ತಿರುಮಲ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆಯಾಗಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಇಡೀ ಪ್ರಕರಣದಲ್ಲಿ ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

11:01 PM (IST) Feb 20
ಭಾರತೀಯ ಕ್ರಿಕೆಟಿಗ ರಾಹುಲ್ ಚಾಹರ್ ತಮ್ಮ ಪತ್ನಿ ಇಶಾನಿ ಜೋಹರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಈ ಬೇರ್ಪಡೆಯ ನಂತರ, ಅವರ ಜಾಟ್ ಸಮುದಾಯದ ಹಿನ್ನೆಲೆ, ಕುಟುಂಬ ಮತ್ತು ವಿವಾಹದ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
10:48 PM (IST) Feb 20
ಜಾಗತಿಕ ಎಐ ಶೃಂಗಸಭೆಯಲ್ಲಿ, ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಟಾಪ್‌ಲೆಸ್ ಪ್ರತಿಭಟನೆ ನಡೆಸಿದರು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ, ಇದು ವಿಶ್ವ ವೇದಿಕೆಯಲ್ಲಿ ಭಾರತವನ್ನು ಮುಜುಗರಕ್ಕೀಡು ಮಾಡಲು ವ್ಯವಸ್ಥಿತವಾಗಿ ರೂಪಿಸಿದ ಸಂಚು ಎಂದು ಆರೋಪಿಸಿದೆ.
10:35 PM (IST) Feb 20
From Hardik to Rahul Chahar: Indian Cricketers Who Recently Divorced ಭಾರತೀಯ ಕ್ರಿಕೆಟ್‌ನಲ್ಲಿ ವಿಚ್ಛೇದನದ ಪರ್ವ ಮುಂದುವರೆದಿದೆ. ರಾಹುಲ್ ಚಹರ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಪ್ರಮುಖ ಆಟಗಾರರು ತಮ್ಮ ಪತ್ನಿಯರಿಂದ ಬೇರ್ಪಟ್ಟಿದ್ದು, ಅವರ ವೈವಾಹಿಕ ವಿವರಗಳು ಇಲ್ಲಿವೆ.
09:55 PM (IST) Feb 20
ಅಗರ್ತಲಾದಲ್ಲಿ ನಡೆದ ರಾಜಭಾಷಾ ಸಮ್ಮೇಳನದಲ್ಲಿ, ಹಿಂದಿ ಭಾಷೆಯನ್ನು ಉತ್ತೇಜಿಸುವುದರಿಂದ ಪ್ರಾದೇಶಿಕ ಭಾಷೆಗಳು ದುರ್ಬಲಗೊಳ್ಳುವುದಿಲ್ಲ, ಬದಲಾಗಿ ಗಟ್ಟಿಗೊಳ್ಳುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
09:42 PM (IST) Feb 20
ವೈದ್ಯಕೀಯ ವಿದ್ಯಾರ್ಥಿಗಳ ಅಂತರಿಕ ಪರೀಕ್ಷೆಯಲ್ಲಿ ರಾಜಾರೋಷವಾಗಿ ಮೊಬೈಲ್ ಫೋನ್ ಹಿಡಿದುಕೊಂಡು ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ಕಾಲೇಜಿನ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದಂತಹ ಘಟನೆ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
09:39 PM (IST) Feb 20
ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳು ಸಹಾಯಕ್ಕೆ ಯಾರೂ ಇಲ್ಲದ ಕಾರಣ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆಯ ನಂತರವೂ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
09:16 PM (IST) Feb 20
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 2026 ರಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಯೋಜಿಸುತ್ತಿದೆ. ಈ ಕ್ರಮದಿಂದ, ಎಲ್ಲಾ ಪಾವತಿಗಳನ್ನು ಫಾಸ್ಟ್‌ಟ್ಯಾಗ್ ಮತ್ತು ಯುಪಿಐ ಮೂಲಕ ಡಿಜಿಟಲ್ ಆಗಿ ಮಾಡಲಾಗುತ್ತದೆ.
