Published : Nov 20, 2025, 07:25 AM ISTUpdated : Nov 20, 2025, 08:13 PM IST

India Latest News Live: ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್‌ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್

ಸಾರಾಂಶ

ಚೆನ್ನೈ: 'ಪ್ರಧಾನಿ ನರೇಂದ್ರ ಮೋದಿ ನರಕಾಸುರನಿದ್ದಂತೆ. ಅವರನ್ನು ಸಂಹರಿಸಬೇಕು' ಎಂದು ತಮಿಳುನಾಡಿದ ಡಿಎಂಕೆ ತೆಂಕಾಸಿ ಜಿಲ್ಲಾ ಮುಖಂಡ ಜೆ. ಜೆಯಬಾಲನ್ ಕರೆ ನೀಡಿದ್ದಾರೆ. 'ಮೋದಿ ನಿಮ್ಮ ಮತಗಳನ್ನು ಕಸಿದು ಕೊಳ್ಳಲು ಹತಾಶರಾಗಿದ್ದಾರೆ. ಅವರು ನರಕಾಸುರನಂತಹ ರಾಕ್ಷಸ. ಅಂತಹ ವ್ಯಕ್ತಿಯನ್ನು ನಿರ್ಮೂಲನೆ ಮಾಡಿದರಷ್ಟೆ ತಮಿಳುನಾಡಿಗೆ ನಿಜವಾದ ಲಾಭ. ಎಲ್ಲರೂ ಹೋರಾಡೋಣ' ಎಂದಿದ್ದಾರೆ. ಡಿಎಂಕೆ ನಾಯಕನ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Sicko leave

08:13 PM (IST) Nov 20

ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್‌ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್

ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್‌ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್, ಮುಂಬೈನಲ್ಲಿ ಆಯೋಜನೆಗೊಂಡಿದ್ದ ಟ್ರಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್‌ಗಾಗಿ ರಜೆ ಕೇಳಿದ್ದಾನೆ. ಹಲವರು ಇದೇ ವಾಸ್ತವ ಎಂದಿದ್ದಾರೆ.

Read Full Story

08:11 PM (IST) Nov 20

ವೈದ್ಯಕೀಯ ರಜೆಯಲ್ಲಿದ್ದರೂ, ಐಸಿಯುವಿನಲ್ಲಿದ್ದಾಗಲೇ ರಾಜೀನಾಮೆ ಪತ್ರಕ್ಕೆ ಒತ್ತಾಯಿಸಿದ ಟಿಸಿಎಸ್!

ತಂದೆಯ ತುರ್ತು ಚಿಕಿತ್ಸೆಗಾಗಿ ರಜೆಯಲ್ಲಿದ್ದ ಟಿಸಿಎಸ್ ಉದ್ಯೋಗಿಯೊಬ್ಬರನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ, ನಂತರ ಗ್ರಾಚ್ಯುಟಿ ನಿರಾಕರಿಸಿದ ಘಟನೆ ನಡೆದಿದೆ. ಕಾರ್ಮಿಕ ಇಲಾಖೆಯ ಮಧ್ಯಪ್ರವೇಶದಿಂದ ಉದ್ಯೋಗಿಗೆ ನ್ಯಾಯ ಸಿಕ್ಕಿದ್ದು, ಕಂಪನಿಗೆ ಪೂರ್ಣ ಗ್ರಾಚ್ಯುಟಿ ಪಾವತಿಸಲು ಆದೇಶಿಸಲಾಗಿದೆ.

Read Full Story

07:53 PM (IST) Nov 20

ಪುಟಿನ್​- ಜಿನ್‌ಪಿಂಗ್ ರಹಸ್ಯ ಭೇಟಿ ಫಲ? 150 ವರ್ಷ ಜೀವಿಸೋ ಮಾತ್ರೆ ಕಂಡುಹಿಡಿದ ಚೀನಾ! ಏನಿದರ ವಿಶೇಷತೆ?

