ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ಇಂದು ಭಾರತ vs ಜಪಾನ್ ಸೆಮೀಸ್

By Naveen Kodase  |  First Published Nov 19, 2024, 12:03 PM IST

ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿಂದು ಹಾಲಿ ಚಾಂಪಿಯನ್ ಭಾರತ, ಜಪಾನ್ ಸವಾಲು ಎದುರಿಸಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ರಾಜಿರ್ (ಬಿರ್ಹಾ): ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಂಗಳವಾರ ಭಾರತ ತಂಡಕ್ಕೆ ಜಪಾನ್ ಸವಾಲು ಎದುರಾಗಲಿದೆ. ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಜಪಾನ್ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಇದೀಗ ಮತ್ತೊಂದು ಜಯದೊಂದಿಗೆ ಫೈನಲ್‌ಗೇರಲು ಎದುರು ನೋಡುತ್ತಿದೆ.

ಆತಿಥೇಯ ಹಾಗೂ ಹಾಲಿ ಚಾಂಪಿಯನ್ ತಂಡವಾಗಿರುವ ಭಾರತ, ಟೂರ್ನಿ ಗೆಲ್ಲುವ ಫೇವರಿಟ್ ಎನಿಸಿದ್ದು, ರೌಂಡ್ ರಾಬಿನ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ, ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ವಿಜೇತ, ವಿಶ್ವ ನಂ.6 ಚೀನಾವನ್ನೂ ಪರಾಭವ ಗೊಳಿಸಿತ್ತು.

Tap to resize

Latest Videos

undefined

ಪ್ರೊ ಕಬಡ್ಡಿ ಲೀಗ್: 9ನೇ ಸೋಲು ಕಂಡ ಬೆಂಗಳೂರು ಬುಲ್ಸ್‌, ಮುಂಬಾ ಎದುರು ವಿರೋಚಿತ ಸೋಲು

ರೌಂಡ್ ರಾಬಿನ್ ಹಂತದ 5 ಪಂದ್ಯಗಳಲ್ಲಿ ಭಾರತ 26 ಗೋಲು ದಾಖಲಿಸಿ ಕೇವಲ 2 ಗೋಲು ಬಿಟ್ಟುಕೊಟ್ಟಿದೆ. ಇದೇ ಲಯವನ್ನು ನಾಕೌಟ್ ಹಂತದಲ್ಲೂ ಮುಂದುವರಿಸಲು ತಂಡ ಎದುರು ನೋಡುತ್ತಿದೆ. ದೀಪಿಕಾ ಶೆರಾವತ್ ಒಟ್ಟು 10 ಗೋಲು ಬಾರಿಸಿದ್ದು, ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಮತ್ತೊಂದು ಸೆಮಿಫೈನಲ್‌ನಲ್ಲಿ ಚೀನಾ ಹಾಗೂ ಮಲೇಷ್ಯಾ ತಂಡಗಳು ಸೆಣಸಲಿವೆ. ಬುಧವಾರ ಫೈನಲ್ ನಡೆಯಲಿದೆ.

ಭಾರತ-ಜಪಾನ್ ಪಂದ್ಯ: ಸಂಜೆ 4.45ಕ್ಕೆ ಪ್ರಸಾರ: ಸೋನಿ ಲಿವ್, ಡಿಡಿ ಸ್ಪೋರ್ಟ್ಸ್

ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಚಿರಾಗ್, ಸಾತ್ವಿಕ್ ಜೋಡಿ ಕಣಕ್ಕೆ

ಶೆನೈನ್: ಭಾರತದ ತಾರಾ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಸಾತ್ವಿಕ್ ಭುಜದ ಗಾಯಕ್ಕೆ ತುತ್ತಾಗಿದ್ದ ಕಾರಣ, ಪ್ಯಾರಿಸ್ ಒಲಿಂಪಿಕ್ಸ್‌ ಬಳಿಕ ಮಾಜಿ ವಿಶ್ವನಂ.1 ಜೋಡಿಯು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ದೂರವಿತ್ತು. 

ಕನಸಿನ ಬಲಿಷ್ಠ ಟಿ20 ತಂಡವನ್ನು ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್‌! 4 ಭಾರತೀಯರಲ್ಲಿ ರೋಹಿತ್‌ಗಿಲ್ಲ ಸ್ಥಾನ

ಒಲಿಂಪಿಕ್ ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ಜೋಡಿಯು, ಹೊಸ ಆರಂಭ ಪಡೆಯಲು ಎದುರು ನೋಡುತ್ತಿದ್ದು, ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಕಳೆದ ಆವೃತ್ತಿಯ ಚೀನಾ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತೀಯ ಜೋಡಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೇ ವೇಳೆ ಪಿ.ವಿ.ಸಿಂಧು, ಲಕ್ಷ ಸೇನ್ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ.
 

click me!