Published : May 11, 2026, 05:04 AM ISTUpdated : May 11, 2026, 08:44 PM IST

India Latest News Live: ಕೋರ್ಟ್‌ನಲ್ಲೂ ಫೈಟ್, ಹೊರಗೂ ಫೈಟ್ - ಸೂರ್ಯ-ತ್ರಿಶಾ 'ಕರುಪ್ಪು' ಟ್ರೇಲರ್‌ನಲ್ಲಿ ಆ್ಯಕ್ಷನ್ ಧಮಾಕಾ

ಸಾರಾಂಶ

ಚೆನ್ನೈ: ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಧ್ಯಕ್ಷತೆಯಲ್ಲಿ ನಡೆದ ಸಿಎಂ ವಿಜಯ್‌ ಪ್ರಮಾಣ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ಮೊದಲು ವಂದೇ ಮಾತರಂ, ನಂತರ ರಾಷ್ಟ್ರಗೀತೆ ಮತ್ತು ಕೊನೆಯದಾಗಿ ತಮಿಳು ನಾಡಗೀತೆ ನುಡಿಸಿದ್ದು ವಿವಾದಕ್ಕೀಡಾಗಿದೆ. ಇದಕ್ಕೆ ಖುದ್ದು ಸಚಿವ ಆಧವ್‌ ಅರ್ಜುನ ಹಾಗೂ ಸಿಪಿಐ ಮುಖಂಡ ಸಿಪಿಐ ನಾಯಕ ವೀರಪಾಂಡಿಯನ್‌ ಆಕ್ಷೇಪಿಸಿದ್ದಾರೆ. ‘ಇದನ್ನು ರಾಜಭವನದ ಗಮನಕ್ಕೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಸುತ್ತೋಲೆ ಅನುಸಾರ ಹಾಡು ನುಡಿಸಲಾಗುತ್ತಿದೆ ಎಂಬ ಉತ್ತರ ಬಂತು. ಹೀಗಾಗಿ ಅನಿವಾರ್ಯವಾಗಿ 3ನೇ ಹಾಡಾಗಿ ತಮಿಳು ನಾಡಗೀತೆ ನುಡಿಸಲಾಗಿತು. ಈ ಹೊಸ ಪದ್ಧತಿ ತಮಿಳುನಾಡಿಗೆ ಸೂಕ್ತವಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯಂತೆ, ಆರಂಭದಲ್ಲಿ ತಮಿಳು ಪ್ರಾರ್ಥನೆ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ’ ಎಂದು ಆಧವ್‌ ಎಂದಿದ್ದಾರೆ.

 

08:44 PM (IST) May 11

ಕೋರ್ಟ್‌ನಲ್ಲೂ ಫೈಟ್, ಹೊರಗೂ ಫೈಟ್ - ಸೂರ್ಯ-ತ್ರಿಶಾ 'ಕರುಪ್ಪು' ಟ್ರೇಲರ್‌ನಲ್ಲಿ ಆ್ಯಕ್ಷನ್ ಧಮಾಕಾ

ಕರುಪ್ಪು ಟ್ರೇಲರ್ ಶುರುವಾಗುವುದೇ ಒಂದು ಭಾವುಕ ಸನ್ನಿವೇಶದಿಂದ. ವಯಸ್ಸಾದ ವ್ಯಕ್ತಿಯೊಬ್ಬರು ಮತ್ತು ಅವರ ಮೊಮ್ಮಗಳು ವರ್ಷಗಳಿಂದ ತಮ್ಮ ಕೇಸ್ ಇತ್ಯರ್ಥವಾಗದೆ ಪದೇ ಪದೇ ಕೋರ್ಟ್‌ಗೆ ಅಲೆಯುತ್ತಿರುತ್ತಾರೆ.

Read Full Story

07:48 PM (IST) May 11

500 ಕೋಟಿ ಆಗದೇ ಇದ್ರೂ, 300 ಕೋಟಿ ಆದ್ರೂ ಬರಲಿ - ದೃಶ್ಯಂ 3 ಕಲೆಕ್ಷನ್ ಬಗ್ಗೆ ಮೋಹನ್‌ಲಾಲ್ ಯಾಕ್ ಹೀಗಂದ್ರು!

