Published : Jun 13, 2026, 06:58 AM ISTUpdated : Jun 13, 2026, 11:14 PM IST

India Latest News Live: ಕನ್ನಡದ ಸ್ಟಾರ್ ನಟಿ ಮೇಲೆ ತೆಲುಗು ನಟ ನಾನಿ ಕಣ್ಣು; ಹೀರೋ ಯಾರು, ಅವರೇನಾ ಬೇರೆನಾ?

ಸಾರಾಂಶ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪಕ್ಷವಾಗಿ ಬೆಳೆದು 15 ವರ್ಷ ಅಧಿಕಾರ ನಡೆಸಿದ ಟಿಎಂಸಿ ಇಬ್ಭಾಗವಾಗುವ ಅಂಚಿನಲ್ಲಿರುವ ಹೊತ್ತಿನಲ್ಲಿ, ಅದರ ಯಾವ ಬಣವನ್ನು ಅಸಲಿಯೆಂದು ಗುರುತಿಸಲಾಗುವುದು ಹಾಗೂ ಆಸ್ತಿಯು ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಎದ್ದಿದೆ.

2025ರಲ್ಲಿ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡುವ ವೇಳೆ, 2024-25ರಲ್ಲಿ ತನ್ನ ಆದಾಯ 219.35 ಕೋಟಿ ರು. ಎಂದು ಟಿಎಂಸಿ ಘೋಷಿಸಿತ್ತು. ಇದರಲ್ಲಿ 184.08 ಕೋಟಿ ರು. ದೇಣಿಗೆ, 33.685 ಕೋಟಿ ರು. ಎಫ್‌ಡಿಯ ಬಡ್ಡಿ ಆಗಿದೆ. ಚುನಾವಣಾ ಬಾಂಡ್‌ಗಳು ರದ್ದಾಗುವ ಮುನ್ನ 2029-24ರ ನಡುವೆ ಅವುಗಳ ಮೂಲಕ ಟಿಎಂಸಿ 1,609.5 ಕೋಟಿ ರು. ಸಂಗ್ರಹಿಸಿತ್ತು. 2025-26ನೇ ಸಾಲಿನ ಗಳಿಕೆ ಘೋಷಣೆಯಾಗಿಲ್ಲವಾದರೂ, ಎಡಿಆರ್‌ ವರದಿಯಲ್ಲಿ, ದೇಶದಲ್ಲಿರುವ 36 ಪ್ರಾದೇಶಿಕ ಪಕ್ಷಗಳ ಪೈಕಿ ಟಿಡಿಪಿಯ ಬಳಿಕ ಅತಿಹೆಚ್ಚು ಆಸ್ತಿ ಇರುವುದು ಟಿಎಂಸಿಯ ಬಳಿ ಎನ್ನಲಾಗಿತ್ತು.

ಪಕ್ಷವು ಅಧಿಕೃತವಾಗಿ 2 ಭಾಗವಾದರೆ, ಯಾವುದಾದರೂ ಒಂದು ಬಣಕ್ಕೆ ಚುನಾವಣಾ ಆಯೋಗವು 2 ಹೂಗಳ ಚಿಹ್ನೆಯನ್ನು ನೀಡುತ್ತದೆ. ಆಗ ಪಕ್ಷದ ಪೂರ್ಣ ಆಸ್ತಿ ಆ ಬಣಕ್ಕೇ ಸೇರುತ್ತದೆ. ಒಂದೊಮ್ಮೆ ಬಂಡಾಯವೆದ್ದವರ ಬಣವೇ ಅಸಲಿ ಟಿಎಂಸಿ ಎಂದು ಗುರುತಿಸಲ್ಪಟ್ಟು, ಅದು ಮುಂದೆ ಬಿಜೆಪಿ ಜತೆ ವಿಲೀನವಾದರೆ, ಟಿಎಂಸಿಯ ನಿಧಿಯೂ ಬಿಜೆಪಿ ಪಾಲಾಗುತ್ತದೆ.

11:14 PM (IST) Jun 13

ಕನ್ನಡದ ಸ್ಟಾರ್ ನಟಿ ಮೇಲೆ ತೆಲುಗು ನಟ ನಾನಿ ಕಣ್ಣು; ಹೀರೋ ಯಾರು, ಅವರೇನಾ ಬೇರೆನಾ?

