RIP Charanjit Singh ಹಾಕಿ ದಿಗ್ಗಜ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ನಾಯಕ ಚರಣಜಿತ್ ಸಿಂಗ್ ನಿಧನ!

By Suvarna News  |  First Published Jan 27, 2022, 6:43 PM IST
  • ಭಾರತೀಯ ಹಾಕಿ ತಂಡದ ದಿಗ್ಗಜ ಪಟು ಚರಣಜಿತ್ ಸಿಂಗ್ ನಿಧನ
  • ಹಿಮಾಚಲ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ನಿಧನರಾದ ಮಾಜಿ ನಾಯಕ
  • ಭಾರತದ ಹಾಕಿಗೆ ಸ್ವರ್ಣಯುಗ ತಂದುಕೊಟ್ಟಿದ್ದ ಚರಣಜಿತ್ ಸಿಂಗ್

ಹಿಮಾಚಲ ಪ್ರದೇಶ(ಜ.27): ಭಾರತೀಯ ಹಾಕಿ ತಂಡವನ್ನು(Hockey India) ಸ್ವರ್ಣಯುಗದಲ್ಲಿ ಕೊಂಡೊಯ್ದ ದಿಗ್ಗಜ ನಾಯಕ ಚರಣಜಿತ್ ಸಿಂಗ್(Charanjit Singh) ಇಂದು(ಜ.27) ನಿಧನರಾಗಿದ್ದಾರೆ. ವಯೋಸಜಹಜ ಕಾಯಿಲೆಯಿಂದ( prolonged age-related illnesses) ಬಳಲುತ್ತಿದ್ದ ಚರಣಜಿತ್ ಸಿಂಗ್ 90 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ ಉನಾದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ.

5 ವರ್ಷಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಚರಣಜಿತ್ ಸಿಂಗ್ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ಆದರೆ ಊರುಗೋಲಿನಿಂದ ನಡೆಯುತ್ತಿದ್ದ ಚರಣಜಿತ್ ಸಿಂಗ್ ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲಿದ್ದರು. ಚರಣಜಿತ್ ಸಿಂಗ್ ಅಂತ್ಯಕ್ರಿಯೆ ದೆಹಲಿಯಿಂದ ಪುತ್ರಿ ಆಗಮನದ ಬಳಿಕ ನಡೆಯಲಿದೆ ಎಂದು ಕಿರಿಯ ಪುತ್ರ ವಿಪಿ ಸಿಂಗ್ ಹೇಳಿದ್ದಾರೆ. 

Latest Videos

undefined

ರಾಷ್ಟ್ರೀಯ ಮಹಿಳಾ ಕಿರಿಯರ ಹಾಕಿಯಲ್ಲಿ ಕನ್ನಡಿಗರ ಕಲರವ..!

12 ವರ್ಷಗಳ ಹಿಂದೆ ಚರಣಜಿತ್ ಪತ್ನಿ ನಿಧನರಾಗಿದ್ದಾರೆ. ಕಿರಿಯ ಪುತ್ರ ಚರಣಜಿತ್ ನಿವಾಸದಲ್ಲೇ ವಾಸವಿದ್ದರೆ, ಹಿರಿಯ ಪುತ್ರ ಕನಾಡದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಏಕೈಕ ಪುತ್ರಿ ಮದುವೆಯಾಗಿ ದೆಹಲಿಯಲ್ಲಿ ವಾಸವಿದ್ದಾರೆ. 

1960ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವನ್ನು ಮುನ್ನಡೆಸಿದ್ದ ಚರಣಜಿತ್ ಸಿಂಗ್, ಬದ್ಧವೈರಿ ಪಾಕಿಸ್ತಾನ ಮಣಿಸಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಇನ್ನು 1960ರ ರಿಯೋ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡದ ಸದಸ್ಯರಾಗಿದ್ದ ಚರಣಜಿತ್ ಅದ್ಭುತ ಪ್ರದರ್ಶನದಿಂದ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಇನ್ನು 1962ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಸಾದನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಚರಣಜಿತ್ ಸಿಂಗ್ ಸತತ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ಮತ್ತೆ ಅನಾರೋಗ್ಯ ಉಲ್ಬಣಿಸಿ ಇಂದು ನಿಧನರಾಗಿದ್ದಾರೆ. 

Coronavirus Threat: ಕೊರಿಯಾ ವಿರುದ್ಧದ ಭಾರತ ಮಹಿಳಾ ಹಾಕಿ ಪಂದ್ಯ ಮುಂದೂಡಿಕೆ..!