'ದೃಶ್ಯಂ 3' ಕಲೆಕ್ಷನ್ ಬಗ್ಗೆ ಮೋಹನ್‌ಲಾಲ್ ಹೇಳಿದ ಮಾತುಗಳು ಈಗ ಚರ್ಚೆಗೆ ಬಂದಿವೆ. ಸಿನಿಮಾ 500 ಕೋಟಿ ಕಲೆಕ್ಷನ್ ಮಾಡುತ್ತಾ ಅನ್ನೋ ಪ್ರಶ್ನೆಗೆ ಮೋಹನ್‌ಲಾಲ್ ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ.

Read Full Story

07:39 PM (IST) May 11

ನೀವು ಅನ್ಯಾಯ ಮಾಡ್ಬೋದು, ಜನರು ವಿಡಿಯೋ ಮಾಡಬಾರದಾ? ಸರ್ಕಾರದ ಬೆವರಿಳಿಸಿದ ಹೈಕೋರ್ಟ- ಆಗಿದ್ದೇನು

ಪೊಲೀಸ್ ಠಾಣೆಯೊಳಗೆ ನಾಗರಿಕರು ವಿಡಿಯೋ ಮಾಡುವುದನ್ನು ನಿಷೇಧಿಸಿದ್ದಕ್ಕಾಗಿ ಗುಜರಾತ್ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅನ್ಯಾಯದ ವಿರುದ್ಧ ಸಾಕ್ಷಿಗಾಗಿ ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
Read Full Story

07:16 PM (IST) May 11

ಕಥೆ ಕೇಳಿ 20 ನಿಮಿಷ ಮಾತೇ ಬರಲಿಲ್ಲ.. ರಾಮ್ ಚರಣ್ ‘ಪೆದ್ದಿ’ಯಲ್ಲಿ ಭೂಗತ ಕುಸ್ತಿ ಅಖಾಡ - ಸೆಟ್‌ಗಳೇ ಹೈಲೈಟ್!

ರಾಮ್ ಚರಣ್ ನಟನೆಯ, ರಾಷ್ಟ್ರ ಪ್ರಶಸ್ತಿ ವಿಜೇತ ಬುಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಸಿನಿಮಾ 2026ರ ಜೂನ್ 4ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ 70ಕ್ಕೂ ಹೆಚ್ಚು ಸೆಟ್‌ಗಳನ್ನು ನಿರ್ಮಿಸಿರುವುದಾಗಿ ಪ್ರೊಡಕ್ಷನ್ ಡಿಸೈನರ್ ಅವಿನಾಶ್ ಕೊಲ್ಲಾ ತಿಳಿಸಿದ್ದಾರೆ.

Read Full Story

06:44 PM (IST) May 11

ದೇಶದಲ್ಲಿ 60 ದಿನಗಳ ಕಚ್ಚಾ ತೈಲ, ನೈಸರ್ಗಿಕ ಅನಿಲ ನಿಕ್ಷೇಪ, ಕೇವಲ 45ದಿನಗಳ LPG ದಾಸ್ತಾನಿದೆ ಮಿತವಾಗಿ ಬಳಸಿ - ಕೇಂದ್ರ

ಪಶ್ಚಿಮ ಏಷ್ಯಾದ ಉದ್ವಿಗ್ನತೆಯ ನಡುವೆಯೂ ಭಾರತದಲ್ಲಿ ಇಂಧನ ಪೂರೈಕೆ ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ದೇಶದಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ, ಎಲ್‌ಪಿಜಿ ಹಾಗೂ ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಲಭ್ಯವಿದ್ದು, ಯಾವುದೇ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ನಾಗರಿಕರು ಆತಂಕಪಡದೆ ಇಂಧನವನ್ನು ಜವಾಬ್ದಾರಿಯಿಂದ ಬಳಸುವಂತೆ ಸರ್ಕಾರ ಮನವಿ ಮಾಡಿದೆ.
Read Full Story

