ಇಂದಿನಿಂದ ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ

By Kannadaprabha News  |  First Published Nov 11, 2024, 10:50 AM IST

8ನೇ ಆವೃತ್ತಿಯ ಏಷ್ಯನ್ ಮಹಿಳಾ ಚಾಂಪಿಯನ್ಸ್ ಹಾಕಿ ಟ್ರೋಫಿ ಟೂರ್ನಿಯು ಇಂದಿನಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಭಾರತ ಮತ್ತೊಮ್ಮೆ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.


ರಾಜ್‌ಗಿರ್‌(ಬಿಹಾರ): 8ನೇ ಆವೃತ್ತಿಯ ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಭಾರತ ತಂಡ ಟ್ರೋಫಿ ಉಳಿಸಿಕೊಳ್ಳಲು ಹೋರಾಡಲಿದ್ದು, ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೆಣಸಾಡಲಿದೆ. ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಜಪಾನ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಮುಖಾಮುಖಿಯಾಗಲಿವೆ.

ಈ ಬಾರಿ ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ. ಪ್ರತಿ ತಂಡ ಲೀಗ್ ಹಂತದಲ್ಲಿ ಒಂದು ಬಾರಿ ಪರಸ್ಪರ ಸೆಣಸಾಡಲಿವೆ. ಅಗ್ರ -4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. 2016, 2023ರಚಾಂಪಿಯನ್, 2013 ಹಾಗೂ 2018ರ ರನ್ನರ್-ಅಪ್ ಭಾರತ ತಂಡ ನ.12ಕ್ಕೆ ದ.ಕೊರಿಯಾ, ನ.14ರಂದು ಥಾಯ್ಲೆಂಡ್, ನ.16ಕ್ಕೆ ಚೀನಾ, ನ.17ರಂದು ಜಪಾನ್ ವಿರುದ್ಧ ಸೆಣಸಾಡಲಿದೆ. ಟೂರ್ನಿಯ ಫೈನಲ್ ಪಂದ್ಯ ನ.20ಕ್ಕೆ ನಿಗದಿಯಾಗಿದೆ. ಪ್ರತಿದಿನ 3 ಪಂದ್ಯಗಳು ನಡೆಯಲಿದ್ದು, ಭಾರತದ ಎಲ್ಲಾ ಪಂದ್ಯಗಳು ಸಂಜೆ 4.45ಕ್ಕೆ ಆರಂಭಗೊಳ್ಳಲಿದೆ.

Latest Videos

ಹರ್ಮನ್‌ಪ್ರೀತ್‌, ಶ್ರೀಜೇಶ್‌ಗೆ ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ

ಲಾಸನ್‌(ಸ್ವಿಜರ್‌ಲೆಂಡ್‌): ಭಾರತದ ಹಾಕಿ ತಾರೆಗಳಾದ ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಪಿ.ಆರ್‌.ಶ್ರೀಜೇಶ್ ಎಫ್‌ಐಎಚ್‌ ವಾರ್ಷಿಕ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ತಂಡದ ನಾಯಕ ಹರ್ಮನ್‌ಪ್ರೀತ್‌ ವಿಶ್ವದ ಶ್ರೇಷ್ಠ ಆಟಗಾರ, ಮಾಜಿ ಆಟಗಾರ ಶ್ರೀಜೇಶ್‌ಗೆ ವಿಶ್ವದ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿ ಒಲಿದಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀಡಿದ ಗಮನಾರ್ಹ ಪ್ರದರ್ಶನಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.