08:54 PM (IST) Feb 20
ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸುಂಕದ ಆದೇಶಗಳನ್ನು 'ಅಕ್ರಮ' ಎಂದು ಘೋಷಿಸಿ ರದ್ದುಗೊಳಿಸಿದೆ. ಈ ತೀರ್ಪು ಅಧ್ಯಕ್ಷರ ಕಾರ್ಯನಿರ್ವಾಹಕ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನಿಸಿದೆ.
08:24 PM (IST) Feb 20
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೂಪರ್ 8 ಹಂತದಲ್ಲಿ ಭಾರತದ ಏನಾಗಲಿದೆ ಅನ್ನೋದನ್ನು ಪಾಕ್ ಮಾಜಿ ವೇಗಿ ಹೇಳಿದ್ದಾರೆ. ಸೆಮಿಫೈನಲ್‌ಗೂ ಮೊದಲು ಟ್ವಿಸ್ಟ್ ಕೊಟ್ಟಿದ್ದಾರೆ.
08:16 PM (IST) Feb 20
07:30 PM (IST) Feb 20
ಡೇಟಿಂಗ್ ಆ್ಯಪ್ ಬಿಡಿ ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ, ಇಷ್ಟೇ ನೋಡಿ, ಆಂಟಿಯರ ಜೊತೆ ನಾಲ್ಕು ರಾತ್ರಿಗಳ ಟೂರ್ ಆಫರ್, ಉನ್ನತ ಹೊಟೆಲ್‌ನಲ್ಲಿ ವಾಸ್ತವ್ಯ ಸೇರಿ ಹಲವು ಆತಿಥ್ಯ. ಏನಿದು ಮ್ಯಾಚ್ ಮೇಕಿಂಗ್ ಟೂರ್ ಆಫರ್?
07:26 PM (IST) Feb 20
ನಾಸಾದ ಗ್ರಹ ರಕ್ಷಣಾ ಮುಖ್ಯಸ್ಥರಾದ ಕೆಲ್ಲಿ ಫಾಸ್ಟ್, ಭೂಮಿಯತ್ತ ಬರುತ್ತಿರುವ ಸುಮಾರು 15,000 ಪತ್ತೆಹಚ್ಚಲಾಗದ ಕ್ಷುದ್ರಗ್ರಹಗಳ ಬಗ್ಗೆ ಎಚ್ಚರಿಸಿದ್ದಾರೆ. ಈ 'ಸಿಟಿ ಕಿಲ್ಲರ್'ಗಳು ಯಾವುದೇ ನಗರವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ತಡೆಯಲು ನಮ್ಮ ಬಳಿ ತಂತ್ರಜ್ಞಾನವಿಲ್ಲ ಎಂದಿದ್ದಾರೆ.
06:59 PM (IST) Feb 20
ಸುನೀತಾ ವಿಲಿಯಮ್ಸ್ ಅವರ ಬೋಯಿಂಗ್ ಬಾಹ್ಯಾಕಾಶ ಯಾನ ವಿಫಲವಾಗಿದ್ದು, ನಾಸಾ ಇದನ್ನು 'ಟೈಪ್ ಎ' ದುರಂತ ಎಂದು ಘೋಷಿಸಿದೆ. ಕೊಲಂಬಿಯಾ ದುರಂತದಂತೆಯೇ ಎಂಜಿನಿಯರಿಂಗ್ ಮತ್ತು ನಾಯಕತ್ವದ ವೈಫಲ್ಯಗಳೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.