06:38 PM (IST) May 11

ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್ - ಭಾರತೀಯರಿಗೆ ಪ್ರಧಾನಿ ಮೋದಿ ವಿಶೇಷ ಮನವಿ

ಮೇ 10ರ ಭಾನುವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ಒಂದು ವಿಭಿನ್ನವಾದ ಹೇಳಿಕೆ ನೀಡಿದರು. ಮೋದಿಯವರ ಹೇಳಿಕೆ ಬಹುಮಟ್ಟಿಗೆ ಕೋವಿಡ್ ಲಾಕ್‌ಡೌನ್ ದಿನಗಳನ್ನು ನೆನಪಿಸಿದವು.

Read Full Story

05:58 PM (IST) May 11

ಮಗಳ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಮೋಹನ್‌ಲಾಲ್? ಏನಿದು 'ತುಡಕ್ಕಂ' ರಹಸ್ಯ!

ಮೋಹನ್‌ಲಾಲ್ ಪುತ್ರಿ ವಿಸ್ಮಯಾ ನಾಯಕಿಯಾಗಿ ನಟಿಸುತ್ತಿರುವ 'ತುಡಕ್ಕಂ' ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. '2018' ಖ್ಯಾತಿಯ ಜ್ಯೂಡ್ ಆ್ಯಂಟನಿ ಜೋಸೆಫ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Read Full Story

05:12 PM (IST) May 11

ವಾರಣಾಸಿ ಶೂಟಿಂಗ್ ಅಪ್‌ಡೇಟ್ ಕೊಟ್ಟ ಪ್ರಿಯಾಂಕಾ ಚೋಪ್ರಾ - ರಾಜಮೌಳಿ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ?

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ವಾರಣಾಸಿ'. ಇದೀಗ, ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುಂದಿನ ಶೆಡ್ಯೂಲ್ ಶೂಟಿಂಗ್ ಶುರುವಾಗುವ ಬಗ್ಗೆ ಸುಳಿವು ನೀಡಿದ್ದಾರೆ.

Read Full Story

04:54 PM (IST) May 11

ಏರ್ ಇಂಡಿಯಾದಿಂದ 1 ಸಾವಿರ ಸಿಬ್ಬಂದಿಗಳ ವಜಾ, ಭವಿಷ್ಯದಲ್ಲಿ ಕಷ್ಟದ ದಿನಗಳು ಬರದಂತೆ ಈ ನಿರ್ಧಾರವೆಂದ ಸಿಇಒ!

ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ. 

Read Full Story

04:18 PM (IST) May 11

CM ವಿಜಯ್ ಟೀಮ್‌ನಲ್ಲಿ 22 ಇಂಜಿನಿಯರ್ಸ್-18 ವಕೀಲರು-8 ಡಾಕ್ಟರ್ಸ್-6 PHD ಹೋಲ್ಡರ್ಸ್, ಇನ್ನೂ ಯಾರೆಲ್ಲಾ ಇದಾರೆ? ಹೈ-ಟೆಕ್ ಆರ್ಮಿ ಇದು!

ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್‌ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ತರ ಅಲ್ಲ, ಬದಲಾಗಿ ಮಲ್ಟಿ-ನ್ಯಾಷನಲ್ ಕಂಪನಿ ತರ ಇದೆ!

Read Full Story

03:49 PM (IST) May 11

ವಿಜಯ್ ತಮಳುನಾಡು ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ 'ಜನ ನಾಯಗನ್' ಚಿತ್ರ ಬಿಡುಗಡೆಗೆ ಸಿದ್ಧತೆ, ನಿರ್ಮಾಪಕರ ಸ್ಪಷ್ಟನೆ!

