ಸ್ನಾನ ಮಾಡುವಾಗ ಮೂತ್ರ ಮಾಡ್ತೀರಾ? ಡಾಕ್ಟರ್‌ಗಳು ಹೇಳೋ ಮಾತು ದಯವಿಟ್ಟು ಕೇಳಿ!

By Bhavani Bhat  |  First Published Nov 11, 2024, 9:25 PM IST

ಸ್ನಾನದಲ್ಲಿ ಮೂತ್ರ ವಿಸರ್ಜಿಸುವುದು ಸಾಮಾನ್ಯ ಅಭ್ಯಾಸವಾದರೂ, ಇದು ಆರೋಗ್ಯ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು. ಸ್ತ್ರೀಯರಲ್ಲಿ ಪೆಲ್ವಿಕ್ ಫ್ಲೋರ್ ಸ್ನಾಯುಗಳಿಗೆ ತೊಂದರೆಯಾಗಬಹುದು ಮತ್ತು ಸೋಂಕುಗಳು ಹೆಚ್ಚಬಹುದು. ನೈರ್ಮಲ್ಯದ ಕೊರತೆಯಿಂದಾಗಿ ಹಾನಿಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಯೂ ಆಗಬಹುದು.


ಶವರ್‌ನಲ್ಲಿ ಅಥವಾ ಸ್ನಾನ ಮಾಡುತ್ತಿರುವಾಗಲೇ ಮೂತ್ರ ವಿಸರ್ಜಿಸುವುದು ಅನೇಕ ಜನರ ಅಭ್ಯಾಸ; ಆದರೆ ಯಾರೂ ಈ ಬಗ್ಗೆ ಮುಕ್ತವಾಗಿ ಮಾತನಾಡೋಲ್ಲ. ಆದರೆ ನಿಮಗೆ ಗೊತ್ತಿರಲಿ, ಇದು ಅತ್ಯಂತ ಸಾಮಾನ್ಯ. ಕೆಲವರು ಇದು ನಿರುಪದ್ರವ ಅಭ್ಯಾಸವೆಂದು ವಾದಿಸುತ್ತಾರೆ. ಇದು ನೀರನ್ನು ಉಳಿಸಲು ಸಹ ಪ್ರಯೋಜನಕಾರಿ ಎಂದು ಮೊಂಡು ವಾದ ಹೂಡಬಹುದು! ಸ್ನಾನದ ಬೆಚ್ಚಗಿನ ನೀರು ಮತ್ತು ಶಾಂತ ವಾತಾವರಣ ನಿಮ್ಮ ಮೂತ್ರವನ್ನು ನಿಮಗರಿವಿಲ್ಲದೇ ಹೊಮ್ಮಿಸಬಹುದು. ಆದರೆ ಈ ಅಭ್ಯಾಸದ ಬಗ್ಗೆ ಡಾಕ್ಟರ್‌ಗಳು ಏನ್‌ ಹೇಳ್ತಾರೆ ಗೊತ್ತಾ? 

ಆರೋಗ್ಯ ತಜ್ಞರ ಪ್ರಕಾರ ಯಾವಾಗಲೂ ಶವರ್‌ನಲ್ಲಿ ಮೂತ್ರ ವಿಸರ್ಜಿಸುವುದು ಸೂಕ್ತವಲ್ಲ. ಇದು ಎರಡು ವಿಧದಲ್ಲಿ ಅಪಾಯ ಉಂಟುಮಾಡಬಹುದು. ಒಂದನೆಯದು, ಬಾತ್‌ರೂಂನಲ್ಲಿ ನೈರ್ಮಲ್ಯದ ಸಮಸ್ಯೆ. ಎರಡನೆಯದು, ಪೆಲ್ವಿಕ್‌ ಫ್ಲೋರ್‌ ಅಂದರೆ ಮೂತ್ರಾಶಯ ಭಾಗದ ಸ್ನಾಯುಗಳಲ್ಲಿ ತೊಂದರೆಗೆ ಕಾರಣವಾಗಬಹುದು. ಅಂದರೆ ಸ್ತ್ರೀಯರಲ್ಲಿ, ನಿಂತುಕೊಂಡು ಮೂತ್ರ ಮಾಡುವುದರಿಂದ, ಪೆಲ್ವಿಕ್‌ ಭಾಗದಲ್ಲಿ ಮೂತ್ರ ಸಂಪೂರ್ಣ ಹೊರಬಾರದೆ ಗಾಳಿಗುಳ್ಳೆಗಳು ಮೂಡಬಹುದು. ಇದು ಮೂತ್ರದ ಉಳಿಯುವಿಕೆ, ಅದರ ಸೋಂಕುಗಳು, ಮೂತ್ರಕೋಶದ ಕಲ್ಲುಗಳು ಮತ್ತು ಕಾಲಾನಂತರದಲ್ಲಿ ಮೂತ್ರಪಿಂಡದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Latest Videos

