ಹಾಲಿ ಚಾಂಪಿಯನ್ ಭಾರತ ತಂಡ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 13-0 ಗೋಲುಗಳ ಗೆಲುವು ಸಾಧಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ರಾಜ್ಗಿರ್(ಬಿಹಾರ): ಯುವ ಸ್ಟ್ರೈಕರ್ ದೀಪಿಕಾ 5 ಗೋಲು ಬಾರಿಸಿದ ಪರಿಣಾಮ, ಹಾಲಿ ಚಾಂಪಿಯನ್ ಭಾರತ ತಂಡ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 13-0 ಗೋಲುಗಳ ಗೆಲುವು ಸಾಧಿಸಿತು. ಆ ಮೂಲಕ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು.
ಪಂದ್ಯದಲ್ಲಿ ಭಾರತೀಯರು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ತನ್ನಿಚ್ಛೆಯಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ, ಎದುರಾಳಿಗೆ ಒಮ್ಮೆಯೂ ಗೋಲು ಪೆಟ್ಟಿಗೆಯತ್ತ ಚೆಂಡನ್ನು ಕೊಂಡೊಯ್ಯಲು ಅವಕಾಶವನ್ನೇ ನೀಡಲಿಲ್ಲ.
ಕರ್ನಾಟಕ ರಾಜ್ಯದ ಕ್ರೀಡಾಳುಗಳಿಗೆ ಶಾಲಾ ಪರೀಕ್ಷೆಯಲ್ಲಿ 10 ಕೃಪಾಂಕ?
3ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ದೀಪಿಕಾ ಆ ಬಳಿಕ 19, 43, 45, 45 ನಿಮಿಷಗಳಲ್ಲಿ ಗೋಲು ಬಾರಿಸಿದರು. ಪ್ರೀತಿ ದುಬೆ (9ನೇ ನಿ., 40ನೇ ನಿ.), ಲಾಲ್ರೆಮ್ಸಿಯಾಮಿ (12ನೇ ನಿ., 56ನೇ ನಿ.), ಮನೀಶಾ ಚೌಹಾಣ್ (55ನೇ ನಿ., 58ನೇ ನಿ.) ತಲಾ 2 ಗೋಲು ಬಾರಿಸಿದರು. ಬ್ಯುಟಿ ಡುಂಗ್ ಡುಂಗ್ (30ನೇ ನಿ.) ಹಾಗೂ ನವ್‌ನೀತ್ ಕೌರ್ (53ನೇ ನಿ.) ತಲಾ 1 ಗೋಲು ದಾಖಲಿಸಿದರು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತ ಚೀನಾ ತಂಡವನ್ನು ಎದುರಿಸಲಿದೆ.
ಜಪಾನ್ ಮಾಸ್ಟರ್ಸ್: ಹೊರಬಿದ್ದ ಸಿಂಧು
ಕುಮಮೊಟೊ(ಜಪಾನ್): ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಜಪಾನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಮಿಷೆಲ್ ಲೀ ವಿರುದ್ಧ 21-17, 16-21, 17-21 ಗೇಮ್ಗಗಳಲ್ಲಿ ಪರಾಭವಗೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ ಸೇನ್, ಮಹಿಳಾ ಡಬಲ್ಸ್‌ನಲ್ಲಿ ಶ್ರೀನಾ-ಗಾಯತ್ರಿ ಮೊದಲ ಸುತ್ತಿನಲ್ಲೇ ಸೋಲುಂಡಿದ್ದರು.
ನನ್ನ ಮಗನ ಕ್ರಿಕೆಟ್ ಭವಿಷ್ಯ ಹಾಳು ಮಾಡಿದ್ದೇ ಈ ನಾಲ್ವರು: ಸಂಜು ಸ್ಯಾಮ್ಸನ್ ತಂದೆಯ ಗಂಭೀರ ಆರೋಪ!
ಎಟಿಪಿ ಫೈನಲ್ಸ್: 2ನೇ ಸೋಲುಂಡ ಬೋಪಣ್ಣ
ಟುರಿನ್ (ಇಟಲಿ): ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನ ಗುಂಪು ಹಂತದ 2ನೇ ಪಂದ್ಯದಲ್ಲೂ ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಸೋಲುಂಡಿದ್ದಾರೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಇಂಡೋ-ಆಸ್ಟ್ ಜೋಡಿ 5-7, 3-6 ನೇರ ಸೆಟ್‌ಗಳಲ್ಲಿ ಅಗ್ರ ಶ್ರೇಯಾಂಕಿತ ಎಲ್ ಸಾಲ್ವಡೊರ್‌ನ ಮಾರ್ಸೆಲೊ ಹಾಗೂ ಕ್ರೊವೇಷಿಯಾದ ಮೇಟ್ ಪಾವಿಚ್ ವಿರುದ್ಧ ಸೋಲುಂಡಿತು.
ಬೋಪಣ್ಣ-ಎಬ್ಡೆನ್ ಜೋಡಿ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಅಲ್ಲದೇ ಇದೇ ಈ ಜೋಡಿ ಸ್ಪರ್ಧಾತ್ಮಕ ಟೆನಿಸ್‌ನಲ್ಲಿ ಒಟ್ಟಿಗೆ ಆಡಿದ್ದು ಇದೇ ಕೊನೆಯ ಬಾರಿ.