ತಮಿಳುನಾಡು ಸಿಎಂ ವಿಜಯ್ ಅವರ ಬಹುನಿರೀಕ್ಷಿತ ಅಂತಿಮ ಚಿತ್ರ 'ಜನ ನಾಯಗನ್' ಮತ್ತೆ ಚರ್ಚೆಯಲ್ಲಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಪ್ರಕಾರ, ಚಿತ್ರವು ಸೆನ್ಸಾರ್ ಹಂತದಲ್ಲಿದ್ದು, ಇನ್ನೆರಡು ವಾರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.  

Read Full Story

03:28 PM (IST) May 11

ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ

ಆರ್‌ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್‌ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾನೆ.

 

Read Full Story

02:45 PM (IST) May 11

ಬರೀ ಭಾಷಣಕಾರರಿಲ್ಲ, ಹೈಲಿ ಕ್ವಾಲಿಫೈಡ್ ಶಾಸಕರು; ರೀಲ್ ಹೀರೋ ದಳಪತಿ ಅಧಿಪತ್ಯದಲ್ಲಿ 'ರಿಯಲ್ ಹೀರೋ'ಗಳೇ ಹೆಚ್ಚು!

ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ರಾಜಕಾರಣಿಗಳು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ ಬದಲಿಸಿದ್ದಾರೆ. ಅವರ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಂತಿದೆ. ಯಾರೆಲ್ಲಾ ಇದ್ದಾರೆ ನೋಡಿ..

Read Full Story

02:39 PM (IST) May 11

ಇಂಧನ ಆತಂಕ ನಡುವೆ 3 ಗಂಟೆಗೆ ಪೆಟ್ರೋಲಿಯಂ ಮಿನಿಸ್ಟ್ರಿ ಸುದ್ದಿಗೋಷ್ಠಿ, ಮಹತ್ವದ ಘೋಷಣೆ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಇಂಧನ ಪೂರೈಕೆ ಕೊರತೆ ಕುರಿತು ಸೂಚನೆ ನೀಡಿದ ಬೆನ್ನಲ್ಲೇ ಹಲವೆಡೆ ಪೆಟ್ರೋಲ್ ಬಂಕ್ ಕ್ಲೋಸ್ ಆಗುತ್ತಿದೆ. ಈ ಆತಂಕದ ಬೆನ್ನಲ್ಲೇ ಪೆಟ್ರೋಲಿಯಂ ಸಚಿವಾಲಯ ಸುದ್ದಿಗೋಷ್ಠಿ ಕರೆದಿದೆ.

 

Read Full Story

01:18 PM (IST) May 11

ಬಟ್ಟೆ ಮೇಲೆ ಬಿದ್ದ ಕೋಳಿ ಸಾರಿನಿಂದ ಮದ್ವೆ ಮನೆಯಲ್ಲಿ ಜಗಳ ಶುರು, ಓರ್ವ ಸಾವು 6 ಮಂದಿಗೆ ಗಾಯ

ಮದುವೆ ಮನೆಯಲ್ಲಿ ಊಟ ಬಡಿಸುವಾಗ ಕೋಳಿ ಸಾರು ಸ್ವಲ್ಪ ಬಟ್ಟೆ ಮೇಲೆ ಚೆಲ್ಲಿದೆ. ಇಷ್ಟೇ ನೋಡಿ ವಾಗ್ವಾದ ಆರಂಭಗೊಂಡ ಜಗಳವೇ ನಡೆದು ಹೋಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, 6 ಮಂದಿ ಗಾಯಗೊಂಡಿದ್ದಾರೆ.

 

Read Full Story

12:31 PM (IST) May 11

Thalapathy Vijay Daughter - ಎಲ್ಲೂ ಕಾಣಿಸದ ದಳಪತಿ ವಿಜಯ್‌ ಮಗಳು ದಿವ್ಯಾ ಸಾಮಾನ್ಯದವರಲ್ಲ; ಸಾಧಕಿ!

Thalapathy Vijay Daughter: ದಳಪತಿ ವಿಜಯ್‌ ಸಂಸಾರದಲ್ಲಿ ಬಿರುಕು ಬಂದಿದೆ. ಇವರ ಪತ್ನಿ ಸಂಗೀತಾ ಅವರು, ವಿಜಯ್‌ ಓರ್ವ ನಟಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಮಾಡಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್‌ ಸಿಎಂ ಆಗಿ ಪ್ರಮಾಣ ವಚನಕ್ಕೆ ಸಂಗೀತಾ, ಮಕ್ಕಳಾಗಲೀ ಬಂದಿರಲಿಲ್ಲ.

