡಲಿದ್ದು, ಹಲವು ಯುವ ಆಟಗಾರರು ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದೆ.
Read Full Story

12:28 PM (IST) Jul 23

50 ವರ್ಷಗಳ ಬಳಿಕ ತಮಿಳು ನಾಡಿನಲ್ಲಿ ಇತಿಹಾಸ ಮರುಕಳಿಸಿತು! CM Thalapathy Vijay ಅಂದ್ರೆ ಸುಮ್ನೇನಾ?

Actor Thalapathy Vijay: ಒಬ್ಬರು ಅಧಿಕಾರದಲ್ಲಿ ಮುಖ್ಯಮಂತ್ರಿ... ಇನ್ನೊಂದೆಡೆ ಥಿಯೇಟರ್‌ನಲ್ಲಿ ಮಾಸ್ ಹೀರೋ! 50 ವರ್ಷಗಳ ನಂತರ ತಮಿಳು ಚಿತ್ರರಂಗದ ಇತಿಹಾಸದಲ್ಲಿ ಈ ಅಪರೂಪದ ಘಟನೆ ಪುನರಾವರ್ತನೆಯಾಗಿದೆ. ಎಂಜಿಆರ್‌ನಿಂದ ದಳಪತಿ ವಿಜಯ್‌ವರೆಗೆ ನಡೆದ ಈ ಟ್ರೆಂಡಿಂಗ್ ಬೆಳವಣಿಗೆ ಇದು.

Read Full Story

12:13 PM (IST) Jul 23

IND vs ZIM - ಈ 5 ಕಾರಣಕ್ಕಾದರೂ ನೀವು ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ನೋಡಲೇಬೇಕು!

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭವಾಗಲಿದೆ. ಈ ಸರಣಿ ಹಲವು ಕಾರಣಗಳಿಗೆ ವಿಶೇಷತೆ ಎನಿಸಿಕೊಂಡಿದೆ. ಈ ಪೈಕಿ ಈ ಐದು ಕಾರಣಗಳಿಗೋಸ್ಕರವಾದರೂ ಕ್ರಿಕೆಟ್‌ ಅಭಿಮಾನಿಗಳು ಈ ಸರಣಿಯನ್ನು ನೋಡಲೇಬೇಕು.

Read Full Story

12:05 PM (IST) Jul 23

ಸೀರೆ ಕೊಡಿಸಲು ಒಪ್ಪದ ಗಂಡ; ಕುಕ್ಕರ್‌ನಿಂದ ಹೊಡೆದ ಕತ್ತು ಹಿಸುಕಿ ಕೊಂದ ಪತ್ನಿಅರೆಸ್ಟ್

ಸೀರೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಾಳೆ. ಜಗಳದ ವೇಳೆ ಕುಕ್ಕರ್‌ನಿಂದ ಹೊಡೆದು, ನಂತರ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Read Full Story

11:24 AM (IST) Jul 23

ಅಂದು ಪೇಪರ್ ಲೀಕ್ ವಿರುದ್ಧ ಹೋರಾಡಿ ಲಾಠಿ ಏಟು ತಿಂದಿದ್ದ ಧಮೇಂದ್ರ ಪ್ರಧಾನ್; ಇಂದು ತಿರುಗಿದ ಬಾಣ

ನೀಟ್ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ.  1997ರಲ್ಲಿ ಅವರು ಪೇಪರ್ ಲೀಕ್ ವಿರುದ್ಧ ನಡೆಸಿದ್ದ ಹೋರಾಟ ಮತ್ತು ಪೊಲೀಸ್ ಲಾಠಿ ಏಟು ತಿಂದಿದ್ದ ಘಟನೆ ವೈರಲ್ ಆಗಿದೆ.

Read Full Story

10:48 AM (IST) Jul 23

ಅವನತಿಯ ಅಂಚಿನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ - ದೇಶಗಳಿಗಿಲ್ಲ ಆತಿಥ್ಯದ ಆಸಕ್ತಿ!

ಹಲವು ದೇಶಗಳು ಕಾಮನ್‌ವೆಲ್ತ್‌ ಗೇಮ್ಸ್‌ನ ಆತಿಥ್ಯಕ್ಕೆ ನಿರಾಸಕ್ತಿ ತೋರುತ್ತಿದ್ದು, ಹೆಚ್ಚುತ್ತಿರುವ ವೆಚ್ಚವೇ ಪ್ರಮುಖ ಕಾರಣವಾಗಿದೆ. ಈ ನಡುವೆ, 2030ರ ಗೇಮ್ಸ್‌ ಆತಿಥ್ಯವನ್ನು ಭಾರತ ಪಡೆದುಕೊಂಡಿದ್ದು, ಮುಂಬರುವ ಕ್ರೀಡಾಕೂಟದಲ್ಲಿ 126 ಅಥ್ಲೀಟ್‌ಗಳೊಂದಿಗೆ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಕರ್ನಾಟಕದ 8 ಕ್ರೀಡಾಪಟುಗಳು ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Read Full Story

10:48 AM (IST) Jul 23

ನೀಟ್ ಸಮರ - ಮೌನ ಮುರಿದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು, ಬೇಡಿಕೆಗಳೇನು?

ನೀಟ್ ಅಕ್ರಮದ ಕುರಿತು ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.