06:42 PM (IST) Feb 20
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಏಳು ಸೈನಿಕರನ್ನು ಸೆರೆಹಿಡಿದು ವೀಡಿಯೋ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ, ಯೋಧರು ತಮ್ಮನ್ನು ರಕ್ಷಿಸುವಂತೆ ಪಾಕ್ ಸರ್ಕಾರವನ್ನು ಕೋರುತ್ತಿದ್ದರೆ, ಪಾಕಿಸ್ತಾನ ಸರ್ಕಾರ ಮಾತ್ರ ಆ ಸೈನಿಕರು ನಮ್ಮವರಲ್ಲ ಎಂದು ಹೇಳಿ ಕೈತೊಳೆದುಕೊಂಡಿದೆ.
06:40 PM (IST) Feb 20
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರ, ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ರೇಸ್‌ನಲ್ಲಿ 'ಕಾಂತಾರ' ಖ್ಯಾತಿಯ ರುಕ್ಮಿಣಿ ವಸಂತ್ ಮತ್ತು ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಮುಂಚೂಣಿಯಲ್ಲಿದ್ದಾರೆ.
06:30 PM (IST) Feb 20
ಪ್ರೀತಿ ಅನ್ನೋದು ನೋಡೋಕೆ ಸಿಂಪಲ್ ಅನಿಸಿದ್ರೂ, ಅದರೊಳಗೊಂದು ಬೇರೆಯೇ ಪ್ರಪಂಚ ಇರುತ್ತೆ. ಅದರಲ್ಲೂ ಹುಡುಗಿಯರು, ಹುಡುಗರಿಂದ ನಿಜವಾಗ್ಲೂ ಏನು ಬಯಸುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರುತ್ತೆ. ಮನಶಾಸ್ತ್ರದ ಪ್ರಕಾರ, ಹುಡುಗರಲ್ಲಿರುವ ಯಾವ ಗುಣಗಳು ಹುಡುಗಿಯರ ಮನಸ್ಸಲ್ಲಿ ವಿಶೇಷ ಸ್ಥಾನವಿರುತ್ತೆ ನೋಡೋಣ.
06:21 PM (IST) Feb 20
ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾರನ್ನೇ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಸತತ ಮೂರು ಮ್ಯಾಚ್‌ಗಳಲ್ಲಿ ಡಕೌಟ್ ಆಗಿದ್ರೂ, ಚೋಪ್ರಾ ಅಭಿಷೇಕ್‌ಗೆ ಬೆಂಬಲ ಸೂಚಿಸಿದ್ದಾರೆ.
06:18 PM (IST) Feb 20
BMW ಮೋಟೊರಾಡ್ ಇಂಡಿಯಾ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ CE 02 ಅನ್ನು ₹4.50 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ನಿರೀಕ್ಷಿತ ಮಾರಾಟ ಕಾಣದ ಕಾರಣ, ಡೀಲರ್‌ಶಿಪ್ ಮಟ್ಟದಲ್ಲಿ ಈಗ ₹2 ಲಕ್ಷಗಳ ಭಾರಿ ರಿಯಾಯಿತಿಯೊಂದಿಗೆ ಇದನ್ನು ಮಾರಾಟ ಮಾಡಲಾಗುತ್ತಿದೆ.
06:18 PM (IST) Feb 20
ತೂಕ ಇಳಿಕೆಗೆ ಸಖತ್ ಡೇಂಜರ್ ಪ್ಲಾಸ್ಟಿಕ್ ತಿನ್ನೋ ಡಯಟ್ ಭಾರಿ ವೈರಲ್, ತಕ್ಷಣವೇ ತೂಕ ಇಳಿಕೆಯಾಗಬೇಕು, ಫ್ಯಾಟ್ ಕಡಿಮೆಯಾಗಬೇಕು ಅನ್ನೋ ಮಂದಿ ಈ ವಿಧಾನ ಅನುಸರಿಸುತ್ತಿದ್ದಾರೆ. ತಜ್ಞರು ಹೇಳೋದೇನು?