 

Read Full Story

12:22 PM (IST) May 11

'ಅಂತೂ ವಿಜಯ್ ಅಣ್ಣ ಸಿಎಂ ಆದ್ರು' ಅಂತಿರೋ ಫ್ಯಾನ್ಸ್; ಆದ್ರೆ 'ಅತ್ತಿಗೆ' ಆಗೋರು ಯಾರೆಂಬ ಚರ್ಚೆ ಈಗ ಜೋರು!

ಸಂಗೀತಾ ಅವರು ತಮಿಳುನಾಡಿಗೆ ಮರಳಿ ಬರುತ್ತಾರಾ? ಅಥವಾ ಲಂಡನ್‌ನಲ್ಲೇ ಉಳಿದು ವಿಚ್ಛೇದನದ ಹಾದಿ ತುಳಿಯುತ್ತಾರಾ? ಎಂಬುದು ಈಗ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಪಾಲಿನ 'ಮಿಲಿಯನ್ ಡಾಲರ್ ಪ್ರಶ್ನೆ'. ಪತಿ ಸಿಎಂ ಆದ ಮೇಲೆ ಸಂಗೀತಾ ಪತ್ನಿಯಾಗಿ ಅವರ ಜೊತೆ ನಿಲ್ಲುತ್ತಾರಾ ಅಥವಾ ಇಲ್ಲವಾ ಎಂಬುದು ಕಾಲವೇ ಉತ್ತರಿಸಬೇಕಿದೆ.

Read Full Story

12:21 PM (IST) May 11

ಭಾರತೀಯ ರೈಲ್ವೆಯ ಚಲಿಸುವ ನರಕ; ತಾಳ್ಮೆ, ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಿ

ಭಾರತದಲ್ಲಿ 'ಚಲಿಸುವ ನರಕ' ಎಂದು ಕುಖ್ಯಾತಿ ಪಡೆದ ರೈಲಿದೆ. ಈ ಟ್ರೈನ್ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತದೆ. ಈ ಲೇಖನದಲ್ಲಿ ಅದರ ದೀರ್ಘ ಪ್ರಯಾಣ ಮತ್ತು ಪ್ರಯಾಣಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ.

Read Full Story

11:39 AM (IST) May 11

ಅಮ್ಮಂದಿರ ದಿನ ಇಬ್ಬರು ಮಕ್ಕಳ ಎರಡು ಇಮೋಶನ್, ವಿಜಯ್ ಪ್ರಮಾಣವಚನ ಹಿಂದಿನ ಸಿಹಿ ಕಹಿ

ಜೊಸೆಫ್ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿನ ಸಹಿ ಕಹಿ ಘಟನೆ ತಾಯಂದಿರ ದಿನ ಇಬ್ಬರು ತಾಯಂದಿರ ಗೌರವ ಎತ್ತಿ ಹಿಡಿದಿದೆ. ಮಗ ಸಿಎಂ ಆದ ಸಂದರ್ಭ, ಮಗ ಸಿಎಂ ಪ್ರಮಾಣವಚನಕ್ಕೆ ಗೈರಾದ ಸಂದರ್ಭ. ಏನಿದು ?

 

Read Full Story

11:14 AM (IST) May 11

Mother's Day - ಪತ್ನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು "ಅತ್ಯಂತ ಪ್ರೀತಿಯ ಸುಂದರ ಅಮ್ಮನಿಗೆ" ಎಂದು ಬರೆದ ಸಿದ್ಧಾರ್ಥ್ ಮಲ್ಹೋತ್ರಾ!

