LIVE NOW
Published : Jun 10, 2026, 06:59 AM ISTUpdated : Jun 10, 2026, 09:14 PM IST

India Latest News Live: ಮೆರಿಟಸ್ ಕಪ್ ಕಾರ್ಟಿಂಗ್‌ - ಬೆಂಗಳೂರಿನ ಜಿದಾನ್ ಅನೀಸ್‌ಗೆ ರನ್ನರ್-ಅಪ್, ಮುಂಬೈನ ಆರವ್‌ಗೆ ಚಾಂಪಿಯನ್ ಪಟ್ಟ

ಸಾರಾಂಶ

ನವದೆಹಲಿ: ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನೆಲೆಕಳೆದುಕೊಂಡು, ಇಬ್ಭಾಗವಾಗುವ ಅಂಚಿನಲ್ಲಿರುವ ಹೊತ್ತಿನಲ್ಲಿ ಅದರ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಅವರ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿದ್ದಾರೆ. ಇದು, ಚುನಾವಣಾ ಸೋಲಿನ ಬಳಿಕ ಅವರಿಬ್ಬರ ಮೊದಲ ಪ್ರತ್ಯೇಕ ಭೇಟಿಯಾಗಿದೆ.

ನಾಯಕಿಯರಿಬ್ಬರ ನಡುವೆ ಯಾವ ವಿಷಯದ ಬಗ್ಗೆ ಮಾತುಕತೆ ನಡೆಯಿತೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ವಿಪಕ್ಷಗಳು ಪರಸ್ಪರರನ್ನು ಟೀಕಿಸಿಕೊಳ್ಳುವ ಬದಲು ಬಿಜೆಪಿಯ ವಿರುದ್ಧ ಇಂಡಿಯಾ ಕೂಟವನ್ನು ಇನ್ನಷ್ಟು ಒಗ್ಗೂಡಿಸಿ ಹೋರಾಡಬೇಕೆಂದು ದೀದಿ ಆಗ್ರಹಿಸಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಇದರ ಜತೆಗೇ, ಉದಯಿಸಿದ ರಾಜ್ಯದಲ್ಲಿ ನೆಲೆ ಇಲ್ಲವಾಗಿರುವ ಹಿನ್ನೆಲೆಯಲ್ಲಿ ಟಿಎಂಸಿಯನ್ನು ಕಾಂಗ್ರೆಸ್‌ ಜತೆ ವಿಲೀನ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎಂದೂ ಹೇಳಲಾಗುತ್ತಿದೆ.

09:14 PM (IST) Jun 10

ಮೆರಿಟಸ್ ಕಪ್ ಕಾರ್ಟಿಂಗ್‌ - ಬೆಂಗಳೂರಿನ ಜಿದಾನ್ ಅನೀಸ್‌ಗೆ ರನ್ನರ್-ಅಪ್, ಮುಂಬೈನ ಆರವ್‌ಗೆ ಚಾಂಪಿಯನ್ ಪಟ್ಟ

ಹತ್ತು ವರ್ಷದ ಮುಂಬೈ ಬಾಲಕ ಆರವ್ ಸುರೇಕಾ, ಕೊಯಮತ್ತೂರಿನಲ್ಲಿ ನಡೆದ ಮೆಕೊ ಮೆರಿಟಸ್ ಕಪ್‌ನ 'ಮೈಕ್ರೋ ಮ್ಯಾಕ್ಸ್' ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತೀವ್ರ ಪೈಪೋಟಿ ಮತ್ತು ಇಂಜಿನ್ ಸಮಸ್ಯೆಯ ನಡುವೆಯೂ, ಅವರು 78 ಅಂಕಗಳೊಂದಿಗೆ ಪ್ರಶಸ್ತಿಯನ್ನು ಗೆದ್ದುಕೊಂಡರು.
Read Full Story

09:04 PM (IST) Jun 10

ಹೊಸೂರನ್ನು ಕೈಗಾರಿಕಾ ಹಬ್ ಮಾಡಿದ ಆ ಪಾರ್ಸಿ ಉದ್ಯಮಿಯ ಕಥೆ, ಇದು ಟೈಟನ್ ರೂವಾರಿ ಕ್ಸೆರ್ಕ್ಸ್ ದೇಸಾಯಿ ಯಶೋಗಾಥೆ!