ಚೀನಾದ ಜೈವಿಕ ತಂತ್ರಜ್ಞಾನ ಕಂಪನಿಯೊಂದು ದೀರ್ಘಾಯುಷ್ಯದ ಮಾತ್ರೆಯೊಂದನ್ನು ಕಂಡುಹಿಡಿದಿದೆ. ದ್ರಾಕ್ಷಿ ಬೀಜದ ಸಂಯುಕ್ತ ಬಳಸಿ ತಯಾರಿಸಲಾದ ಈ ಮಾತ್ರೆ, ವೃದ್ಧಾಪ್ಯ ಕೋಶಗಳನ್ನು ಗುರಿಯಾಗಿಸಿ ಇಲಿಗಳ ಮೇಲೆ ಯಶಸ್ವಿ ಪ್ರಯೋಗ ಕಂಡಿದಿದೆ.

Read Full Story

07:12 PM (IST) Nov 20

ತಾಳಿ ಕಟ್ಟುವ ಹೊತ್ತಿಗೆ ಎಂಟ್ರಿ ಕೊಟ್ಟ ಮೊದಲ ಪತ್ನಿ - 2ನೇ ಮದುವೆ ಕನಸಿನಲ್ಲಿದ್ದವನಿಗೆ ಆಘಾತ

ಉತ್ತರ ಪ್ರದೇಶದಲ್ಲಿ, ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಆತನ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ವರನು ವಧುವಿಗೆ ತಾಳಿ ಕಟ್ಟುವಷ್ಟರಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ಆಕೆ, ಮದುವೆ ನಿಲ್ಲಿಸಿದ್ದಾಳೆ.

Read Full Story

06:47 PM (IST) Nov 20

ನಿತೀಶ್ ಕುಮಾರ್ 10ನೇ ಬಾರಿಗೆ ಸಿಎಂ ಆದ್ರೂ 5 ಲಾಂಗೆಸ್ಟ್ ಮುಖ್ಯಮಂತ್ರಿ ಪಟ್ಟಿಯಲ್ಲಿಲ್ಲ ಸ್ಥಾನ, ಇಲ್ಲಿದೆ ಲಿಸ್ಟ್

ನಿತೀಶ್ ಕುಮಾರ್ 10ನೇ ಬಾರಿಗೆ ಸಿಎಂ ಆದ್ರೂ 5 ಲಾಂಗೆಸ್ಟ್ ಮುಖ್ಯಮಂತ್ರಿ ಪಟ್ಟಿಯಲ್ಲಿಲ್ಲ ಸ್ಥಾನ, ಇಲ್ಲಿದೆ ಲಿಸ್ಟ್, 19 ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನದಲ್ಲಿರುವ ನಿತೀಶ್ ಕುಮಾರ್ ಈ ಅವಧಿಯಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಲಿದ್ದಾರೆ. ಸುದೀರ್ಘ ಸೇವೆ ಸಲ್ಲಿಸಿದ ಸಿಎಂ ಯಾರು?

Read Full Story

06:42 PM (IST) Nov 20

'ವಿಶ್ವ ಸುಂದರಿ' ಸ್ಪರ್ಧೆ ವೇಳೆ ಕ್ಯಾಟ್​ವಾಕ್​ನಲ್ಲೇ ಕುಸಿದು ಬಿದ್ದ ಬ್ಯೂಟಿ! ದಶಕಗಳ ಕನಸು ಭಗ್ನ? ವಿಡಿಯೋ ವೈರಲ್​

ಮಿಸ್​ ಯೂನಿವರ್ಸ್ 2025ರ ಪ್ರಾಥಮಿಕ ಸ್ಪರ್ಧೆಯಲ್ಲಿ, ಮಿಸ್ ಯೂನಿವರ್ಸ್ ಜಮೈಕಾ ಹೆನ್ರಿ ಅವರು ಕ್ಯಾಟ್​ವಾಕ್​ ಮಾಡುವಾಗ ವೇದಿಕೆಯಿಂದ ಕುಸಿದುಬಿದ್ದಿದ್ದಾರೆ. ಈ ಘಟನೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೈನಲ್​ ಸ್ಪರ್ಧೆಯಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ.
Read Full Story