ಈ ಪೋಸ್ಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೀತಿಯ ಉಡುಗೊರೆ. ಸಿದ್ಧಾರ್ಥ್ ತಾವೇ ಸ್ವತಃ ಚಾಕೊಲೇಟ್ ಪ್ಯಾನ್‌ಕೇಕ್ ತಯಾರಿಸಿದ್ದು, ಅದರ ಮೇಲೆ ಪೀನಟ್ ಬಟರ್ ಬಳಸಿ 'MOM' (ಅಮ್ಮ) ಎಂದು ಬರೆದಿದ್ದರು. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Read Full Story

11:12 AM (IST) May 11

ಔಟರ್ ರಿಂಗ್ ರೋಡ್‌ನಲ್ಲಿ ಕಂಟೇನರ್ ಲಾರಿಗೆ ಕಾರ್ ಡಿಕ್ಕಿ - 31ರ ಉದಯನ್ಮೋಖ ನಟನ ಸಾವು

ಹೊರ ವರ್ತುಲ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಟ ಕೆ. ಭರತ್ ಕಾಂತ್ ಮತ್ತು ಅವರ ಸ್ನೇಹಿತ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಅವರ ಕಾರು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read Full Story

10:37 AM (IST) May 11

Do Not Buy Gold - ನರೇಂದ್ರ ಮೋದಿ ಹೇಳಿದಂತೆ ಯಾಕೆ 1 ವರ್ಷ ಬಂಗಾರ ಖರೀದಿ ಮಾಡಬಾರದು? ಏನಾಗುತ್ತೆ?

Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್‌ ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್‌ ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು. 

Read Full Story

10:17 AM (IST) May 11

ಇವರೇ ಕ್ರಿಕೆಟ್ ಇತಿಹಾಸದ ಅಪಾಯಕಾರಿ ಬ್ಯಾಟರ್ಸ್! ಕ್ರೀಸ್‌ಗೆ ಬಂದ್ರೆ ಬೌಲರ್‌ಗಳಿಗೆ ನಡುಕ!

ಕ್ರಿಕೆಟ್ ಜಗತ್ತನ್ನು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಆಳಿದ ಆಟಗಾರರು ಹಲವರಿದ್ದಾರೆ. ಆದರೆ ಈ ಐವರು ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ಕ್ರೀಸ್‌ಗೆ ಬಂದರೆ ಬೌಲರ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದರು.
Read Full Story

09:59 AM (IST) May 11

ಹಂಟಾ ವೈರಸ್ ಪೀಡಿತ ಹಡಗಿನಲ್ಲಿದ್ದ ಇಬ್ಬರು ಭಾರತೀಯರು ಸ್ಪೇನ್‌ನಿಂದ ನೆದರ್‌ಲ್ಯಾಂಡ್ಸ್‌ಗೆ ಶಿಫ್ಟ್

ಹಂಟಾ ವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಯನ್ನು ನೆದರ್‌ಲ್ಯಾಂಡ್ಸ್‌ಗೆ ಸ್ಥಳಾಂತರಿಸಲಾಗಿದೆ. ಸ್ಪೇನ್‌ನಲ್ಲಿ ಹಡಗು ನಿಂತ ನಂತರ, ಆರೋಗ್ಯವಂತರಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರನ್ನೂ ಹೆಚ್ಚಿನ ಮೇಲ್ವಿಚಾರಣೆ ಮತ್ತು ಕ್ವಾರಂಟೈನ್‌ಗಾಗಿ ಕಳುಹಿಸಲಾಗಿದೆ.
Read Full Story

09:38 AM (IST) May 11

ರಾಯಚೂರಿನಲ್ಲೂ ಘರ್ಜಿಸಿದ ಆರ್‌ಸಿಬಿ, ಎಡವಟ್ಟು ಮಾಡಿ ತಕ್ಷಣವೇ ತಿದ್ದಿ ಮನಗೆದ್ದ ವಿಜಯ್ ಮಲ್ಯ

ಆರ್‌ಸಿಬಿ ಸಿಂಹಗಳು, ಇದೀಗ ರಾಯಚೂರಿನಲ್ಲೂ ಘರ್ಜಿಸಿದೆ ಎಂದ ಮಾಜಿ ಮಾಲೀಕ ವಿಜಯ್ ಮಲ್ಯ ತಕ್ಷಣವೇ ತಪ್ಪು ಸರಿಪಡಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಈ ವೇಳೆ ನನ್ನೊಳಗಿನ ಕನ್ನಡಿಗ ಬಿಟ್ಟುಕೊಡುವುದೇ ಎಂದು ತಪ್ಪು ಸರಿ ಮಾಡಿದ್ದಾರೆ.