'ಮೇಡ್ ಇನ್ ಇಂಡಿಯಾ: ಎ ಟೈಟನ್ ಸ್ಟೋರಿ' ವೆಬ್ ಸಿರೀಸ್, ಟೈಟನ್ ಸಂಸ್ಥಾಪಕ ಕ್ಸೆರ್ಕ್ಸ್ ದೇಸಾಯಿ ಅವರ ಸ್ಪೂರ್ತಿದಾಯಕ ಜೀವನಗಾಥೆಯನ್ನು ಕಟ್ಟಿಕೊಡುತ್ತದೆ. ಜೆಆರ್‌ಡಿ ಟಾಟಾ ಮಾರ್ಗದರ್ಶನದಲ್ಲಿ, ದೇಸಾಯಿ ಅವರು ಕ್ವಾರ್ಟ್ಜ್ ವಾಚ್‌ಗಳನ್ನು ಪರಿಚಯಿಸಿದ್ದರು.

Read Full Story

08:56 PM (IST) Jun 10

'ಕರೆಂಟು ಹೋದ ಟೈಂ'ನಲ್ಲಿ ಕಿಸ್ ಕೊಡುವ ನಾಯಕ; ಪೋಲಿ 'ಪೆದ್ದಿ'ಯ ಹಸಿಬಿಸಿ ದೃಶ್ಯಗಳು ಕಟ್ ಆಗೋಯ್ತು!

ಅಷ್ಟೆಲ್ಲಾ ವಿವಾದ ಆದ ಮೇಲೆ ಅಂತೂ ಇಂತೂ ಆ ಸೀನ್ಸ್​ಗಳಿಗೆ ಕತ್ತರಿ ಬಿದ್ದಿದೆ. ಸದ್ಯಕ್ಕೇನೋ ಸೀನ್ಸ್ ಕಟ್ ಮಾಡಿ ವಿವಾದಕ್ಕೆ ಬ್ರೇಕ್ ಹಾಕಲಾಗಿದೆ. ಆದ್ರೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅನ್ನುವಂತೆ , ಅಶ್ಲೀಲ ದೃಶ್ಯ ಇಟ್ಟು ಈಗ ಕಟ್ ಮಾಡಿದ್ರೆ ಏನ್ ಬಂತು ಪ್ರಯೋಜನ ಅಂತಿದ್ದಾರೆ ಜಾನು ಫ್ಯಾನ್ಸ್..!

Read Full Story

08:56 PM (IST) Jun 10

ಪೈಠಾಣಿ ಸೀರೆಯಲ್ಲಿ ಮರಾಠಿ ಮುಲ್ಗಿಯಾದ ಕಂಗನಾ - ಡೈಮಂಡ್ ರಿಂಗ್ ನೋಡಿ ಫ್ಯಾನ್ಸ್ ಫಿದಾ!

‘ಭಾರತ್ ಭಾಗ್ಯ ವಿಧಾತಾ’ ಚಿತ್ರದ ಪ್ರಚಾರದಲ್ಲಿ ನಟಿ ಕಂಗನಾ ಪೈಠಾಣಿ ಸೀರೆಯಲ್ಲಿ ಮಿಂಚಿದ್ದಾರೆ. ಸಾಂಪ್ರದಾಯಿಕ ದೇಸಿ ಲುಕ್, ಆಕರ್ಷಕ ಆಭರಣಗಳು ಮತ್ತು ಸರಳ ಮೇಕಪ್ ಮೂಲಕ ಅವರು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