06:25 PM (IST) Nov 20

'ವೈದ್ಯರು, ಶಿಕ್ಷಿತರು ಟೆರರಿಸ್ಟ್‌ಗಳು ಆಗುತ್ತಿರುವುದು ಅಪಾಯಕಾರಿ..' ಸುಪ್ರೀಂ ಕೋರ್ಟ್‌ನಲ್ಲಿ ದೆಹಲಿ ಗಲಭೆ ಕೇಸ್‌ ಬೇಲ್‌ಗೆ ವಿರೋಧ

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದ್ದಾರೆ. ವಿದ್ಯಾವಂತರು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗುವ 'ವೈಟ್ ಕಾಲರ್ ಭಯೋತ್ಪಾದನೆ'ಯ ಪ್ರವೃತ್ತಿ ಅಪಾಯಕಾರಿ ಎಂದಿದ್ದಾರೆ. 

Read Full Story

06:05 PM (IST) Nov 20

ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಜೆನ್ ಝೀ ಪ್ರತಿಭಟನೆ, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ

ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಜೆನ್ ಝೀ ಪ್ರತಿಭಟನೆ, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ, ಇಡೇ ದೇಶ ಹೊತ್ತಿ ಉರಿದು ಚುನಾಯಿತ ಪ್ರಧಾನಿ ಸೇರಿದಂತೆ ಇಡೀ ಸರ್ಕಾರ ಪತನಗೊಂಡು ಪಲಾಯನ ಮಾಡುವ ಪರಿಸ್ಥಿತಿಗೆ ಕಾರಣವಾಗಿದ್ದ ಇದೇ ZEN G ಪ್ರತಿಭಟನೆ ಮತ್ತೆ ಶುರುವಾಗಿದೆ.

Read Full Story

05:18 PM (IST) Nov 20

ದಕ್ಷಿಣ ಆಫ್ರಿಕಾ ಎದುರಿನ ಗುವಾಹಟಿ ಟೆಸ್ಟ್‌ಗೂ ಮುನ್ನ ಭಾರತಕ್ಕೆ ದೊಡ್ಡ ಶಾಕ್!

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಿಂದ ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.  

Read Full Story

05:17 PM (IST) Nov 20

ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು

ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು, 2026ರ ಆರಂಭದಿಂದಲೇ 8ನೇ ವೇತನ ಆಯೋಗ ಜಾರಿಯಾಗಲಿದೆ. ಇದರ ಪ್ರಕಾರ ವೇತನ ಎಷ್ಟಾಗಲಿದೆ? 8ನೇ ವೇತನ ಆಯೋಗದ ಮಹತ್ವದ ಅಪ್‌ಡೇಟ್ ಇಲ್ಲಿದೆ.

Read Full Story

04:34 PM (IST) Nov 20

ನಿಂಗೆ ಎಷ್ಟು ಅಳೋಕೆ ಸಾಧ್ಯನೋ ಅಷ್ಟು ಅಳು ಎಂದ ಶಿಕ್ಷಕಿ - ಸಾವಿಗೆ ಶರಣಾದ ಬಾಲಕ

Student Died after Teacher insult: ದೆಹಲಿಯ ಪ್ರತಿಷ್ಠಿತ ಸೇಂಟ್ ಕೊಲಂಬಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶೌರ್ಯ ಪಾಟೀಲ್ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಶಾಲೆಯ ಶಿಕ್ಷಕರ ಕಿರುಕುಳವೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ.