undefined

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹೇಳುವುದು ಹೀಗೆ: ಸ್ನಾನದ ವೇಳೆ ಸಿಂಕ್‌ನಲ್ಲಿ ಕುಳಿತು ಮೂತ್ರ ಮಾಡಿದರೆ ತೊಂದರೆ ಇಲ್ಲ. ಆದರೆ ಇದು ವರ್ತನೆಯನ್ನು ಕಂಡೀಷನಿಂಗ್‌ ಮಾಡುತ್ತದೆ. ಹರಿಯುವ ನೀರಿನ ಶಬ್ದ, ಬೆಚ್ಚಗಿನ ನೀರಿನ ಅನುಭವ ಮೂತ್ರ ವಿಸರ್ಜನೆಯ ಪ್ರಚೋದನೆ ಉಂಟುಮಾಡುತ್ತದೆ. ಇದು ಶವರ್‌ನ ಹೊರಗೆ ಮೂತ್ರ ಮಾಡುವಾಗ ಅನೈಚ್ಛಿಕ ಸಮಸ್ಯೆಗಳಿಗೆ ಕಾರಣವಾಗಬಹುದು. 

ಎರಡನೆಯದು ಶುಚಿತ್ವ ಮತ್ತು ಆರೋಗ್ಯದ ಸಮಸ್ಯೆ. ಆಂಟಿಬ್ಯಾಕ್ಟೀರಿಯಲ್ ಕ್ಲೀನರ್‌ಗಳೊಂದಿಗೆ ಶವರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ಸ್ನಾನದ ಜಾಗದಲ್ಲಿ ಮೂತ್ರ ವಿಸರ್ಜನೆಯು ನೈರ್ಮಲ್ಯದ ಕೊರತೆ ಉಂಟುಮಾಡಬಹುದು. ಮೂತ್ರದಲ್ಲಿ ಬ್ಯಾಕ್ಟೀರಿಯಾಗಳು ಮತ್ತು ಅಮೋನಿಯ ಇರುತ್ತದೆ. ಇದು ವಾಸನೆಗೆ ಕಾರಣವಾಗಬಹುದು ಮತ್ತು ಹಾನಿಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಗೂ ಕಾರಣವಾಗಬಹುದು. 

ಹೃದ್ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ಶವರ್‌ನಲ್ಲಿ ಮೂತ್ರ ವಿಸರ್ಜಿಸುವುದು ಪುರುಷರು ಮತ್ತು ಮಹಿಳೆಯರ ಮೇಲೆ ಭಿನ್ನ ಪರಿಣಾಮ ಬೀರಬಹುದು. ಇದಕ್ಕೆ ಕಾರಣ ಮರ್ಮಾಂಗ ರಚನಾ ವ್ಯತ್ಯಾಸ. “ಪುರುಷರಲ್ಲಿ ಪ್ರಾಸ್ಟೇಟ್ ಮೂತ್ರಕೋಶ ಮತ್ತು ಮೂತ್ರನಾಳವನ್ನು ಬೆಂಬಲಿಸುತ್ತದೆ. ಆದರೆ ಮಹಿಳೆಯರಿಗೆ ಈ ಬೆಂಬಲವಿಲ್ಲ. ಸ್ತ್ರೀಯರು ಶವರ್‌ನಲ್ಲಿ ನಿಂತು ಮೂತ್ರ ವಿಸರ್ಜಿಸುವಾಗ ಮೂತ್ರಕೋಶಕ್ಕೆ ಆಯಾಸ ಆಗಬಹುದು. ಈ ಒತ್ತಡದಿಂದ ಸೋಂಕುಗಳು, ಮೂತ್ರಕೋಶದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಪುರುಷರು ನಿಂತುಕೊಂಡೇ ಮೂತ್ರ ವಿಸರ್ಜಿಸಬಲ್ಲರಾದ್ದರಿಂದ ಇದು ಪೆಲ್ವಿಕ್‌ ಫ್ಲೋರ್‌ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಅಂದರೆ ಪುರುಷರು ಸ್ನಾನದ ಮನೆಯಲ್ಲಿ ಮಾತ್ರ ಮಾಡಬಹುದು ಎಂದರ್ಥವಲ್ಲ. ಶುಚಿತ್ವ ಹಾಗೂ ಆರೋಗ್ಯದ ಸಮಸ್ಯೆಯನ್ನು ಅವರೂ ಎದುರಿಸಬೇಕಾಗುತ್ತದೆ. 

ಕೂದಲು ಸೊಂಪಾಗಿ ಬೆಳೀಬೇಕು ಅಂದ್ರೆ ಕೊಬ್ಬರಿ ಎಣ್ಣೆ ಪ್ಯಾಕ್ ಹೀಗ್ ಮಾಡ್ಕೊಳ್ಳಿ!
 

click me!