ನಟ ನಾನಿ ಕೇವಲ ಅಭಿನಯಕ್ಕಷ್ಟೇ ಸೀಮಿತವಾಗದೆ, 'ವಾಲ್ ಪೋಸ್ಟರ್ ಸಿನಿಮಾ' (Wall Poster Cinema) ಎಂಬ ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ವಿಭಿನ್ನ ಕಥೆಗಳಿಗೆ ಜೀವ ನೀಡುತ್ತಿದ್ದಾರೆ. ಇದೀಗ ಹೊಸ ಸಿನಿಮಾಗೆ ಕನ್ನಡದ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Read Full Story

10:39 PM (IST) Jun 13

ಕೇಂದ್ರದಿಂದ ಹೆಚ್ಚೇ ರಸಗೊಬ್ಬರ ಪೂರೈಕೆ; Karnataka ಸರ್ಕಾರವೇ ಸರಿಯಾಗಿ ವಿತರಿಸಿಲ್ಲ - ಪ್ರಲ್ಹಾದ್ ಜೋಶಿ ಕಿಡಿ

Fertilizer Crisis Karnataka: ಕರ್ನಾಟಕದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕೇಂದ್ರ ಸರ್ಕಾರ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಪೂರೈಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

Read Full Story

09:51 PM (IST) Jun 13

ಅಮೆರಿಕ ದಾಳಿಯಿಂದ ಭಾರತೀಯರ ಸಾವಿನ ಬೆನ್ನಲ್ಲೇ ಮೋದಿ-ಟ್ರಂಪ್ ಭೇಟಿಗೆ ದಿನಾಂಕ ಫಿಕ್ಸ್, ಕುತೂಹಲದ ನಡೆ

ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂನ್ 17 ರಂದು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

 

Read Full Story

08:34 PM (IST) Jun 13

ಚುನಾವಣೆ-ರಾಜಕೀಯಕ್ಕೆ ರಜನಿ ಹೆಸರು ಬಳಸಿದರೆ ಹುಷಾರ್! ಎಲ್ಲಿಂದ ಬಂತು ಗೊತ್ತಾ ಫೈನಲ್ ವಾರ್ನಿಂಗ್ ಗೊತ್ತಾ?!

ರಜನಿಕಾಂತ್ ಅವರ ಪತ್ನಿ ಲತಾ ಅವರು ‘ಮಕ್ಕಳ್ ಮಂದಿರಂ’ ಎಂಬ ಸಂಘಟನೆ ಆರಂಭಿಸಿದಾಗ, ರಜನಿ ಅವರು ಮತ್ತೆ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳು ರಜನಿಕಾಂತ್ ಅವರ ಆರೋಗ್ಯ ಮತ್ತು ಅವರ ವೈಯಕ್ತಿಕ ಶಾಂತಿಗೆ ಧಕ್ಕೆ ತರುತ್ತಿವೆ. ಇದೀಗ ಈ ಸುದ್ದಿ ಬಂದಿದೆ!

Read Full Story

08:21 PM (IST) Jun 13

ಕೋರ್ಟ್​ನಲ್ಲಿ ಕೋಲಾಹಲ - ಜಡ್ಜ್​ ಸೀಟಲ್ಲಿ ಕುಳಿತು ಆರ್ಡರ್​ ಆರ್ಡರ್, ನಾನೇ ಜಡ್ಜ್​​ ಎಂದ ಮಹಿಳೆ- ಮುಂದೇನಾಯ್ತು

 ಮಹಿಳೆಯೊಬ್ಬಳು ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು ತಾನೇ ಜಡ್ಜ್ ಎಂದು ಘೋಷಿಸಿಕೊಂಡು 'ಆರ್ಡರ್ ಆರ್ಡರ್' ಎಂದು ಕೂಗಿದಳು. ಸುಮಾರು ಒಂದು ಗಂಟೆ ಕಾಲ ನಡೆದ ಈ ನಾಟಕದ ನಂತರ, ಆಕೆ ಮಾನಸಿಕವಾಗಿ ಅಸ್ವಸ್ಥಳೆಂದು ತಿಳಿದುಬಂದಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ.

Read Full Story

08:05 PM (IST) Jun 13

ಏಕಾಂಗಿ ಹೋರಾಟ ನೀಡಿದ ಗುರ್ಬಾಜ್ ಶತಕ, ಟೀಂ ಇಂಡಿಯಾಗೆ 195 ರನ್ ಟಾರ್ಗೆಟ್ ನೀಡಿದ ಆಫ್ಘಾನಿಸ್ತಾನ

ರಹೆಮಾನುಲ್ಲಾ ಗುರ್ಬಾಜ್ ಸಿಡಿಸಿದ ಶತಕದ ನೆರವಿನಿಂದ ಆಫ್ಘಾನಿಸ್ತಾನ 194 ರನ್ ಸಿಡಿಸಿದೆ. ಮಳೆಯಿಂದ 25 ಓವರ್‌ಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಇದೀಗ ಭಾರತ 195 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ.