Read Full Story

08:31 PM (IST) Jun 10

ಜೂನ್‌ ತಿಂಗಳಲ್ಲಿ ಮಾರುತಿ ಸುಜುಕಿ ಕಾರು ಖರೀದಿ ಮಾಡಿದ್ರೆ ಭಾರೀ ಡಿಸ್ಕೌಂಟ್‌, ಗ್ರಾಹಕರಿಗೆ ಸಿಗಲಿದೆ 2.15 ಲಕ್ಷದವರೆಗಿನ ಲಾಭ

ಮಾರುತಿ ಸುಜುಕಿ ಸಂಸ್ಥೆಯು ಜೂನ್ ತಿಂಗಳಿನಲ್ಲಿ ತನ್ನ ಅರೆನಾ ಮತ್ತು ನೆಕ್ಸಾ ಸರಣಿಯ ಕಾರುಗಳ ಮೇಲೆ ಬೃಹತ್ ರಿಯಾಯಿತಿಗಳನ್ನು ಘೋಷಿಸಿದೆ. ಇನ್ವಿಕ್ಟೋ, ಗ್ರಾಂಡ್ ವಿಟಾರಾ, ಸ್ವಿಫ್ಟ್, ಮತ್ತು ಬಲೆನೊ ಸೇರಿದಂತೆ ಹಲವು ಜನಪ್ರಿಯ ಮಾದರಿಗಳ ಮೇಲೆ ಗ್ರಾಹಕರು ₹2.15 ಲಕ್ಷದವರೆಗೆ ಉಳಿತಾಯ ಮಾಡಬಹುದಾಗಿದೆ.
Read Full Story

08:29 PM (IST) Jun 10

Monsoon Movies - ಹೊರಗೆ ಮಳೆ ಬರ್ತಿದ್ಯಾ? ಸಂಗಾತಿ ಜೊತೆ ಈ 5 ಕ್ಲಾಸಿಕ್ ಸಿನಿಮಾ ನೋಡಿ!

ಹೊರಗೆ ಜಿಟಿಜಿಟಿ ಮಳೆ ಸುರಿಯುತ್ತಿದೆಯೇ? ನಿಮ್ಮ ಸಂಗಾತಿ ಜೊತೆ ಬೆಚ್ಚಗೆ ಕುಳಿತು ನೋಡಬಹುದಾದ 5 ಕ್ಲಾಸಿಕ್ ಬಾಲಿವುಡ್ ಸಿನಿಮಾಗಳ ಪಟ್ಟಿ ಇಲ್ಲಿದೆ. ಮಳೆಯಲ್ಲಿ ಅರಳುವ ಪ್ರೇಮಕಥೆಗಳು, ಮಳೆ ಹಾಡುಗಳು ಈ ಸಿನಿಮಾಗಳಲ್ಲಿದ್ದು, ಮಳೆಗಾಲದ ಸಂಜೆಗೆ ಹೇಳಿ ಮಾಡಿಸಿದಂತಿವೆ.

Read Full Story

07:28 PM (IST) Jun 10

ಕೆಂಪು ಕೊಡೆ ಹಿಡಿದ ಮಹಿಳೆ ಕೊಲೆ ಮಾಡ್ತಾಳೆ, ಆದರೆ ಸಿಕ್ಕಿಬೀಳೋದಿಲ್ಲ - ಹೇಗೆ ಗೊತ್ತಾ?