Read Full Story

09:03 AM (IST) May 11

ಐಪಿಎಲ್ 2026ರಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಔಟ್, ಪ್ಲೇ ಆಫ್ ರೇಸ್‌ನಲ್ಲಿ 7+1 ತಂಡ

ಐಪಿಎಲ್ ಟೂರ್ನಿಯಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ 8 ತಂಡಗಳ ಪೈಕಿ 7 ತಂಡಕ್ಕೆ ಪ್ಲೇ ಆಫ್ ಅವಕಾಶವಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೃಷ್ಠವೇ ಕೈಹಿಡಿಯಬೇಕು.

 

Read Full Story

08:25 AM (IST) May 11

ಒಂದು ವರ್ಷ ಚಿನ್ನ ಖರೀದಿ ಬೇಡ, ಮೋದಿ ಕರೆಕೊಟ್ಟ ಬೆನ್ನಲ್ಲೇ ಇಂದು ಬಂಗಾರದ ಬೆಲೆ ಎಷ್ಟಾಗಿದೆ?

ಬೆಂಗಳೂರು ಸೇರಿದಂತೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಾಗಿದೆ? ಪ್ರಧಾನಿ ಮೋದಿ ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.

Read Full Story

07:55 AM (IST) May 11

ಆರ್‌ಸಿಬಿ ಪ್ಲೇ ಆಫ್‌ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ

ಮಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಆರ್‌ಸಿಬಿ ಟೇಬಲ್ ಟಾಪರ್ ಆಗಿದೆ. 14 ಅಂಕಗಳಿಸಿದೆ. ಆದರೆ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿಲ್ಲ. ಪ್ಲೇ ಆಫ್ ಗೆಲುವಿಗೆ ಇನ್ನು ಎಷ್ಟು ಗೆಲುವು ಬೇಕು, ಟೇಬಲ್ ಟಾಪ್‌ನಲ್ಲಿ ಉಳಿಯಲು ಲೆಕ್ಕಾಚಾರವೇನು?

Read Full Story

07:26 AM (IST) May 11

ಅಮೆರಿಕನ್‌ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಕಟ್‌; ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ

ಅಮೆರಿಕದ ಟೆಕ್ ಕಂಪನಿಗಳು ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿವೆ. ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ ಎನ್ನಲಾಗಿದ್ದು, ಸಂಬಳದಿಂದ ಉಳಿದ ಹಣವನ್ನು ಎಐ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಈ ಬೆಳವಣಿಗೆಯು ಟೆಕ್ ಉದ್ಯೋಗಿಗಳ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ.
Read Full Story

06:51 AM (IST) May 11

10 ವರ್ಷದ ಬಳಿಕ RCBಗೆ ಸಿಕ್ತು ವಿಶೇಷ ಸಿಕ್ಸರ್ ಗೆಲುವು; ಅಗ್ರಸ್ಥಾನಕ್ಕೇರಿದ ಬೆಂಗಳೂರು

ರಾಯ್ಪುರದಲ್ಲಿ ನಡೆದ ರೋಚಕ ಪಂದ್ಯದಲ್ಲಿ, ಆರ್‌ಸಿಬಿ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ ಕೊನೆಯ ಎಸೆತದಲ್ಲಿ 2 ವಿಕೆಟ್‌ಗಳ ಜಯ ಸಾಧಿಸಿತು. ಕೃನಾಲ್‌ ಪಾಂಡ್ಯರ ಸ್ಫೋಟಕ ಬ್ಯಾಟಿಂಗ್ ಮತ್ತು ಭುವನೇಶ್ವರ್‌ ಕುಮಾರ್‌ರ ಮಾರಕ ಬೌಲಿಂಗ್ ನೆರವಿನಿಂದ ಆರ್‌ಸಿಬಿ ಅಗ್ರಸ್ಥಾನಕ್ಕೇರಿದರೆ, ಮುಂಬೈ ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.
Read Full Story