Read Full Story

04:30 PM (IST) Nov 20

ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಮನಿ ಲಾಂಡರಿಂಗ್ ಸಂಕಷ್ಟ, ಇಡಿ ಚಾರ್ಜ್‌ಶೀಟ್ ಸಲ್ಲಿಕೆ

ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಮನಿ ಲಾಂಡರಿಂಗ್ ಸಂಕಷ್ಟ, ಇಡಿ ಚಾರ್ಜ್‌ಶೀಟ್ ಸಲ್ಲಿಕೆ, ಯುಕೆ ಮೂಲದ ರಕ್ಷಣಾ ಉತ್ಪನ್ನಗಳ ಡೀಲರ್ ಜೊತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೀಗ ರಾಬರ್ಟ್ ವಾದ್ರಾ ಸಂಕಷ್ಟ ಹೆಚ್ಚಾಗಿದೆ.

 

Read Full Story

04:27 PM (IST) Nov 20

ಟೆಸ್ಟ್ ಆಡುವ ಎಲ್ಲಾ 11 ದೇಶಗಳ ಎದುರು ಶತಕ ಸಿಡಿಸಿ ಅಪರೂಪದಲ್ಲೇ ಅಪರೂಪದ ವಿಶ್ವದಾಖಲೆ ಬರೆದ ಶಾಯ್ ಹೋಪ್!

ನೇಪಿಯರ್‌: ವೆಸ್ಟ್ ತಂಡದ ಸ್ಟಾರ್ ಕ್ರಿಕೆಟಿಗ ಶಾಯ್ ಹೋಪ್, ನ್ಯೂಜಿಲೆಂಡ್ ಎದುರು ಶತಕ ಸಿಡಿಸುವ ಮೂಲಕ, ಟೆಸ್ಟ್ ಆಡುವ ಎಲ್ಲಾ ದೇಶಗಳ ತಂಡದ ವಿರುದ್ದ ಶತಕ ಸಿಡಿಸಿದ ಅಪರೂಪದ ವಿಶ್ವದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ದೀಟೈಲೈ ಇಲ್ಲಿದೆ ನೋಡಿ

 

Read Full Story

04:19 PM (IST) Nov 20

ಆಪರೇಷನ್‌ ಸಿಂದೂರ್‌ ವೇಳೆ ಭಾರತದ 3, ಪಾಕಿಸ್ತಾನದ ಐದು ಜೆಟ್‌ ಧ್ವಂಸ - ಅಮೆರಿಕ ವರದಿ

ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನದ 'ಆಪರೇಷನ್‌ ಸಿಂದೂರ್' ಕುರಿತ ಯುಎಸ್ ಕಾಂಗ್ರೆಸ್ ವರದಿಯ ಪ್ರಕಾರ, ಈ ಯುದ್ಧದ ನಿಜವಾದ ವಿಜೇತ ಚೀನಾ. ಬೀಜಿಂಗ್ ಈ ಸಂಘರ್ಷವನ್ನು ತನ್ನ ಮುಂದುವರಿದ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಒಂದು ಅವಕಾಶವಾಗಿ ಬಳಸಿಕೊಂಡಿದೆ ಎಂದು ವರದಿ ತಿಳಿಸಿದೆ.

Read Full Story

03:26 PM (IST) Nov 20

10ನೇ ಬಾರಿಗೆ ಸಿಎಂ ಆದರೂ ನಿತೀಶ್ ಕುಮಾರ್ ಆಸ್ತಿ 13 ದನ-ಕರು, 21 ರೂ ನಗದು, ಒಂದು ಮನೆ

10ನೇ ಬಾರಿಗೆ ಸಿಎಂ ಆದರೂ ನಿತೀಶ್ ಕುಮಾರ್ ಆಸ್ತಿ 13 ದನ-ಕರು,21 ರೂ ನಗದು, ಒಂದು ಮನೆ, ನಿತೀಶ್ ಕುಮಾರ್ ಬಿಹಾರದ ಅತ್ಯಂತ ಯಶಸ್ವಿ ಮುಖ್ಯಮಂತ್ರಿ. ಇವರ ಒಟ್ಟು ಆಸ್ತಿ ಇದೀಗ ಭಾರಿ ಚರ್ಚೆಯಾಗುತ್ತಿದೆ.

