ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ಇಂದು ಭಾರತ vs ಚೀನಾ ಫೈನಲ್ ಫೈಟ್

By Naveen Kodase  |  First Published Nov 20, 2024, 1:29 PM IST

ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ನಲ್ಲಿಂದು  ಹಾಲಿ ಚಾಂಪಿಯನ್ ಭಾರತ ಹಾಗೂ ಚೀನಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ರಾಜ್‌ಗಿರ್: ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಬುಧವಾರ ನಡೆಯಲಿದೆ. ಭಾರತ ಹಾಗೂ ಚೀನಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಲೀಗ್ ಹಂತದಲ್ಲಿ ಭಾರತ ತಂಡ ಚೀನಾ ವಿರುದ್ದ ಗೆದ್ದಿದ್ದು, ಮತ್ತೊಂದು ಜಯದ ಕಾತರದಲ್ಲಿದೆ. 

ಉಭಯ ತಂಡಗಳು 2016ರ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತ ಗೆದ್ದಿತ್ತು. 2013, 2018ರಲ್ಲಿ ರನ್ನರ್-ಅಪ್, 2016, 2023ರ ಚಾಂಪಿಯನ್ ಭಾರತ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2011, 2016ರ ರನ್ನರ್-ಅಪ್ ಚೀನಾ ಚೊಚ್ಚಲ ಟ್ರೋಫಿ ಗೆಲ್ಲುವ ಕಾತರದಲ್ಲಿದೆ.

Latest Videos

undefined

ಮಹಿಳಾ ಚಾಂಪಿಯನ್ಸ್ ಟ್ರೋಫಿ: ಸೆಮೀಸ್‌ನಲ್ಲಿ ಜಪಾನ್‌ ವಿರುದ್ಧ ಗೆದ್ದ ಭಾರತ

ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್ ಭಾರತ ತಂಡ ದಾಖಲೆಯ 5ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆದ 8ನೇ ಆವೃತ್ತಿಯ ಟೂರ್ನಿಯ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತ, 2 ಬಾರಿ ಚಾಂಪಿಯನ್ ಜಪಾನ್ ವಿರುದ್ಧ 2-0 ಗೋಲುಗಳ ಅಂತರದಲಿ ಗೆಲುವು ಸಾಗಿಸಿತು.

ಪಂದ್ಯದ ಆರಂಭದಲ್ಲಿ ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡು ಬಂತು. 48ನೇ ನಿಮಿಷದಲ್ಲಿ ಉಪನಾಯಕಿ ನವನೀತ್ ಕೌರ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಬಾರಿಸಿ ಭಾರತದ ಖಾತೆ ತೆರೆದರೆ, 56ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ಲಾಲರೆನ್‌ಸಿಯಾಮಿ ತಂಡವನ್ನು ಫೈನಲ್‌ಗೇರಿಸಿದರು. 

ಕಿಂಗ್ ರಿಟರ್ನ್ಸ್‌: ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿಯದ್ದೇ ಧ್ಯಾನ!

ಭಾರತ. ತಂಡ ಪಂದ್ಯದಲ್ಲಿ 13 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರೂ ಹೆಚ್ಚಿನ ಗೋಲು ಗಳಿಸಲಾಗಲಿಲ್ಲ. ಲೀಗ್ ಹಂತದ ಕೊನೆ ಪಂದ್ಯದಲ್ಲೂ ಭಾರತ, ಜಪಾನ್ ವಿರುದ್ಧ ಗೆದ್ದಿತ್ತು. ಮಂಗಳವಾರ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಚೀನಾ ತಂಡ ಮಲೇಷ್ಯಾ ವಿರುದ್ಧ 3-1 ಗೋಲುಗಳಿಂದ ಗೆಲುವು ಸಾಧಿಸಿ. 2ನೇ ಬಾರಿಗೆ ಫೈನಲ್‌ ಪ್ರವೇತಿಸಿತು.

ಫುಟ್ಬಾಲ್‌: 11-0 ಗೋಲಲ್ಲಿ ಗೆದ್ರೂ ಕರ್ನಾಟಕ ಹೊರಕ್ಕೆ

ಅನಂತಪುರ(ಆಂಧ್ರಪ್ರದೇಶ): ಗುಂಪು ಹಂತದ ಕೊನೆ ಪಂದ್ಯದಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ ವಿರುದ್ಧ 11-0 ಗೋಲುಗಳ ಅಂತರದಲ್ಲಿ ಗೆದ್ದರೂ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಫೈನಲ್‌ ಸುತ್ತು ಪ್ರವೇಶಿಸಲು ಕರ್ನಾಟಕ ತಂಡ ವಿಫಲವಾಗಿದೆ. 

ಸಿಕ್ಸರ್ ಸಿಧು ಮುಂದೆ ನಿಂತು ಕಿಚ್ಚ ಆಡಿದ ಮಾತಿನ ಹಳೇ ವಿಡಿಯೋ ವೈರಲ್, ಸುದೀಪ್ ಮಾತಿಗೆ ಸಿಧು ಕ್ಲೀನ್ ಬೋಲ್ಡ್!

ಮಾಜಿ ಚಾಂಪಿಯನ್‌ ಕರ್ನಾಟಕ ತಂಡ ‘ಜಿ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ 6 ಅಂಕ ಸಂಪಾದಿಸಿ, 2ನೇ ಸ್ಥಾನ ಪಡೆದುಕೊಂಡಿತು. ಹ್ಯಾಟ್ರಿಕ್‌ ಗೆಲುವು ಸಾಧಿಸಿದ ತಮಿಳುನಾಡು 9 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್‌ ಸುತ್ತು ಪ್ರವೇಶಿಸಿತು. ಪಂದ್ಯದಲ್ಲಿ ಕರ್ನಾಟಕ ಪರ ನಿಖಿಲ್‌ ರಾಜ್‌ ಮುರುಗೇಶ್‌ 4, ರ್‍ಯಾನ್‌ ವಿಲ್ಫ್ರೆಡ್‌ 2, ಕ್ರಿಸ್ಪಿನ್‌ ಕ್ಲೀಟಸ್‌, ಸೂರ್ಯ, ಸೆಯ್ಯದ್‌ ಅಹ್ಮದ್‌, ಕಾರ್ತಿಕ್‌ ಗೋವಿಂದ ಸ್ವಾಮಿ ಹಾಗೂ ಆ್ಯಂಡ್ರ್ಯೂ ಗುರುಂಗ್ ತಲಾ 1 ಗೋಲು ಬಾರಿಸಿದರು.

click me!