ಹುಮಾ ಖುರೇಷಿ ನಟನೆಯ ‘ಬೇಬಿ ಡು ಡೈ ಡು’ ಟೀಸರ್ ಬಿಡುಗಡೆಯಾಗಿದೆ. ‘ಬೇಬಿ ಕರ್ಮಾರ್ಕರ್’ ಎಂಬ ಭಾರತದ ಮೊದಲ ದೇಸಿ ಹಿಟ್‌ವುಮನ್ ಪಾತ್ರದಲ್ಲಿ ಹುಮಾ ಕಾಣಿಸಿಕೊಂಡಿದ್ದು, ಡಾರ್ಕ್ ಮಿಸ್ಟರಿ ಮತ್ತು ಥ್ರಿಲ್ಲರ್ ಕಥೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

Read Full Story

07:02 PM (IST) Jun 10

USA Priests Income - ಅಮೆರಿಕದಲ್ಲಿ ಪೂಜಾರಿಗಳ ಸಂಬಳ ಎಷ್ಟು? ಯುವತಿ ಹೇಳಿದ ಅಂಕಿ ಕೇಳಿ ನೆಟ್ಟಿಗರು ಶಾಕ್!

ಅಮೆರಿಕದಲ್ಲಿ ವಾಸವಿರುವ ಭಾರತೀಯ ಯುವತಿ ಶಾರಿಕಾ ಯಾದವ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು, ಅಮೆರಿಕದಲ್ಲಿ ಪೂಜಾರಿಗಳು ಒಂದೊಂದು ಪೂಜೆಗೆ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

Read Full Story

06:41 PM (IST) Jun 10

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಬ್ಲಾಸ್ಟ್' ಸಿನಿಮಾ OTTಗೆ ಬರೋದು ಯಾವಾಗ? ಇಲ್ಲಿದೆ ಬಿಗ್ ಅಪ್‌ಡೇಟ್!

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನೆಯ 'ಬ್ಲಾಸ್ಟ್' ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಭಾಷ್ ಕೆ ರಾಜ್ ನಿರ್ದೇಶನದ ಈ ಚಿತ್ರ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ.

Read Full Story

05:48 PM (IST) Jun 10

18ನೇ ಹುಟ್ಟುಹಬ್ಬಕ್ಕೇ ಸ್ಪೈ ಆದ ಆಲಿಯಾ ಭಟ್ - ಸೀತಾಳ ಆ್ಯಕ್ಷನ್ ಅವತಾರ ವೈರಲ್!

ಯಶ್ ರಾಜ್ ಫಿಲ್ಮ್ಸ್ ಮೊದಲ ಮಹಿಳಾ ಪ್ರಧಾನ ಸಿನಿಮಾ ‘ಆಲ್ಫಾ’ ಟೀಸರ್ ಬಿಡುಗಡೆಯಾಗಿದೆ. ಆಲಿಯಾ ಭಟ್ ‘ಸೀತಾ’ ಎಂಬ ಸ್ಪೈ ಪಾತ್ರದಲ್ಲಿ ಮಿಂಚಿದ್ದು, ಆಕೆಯ ಮೂಲ ಕಥೆ ಮತ್ತು ಆ್ಯಕ್ಷನ್ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದಿವೆ.

Read Full Story

05:45 PM (IST) Jun 10

ಕಾಂಗ್ರೆಸ್​ 72 ವರ್ಷಗಳ ದಾಖಲೆ ಮುರಿದ ಪಿಎಂ ಮೋದಿ - ಯಾರೂ ಊಹಿಸದ ಟ್ರೀಟ್​ ಕೊಟ್ಟ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಅವರ 72 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲು ಸಿದ್ಧರಾಗಿದ್ದಾರೆ. ಸತತವಾಗಿ ಅತಿ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಮೋದಿ ತಮ್ಮದಾಗಿಸಿಕೊಳ್ಳಲಿದ್ದು, ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಲಿದ್ದಾರೆ.
Read Full Story

05:32 PM (IST) Jun 10

'5 ರೂಪಾಯಿ ಡಾಕ್ಟರ್' ಪಾತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್? ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಎಕ್ಸೈಟ್!

ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ತಲೈವರ್ 173' ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ರಜನಿ, ಬಡವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದ '5 ರೂಪಾಯಿ ಡಾಕ್ಟರ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Read Full Story

05:09 PM (IST) Jun 10

ವಾರದಲ್ಲೇ 5 ಕೋಟಿ ವೀಕ್ಷಣೆ - ಜಿಯೋ ಹಾಟ್‌ಸ್ಟಾರ್‌ನಲ್ಲಿ ಹೊಸ ಇತಿಹಾಸ ಬರೆದ ರಣವೀರ್ ಸಿನಿಮಾ!

ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ವಾರದೊಳಗೆ 5 ಕೋಟಿ ವೀಕ್ಷಣೆ ದಾಖಲಿಸಿ ಹೊಸ ದಾಖಲೆ ಬರೆದಿದೆ. ಓಟಿಟಿ ಇತಿಹಾಸದಲ್ಲೇ ಅತಿದೊಡ್ಡ ಡಿಜಿಟಲ್ ಪ್ರೀಮಿಯರ್ ಎನ್ನಲಾಗುತ್ತಿದೆ.

Read Full Story

04:58 PM (IST) Jun 10

ದೀಪಿಕಾ-ರಣವೀರ್ ಖಾಸಗಿ ಫೋಟೋ ವೈರಲ್ - ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದದ್ದು ಏನು?

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳ ಖಾಸಗಿತನ ಮತ್ತು ವೈಯಕ್ತಿಕ ಬದುಕಿನ ಮಿತಿಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

Read Full Story

04:45 PM (IST) Jun 10

ರಜನಿಕಾಂತ್ ಅಳಿಯ ರಾಜಕೀಯಕ್ಕೆ? ಅಣ್ಣಾಮಲೈ ಜೊತೆ ಕೈಜೋಡಿಸ್ತಾರಾ ವಿಶಗನ್?

ರಜನಿಕಾಂತ್ ಅಳಿಯ ವಿಶಗನ್, ಕೆ. ಅಣ್ಣಾಮಲೈ ಅವರ 'ವಿ ದಿ ಲೀಡರ್ಸ್' ಚಳವಳಿಗೆ ಸೇರುವ ಸಾಧ್ಯತೆ ಬಗ್ಗೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Read Full Story

04:17 PM (IST) Jun 10

ಫಾರಿನ್‌ ರಸ್ತೆಯಲ್ಲಿ ಶಿಲ್ಪಾ ಶೆಟ್ಟಿ ರೀತಿ ಟವಲ್‌ ಉಟ್ಕೊಂಡು ಡಾನ್ಸ್ ಮಾಡಿದ ಲೇಡಿ, ದೇಶ ಮಾನ ಕಳಿಯೋಕೆ ನೀವೇ ಸಾಕು ಎಂದ ನೆಟ್ಟಿಗರು!

ವಿದೇಶದ ಜನನಿಬಿಡ ಮಾರುಕಟ್ಟೆಯಲ್ಲಿ ಭಾರತೀಯ ಮಹಿಳೆಯೊಬ್ಬರು ಟವೆಲ್ ಸುತ್ತಿಕೊಂಡು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಅನೇಕರು ಆಕೆಯ ನಡವಳಿಕೆಯನ್ನು ಟೀಕಿಸಿದ್ದಾರೆ.

Read Full Story

03:32 PM (IST) Jun 10

'ಪೆದ್ದಿ' ವಿವಾದಕ್ಕೆ ಕಂಗನಾ ರಣಾವತ್ ಎಂಟ್ರಿ - ಬಾಲಿವುಡ್ 'ಕ್ವೀನ್' ಹೇಳಿದ ಮಾತು ಕೇಳಿ ಚಿತ್ರರಂಗವೇ ಶಾಕ್!