Read Full Story

10:46 AM (IST) Jul 23

ಸರ್ಕಾರಿ ಬಸ್ ಎಗರಿಸಿದ ಕುಡುಕ.. ಬರೋಬ್ಬರಿ 18 ಕಿ.ಮೀ. ರೋಚಕ ಚೇಸ್.. ಮುಂದೇನಾಯ್ತು..? VIDEO

ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ನಿಲ್ಲಿಸಿದ್ದ ಸರ್ಕಾರಿ ಬಸ್ಸನ್ನು ಕದ್ದಿದ್ದಾನೆ. ಪೊಲೀಸರು ಜಿಪಿಎಸ್ ಮೂಲಕ ಬಸ್ಸನ್ನು ಬೆನ್ನಟ್ಟಿ, ಸುಮಾರು 18 ಕಿಲೋಮೀಟರ್‌ಗಳ ಸಿನಿಮೀಯ ಚೇಸಿಂಗ್ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಹೈವೇಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Read Full Story

10:35 AM (IST) Jul 23

ಮತ್ತೆ ಬಂತು ಮಿನಿ ಒಲಿಂಪಿಕ್ಸ್‌; ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ ಇಂದಿನಿಂದ ಆರಂಭ

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ 23ನೇ ಕಾಮನ್‌ವೆಲ್ತ್‌ ಗೇಮ್ಸ್‌ ಆರಂಭವಾಗಲಿದ್ದು, 74 ದೇಶಗಳು ಪಾಲ್ಗೊಳ್ಳಲಿವೆ. ವೆಚ್ಚ ಕಡಿತದ ಕಾರಣ ಈ ಬಾರಿ ಕ್ರಿಕೆಟ್‌, ಶೂಟಿಂಗ್‌, ಹಾಕಿ ಸೇರಿದಂತೆ ಹಲವು ಪ್ರಮುಖ ಕ್ರೀಡೆಗಳನ್ನು ಕೈಬಿಡಲಾಗಿದ್ದು, ಇದು ಭಾರತದ ಪದಕ ಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
Read Full Story

09:48 AM (IST) Jul 23

ನೀಟ್ ವಿವಾದ - ಪ್ರತಿಭಟನಾಕಾರರ ಜತೆ ಮಾತನಾಡಲು ಇಷ್ಟು ವಿಳಂಬವೇಕೆ? ಕೇಂದ್ರದ ವಿರುದ್ಧ ಸಿಡಿದೆದ್ದ ಕೆ.ಅಣ್ಣಾಮಲೈ

ನೀಟ್ ಪರೀಕ್ಷಾ ಅಕ್ರಮ ಮತ್ತು ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಮಾಜಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯ ವೈಫಲ್ಯಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪ್ರತಿಭಟನೆಯನ್ನು ಸ್ವಾರ್ಥಿಗಳು ದುರುಪಯೋಗಪಡಿಸಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Read Full Story

09:42 AM (IST) Jul 23

ನೀಟ್ ಹಗರಣ - ಕೊನೆಗೂ ಮೌನ ಮುರಿದ ಮೋದಿ, ತಪ್ಪಿತಸ್ಥರಿಗೆ ಕಾದಿದೆ ಶಾಕ್..!

ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ಯುವಕರ ಭವಿಷ್ಯವೇ ನಮಗೆ ಮುಖ್ಯವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದ್ದಾರೆ.
Read Full Story

09:23 AM (IST) Jul 23

ರಾಷ್ಟ್ರೀಯ ಹೆದ್ದಾರಿಗಳ ಮೃತ್ಯುಪಾಶ - 3 ವರ್ಷಗಳಲ್ಲಿ 37 ಸಾವಿರಕ್ಕೂ ಹೆಚ್ಚು ಜನರ ಬಲಿ; ಕರ್ನಾಟಕಕ್ಕೆ 3ನೇ ಸ್ಥಾನ!

ಕಳೆದ ಮೂರು ವರ್ಷಗಳಲ್ಲಿ ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ 6,358 'ಬ್ಲ್ಯಾಕ್ ಕಾರಿಡಾರ್'ಗಳಲ್ಲಿ 37,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಅತಿ ಹೆಚ್ಚು ಅಪಘಾತ ಪೀಡಿತ ವಲಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಅಪಾಯಕಾರಿ ವಲಯಗಳನ್ನು ಸರಿಪಡಿಸಲು ಸರ್ಕಾರ  ಕ್ರಮಗಳನ್ನು ಕೈಗೊಳ್ಳುತ್ತಿದೆ.

Read Full Story

08:48 AM (IST) Jul 23

ದೆಹಲಿ ಸಿಜೆಪಿ ಪ್ರತಿಭಟನೆ - ರಾತ್ರಿ ಕನ್ನಾಟ ಪ್ಯಾಲೇಸ್ ಬಳಿ ನಡೆದಿದ್ದೇನು? ಪಿಎಸ್‌ಐಗೆ ಗಾಯ

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಕನ್ನಾಟ ಪ್ಯಾಲೇಸ್ ಬಳಿ ನಡೆದ ಕಲ್ಲು ತೂರಾಟದಲ್ಲಿ ಪಿಎಸ್‌ಐ ಒಬ್ಬರು ಗಾಯಗೊಂಡಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದ್ದು, ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.

Read Full Story

05:29 AM (IST) Jul 23

10 ವರ್ಷದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಲೀಕ್‌, ಪ್ರಧಾನಿ ಮೋದಿ ಕ್ಷಮೆಯಾಚಿಸಲಿ - ರಾಹುಲ್ ಗಾಂಧಿ

ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, 7.5 ಕೋಟಿ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಶಿಕ್ಷಣ ಸಚಿವ ಪ್ರಧಾನ್ ಪದಚ್ಯುತಿ ಹಾಗೂ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದು, ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Read Full Story

More Trending News