Read Full Story

07:50 PM (IST) Jun 13

Jagapathi Babu - ಆ ದಿನ ನನ್ನ ಹೆಂಡತಿಗೆ ತುಂಬಾ ನೋವಾಗಿತ್ತು - ಪತ್ನಿ ಸೀಕ್ರೆಟ್ ಬಿಚ್ಚಿಟ್ಟ ರಾಬರ್ಟ್ ವಿಲನ್!

Jagapathi Babu ತಮ್ಮ ಪತ್ನಿ ಯಾಕೆ ಸಾರ್ವಜನಿಕವಾಗಿ ತನ್ನ ಜೊತೆ ಕಾಣಿಸಿಕೊಳ್ಳುವುದಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ 3 ಕೋಟಿಗೆ ಮನೆ ಮಾರಿದ ಭಾವನಾತ್ಮಕ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.

Read Full Story

07:32 PM (IST) Jun 13

ನಾನು ಸಲಿಂಗಕಾಮಿ ಅಲ್ಲಾ ರೀ.., ಅದಕ್ಕೆ ಬೆಂಗಳೂರಿನ ಗಂಡನಿಂದ ಡಿವೋರ್ಸ್‌ ಆಗಿಲ್ರೀ.. - KGF 2 Movie Mouni Roy

KGF 2 Movie Actress Mouni Roy: ನಾಗಿನ್‌ ಧಾರಾವಾಹಿ ಮೂಲಕ ದೇಶದಲ್ಲಿ ಹೆಸರು ಮಾಡಿರುವ ಮೌನಿ ರಾಯ್‌ ಅವರು ಕೆಜಿಎಫ್‌ ಭಾಗ 1 ರಲ್ಲಿ ಡ್ಯಾನ್ಸ್‌ ಕೂಡ ಮಾಡಿದ್ದರು. ಇವರ ಡಿವೋರ್ಸ್‌ ವಿಷಯ ದೊಡ್ಡ ಚರ್ಚೆಯನ್ನುಂಟು ಮಾಡಿತ್ತು. ಈಗ ಇವರು ನಾನು ಸಲಿಂಗಕಾಮಿ ಅಲ್ಲ ಎಂದು ಹೇಳಿದ್ದಾರೆ.

Read Full Story

07:31 PM (IST) Jun 13

Shocking - 'ಮದುವೆ-ಮಗು ಬಳಿಕ ಸಿನಿಮಾಕ್ಕೆ ಗುಡ್‌ಬೈ' ಅಂದವರಿಗೆ ಕತ್ರಿನಾ ಕೈಫ್ ಕೊಟ್ಟ ಶಾಕ್ ಎಂತದ್ದು ಗೊತ್ತಾ?

ವದಂತಿಗಳಿಗೆ ಬ್ರೇಕ್ ಹಾಕಿದ ‘ಕ್ಯಾಟ್’: ಅನುಷ್ಕಾ ಹಾದಿ ಹಿಡಿಯಲ್ಲ ಎಂದ ನಟಿ!

ಯಾವುದೇ ಒಬ್ಬ ಸ್ಟಾರ್ ನಟಿ ಮದುವೆಯಾದ ತಕ್ಷಣ ಸಿನಿಪ್ರಿಯರಲ್ಲಿ ಮೂಡುವ ಮೊದಲ ಪ್ರಶ್ನೆ ‘ಇವರು ಇನ್ನು ನಟಿಸುತ್ತಾರಾ?’. ಅದರಲ್ಲೂ ಕತ್ರಿನಾ ಬಗ್ಗೆ ಬಿ-ಟೌನ್‌ನಲ್ಲಿ ನಾನಾ ರೀತಿಯ ಚರ್ಚೆಗಳು ಶುರುವಾಗಿದ್ದವು. ಆದರೆ ಈಗ ನೋಡಿ.!

Read Full Story

07:26 PM (IST) Jun 13

Best Villain Roles - ಟಾಲಿವುಡ್‌ನ ಬೆಸ್ಟ್ ವಿಲನ್ ಯಾರು? ಈ ಲಿಸ್ಟ್‌ನಲ್ಲಿ ಕಿಚ್ಚ ಸುದೀಪ್ ಇದ್ದಾರಾ!