"ಹೆಚ್ಚಿನ ಸಂದರ್ಭಗಳಲ್ಲಿ ಪುರುಷರು ಒಂದು ಮುಚ್ಚಿದ ಕೋಣೆಯಲ್ಲಿ ಕುಳಿತು ಕಥೆ ಬರೆಯುವಾಗ, ಅವರಿಗೆ ಮಹಿಳೆಯ ದೃಷ್ಟಿಕೋನ ಅರ್ಥವಾಗುವುದಿಲ್ಲ. ತಾವು ಬರೆದ ದೃಶ್ಯವು ಪರದೆಯ ಮೇಲೆ ಅಸಭ್ಯವಾಗಿ ಕಾಣಿಸಬಹುದು ಎಂಬ ಅರಿವು ಅವರಿಗೆ ಇರುವುದಿಲ್ಲ. ಮತ್ತೇನು ಹೇಳಿದ್ದಾರೆ ಕಂಗನಾ?

Read Full Story

02:50 PM (IST) Jun 10

ಏಷ್ಯನ್ ಗೇಮ್ಸ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ; ಬಾಬರ್ ಅಜಂ, ಶಾಹೀನ್ ಅಫ್ರಿದಿಗಿಲ್ಲ ಸ್ಥಾನ!

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಯುವ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂರಂತಹ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಿ, ಸಾಹಿಬ್‌ಜಾದಾ ಫರ್ಹಾನ್ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
Read Full Story

01:03 PM (IST) Jun 10

ದಕ್ಷಿಣ ಭಾರತ ಚಿತ್ರರಂಗದ 'ನಿರ್ದೇಶಕರ ಹಿಮಾಲಯ' ಖ್ಯಾತಿಯ ಭಾರತಿರಾಜ ಇನ್ನಿಲ್ಲ!

ತಮಿಳು ಚಿತ್ರ ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಭಾರತಿರಾಜ ಅವರ ನಿಧನದಿಂದ ಭಾರತೀಯ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಿದೆ. ಅವರ ಸಿನಿಮಾಗಳು ಮತ್ತು ಅವರ ಸೃಜನಶೀಲತೆ ಎಂದೆಂದಿಗೂ ಅಮರ.

Read Full Story

12:29 PM (IST) Jun 10

48 ಗಂಟೆಗಳಿಂದ ಹೊಲ ಸುತ್ತುತ್ತಿರುವ ನಿಗೂಢ ಹಸು - ಗೋಮಾತೆ ದರ್ಶನಕ್ಕೆ ಭಕ್ತರ ದೌಡು- ವೈದ್ಯರು ಹೇಳೋದೇನು

ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ, ಹಸುವೊಂದು 48 ಗಂಟೆಗಳಿಂದ ನಿರಂತರವಾಗಿ ಹೊಲದಲ್ಲಿ ಸುತ್ತುತ್ತಿದ್ದು, ಇದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಗ್ರಾಮಸ್ಥರು ಇದನ್ನು ದೈವಿಕ ಶಕ್ತಿ ಎಂದು ನಂಬಿದರೆ, ಪಶುವೈದ್ಯರು ಇದು ನರವೈಜ್ಞಾನಿಕ ಕಾಯಿಲೆಯ ಲಕ್ಷಣವಾಗಿರಬಹುದು ಎಂದು ಶಂಕಿಸಿದ್ದಾರೆ.
Read Full Story

12:28 PM (IST) Jun 10

ಕೊಹ್ಲಿ ಬಳಿಕ ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಯಿಂದ ಸ್ಟಾರ್ ಆಲ್ರೌಂಡರ್ ಔಟ್! ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಹಿನ್ನಡೆಯಾಗಿದ್ದು, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದರೂ, ಕಾಲಿನ ಉಳುಕಿನಿಂದ ಬಳಲುತ್ತಿರುವ ಪಾಂಡ್ಯ, ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯ ಸಲಹೆಯಂತೆ ವಿಶ್ರಾಂತಿ ಪಡೆಯಲಿದ್ದಾರೆ.
Read Full Story

11:41 AM (IST) Jun 10

ಭಿಕ್ಷುಕ ಎಂದು ರಜನಿಕಾಂತ್‌ಗೆ 10 ರೂ. ಕೊಟ್ಟಿದ್ದ ಮಹಿಳೆ ಈ ನಟ ಕಾರು ಹತ್ತಿ ಹೊರಟಾಗ ಕಾಲು ಹಿಡಿದು ಹೇಳಿದ್ದೇನು?

