ಡಿಜಿಟಲ್ ಯುಗದಲ್ಲಿ, ಲ್ಯಾಪ್‌ಟಾಪ್‌ಗಳು ದೈನಂದಿನ ಜೀವನದ ನಿರಂತರ ಒಡನಾಡಿಗಳಾಗಿ ಮಾರ್ಪಟ್ಟಿವೆ, ಕೆಲಸ ಮತ್ತು ವಿರಾಮದ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬಂತಾಗಿದೆ. ಬೆನ್ನು ನೋವು, ಕಣ್ಣು ನೋವಿನ ಸಮಸ್ಯೆ ಸಾಮಾನ್ಯವಾಗಿದೆ. ಆದ್ರೆ ಕುಳಿತುಕೊಂಡೇ ಮಾಡೋ ಕೆಲಸದಿಂದ ಕಾಡೋ ಕಾಯಿಲೆ ಇವಿಷ್ಟೇ ಅಲ್ಲ.
ಡಿಜಿಟಲ್ ಯುಗದಲ್ಲಿ, ಲ್ಯಾಪ್‌ಟಾಪ್‌ಗಳು ದೈನಂದಿನ ಜೀವನದ ನಿರಂತರ ಒಡನಾಡಿಗಳಾಗಿ ಮಾರ್ಪಟ್ಟಿವೆ, ಕೆಲಸ ಮತ್ತು ವಿರಾಮದ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬಂತಾಗಿದೆ. ಕಾರ್ಪೊರೇಟ್ ಜೀವನದಲ್ಲಿ ಕುಳಿತುಕೊಂಡೇ ಮಾಡುವ ಕೆಲಸ ಹಲವು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಬೆನ್ನುನೋವು, ಕುತ್ತಿಗೆ ಸಮಸ್ಯೆ, ಭುಜದ ನೋವಿನ ದೂರುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅವು ತಾತ್ಕಾಲಿಕವೆಂದು ತೋರುತ್ತದೆಯಾದರೂ, ಅವು ನಮ್ಮ ಮೇಲೆ ಶಾಶ್ವತವಾದ ಪ್ರಭಾವ ಬೀರುತ್ತವೆ.
ಆಧುನಿಕತೆಯು ಸ್ಥೂಲಕಾಯತೆ, 30ಕ್ಕೂ ಹೆಚ್ಚು ದೀರ್ಘಕಾಲದ ಚಯಾಪಚಯ ರೋಗಗಳು ಕುಳಿತುಕೊಂಡು ಮಾಡುವ ಕೆಲಸಕ್ಕೆ ಸಂಬಂಧಿಸಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅತಿಯಾದ ಕುಳಿತುಕೊಳ್ಳುವಿಕೆಯನ್ನು 'ಕುಳಿತುಕೊಳ್ಳುವ ಕಾಯಿಲೆ' ಎಂದೂ ಕರೆಯುತ್ತಾರೆ. ಒಬ್ಬ ವ್ಯಕ್ತಿಯು ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ಯಾವುದೇ ಚಲನೆಯಿಲ್ಲದೆ ಕುಳಿತಿರುವ ಸ್ಥಿತಿಯಲ್ಲಿರುತ್ತಾನೆ. ದೈಹಿಕ ಚಟುವಟಿಕೆಯಿಲ್ಲದೆ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವವರು ಸ್ಥೂಲಕಾಯತೆ ಮತ್ತು ಧೂಮಪಾನದಿಂದ ಸಾಯುವ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಆದರೆ ಇದಲ್ಲದೆಯೂ ಕುಳಿತುಕೊಂಡೇ ಮಾಡುವ ಕೆಲಸದಿಂದ ಕಾಡುವ ಇನ್ನಷ್ಟು ಸೈಲೆಂಟ್ ಕಾಯಿಲೆಗಳಿವೆ.
ಮಲಗಿಕೊಂಡೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡ್ತೀರಾ ? ಎಷ್ಟು ಡೇಂಜರಸ್ ತಿಳ್ಕೊಳ್ಳಿ
ಮಧುಮೇಹಕ್ಕೆ ಕಾರಣ
ಹೃದಯಾಘಾತ ಮತ್ತು ಪಾರ್ಶ್ವವಾಯು ಹೊರತುಪಡಿಸಿ ಕುಳಿತುಕೊಂಡು ಮಾಡುವ ಕೆಲಸದ ದೀರ್ಘಕಾಲೀನ ಪರಿಣಾಮವೆಂದರೆ ಟೈಪ್ 2 ಮಧುಮೇಹದ ಬೆಳವಣಿಗೆ. ಇದು ಭಾರತದಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಯಾಗಿದೆ. ದೀರ್ಘಕಾಲ ಕುಳಿತಾತುಕೊಂಡಿದ್ದಾಗ ಆ ಸ್ಥಾನವು ದೇಹದ ದೊಡ್ಡ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ, ಸ್ನಾಯುಗಳು ವಿಶ್ರಾಂತಿ ಪಡೆದಾಗ, ಅವು ರಕ್ತದಿಂದ ಕಡಿಮೆ ಗ್ಲೂಕೋಸ್‌ನ್ನು ತೆಗೆದುಕೊಳ್ಳುತ್ತವೆ, ಇದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
ಸೈಕಾಲಜಿಕಲ್ ಎಫೆಕ್ಟ್
ದೀರ್ಘಾವಧಿಯ ಕುಳಿತುಕೊಳ್ಳುವಿಕೆಯು ಮಾನಸಿಕ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ ಎಂದು ಮಾನಸಿಕ ತಜ್ಞರು ತಿಳಿಸಿದ್ದಾರೆ. ಇದು ಕೆಲಸದಲ್ಲಿ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಆಗಾಗ ವಿರಾಮಗಳನ್ನು ತೆಗೆದುಕೊಳ್ಳಲು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದರಿಂದ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಸುಲಭವಾಗಿ ಹೆಚ್ಚಿಸಬಹುದು ಎಂದು ಸೈಕಾಲಜಿಕಲ್ ಎಕ್ಸ್‌ಪರ್ಟ್ಸ್ ಹೇಳುತ್ತಾರೆ.
ಬೊಜ್ಜು ಹೆಚ್ಚಾದ್ರೆ ಗೂನು ಬೆನ್ನಿನ ಸಮಸ್ಯೆ ಕಾಡುತ್ತೆ..ಹುಷಾರ್ !
'ಸಿಟ್ಟಿಂಗ್ ಡಿಸೀಸ್'ನಿಂದ ಹೊರಬರಲು ಸಲಹೆಗಳು
ಕೆಲಸ ಮಾಡುತ್ತಲೇ ಮಧ್ಯೆ ಒಂದು ವಾಕ್ ಮಾಡಿ, ಒಂದು ಲೋಟ ನೀರು ಕುಡಿಯಿರಿ. ಹಿಂತಿರುಗಿ ಮತ್ತೆ ನಿಮ್ಮ ಕುರ್ಚಿಯಲ್ಲಿ ಕುಳಿತು ಕೆಲಸವನ್ನು ಮುಂದುವರೆಸುವ ಮೊದಲು ಭುಜಗಳು, ಕುತ್ತಿಗೆ ಮತ್ತು ಕೆಳಗಿನ ಬೆನ್ನಿಗೆ ಕೆಲವು ವ್ಯಾಯಾಮಗಳನ್ನು ಮಾಡಿ. ಲ್ಯಾಪ್‌ಟ್ಯಾಪ್ ಸ್ಕ್ರೀನ್‌ನಿಂದ ಕಣ್ಣನ್ನು ತೆಗೆದು ವಿರಾಮ ನೀಡುವುದು ಸಹ ಮುಖ್ಯ. ಕುತ್ತಿಗೆ ತಿರುಗುವಿಕೆ ಮತ್ತು ಭುಜದ ಹಿಗ್ಗಿಸುವಿಕೆಯಂತಹ ವ್ಯಾಯಾಮಗಳನ್ನು ಸೇರಿಸಿ.
ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿಟ್ಟುಕೊಳ್ಳಿ. ಒಟ್ಟಾರೆ ಆರೋಗ್ಯ ಮತ್ತು ಶಕ್ತಿಯ ಮಟ್ಟವನ್ನು ಬೆಂಬಲಿಸಲು ಸಮತೋಲಿತ ಆಹಾರವನ್ನು ಸೇವಿಸಿ. ವಾಕಿಂಗ್, ಜಾಗಿಂಗ್ ಅಥವಾ ಜಿಮ್ ವರ್ಕ್‌ಔಟ್‌ಗಳು ಕುಳಿತುಕೊಂಡೇ ಮಾಡುವ ಜಡ ಕೆಲಸದಿಂದ ಸ್ಪಲ್ಪ ವಿರಾಮ ನೀಡುತ್ತದೆ.
ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು 20-20-20 ನಿಯಮವನ್ನು ಅನುಸರಿಸಿ - ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಿ. ಒತ್ತಡವನ್ನು ನಿರ್ವಹಿಸಲು ಧ್ಯಾನ ಅಥವಾ ಆಳವಾದ ಉಸಿರಾಟದಂತಹ ಒತ್ತಡ-ಕಡಿಮೆಗೊಳಿಸುವ ಚಟುವಟಿಕೆಗಳನ್ನು ಅಭ್ಯಾಸ ಮಾಡಿ. ಯಾವುದೇ ಆರೋಗ್ಯ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರಿಹರಿಸಲು ನಿಯಮಿತ ಆರೋಗ್ಯ ತಪಾಸಣೆಗಳನ್ನು ನಿಗದಿಪಡಿಸಿ.