Best Villain: ಕೆಲವು ಸಿನಿಮಾಗಳಲ್ಲಿ ಹೀರೋಗಳಿಗಿಂತ ವಿಲನ್‌ಗಳ ಪಾತ್ರವೇ ಹೆಚ್ಚು ಪ್ರಬಲವಾಗಿರುತ್ತದೆ. ಅಂತಹ ಖಳನಾಯಕರ ಪಾತ್ರಗಳಿಂದಲೇ ಗೆದ್ದ ಟಾಲಿವುಡ್‌ನ ಕೆಲವು ಪ್ರಮುಖ ಚಿತ್ರಗಳ ಬಗ್ಗೆ ಈ ಗ್ಯಾಲರಿಯಲ್ಲಿ ನೋಡೋಣ.

Read Full Story

07:08 PM (IST) Jun 13

How to save money - ಲೈಫ್‌ಸ್ಟೈಲ್‌ ಬದಲಾಯಿಸದೆ ಈ 7 ಸೂತ್ರದಿಂದ ಹಣ ಉಳಿತಾಯ ಮಾಡಿದ ಬೆಂಗಳೂರಿನ ವ್ಯಕ್ತಿ! ಅದೇನು?

Top 10 brilliant money saving tips: ಸಿಟಿಗಳಲ್ಲಿ ಹಣ ಉಳಿಸೋದು ಟಾಸ್ಕ್‌ ಆಗಿದೆ. ಬಾಡಿಗೆ ಮನೆ-ಊಟ ತಿಂಡಿ, ಬಟ್ಟೆ ಮುಂತಾದ ವಿಷಯಕ್ಕೆ ಹಣ ಖಾಲಿ ಆಗುತ್ತದೆ. ಯುವ ಜನತೆ ಹಣ ಉಳಿಸೋಕೆ ಆಗದೆ ಒದ್ದಾಡೋದುಂಟು. ಬೆಂಗಳೂರಿನ ಈ ವ್ಯಕ್ತಿ ಈ 7 ನಿಯಮ ಪಾಲಿಸಿ ಹಣ ಉಳಿತಾಯ ಮಾಡಿದ್ದಾರೆ.

 

Read Full Story

06:15 PM (IST) Jun 13

CM Vijay - ಜೂನ್‌ 15ಕ್ಕೆ ದಳಪತಿ ವಿಜಯ್ ಬಾಳಲ್ಲಿ ದೊಡ್ಡ ತಿರುವು - ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ ಪತ್ನಿ ಸಂಗೀತಾ ಮತ್ತೆ ಜೊತೆಯಾಗ್ತಾರಾ?

ಸದ್ಯ ತಮಿಳುನಾಡಿಗೆ ದೊರೆ ಆಗಿರುವ ದಳಪತಿ ವಿಜಯ್ ಅವರಿಗೆ, ವೈಯಕ್ತಿಕ ಬದುಕಿನಲ್ಲಿ ಜೂನ್ 15ರ ದಿನಾಂಕ ಅತಿದೊಡ್ಡ ಸವಾಲಾಗಿದೆ. ಅಂದು ಪತ್ನಿ ಜೊತೆಗಿನ ಸಮಸ್ಯೆ   ಸುಖಾಂತ್ಯವಾಗುತ್ತಾ ಅಥವಾ ವಿಜಯ್-ಸಂಗೀತ ಹಾದಿ ಬೇರೆ ಬೇರೆಯಾಗುತ್ತಾ? ಕಾದು ನೋಡಬೇಕಿದೆ.

Read Full Story

04:42 PM (IST) Jun 13

Disha Patani - ಕೈಯಲ್ಲಿ 500 ರೂ. ಇಟ್ಟುಕೊಂಡು ಮುಂಬೈಗೆ ಬಂದ ದಿಶಾ ಈಗ 75 ಕೋಟಿ ಒಡತಿ - ಹೇಗೆ ಅಂತೀರಾ!

Disha Patani Income: ನಟಿ ದಿಶಾ ಪಟಾನಿಗೆ ಈಗ 34 ವರ್ಷ. ಕೇವಲ 500 ರೂಪಾಯಿ ಇಟ್ಟುಕೊಂಡು ಮುಂಬೈಗೆ ಬಂದಿದ್ದ ಅವರು, ಇಂದು 75 ಕೋಟಿ ರೂಪಾಯಿ ಆಸ್ತಿಯ ಒಡತಿ. ಸಿನಿಮಾ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌, ಬ್ಯುಸಿನೆಸ್ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.

Read Full Story

03:39 PM (IST) Jun 13

10 ವರ್ಷದ ತಮ್ಮ ಆಶೀರ್ವಾದ್ ಶತಕ ಸಿಡಿಸುತ್ತಿದ್ದಂತೆಯೇ ಭಾವನಾತ್ಮಕ ಸ್ಟೋರಿ ಹಂಚಿಕೊಂಡ ವೈಭವ್ ಸೂರ್ಯವಂಶಿ!