ಐಪಿಎಲ್ ಹರಾಜಿಗೆ ಕ್ಷಣಗಣನೆ ಬೆನ್ನಲ್ಲೇ ಸ್ಪೋಟಕ ಟಿ20 ಶತಕ ಸಿಡಿಸಿ ದಾಖಲೆ ಬರೆದ ಫಿಲ್ ಸಾಲ್ಟ್

ಇಬ್ಬರಿಗೂ ಇದು 3ನೇ ವಿಶ್ವ ಹಾಕಿ ಪ್ರಶಸ್ತಿ. 2020-21 ಹಾಗೂ 2021-22ರಲ್ಲೂ ಹರ್ಮನ್‌ ಹಾಗೂ ಶ್ರೀಜೇಶ್‌ ಪ್ರಶಸ್ತಿಗೆ ಭಾಜನರಾಗಿದ್ದರು. ಶ್ರೀಜೇಶ್‌ ಒಲಿಂಪಿಕ್ಸ್‌ ಬಳಿಕ ಹಾಕಿಗೆ ನಿವೃತ್ತಿ ಘೋಷಿಸಿದ್ದು, ಸದ್ಯ ರಾಷ್ಟ್ರೀಯ ಕಿರಿಯರ ತಂಡಕ್ಕೆ ಕೋಚ್‌ ಆಗಿದ್ದಾರೆ.

ಕೊನೆ 2 ನಿಮಿಷದಲ್ಲಿ ಜಾದೂ: ಯುಪಿ ವಿರುದ್ಧ ಗೆದ್ದ ಮುಂಬಾ

ನೋಯ್ಡಾ: ಕೊನೆ ಎರಡು ನಿಮಿಷದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಯು ಮುಂಬಾ, ಪ್ರೊ ಕಬಡ್ಡಿಯ ಯುಪಿ ಯೋಧಾಸ್‌ ವಿರುದ್ಧದ ಪಂದ್ಯದಲ್ಲಿ 35-33 ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. ಮುಂಬಾ 8ರಲ್ಲಿ 5ನೇ ಗೆಲುವು ದಾಖಲಿಸಿದರೆ, ಯೋಧಾಸ್‌ 5ನೇ ಸೋಲನುಭವಿಸಿತು.

ಆರಂಭದಲ್ಲೇ ಇತ್ತಂಡಗಳಿಂದ ಉತ್ತಮ ಪೈಪೋಟಿ ಕಂಡುಬಂತು. ಮೊದಲಾರ್ಧದಲ್ಲಿ ಯೋಧಾಸ್‌(17-16) ಕೇವಲ 1 ಅಂಕದಿಂದ ಮುನ್ನಡೆಯಲ್ಲಿತ್ತು. ಬಳಿಕ ಮುನ್ನಡೆ ಹೆಚ್ಚಿಸುತ್ತಾ ಸಾಗಿದ ಯೋಧಾಸ್‌ ಒಂದು ಹಂತದಲ್ಲಿ 31-27 ಅಂಕ ಹೊಂದಿತ್ತು. ಆದರೆ ಕೊನೆ 2 ನಿಮಿಷದಲ್ಲಿ ಆಲೌಟ್‌ ಸೇರಿದಂತೆ 8 ಅಂಕ ಸಂಪಾದಿಸಿದ ಮುಂಬಾ ಗೆಲುವು ತನ್ನದಾಗಿಸಿಕೊಂಡಿತು. ರೋಹಿತ್‌, ಅಜಿತ್‌ ತಲಾ 8 ಅಂಕ ಗಳಿಸಿದರು.

ಪಾಕಿಸ್ತಾನ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿಗೆ ವಿಘ್ನ,ಐಸಿಸಿ ನಿರ್ಧಾರಕ್ಕೆ ಪಿಸಿಬಿ ಕಂಗಾಲು!

ಮತ್ತೊಂದು ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಹರ್ಯಾಣ ಸ್ಟೀಲರ್ಸ್ 39-23 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಇಂದಿನ ಪಂದ್ಯಗಳು

ಪಾಟ್ನಾ-ಗುಜರಾತ್‌, ರಾತ್ರಿ 8ಕ್ಕೆ

ಮುಂಬಾ-ಹರ್ಯಾಣ, ರಾತ್ರಿ 9ಕ್ಕೆ

click me!