ಬಿಳಿ ಪಂಚೆ, ಶರ್ಟ್ ಧರಿಸಿ, ಗಡ್ಡ ಬಿಟ್ಟುಕೊಂಡು ಅತ್ಯಂತ ಸರಳವಾಗಿ ಮೆಟ್ಟಿಲ ಮೇಲೆ ಕುಳಿತಿರುವ ವ್ಯಕ್ತಿ ಸೂಪರ್ ಸ್ಟಾರ್ ರಜನಿಕಾಂತ್ ಎಂದು ತಿಳಿಯುವುದಿಲ್ಲ ಆ ಮಹಿಳೆಗೆ ಗೊತ್ತಿಲ್ಲ. ಯಾರೋ ಪಾಪದ ವ್ಯಕ್ತಿ, ಭಿಕ್ಷುಕ ಎಂದು ತಮ್ಮ ಬಳಿಯಿದ್ದ 10 ರೂಪಾಯಿಯನ್ನು ರಜನಿಕಾಂತ್‌ಗೆ ಕೊಡುತ್ತಾರೆ. 

Read Full Story

11:24 AM (IST) Jun 10

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಕ್ತಪಾತ; 19 ಮಕ್ಕಳು , 7 ಗರ್ಭಿಣಿಯರ ಹತ್ಯೆ, ಇಂಟರ್‌ನೆಟ್ ಬಂದ್

ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ, ಜಂಟಿ ಅವಾಮಿ ಕ್ರಿಯಾ ಸಮಿತಿಯು ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯನ್ನು ಪಾಕಿಸ್ತಾನ ಹಿಂಸಾತ್ಮಕವಾಗಿ ಹತ್ತಿಕ್ಕಿದೆ. ಈ ದಾಳಿಯಲ್ಲಿ ಮಕ್ಕಳು ಮತ್ತು ಗರ್ಭಿಣಿಯರು ಸೇರಿದಂತೆ ಹಲವರು ಸಾವನ್ನಪ್ಪಿದ್ದು, ಈ ಪ್ರದೇಶದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.
Read Full Story

11:12 AM (IST) Jun 10

ಜೂನ್ ತಿಂಗಳಿನಲ್ಲೇ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ! ಇಂದು ಒಂದೇ ₹4300 ರುಪಾಯಿ ಇಳಿಕೆ

ಬೆಂಗಳೂರು: ಇರಾನ್-ಅಮೆರಿಕ ಯುದ್ದ ಭೀತಿಯ ನಡುವೆ ಜೂನ್ 10ರಂದು ಚಿನ್ನದ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಇದು ಜೂನ್ ತಿಂಗಳಿನಲ್ಲೇ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ ಎನಿಸಿಕೊಂಡಿದ್ದು, ಆಭರಣ ಪ್ರಿಯರ ಪಾಲಿಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.

Read Full Story

10:54 AM (IST) Jun 10

PM Modi's 12 years - ಮೋದಿ ಸಾಧನೆ ಅದೃಷ್ಟವಲ್ಲ - ಭಾರತವನ್ನ ಮರು ನಿರ್ಮಾಣ ಮಾಡಿದ 12 ವರ್ಷಗಳು

ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಆಡಳಿತವು ಭಾರತದ ಇತಿಹಾಸದಲ್ಲಿ ಒಂದು ಪರಿವರ್ತಕ ಅಧ್ಯಾಯವಾಗಿದೆ 2019ರಲ್ಲಿ, ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ನಾನು ಪ್ರಧಾನಿ ಮೋದಿ ಅವರನ್ನು ‘ಏಷ್ಯಾದ ಪ್ರಮುಖ ಆಧುನಿಕತಾವಾದಿ’ ಎಂದು ಕರೆದಿದ್ದೆ. ನಾನು ಅಂದು ಹೇಳಿದ್ದ ಮಾತು ನಿಜವಾಗಿದೆ.