ಐಪಿಎಲ್ ತಾರೆ ವೈಭವ್ ಸೂರ್ಯವಂಶಿ ಅವರ 10 ವರ್ಷದ ಸಹೋದರ ಆಶೀರ್ವಾದ್ ಸೂರ್ಯವಂಶಿ, ಸ್ಥಳೀಯ ಅಭ್ಯಾಸ ಪಂದ್ಯವೊಂದರಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಣ್ಣನ ಯಶಸ್ಸಿನ ಬೆನ್ನಲ್ಲೇ ತಮ್ಮನೂ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದು, ವೈಭವ್ ತಮ್ಮನ ಸಾಧನೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
Read Full Story

03:38 PM (IST) Jun 13

ಅಸ್ಸಾಂನಲ್ಲಿ IAF ವಿಮಾನ ಪತನ; ರನ್‌ವೇ ಮೇಲೆಯೇ ಹೊತ್ತಿ ಉರಿದ ಎಎನ್-32, ಐವರ ಸಾವು, ಕೋ-ಪೈಲಟ್ ಪವಾಡಸದೃಶ ಪಾರು

ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯ ಎಎನ್-32 ವಿಮಾನವು ಲ್ಯಾಂಡಿಂಗ್ ಆದ ಬಳಿಕ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಐದು ಮಂದಿ ಮೃತಪಟ್ಟಿದ್ದು, ಸಹ-ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ವಾಯುಪಡೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
Read Full Story

02:23 PM (IST) Jun 13

ನನ್ನ ವಯಸ್ಸು 28, ಮಹಿಳೆ ಹೀಗೆ ಕಾಲಿಟ್ರೆ ಏನು ಮಾಡಬೇಕು? ಮುಜುಗೊರಕ್ಕೊಳಗಾದ ಯುವಕ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಎದುರು ಸೀಟಿನಲ್ಲಿದ್ದ ಮಹಿಳೆಯೊಬ್ಬರು ತನ್ನ ಕಾಲುಗಳನ್ನು ಆತನ ತೊಡೆಗಳ ಮಧ್ಯೆ ಇರಿಸಿದ್ದರಿಂದ ಮುಜುಗರದ ಅನುಭವವಾಗಿದೆ. ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
Read Full Story

01:40 PM (IST) Jun 13

Abhishek Bannerjee - ಆರ್ಥಿಕ ವಂಚನೆ ಪ್ರಕರಣ - ನಸುಕಿನಲ್ಲೇ ಅಭಿಷೇಕ್ ಬ್ಯಾನರ್ಜಿ ಮನೆ ಮೇಲೆ ಪೊಲೀಸ್ ದಾಳಿ! ಸೋದರಳಿಯನ ಮನೆಗೆ ಓಡೋಡಿ ಬಂದ ಮಮತಾ

ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ(Abhishekh banerjee) ಅವರ ಕೊಲ್ಕತ್ತಾ ನಿವಾಸದ ಮೇಲೆ ಪೊಲೀಸರು ಮತ್ತು ಕೇಂದ್ರ ಪಡೆಗಳು ಜಂಟಿಯಾಗಿ ಶೋಧ ಕಾರ್ಯ ನಡೆಸಿವೆ.

Read Full Story

01:18 PM (IST) Jun 13

ಒಂದೇ ದಿನದಲ್ಲಿ ಶೇ. 94ರಷ್ಟು ವಿದೇಶಿ ಸಾಲವನ್ನು ತೀರಿಸುವ ಸಾಮರ್ಥ್ಯ ಈಗಿನ ಭಾರತಕ್ಕಿದೆ ಎಂದ ದೇವೇಂದ್ರ ಫಡ್ನವೀಸ್‌

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾರತದ ಪ್ರಚಂಡ ಆರ್ಥಿಕ ಸಾಮರ್ಥ್ಯವನ್ನು ವಿವರಿಸಿದ್ದಾರೆ. ದೇಶವು ಒಂದೇ ದಿನದಲ್ಲಿ ತನ್ನ ವಿದೇಶಿ ಸಾಲದ ಬಹುಪಾಲು ಮರುಪಾವತಿಸುವ ಶಕ್ತಿಯನ್ನು ಹೊಂದಿದ್ದು, ಶೇ. 7.7ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ ಆರ್ಥಿಕ ಮಂದಗತಿಯ ಆತಂಕಗಳನ್ನು ದೂರಮಾಡಿದೆ.

