ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಅಜೇಯವಾಗಿ ಸೆಮೀಸ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ರಾಜ್‌ಗೀರ್ (ಬಿಹಾರ): ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಚೀನಾ ವಿರುದ್ಧ ಶನಿವಾರ ನಡೆದ ಲೀಗ್ ಹಂತದ ಮಹತ್ವದ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಜಯಗಳಿಸಿತು. ಸತತ 4 ಜಯ ದಾಖಲಿಸಿದ ಭಾರತ, 8 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಚೀನಾ 4 ಪಂದ್ಯ ಗಳಲ್ಲಿ ಮೊದಲ ಸೋಲು ಕಂಡಿತು.
ಪಂದ್ಯದಲ್ಲಿ ಭಾರತದ ಪರ ಸಂಗೀತಾ ಕುಮಾರಿ (32ನೇ ನಿಮಿಷ), ಸಲೀಮಾ ಟೆಟೆ (37ನೇ ನಿಮಿಷ) ಹಾಗೂ ದೀಪಿಕಾ(60ನೇ ನಿಮಿಷ) ಗೋಲು ಬಾರಿಸಿದರು. ಭಾರತವು ರೌಂಡ್ ರಾಬಿನ್ ಸುತ್ತಿನ ಕೊನೆ ಪಂದ್ಯ ದಲ್ಲಿ ಭಾನುವಾರ ಜಪಾನ್ ಜೊತೆ ಕಾದಾಡಲಿದೆ.
undefined
ರಣಜಿ ಟ್ರೋಫಿಯ ಕರ್ನಾಟಕ vs ಯುಪಿ ಪಂದ್ಯ ಡ್ರಾ: ರಾಜ್ಯದ ಹಾದಿ ಕಠಿಣ
ಮಿನಿ ಒಲಿಂಪಿಕ್ಸ್‌ನಲ್ಲಿ ಬೆಂಗಳೂರು ಪ್ರಾಬಲ್ಯ!
ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ನಲ್ಲಿ ಬೆಂಗಳೂರಿನ ಕ್ರೀಡಾಪಟುಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ.
ಶನಿವಾರ ನಡೆದ ಆರ್ಚರಿಯ ಒಟ್ಟು 10 ಸ್ಪರ್ಧೆಗಳು 30 ಪದಕಗಳಲ್ಲಿ 27 ಪದಕಗಳನ್ನು ಬೆಂಗಳೂರಿನ ಅಥ್ಲೀಟ್‌ಗಳು ಗೆದ್ದುಕೊಂಡರು. ವೇಟ್‌ಲಿಫ್ಟಿಂಗ್ 6 ವಿಭಾಗಗಳ ಪೈಕಿ 5ರಲ್ಲಿ ದಕ್ಷಿಣ ಕನ್ನಡ ಚಿನ್ನ ಗೆದ್ದರೆ, ಒಂದರಲ್ಲಿ ಬೆಂಗಳೂರಿನ ಕ್ರೀಡಾಪಟುಗೆ ಬಂಗಾರ ಲಭಿಸಿತು. ಟೇಬಲ್ ಟೆನಿಸ್‌ನ ಎಲ್ಲಾ 6 ವಿಭಾಗಳಲ್ಲಿ ಬೆಂಗಳೂರು ಚಾಂಪಿಯನ್ ಎನಿಸಿಕೊಂಡಿತು. ಈಜು ಸ್ಪರ್ಧೆಯ ಎಲ್ಲಾ 13 ವಿಭಾಗಗಳ ಸ್ಪರ್ಧೆಗಳ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳುಳನ್ನು ಬೆಂಗಳೂರಿನ ಕ್ರೀಡಾಪಟುಗಳು ಗೆದ್ದುಕೊಂಡರು. ಬಾಕ್ಸಿಂಗ್‌ನಲ್ಲಿ ಬೆಳಗಾವಿ, ಕಾರವಾರ, ಕೊಡಗಿನ ಅಥ್ಲೀಟ್‌ಗಳೂ ಪದಕ ಸಾಧನೆ ಮಾಡಿದರು. ಕ್ರೀಡಾಕೂಟ ನ.14ರಂದು ಆರಂಭಗೊಂಡಿದ್ದು, 20ಕ್ಕೆ ಕೊನೆಗೊಳ್ಳಲಿದೆ.
ಐಪಿಎಲ್ ಹರಾಜಿನ ಫೈನಲ್ ಲಿಸ್ಟ್ ಔಟ್; ಕರ್ನಾಟಕದ 24 ಮಂದಿ ಸೇರಿ 574 ಆಟಗಾರರು ಭಾಗಿ!
11ನೇ ಪ್ರೊ ಕಬಡ್ಡಿ: ಬೆಂಗ್ಳೂರಿಗೆ 8ನೇ ಸೋಲಿನ ಆಘಾತ!
ನೋಯ್ಡಾ: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ 8ನೇ ಸೋಲಿನ ಮುಖಭಂಗಕ್ಕೊಳಗಾಗಿದೆ. ಶನಿವಾರ ದಬಾಂಗ್ ಡೆಲ್ಲಿ ವಿರುದ್ಧ ಬುಲ್ಸ್ 25-35 ಅಂಕಗಳಿಂದ ಪರಾಭವಗೊಂಡಿತು. ಆಡಿರುವ 10 ಪಂದ್ಯಗಳಲ್ಲಿ ಕೇವಲ 13 ಅಂಕ ಗಳಿಸಿರುವ ಬುಲ್ಸ್ 11ನೇ ಸ್ಥಾನದಲ್ಲೇ ಬಾಕಿಯಾಗಿದೆ.
ಆರಂಭದಲ್ಲೇ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದ ಬುಲ್ಸ್, ಮೊದಲಾರ್ಧಕ್ಕೆ 13-18ರಲ್ಲಿ ಹಿನ್ನಡೆ ಅನುಭವಿಸಿತು. ಬಳಿಕ ತೀವ್ರ ಪೈಪೋಟಿ ನೀಡಿದ ತಂಡ ಒಂದು ಹಂತದಲ್ಲಿ ಅಂಕ ಸಮಬಲಗೊಳಿಸುವ ಸನಿಹದಲ್ಲಿತ್ತು. ಆದರೆ ಕೊನೆಯಲ್ಲಿ ಮತ್ತೆ ಡೆಲ್ಲಿ ಮೇಲುಗೈ ಸಾಧಿಸಿ, ಟೂರ್ನಿಯಲ್ಲಿ 5ನೇ ಜಯ ದಾಖಲಿಸಿತು. ಡೆಲ್ಲಿ ನಾಯಕ ಆಶು ಮಲಿಕ್ 14 ಅಂಕ ಗಳಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ತಮಿಳ್ ತಲೈವಾಸ್ 46-31 ಅಂಕಗಳಿಂದ ಜಯಗಳಿಸಿತು.
ಇಂದಿನ ಪಂದ್ಯಗಳು
ಹರ್ಯಾಣ-ತಲೈವಾಸ್, ರಾತ್ರಿ 8ಕ್ಕೆ
ಜೈಪುರ-ಪುಣೇರಿ ಪಲ್ಟನ್, ರಾತ್ರಿ 9ಕ್ಕೆ