Read Full Story

03:02 PM (IST) Nov 20

ಕೇರಳದ ಹೋಮ್ ನರ್ಸ್ ಇಸ್ರೇಲ್‌ನಲ್ಲಿ ಸಾವು

Indian nurse dies in Israel: ಇಸ್ರೇಲ್‌ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಮೂಲದ ನರ್ಸ್ ಒಬ್ಬರು ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 34 ವರ್ಷದ ಮಹಿಳೆ ಶರಣ್ಯ ಪ್ರಸನ್ನನ್ ಮೃತಪಟ್ಟವರು ಎಂದು ತಿಳಿದು ಬಂದಿದೆ.

Read Full Story

02:54 PM (IST) Nov 20

ಎರಡು ವರ್ಷವಾದ್ರೂ ಮಿಲನಕ್ಕೆ ನಿರಾಸಕ್ತಿ ತೋರಿದ ಗಂಡನಿಗೆ ಕಾದಿತ್ತು ಭಯಾನಕ ಆಘಾತ!

violence against men: ಪತ್ನಿ ಪಿಂಕಿ ಶರ್ಮಾ ತನ್ನ ಪತಿ ಅನುಜ್ ಶರ್ಮಾನಿಗೆ ವಿಷವಿಕ್ಕಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಮದುವೆಯಾಗಿ ಎರಡು ವರ್ಷವಾದರೂ ಪತಿ ದೈಹಿಕವಾಗಿ ಸ್ಪಂದಿಸದ ಕಾರಣ, ಆತನ ನಿರಾಸಕ್ತಿಯಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.

Read Full Story

02:53 PM (IST) Nov 20

ಉದ್ಯೋಗ ಕಡಿತದ ನೋವು ತೋಡಿಕೊಂಡ ಮ್ಯಾನೇಜರ್, 70 ಲಕ್ಷ ರೂ ವೇತನದಿಂದ ಈಗ ಝಿರೋ

ಉದ್ಯೋಗ ಕಡಿತದ ನೋವು ತೋಡಿಕೊಂಡ ಮ್ಯಾನೇಜರ್, 70 ಲಕ್ಷ ರೂ ವೇತನದಿಂದ ಈಗ ಝಿರೋ , 7 ತಿಂಗಳಿನಿಂದ ಬೇರೆ ಕೆಲಸವೂ ಸಿಕ್ಕಿಲ್ಲ, ಇರುವ ಉಳಿತಾಯ, ಬ್ಯಾಂಕ್ ಬ್ಯಾನೆಲ್ಸ್ ಖಾಲಿಯಾಗಿದೆ. ಖರೀದಿಸದ ಹೊಸ ಮನೆಯ ಇಎಂಐ, ಕುಟುಂಬ ನಿರ್ವಹಣ ಕಷ್ಟವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.

Read Full Story

02:50 PM (IST) Nov 20

ಇದೇ 30ರ ಒಳಗೆ ಈ ಸರ್ಟಿಫಿಕೇಟ್​ ಸಲ್ಲಿಸದಿದ್ರೆ ಪಿಂಚಣಿ ಸಿಗಲ್ಲ! ಮನೆಯಿಂದ್ಲೇ ಸಲ್ಲಿಕೆ ಹೇಗೆ? ಹಂತ ಹಂತದ ಮಾಹಿತಿ

ಪಿಂಚಣಿದಾರರು ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯಲು ಪ್ರತಿ ವರ್ಷ 'ಜೀವನ್ ಪ್ರಮಾಣ' ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.  ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ತಪ್ಪಿದಲ್ಲಿ ಪಿಂಚಣಿ ಸ್ಥಗಿತಗೊಳ್ಳುತ್ತದೆ.  ಆನ್‌ಲೈನ್ ಮೂಲಕ ಅಥವಾ ಹತ್ತಿರದ ಕೇಂದ್ರಗಳಲ್ಲಿ ಸಲ್ಲಿಕೆ ವಿಧಾನ ವಿವರಿಸಲಾಗಿದೆ.