Read Full Story

12:19 PM (IST) Jun 13

ಟೀಂ ಇಂಡಿಯಾಗೆ ಅಣ್ಣ ಎಂಟ್ರಿ ಕೊಡೋ ಮುನ್ನವೇ ಅಬ್ಬರಿಸಿದ ತಮ್ಮ! 10ನೇ ವಯಸ್ಸಲ್ಲೇ ಸೆಂಚುರಿ ಬಾರಿಸಿದ ವೈಭವ್‌ ಸೂರ್ಯವಂಶಿ ಬ್ರದರ್‌!

Ashirwad Sooryavanshi Smashes Century: ವೈಭವ್ ಸೂರ್ಯವಂಶಿ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಐಪಿಎಲ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇದೀಗ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಇದರ ನಡುವೆ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

 

Read Full Story

11:49 AM (IST) Jun 13

ಅಸ್ಸಾಂನ ಜೋರ್ಹತ್‌ನಲ್ಲಿ IAF ವಿಮಾನ ಅಪಘಾತ; ಲ್ಯಾಂಡಿಂಗ್ ಬೆನ್ನಲ್ಲೇ ಹೊತ್ತಿ ಉರಿದ ಯುದ್ಧ ವಿಮಾನ, ಪೈಲಟ್‌ ಸಾವು

ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯ ಎಎನ್-32 ಸರಕು ಸಾಗಣೆ ವಿಮಾನವು ಲ್ಯಾಂಡಿಂಗ್ ಆದ ತಕ್ಷಣ ಬೆಂಕಿ ಹೊತ್ತಿಕೊಂಡು ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ವಾಯುಪಡೆಯು ತನಿಖೆ ಆರಂಭಿಸಿದೆ.
Read Full Story

11:01 AM (IST) Jun 13

Row 13 airplane - ವಿಮಾನದಲ್ಲಿ 13ನೇ ಸಾಲಿನ ಸೀಟು ಯಾಕೆ ಇರಲ್ಲ? ಏಸು ಕ್ರಿಸ್ತನಿಗೂ ಇದಕ್ಕೂ ಸಂಬಂಧ ಇದೆಯಾ?

Why is there no row 13 on planes: ನೀವು ಎಂದಾದರೂ ವಿಮಾನದಲ್ಲಿನ ಸೀಟುಗಳನ್ನು ಗಮನಿಸಿದ್ದೀರಾ? ಅಲ್ಲಿ 13ನೇ ನಂಬರ್ ಸೀಟು ಕಾಣಿಸುವುದಿಲ್ಲ. 12ರ ನಂತರ ನೇರವಾಗಿ 14ನೇ ನಂಬರ್ ಇರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ? 13ನೇ ಸಂಖ್ಯೆಯನ್ನು ಯಾಕೆ ಕೈಬಿಡಲಾಗಿದೆ?

Read Full Story

10:49 AM (IST) Jun 13

ನನ್ನೊಳಗಿನ ರಾಕ್ಷಸನನ್ನು ಹೊರಹಾಕಿದ್ದೇನೆ - Salman Khan ಇನ್ನೊಂದು ಮುಖ ಬಟಾ ಬಯಲು ಮಾಡಿದ್ದ Aishwarya Rai

Salman Khan And Aishwarya Rai Breakup Reason: ಸಲ್ಮಾನ್ ಖಾನ್ ಜೊತೆಗಿನ ತಮ್ಮ ಹಳೆಯ ಸಂಬಂಧ, ಬ್ರೇಕಪ್ ಬಗ್ಗೆ ಐಶ್ವರ್ಯಾ ರೈ ಹಲವು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ ಮತ್ತೆ ವೈರಲ್ ಆಗಿದೆ. 'ನನ್ನೊಳಗಿನ ರಾಕ್ಷಸರನ್ನು ನಾನು ಹೊರಹಾಕಿದ್ದೇನೆ' ಎಂದು ಅವರು ಅಂದು ಏಕೆ ಹೇಳಿದ್ದರು?

 

Read Full Story

10:42 AM (IST) Jun 13

ಭಾರತದ ಮೇಲೆ ಕಡಲ ಮುನಿಸು, ಎಲ್‌ ನಿನೋ ಖಚಿತಪಡಿಸಿದ ಭಾರತೀಯ ಹವಾಮಾನ ಇಲಾಖೆ

ಪ್ರಶಾಂತ್ ಮಹಾಸಾಗರದಲ್ಲಿ 'ಎಲ್ ನಿನೋ' ಹವಾಮಾನ ವ್ಯವಸ್ಥೆಯು ಅಧಿಕೃತವಾಗಿ ಸಕ್ರಿಯಗೊಂಡಿದ್ದು, ಇದು ಭಾರತದ ನೈಋತ್ಯ ಮುಂಗಾರು ಮಾರುತಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ. ಈ ವಿದ್ಯಮಾನದಿಂದಾಗಿ ದೇಶದ ಹಲವು ಭಾಗಗಳಲ್ಲಿ ಬರಗಾಲದ ಭೀತಿ ಎದುರಾಗಲಿದೆ.