Read Full Story

10:02 AM (IST) Jun 10

ಫಿಫಾ ವಿಶ್ವಕಪ್ ವೇಳೆ ಅಕ್ರಮ ವಲಸಿಗರ ಮೇಲೆ ರೇಡ್? ಟ್ರಂಪ್ ಆಡಳಿತದ ಸೂಚನೆ ವೈರಲ್

ಫಿಫಾ ವಿಶ್ವಕಪ್ ವೇಳೆ ಅಕ್ರಮ ವಲಸಿಗರನ್ನು ಗುರುತಿಸಿ, ಬಂಧಿಸಿ ಗಡೀಪಾರು ಮಾಡಲು ಅಮೆರಿಕ ಆಡಳಿತ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಇದೇ ವೇಳೆ, ಯುದ್ಧದ ನಡುವೆಯೂ ಪಂದ್ಯವಾಡಲು ಅಮೆರಿಕಕ್ಕೆ ಬರುವ ಇರಾನ್ ತಂಡ, ಪಂದ್ಯ ಮುಗಿದ ಕೂಡಲೇ ದೇಶ ತೊರೆಯಬೇಕೆಂಬ ಕಠಿಣ ಸೂಚನೆ ಪಡೆದಿದೆ.
Read Full Story

09:43 AM (IST) Jun 10

ಆಫ್ಘಾನ್ ಎದುರಿನ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಗುಡ್‌ ನ್ಯೂಸ್! ಇಬ್ಬರು ಆಟಗಾರರು ಫುಲ್ ಫಿಟ್

ಮುಲ್ಲಾನ್‌ಪುರ: ಭಾರತ ಹಾಗೂ ಆಫ್ಘಾನಿಸ್ತಾನ ನಡುವೆ ಜೂನ್ 13ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ. ಏನದು ನೋಡೋಣ ಬನ್ನಿ.

 

Read Full Story

09:31 AM (IST) Jun 10

ಪ್ರಲ್ಹಾದ್ ಜೋಶಿ ಅಂಕಣ | ನೆಹರು ದಾಖಲೆ ನೇಪಥ್ಯಕ್ಕೆ ಸರಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಆಡಳಿತಾವಧಿಯು 'ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯಡಿ ದೇಶವನ್ನು ಏಕೀಕೃತಗೊಳಿಸಿದೆ. ಜನಧನ, ಉಜ್ವಲಾ, ಸ್ವಚ್ಛ ಭಾರತ್‌ನಂತಹ ಯೋಜನೆಗಳ ಮೂಲಕ ಜನಕಲ್ಯಾಣ ಮತ್ತು ಡಿಜಿಟಲ್ ಆಡಳಿತಕ್ಕೆ ಒತ್ತು ನೀಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚಿಸಿದ್ದಾರೆ.

Read Full Story

08:36 AM (IST) Jun 10

ಫಿಫಾ ವಿಶ್ವಕಪ್ 2026 - ಕಾಲ್ಚೆಂಡು ಸಮರಕ್ಕೆ 16 ಸ್ಟೇಡಿಯಂ ಸಿದ್ದ!

23ನೇ ಆವೃತ್ತಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಈ ಬಾರಿಯ ಟೂರ್ನಿಗಾಗಿ ಸಿದ್ಧವಾಗಿರುವ 16 ಕ್ರೀಡಾಂಗಣಗಳ ವಿಶೇಷತೆ, ಆಸನ ಸಾಮರ್ಥ್ಯ, ಮತ್ತು ಅಲ್ಲಿ ನಡೆಯಲಿರುವ ಪಂದ್ಯಗಳ ಸಂಖ್ಯೆಯ ಕುರಿತು ಈ ಲೇಖನವು ವಿವರವಾದ ಮಾಹಿತಿ ನೀಡುತ್ತದೆ.
Read Full Story

More Trending News