Read Full Story

02:18 PM (IST) Nov 20

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಿಂದ ಭಾರತದ ಇಬ್ಬರು ಮ್ಯಾಚ್ ವಿನ್ನರ್ಸ್‌ ಔಟ್! ಇಲ್ಲಿದೆ ನೋಡಿ ಸಂಭಾವ್ಯ ತಂಡ

ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.

Read Full Story

02:15 PM (IST) Nov 20

ನಟಿ ನಯನತಾರಾ ಹುಟ್ಟುಹಬ್ಬಕ್ಕೆ 10 ಕೋಟಿ ರೂ. ರೋಲ್ಸ್ ರಾಯ್ಸ್ ಕಾರು ಗಿಫ್ಟ್​! ಏನಿದರ ವಿಶೇಷತೆ?

ನಟಿ ನಯನತಾರಾ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು, ಅವರ ಪತಿ ವಿಘ್ನೇಶ್ ಶಿವನ್ 10 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಘ್ನೇಶ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ  ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story

01:39 PM (IST) Nov 20

ಬಿಗ್ ಹಿಟ್ಟರ್ ಆಂಡ್ರೆ ರಸೆಲ್ ಕೈಬಿಟ್ಟು ವಿಚಿತ್ರ ತಂತ್ರಗಾರಿಕೆ ಮಾಡಿದ ಕೆಕೆಆರ್!

ಐಪಿಎಲ್ ಮಿನಿ ಹರಾಜಿಗಾಗಿ ಕೆಕೆಆರ್ 64.3 ಕೋಟಿ ರೂ.ಗಳ ದೊಡ್ಡ ಮೊತ್ತದೊಂದಿಗೆ ಸಿದ್ಧವಾಗಿದೆ. ಆಂಡ್ರೆ ರಸೆಲ್ ಅವರನ್ನು ಅನಿರೀಕ್ಷಿತವಾಗಿ ಬಿಡುಗಡೆ ಮಾಡಿದ್ದು, ತಂಡವು ಪ್ರಮುಖ ಸ್ಥಾನಗಳನ್ನು ತುಂಬಲು ಸಜ್ಜಾಗಿದೆ.

 

Read Full Story

12:40 PM (IST) Nov 20

2026 ವಿಶ್ವಕಪ್ ವೇಳಾಪಟ್ಟಿ ಬಂತು; ಭಾರತ, ಪಾಕಿಸ್ತಾನ ಮ್ಯಾಚ್ ಯಾವಾಗ?

U19 ವಿಶ್ವಕಪ್ ವೇಳಾಪಟ್ಟಿ: 2026ರ ಅಂಡರ್ 19 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಜನವರಿ 15 ರಂದು ಭಾರತ ಮತ್ತು ಯುಎಸ್ಎ ನಡುವಿನ ಪಂದ್ಯದೊಂದಿಗೆ ಟೂರ್ನಿ ಶುರುವಾಗಲಿದೆ. 

Read Full Story

11:45 AM (IST) Nov 20

ಗುವಾಹಟಿ ಟೆಸ್ಟ್ - ಎರಡನೇ ಪಂದ್ಯಕ್ಕೆ ಪಿಚ್ ಟೆನ್ಷನ್! ಟೀಂ ಇಂಡಿಯಾ ಡಿಮ್ಯಾಂಡ್ ಏನು?