Read Full Story

10:14 AM (IST) Jun 13

ಶಿವಶ್ರೀ ತೇಜಸ್ವಿ ಸೂರ್ಯ ಸೇರಿದಂತೆ ರಾಜ್ಯದ 5 ಕಲಾವಿದರಿಗೆ 'ಉಸ್ತಾದ್‌ಬಿಸ್ಮಿಲ್ಲಾ ಖಾನ್‌' ಯುವ ಪುರಸ್ಕಾರ

ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2024-25ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌, ಐವರು ಯುವ ಕಲಾವಿದರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

Read Full Story

09:51 AM (IST) Jun 13

ರಾಷ್ಟ್ರೀಯ ಅಂಡರ್-17 ಕುಸ್ತಿ - ಈ ಮಹಾ ಅಪರಾಧಕ್ಕೆ 500 ರೆಸ್ಲರ್‌ಗಳಿಗೆ ಗೇಟ್‌ಪಾಸ್..!

ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಅಂಡರ್‌-17 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ, ವಯೋಮಿತಿ ಅಕ್ರಮದ ಆರೋಪದ ಮೇಲೆ 500 ಕುಸ್ತಿಪಟುಗಳನ್ನು ಅನರ್ಹಗೊಳಿಸಲಾಗಿದೆ. ಭಾರತೀಯ ಕುಸ್ತಿ ಫೆಡರೇಶನ್‌ (WFI) ಆಧಾರ್ ಆಧಾರಿತ ಪರಿಶೀಲನೆ ನಡೆಸಿದಾಗ ಜನನ ಪ್ರಮಾಣ ಪತ್ರ ಮತ್ತು ಆಧಾರ್ ದಾಖಲೆಗಳಲ್ಲಿನ ವಯಸ್ಸಿನ ವ್ಯತ್ಯಾಸ ಪತ್ತೆಯಾಗಿದೆ.
Read Full Story

09:02 AM (IST) Jun 13

ತಾನೇ ಕಟ್ಟಿದ ಟಿಎಂಸಿ ಕೋಟೆಯಿಂದ ಮಮತಾ ಬ್ಯಾನರ್ಜಿಗೆ ಗೇಟ್‌ಪಾಸ್? 4000 ಇವಿಎಂ ಕಟ್ಟಡಕ್ಕೆ ಬೆಂಕಿ

ಟಿಎಂಸಿಯ 19 ಸಂಸದರು ತಮ್ಮ ಬಣವನ್ನೇ ಅಸಲಿ ಪಕ್ಷವೆಂದು ಗುರುತಿಸಲು ಸ್ಪೀಕರ್‌ಗೆ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ. ಇದು ಯಶಸ್ವಿಯಾದರೆ, ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದಿಂದ ಹೊರಬೀಳುವ ಸಾಧ್ಯತೆಯಿದ್ದು, ಪಕ್ಷದ ₹220 ಕೋಟಿ ಆಸ್ತಿಯ ಹಂಚಿಕೆಯ ಪ್ರಶ್ನೆಯೂ ಎದ್ದಿದೆ. ಇದರ ನಡುವೆ, ಮಮತಾ ವಿರುದ್ಧ ಎಫ್‌ಐಆರ್‌ ಮತ್ತು ಇವಿಎಂ ಕಟ್ಟಡಕ್ಕೆ ಬಿದ್ದ ಬೆಂಕಿ ಹಲವು ಅನುಮಾನಗಳನ್ನು ಸೃಷ್ಟಿಸಿದೆ.
Read Full Story

08:37 AM (IST) Jun 13

ಭಾರತ vs ಆಫ್ಘಾನಿಸ್ತಾನ 1ನೇ ಏಕದಿನ - ಸಂಭಾವ್ಯ XI, ಪಂದ್ಯ ಸಮಯ, ನೇರ ಪ್ರಸಾರ ಮಾಹಿತಿ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಚೊಚ್ಚಲ ದ್ವಿಪಕ್ಷೀಯ ಏಕದಿನ ಸರಣಿಯು ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ, 2027ರ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಲು ಭಾರತ ಯುವ ಆಟಗಾರರಿಗೆ ಅವಕಾಶ ನೀಡಲಿದ್ದು, ಅಫ್ಘಾನಿಸ್ತಾನ ತಂಡವು ಅಚ್ಚರಿ ಮೂಡಿಸುವ ಸಾಮರ್ಥ್ಯ ಹೊಂದಿದೆ.
Read Full Story