ಹಾಕಿಯಿಂದ ನಿವೃತ್ತಿಯಾದ ಬಳಿಕ ಚರಣಜಿತ್ ಸಿಂಗ್ ಶಿಮ್ಲಾದಲ್ಲಿರುವ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಡೆಹ್ರಡೂನ್‌ನ ಬ್ರೌನ್ ಕೇಂಬ್ರಿಡ್ಡ್ ಸ್ಕೂಲ್ ಹಾಗೂ ಪಂಜಾಬ್ ವಿಶ್ವವಿದ್ಯಾಲದಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

1960ರ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಬಲಿಷ್ಠ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದ ಚರಣಜಿತ್ ಸಿಂಗ್ ಇಡೀ ಕ್ರೀಡಾಕೂಟದಲ್ಲಿ ಮಿಂಚಿನ ಗೋಲುಗಳ ಮೂಲಕ ಭಾರತವನ್ನು ಫೈನಲ್‌ಗ ಕೊಂಡೊಯ್ಯಿದ್ದರು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಗಾಯಗೊಂಡ ಚರಣಜಿತ್ ಸಿಂಗ್ ಫೈನಲ್ ಪಂದ್ಯದಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು. ಹೀಗಾಗಿ 1960ರ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 0-1 ಅಂತರದಲ್ಲಿ ಮುಗ್ಗರಿಸಿ ಬೆಳ್ಳಿ ಪದಕ ಗೆದ್ದುಕೊಂಡಿತು.

ಆದರೆ 1964ರಲ್ಲಿ ಚರಣಜಿತ್ ಸಿಂಗ್ ಭಾರತ ತಂಡದ ನಾಯಕರಾಗಿ ಬಡ್ತಿ ಹೊಂದಿದ್ದರು. ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕೂಟದ ಫೈನಲ್ ಪಂದ್ಯದಲ್ಲಿ ಮತ್ತೆ ಪಾಕಿಸ್ತಾನ ಎದುರಿಸಿದ ಭಾರತ ಹಳೇ ಸೇಡನ್ನು ತೀರಿಸಿಕೊಂಡಿತು. ಚರಣಜಿತ್ ಸಿಂಗ್ ಮಿಂಚಿನ ಪ್ರದರ್ಶನದಿಂದ ಭಾರತ ಚಿನ್ನದ ಪದಕ ಗೆದ್ದುಕೊಂಡಿತು. ಈ ಪಂದ್ಯವನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು.

ಅಂತಾರಾಷ್ಟ್ರೀಯ ಹಾಕಿಗೆ ಕನ್ನಡಿಗ ಎಸ್‌ ವಿ ಸುನಿಲ್‌ ಗುಡ್‌ಬೈ

ಏಷ್ಯನ್ ಗೇಮ್ಸ್ ಸೇರಿದಂತೆ ಇತರ ಹಾಕಿ ಟೂರ್ನಿಗಳಲ್ಲಿ ಚರಣಜಿತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ಪದಕ ಗೆದ್ದು ಇತಿಹಾಸ ರಚಿಸಿದೆ. ಆದರೆ ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಹಳೇ ಸೇಡನ್ನು ತೀರಿಸಿ ಚಿನ್ನ ಗೆದ್ದ ಸಂದರ್ಭ ಅವಿಸ್ಮರಣೀಯ. ಇದು ನನ್ನ ಹಾಕಿ ಜೀವನದಲ್ಲಿ ಎಂದಿಗೂ ಮರೆಯಲಾಗದ ಹಾಗೂ ಹಚ್ಚ ಹಸುರಾಗಿರುವ ಘಟನೆ ಎಂದು ಚರಣಜಿತ್ ಸಿಂಗ್ ಹೇಳಿದ್ದರು.ಚರಣಜಿತ್ ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಸಂತಾಪ ಸೂಚಿಸಿದೆ. ಇನ್ನು ಹಾಕಿ ದಿಗ್ಗಜರು, ಭಾರತೀಯ ಹಾಕಿ ಆಟಗಾರರು, ಇತರ ಕ್ರೀಡಾಪಟುಗಳು ಹಾಗೂ ಸೆಲೆಬ್ರೆಟಿಗಳು ಸಂತಾಪ ಸೂಚಿಸಿದ್ದಾರೆ. 

click me!