05:54 PM (IST) Feb 20
ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್, ಬರಲ್ಲ, ಆಗಲ್ಲ ಎನ್ನುತ್ತಿದ್ದ ಬಿಗ್ ಬಾಸ್ ಕಿರೀಟ ಗೆದ್ದ ಸ್ಪರ್ಧಿ ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷ ಸೇರಿಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ.
05:18 PM (IST) Feb 20
ಶಿವ ತಾಂಡವ ಸ್ತೋತ್ರದ ಬಗ್ಗೆ ಅನೇಕ ಭಾರತೀಯರಿಗೇ ಗೊತ್ತೇ ಇಲ್ಲ ಗೊತ್ತಿದ್ದರೂ, ಅದನ್ನು ಹೇಳುವುದಕ್ಕೂ ಬರುವುದಿಲ್ಲ, ಹೀಗಿರುವಾಗ ದಕ್ಷಿಣ ಕೊರಿಯಾದ ಪಾಪ್ ಗಾಯಕನೋರ್ವ ಕಷ್ಟಕರವಾಗಿರುವ ಈ ಶಿವ ತಾಂಡವ ಸ್ತೋತ್ರವನ್ನು ನಿರರ್ಗಳವಾಗಿ ಹೇಳುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
05:10 PM (IST) Feb 20
ದಕ್ಷಿಣ ಭಾರತದ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹೈ-ಪ್ರೊಫೈಲ್ ವಿವಾಹಕ್ಕಾಗಿ ಐಷಾರಾಮಿ ರೆಸಾರ್ಟ್ ಅನ್ನು ಆಯ್ಕೆ ಮಾಡಲಾಗಿದ್ದು, ಅಂತರರಾಷ್ಟ್ರೀಯ ಭದ್ರತೆ ನಿಯೋಜಿಸಲಾಗಿದೆ.
04:59 PM (IST) Feb 20
04:19 PM (IST) Feb 20
Pakistan Hockey Crisis: PHF President Resigns, Captain Banned ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಮಾನಕ್ಕೊಳಗಾದ ಪಾಕಿಸ್ತಾನ ಹಾಕಿ ತಂಡದ ವಿವಾದ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ತನಿಖೆ ನಡೆಸುವಂತೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವಿ ಮಾಡಿದ್ದಾರೆ.
03:46 PM (IST) Feb 20
ಮದುವೆಗೆ 2 ವಾರ ಇರುವಾಗಲೇ ಅರ್ಜುನ್ ತೆಂಡೂಲ್ಕರ್ ಭಾವಿ ಪತ್ನಿಯ ಕೀನ್ಯಾ ಟ್ರಿಪ್ ವೈರಲ್ ಆಗಿದೆ. ಮಾರ್ಚ್ ಮೊದಲ ವಾರದಲ್ಲಿ ಅದ್ಧೂರಿ ಮದುವೆ ನಡೆಯಲಿದೆ. ಇದಕ್ಕೂ ಮೊದಲು ಭಾವಿ ಪತ್ನಿ ಯಾರ ಜೊತೆ ಕೀನ್ಯಾ ಟ್ರಿಪ್ ಮಾಡಿದ್ದಾರೆ?
03:35 PM (IST) Feb 20
ಜಿಯಾ ಖಾನ್ ಬಾಲಿವುಡ್‌ನ ದುರಂತವಾಗಿ ಸಾವನ್ನಪ್ಪಿದ ನಟಿಯರಲ್ಲಿ ಒಬ್ಬರು. ಬದುಕಿದ್ದರೆ ಆಕೆಗೆ ಈಗ ಕೇವಲ 37 ವರ್ಷಗಳಾಗಿರುತ್ತಿದ್ದವು. ಆದರೆ 25ರ ಹರೆಯಕ್ಕೆ ಬದುಕಿಗೆ ಗುಡ್ ಬಾಯ್ ಹೇಳಿದ ಜಿಯಾ ಖಾನ್ ಅವರು ನಟಿಸಿದ ಕೆಲ ಸಿನಿಮಾಗಳ ಡಿಟೇಲ್ ಇಲ್ಲಿದೆ.