06:21 AM (IST) May 11

8 ಗ್ರಾಂ ಚಿನ್ನ, 25 ಲಕ್ಷದ ವಿಮೆ, ರೇಷ್ಮೆ ಸೀರೆ; ವಿಜಯ್‌ ಭರವಸೆ ಈಡೇರಿಕೆಗೆ ಬೇಕು ವಾರ್ಷಿಕ ₹1 ಲಕ್ಷ ಕೋಟಿ!

ತಮಿಳುನಾಡು ಸಿಎಂ ವಿಜಯ್ ಅವರ ಚುನಾವಣಾ ಭರವಸೆಗಳನ್ನು ಈಡೇರಿಸಲು ವಾರ್ಷಿಕ ₹1 ಲಕ್ಷ ಕೋಟಿ ಬೇಕಾಗಿದ್ದು, ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಸವಾಲಾಗಿದೆ. ಈ ಯೋಜನೆಗಳು ರಾಜ್ಯದ ಒಟ್ಟು ತೆರಿಗೆ ಆದಾಯದ ಸುಮಾರು 50% ಆಗಿರುವುದರಿಂದ, ಆರ್ಥಿಕ ತಜ್ಞರು ರಾಜ್ಯದ ಸಾಲದ ಹೊರೆ ಹೆಚ್ಚಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

Read Full Story

06:04 AM (IST) May 11

ಬಿಜೆಪಿ ಬಂಗಾಳದ ನಾಗರಿಕತೆಯ ಯುದ್ಧ ಗೆದ್ದಿದ್ದು ಹೇಗೆ?

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಹಿಂಸಾಚಾರ ಮತ್ತು ದುರಾಡಳಿತದ ನಡುವೆ, ಸಂದೇಶಖಾಲಿ ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಘಟನೆಗಳು ಜನರ ಆಕ್ರೋಶಕ್ಕೆ ಕಾರಣವಾದವು. ಈ ಹಿನ್ನೆಲೆಯಲ್ಲಿ, ಬಿಜೆಪಿ ಸವಾಲುಗಳನ್ನು ಎದುರಿಸಿ ಗೆಲುವು ಸಾಧಿಸಿದ್ದು, ಇದು ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸು ಮಾಡಿದ ಐತಿಹಾಸಿಕ ಬದಲಾವಣೆಯಾಗಿದೆ.
Read Full Story

05:14 AM (IST) May 11

ಪೆಟ್ರೋಲ್‌ ಕಡಿಮೆ ಬಳಸಿ, 1 ವರ್ಷ ಚಿನ್ನ ಬಿಡಿ - ಬೆಲೆ ಏರಿಕೆ ನಡುವೆಯೇ ಪ್ರಧಾನಿ ಎಚ್ಚರಿಕೆ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಸಂಭವನೀಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು ಸಾಮೂಹಿಕ ಭಾಗೀದಾರಿಕೆಗೆ ಕರೆ ನೀಡಿದ್ದಾರೆ. ಇಂಧನ ಬಳಕೆ ಕಡಿತ, ವರ್ಕ್‌ ಫ್ರಂ ಹೋಂ, ಮತ್ತು ಒಂದು ವರ್ಷ ಚಿನ್ನದ ಖರೀದಿ ತಪ್ಪಿಸುವಂತಹ ಮಿತವ್ಯಯ ಕ್ರಮಗಳನ್ನು ಪಾಲಿಸುವಂತೆ ಅವರು ಜನರಿಗೆ ಸಲಹೆ ನೀಡಿದ್ದಾರೆ.
Read Full Story

More Trending News