ಕೋಲ್ಕತಾ ಟೆಸ್ಟ್‌ನಲ್ಲಿ ಸೋತ ಭಾರತ ತಂಡ ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್‌ಗೆ ಸಜ್ಜಾಗುತ್ತಿದೆ. ಈಡನ್‌ ಗಾರ್ಡನ್ಸ್‌ಗಿಂತ ಭಿನ್ನವಾಗಿರುವ ಗುವಾಹಟಿ ಪಿಚ್, ಕೆಂಪು ಮಣ್ಣಿನಿಂದ ಕೂಡಿದ್ದು ವೇಗಿಗಳಿಗೆ ನೆರವಾಗುವ ನಿರೀಕ್ಷೆಯಿದೆ.  

Read Full Story

11:44 AM (IST) Nov 20

3 ಐವಿ ಡ್ರಿಪ್‌ಗೆ ಒಂದು ಲಕ್ಷ - ಆಸ್ಪತ್ರೆಯ ಕರಾಳ ಮುಖ ತೆರೆದಿಟ್ಟ ಮಹಿಳೆ

hospital scam: ಆಸ್ಪತ್ರೆಗಳ ಒಳಗೆ ನಡೆಯುವ ಅಕ್ರಮಗಳು ಬಹುತೇಕ ಜನ ಸಾಮಾನ್ಯರಿಗೆ ತಿಳಿಯುವುದೇ ಇಲ್ಲ, ಆಸ್ಪತ್ರೆಯೊಂದರಲ್ಲಿ ನಡೆದ ಹಗರಣವೊಂದರ ಬಗ್ಗೆ  ಟ್ರಾವೆಲ್ ವ್ಲಾಗರ್ ಒಬ್ಬರು ಹೇಳಿಕೊಂಡಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

11:43 AM (IST) Nov 20

ಮುಖ್ಯಮಂತ್ರಿಯಾಗಿ 10ನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್

ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಎನ್‌ಡಿಎ ನಾಯಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಎನ್‌ಡಿಎ ಕೂಟವು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ.
Read Full Story

10:37 AM (IST) Nov 20

ಇದೇ ನೋಡಿ ಭಾರತದ ಹಿರಿಮೆ! ನಮ್ಮ ಪುಣ್ಯಭೂಮಿ ಕೊಂಡಾಡಿದ ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್

ಭಾರತದೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮಾಡಿದ ಕಾಮೆಂಟ್‌ಗಳು ವೈರಲ್ ಆಗಿವೆ. 2 ದಶಕಗಳಿಗೂ ಹೆಚ್ಚು ಕಾಲದ ಭಾರತ ಪ್ರವಾಸದಲ್ಲಿ ತಮಗೆ ಪ್ರೀತಿ ಮತ್ತು ಗೌರವ ಮಾತ್ರ ಸಿಕ್ಕಿದೆ ಎಂದು ಭಾರತದ ಪುಣ್ಯಭೂಮಿಯನ್ನು ಕೊಂಡಾಡಿದ್ದಾರೆ.

Read Full Story

08:19 AM (IST) Nov 20

ತಲಾಖ್‌ ಎ ಹಸನ್‌ಗೆ ನಿಷೇಧ? ಮಹಿಳೆಯರ ಘನತೆ ಹಾಳಾಗಲು ಬಿಡಲ್ಲ - ಸುಪ್ರೀಂ

'ತಲಾಖ್-ಎ-ಹಸನ್' ಪದ್ಧತಿಯನ್ನು ರದ್ದುಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ಗಂಭೀರ ಚಿಂತನೆ ನಡೆಸಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ಈ ಪದ್ಧತಿಯನ್ನು ನ್ಯಾಯಾಂಗ ಹಸ್ತಕ್ಷೇಪದ ಮೂಲಕ ನಿಷೇಧಿಸುವ ಸಾಧ್ಯತೆಯಿದ್ದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ನ್ಯಾಯಾಲಯ ಮುಂದಾಗಿದೆ.

Read Full Story

07:54 AM (IST) Nov 20

ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ; ಏನಿದು ಪ್ರಕರಣ?

Supreme Court: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಹಲವು ನಿಬಂಧನೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆ.

Read Full Story

More Trending News