03:05 PM (IST) Feb 20
ಎಲ್ಲಾ ಮುಗಿಸಿ ಮದುವೆ ಎಂದಾಗ ಜಗಳ ಜೋರು, ಯುವತಿ ಮೇಲೆ ಅನುಮಾನ ಹೆಚ್ಚಾಗಿದೆ. ಮದುವೆ ಮಾತಿನಿಂದ ಶುರುವಾದ ಜಗಳದಲ್ಲಿ ಯುವತಿ ಪರಿಸ್ಥಿತಿ ಚಿಂತಾಜನಕವಾಗಿದ್ದರೆ, ಯುವಕ ಅರೆಸ್ಟ್ ಆಗಿದ್ದಾನೆ.
02:39 PM (IST) Feb 20
ತೆಲಂಗಾಣ: ಈಗ ಕೌಟುಂಬಿಕ ಕಲಹಗಳು ಹೆಚ್ಚೆಚ್ಚು ವರದಿಯಾಗುತ್ತಲೇ ಇವೆ. ಇವೆಲ್ಲದರ ನಡುವೆ ಇಲ್ಲೊಬ್ಬಳು ಪಾಪಿ ಪತ್ನಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಪತಿಯನ್ನು ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪರಲೋಕಕ್ಕೆ ಕಳಿಸಿದ್ದಾಳೆ. ಏನಿದು ಘಟನೆ ಯಾಕೆ ಹೀಗೆ ಮಾಡಿದ್ಲು ಅನ್ನೋದನ್ನು ನೋಡೋಣ ಬನ್ನಿ.
02:23 PM (IST) Feb 20
ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ಮ ಜಾಬ್ ಸೇಫ್ ಇದೆಯಾ? ಈ ಕುರಿತು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದು ಶೇಕಡಾ 60ಕ್ಕೂ ಏರಿಕೆಯಾಗುವ ಸಾಧ್ಯತೆ ಇದೆ.
01:57 PM (IST) Feb 20
ತೆರೆಯ ಮೇಲೆ ಕಾಣುವ ದೃಶ್ಯಗಳೆಲ್ಲವೂ ಸತ್ಯವಾಗಿರುವುದಿಲ್ಲ, ಅದರ ಹಿಂದೆ ತಂತ್ರಜ್ಞರ ಕೈಚಳಕವಿರುತ್ತದೆ. ವೈರಲ್ ಆಗಿರುವ ಸೀರಿಯಲ್ ಶೂಟಿಂಗ್ ವಿಡಿಯೋವೊಂದು, ನಾಯಕ ನಾಯಕಿಯನ್ನು ಆಸ್ಪತ್ರೆಗೆ ಎತ್ತಿಕೊಂಡು ಓಡುವ ದೃಶ್ಯ ನೋಡಬಹುದು.
01:44 PM (IST) Feb 20
01:44 PM (IST) Feb 20
ಡೊನಾಲ್ಡ್ ಟ್ರಂಪ್‌ಗೆ ಭಾರತಕ್ಕೆ ಬರುವಂತೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದಾರೆ, ಹಾಗಾಗಿ ಅವರು ಮತ್ತೆ ಬರುವ ಸಾಧ್ಯತೆಯಿದೆ ಎಂದು ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಹೇಳಿದ್ದಾರೆ. ಎಐ ಮತ್ತು 'ಪ್ಯಾಕ್ಸ್ ಸಿಲಿಕಾ' ವಿಚಾರದಲ್ಲಿ ಭಾರತದೊಂದಿಗೆ ಕೈಜೋಡಿಸಲು ಅಮೆರಿಕ ಉತ್ಸುಕವಾಗಿದೆ ಎಂದಿದ್ದಾರೆ.