08:25 AM (IST) Jun 13

FIFA World Cup 2026 - ದಕ್ಷಿಣ ಆಫ್ರಿಕಾ ಎದುರು ಮೆಕ್ಸಿಕೋ ಘರ್ಜನೆ, ಕೊರಿಯಾದ ತಿರುಗೇಟು

ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ, ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಮತ್ತೊಂದು ಪಂದ್ಯದಲ್ಲಿ, ದಕ್ಷಿಣ ಕೊರಿಯಾ ತಂಡವು ಚೆಕ್‌ ಗಣರಾಜ್ಯದ ವಿರುದ್ಧ 2-1 ಗೋಲುಗಳಿಂದ ರೋಚಕ ಜಯ ಗಳಿಸಿದೆ.
Read Full Story

08:14 AM (IST) Jun 13

ಬೆಂಗಳೂರಿನಲ್ಲಿನ ಪ್ರತಿಭಟನೆಗೆ ತಮಿಳಿಗರನ್ನು ಆಹ್ವಾನಿಸಿದ ಕಾಕ್ರೋಚ್ ಜನತಾ ಪಾರ್ಟಿ

ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧವಾಗಿರುವ ಕಾಕ್ರೋಚ್ ಜನತಾ ಪಾರ್ಟಿ, ಜೂನ್ 14 ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದೆ. ಆದರೆ, ಈ ಪ್ರತಿಭಟನೆಗೆ ಪಕ್ಷದ ವಕ್ತಾರ ಸೌರವ್ ದಾಸ್ ಅವರು ತಮಿಳಿನಲ್ಲಿ ಆಹ್ವಾನ ನೀಡಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

08:00 AM (IST) Jun 13

ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳವಾಗಿದ್ರೂ ನಾಳೆ ಈ ಕಾರಣಕ್ಕೆ ಮುಂಬೈನಲ್ಲಿ ಮಾತ್ರ ಇಳಿಕೆ ಆಗುತ್ತೆ!

ಇರಾನ್ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಇಂಧನ ಬೆಲೆಗಳು ಏರುತ್ತಿವೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಪೆಟ್ರೋಲ್ ಪಂಪ್‌ಗಳಿಂದ ಇಂಧನ ಖರೀದಿಸುವುದನ್ನು 90 ದಿನಗಳವರೆಗೆ ನಿಷೇಧಿಸಿ, ಪ್ರತಿ ವಾಹನಕ್ಕೆ ಖರೀದಿ ಮಿತಿಯನ್ನು ವಿಧಿಸಿದೆ.
Read Full Story

07:37 AM (IST) Jun 13

ಇದೊಂದು ಮಾರಕ ಕ್ರಮ, ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ - ಅಮೆರಿಕಕ್ಕೆ ಜೈಶಂಕರ್ ಎಚ್ಚರಿಕೆ

ಒಮಾನ್ ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ದಾಳಿಯಿಂದ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀವ್ರವಾಗಿ ಖಂಡಿಸಿದ್ದಾರೆ. ವಾಣಿಜ್ಯ ಹಡಗುಗಳ ಮೇಲಿನ ಇಂತಹ ಮಾರಕ ಕ್ರಮಗಳು ಸಮರ್ಥನೀಯವಲ್ಲ ಎಂದು ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ತಿಳಿಸಿದ್ದಾರೆ.
Read Full Story

07:23 AM (IST) Jun 13

Diesel sale limits - ಕೇಂದ್ರ ಸರ್ಕಾರದಿಂದ ಡೀಸೆಲ್‌ ಖರೀದಿಗೆ ಹೊಸ ಮಿತಿ! ಪ್ರತಿ ವಾಹನಕ್ಕೆ ಇಷ್ಟೇ ಡೀಸೆಲ್ ಸಿಗೋದು!

ಕೇಂದ್ರ ಸರ್ಕಾರವು ಪ್ರತಿ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿ ಮಿತಿಯನ್ನು ವಿಧಿಸಿದೆ. ಅಲ್ಲದೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಪೆಟ್ರೋಲ್ ಬಂಕ್‌ಗಳಲ್ಲಿ ಸಗಟು ಇಂಧನ ಖರೀದಿಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣವೇನು ತಿಳಿಯಿರಿ.

Read Full Story

More Trending News