01:32 PM (IST) Feb 20
ಹೊಟೆಲ್ ಕಾಫಿ ಮೇಕರ್‌ನಲ್ಲಿ ಅಂಡರ್‌ವೇರ್ ತೊಳೆದ ಇನ್‌ಫ್ಲುಯೆನ್ಸರ್, ತನ್ನ ಒಳ ಉಡುಪು ಹೇಗೆ ತೊಳೆಯುತ್ತೇನೆ ಅನ್ನೋದನ್ನು ಈ ಟ್ರಾವೆಲ್ ಮಹಿಳೆ ಟಿಪ್ಸ್ ನೀಡಿದ್ದಾರೆ. ಇದೀಗ ಹೊಟೆಲ್ ಕಾಫಿ ಮೇಕರ್‌ನಲ್ಲಿ ಕಾಫಿ ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
01:25 PM (IST) Feb 20
ಮಧ್ಯಪ್ರದೇಶದ ರೇವಾದಲ್ಲಿ ನಡೆದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಹಿರಿಯ ವೈದ್ಯ ಡಾ. ಕೆ.ಡಿ. ಸಿಂಗ್ ಅವರ ಪತ್ನಿ, ತಾನೂ ದಂತವೈದ್ಯೆಯಾಗಿರುವ ಮಹಿಳೆ, ತನ್ನ ಪತಿ ಇನ್ನೊಬ್ಬ ಯುವತಿಯೊಂದಿಗೆ ಕಾರಿನಲ್ಲಿರುವುದನ್ನು ಕಂಡು ರಸ್ತೆಯಲ್ಲೇ ಆ ಯುವತಿಗೆ ಥಳಿಸಿದ್ದಾರೆ ಎನ್ನಲಾಗಿದೆ.
01:20 PM (IST) Feb 20
ಬೆಂಗಳೂರು: ಮದುವೆ ಸೇರಿದಂತೆ ಶುಭ ಸಮಾರಂಭಗಳು ಹತ್ತಿರವಾಗುತ್ತಿದ್ದಂತೆಯೇ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಿದೆ. ಇವತ್ತಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ನೋಡೋಣ.
01:13 PM (IST) Feb 20
ಪ್ರಧಾನಿ ಮೋದಿ ಬರೀ ಅಕ್ರೋನಿಮ್‌ಗಳ ಮೂಲಕ 'ವಿಶ್ವಗುರು' ಆಗುವುದರಲ್ಲಿ ಬ್ಯುಸಿಯಾಗಿದ್ದಾರೆ, ಆದರೆ ಅತ್ತ ಅಮೆರಿಕ-ಪಾಕಿಸ್ತಾನದ ದೋಸ್ತಿ ಮಾತ್ರ ನಿಂತಿಲ್ಲ ಎಂದು ಜೈರಾಂ ರಮೇಶ್ ಟೀಕೆ 2025ರ ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಯಾವುದೇ ಬೆಲೆ ತೆತ್ತಿಲ್ಲ, ಇದು ಮೋದಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ
12:34 PM (IST) Feb 20
ತಮ್ಮ ಸಾಕು ನಾಯಿ ಹೆನ್ರಿಯನ್ನು ವಶಕ್ಕೆ ಪಡೆಯಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಗೆಳೆಯ ಜೈ ಅನಂತ್ ದೇಹಾದ್ರಾಯಿ ಅವರೊಂದಿಗೆ ಶ್ವಾನವಿದ್ದು, ಅದನ್ನು ಕಸ್ಟಡಿಗೆ ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.
11:19 AM (IST) Feb 20
11:16 AM (IST) Feb 20
Ricky Syngkon ಮೇಘಾಲಯದ ಶಿಲ್ಲಾಂಗ್ ಲೋಕಸಭಾ ಕ್ಷೇತ್ರದ ಸಂಸದ ರಿಕಿ ಎಜೆ ಸಿಂಗ್ಕಾನ್ (54) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
11:05 AM (IST) Feb 20