Winter Drinks: ಅಜೀರ್ಣ ಸಮಸ್ಯೆಗೆ ಬೆಸ್ಟ್ ಸೊಲ್ಯೂಶನ್ ಮಸಾಲ ಟೀ

By Suvarna NewsFirst Published Dec 13, 2021, 5:55 PM IST
Highlights

ಚಳಿಗಾಲ (Winter)ದಲ್ಲಿ ಆಗಾಗ ಕಾಣಿಸಿಕೊಳ್ಳೋ ಶೀತ, ಕೆಮ್ಮು, ನೆಗಡಿಯ ಕಿರಿಕಿರಿ ಎಲ್ಲಾ ಸಹಜ. ಇವಿಷ್ಟೂ ಸಾಲ್ದು ಅಂತ ಹೊಟ್ಟೆ ಕೆಡುವುದು, ಅಜೀರ್ಣ (Indigestion) ಮೊದಲಾದ ಪ್ರಾಬ್ಲಂ (Problem) ಸಹ ಕಾಣಿಸಿಕೊಳ್ಳುತ್ತದೆ. ಆದ್ರೆ ಇದೆಲ್ಲವನ್ನೂ ಫಟಾಫಟ್ ಅಂತ ನಿವಾರಿಸೋಕೆ ಇಲ್ಲೊಂದು ಐಡಿಯಾ (Idea) ಇದೆ..ಏನದು..?

ಚುಮುಚುಮು ಮುಂಜಾನೆ (Morning)ಗೆ ಏನಿಲ್ಲಾಂದ್ರೂ ಟೀ (Tea), ಕಾಫಿ (Coffee) ಅಂತೂ ಇರಲೇಬೇಕು. ಭಾರತದಲ್ಲಿ ಒಂದು ಕಪ್ ಟೀ, ಕಾಫಿ ಇಲ್ಲದೆ ಬೆಳಗ್ಗೆ, ಸಂಜೆ ಆಗುವುದೇ ಇಲ್ಲ. ಅಷ್ಟರಮಟ್ಟಿಗೆ ಭಾರತೀಯರು (Indians) ಕಾಫಿ, ಟೀಯನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿಯೇ ದೇಶದ ಆಯಾಯ ಪ್ರದೇಶಗಳಲ್ಲಿ ಹಲವು ವೆರೈಟಿ ಟೀಗಳು ಲಭ್ಯವಿದೆ. ಅದರಲ್ಲೂ ಚಳಿಗಾಲ ಬಂದರೆ ಸಾಕು ಮಸಾಲಯುಕ್ತ ಟೀಗಳನ್ನು ಸವಿಯುವುದೇ ಚಂದ. ಗ್ರೀನ್‌ ಟೀ (Green Tea), ಜಿಂಜರ್ ಟೀ ಮೊದಲಾದ ಮಸಾಲೆ ಟೀಗಳು ಚಳಿಯ ಸಮಯದಲ್ಲಿ ಮೈಯನ್ನು ಬೆಚ್ಚಗಾಗಿಡುವುದಲ್ಲದೆ ಆರೋಗ್ಯವೂ ಹದಗೆಡದಂತೆ ಕಾಪಾಡುತ್ತದೆ. 

ಸಾಮಾನ್ಯವಾಗಿ ಟೀಯನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ತಯಾರಿಸುವ ಪರಿಪಾಠವಿದೆ. ಹಲವೆಡೆ ಟೀ ಮಾಡುವಾಗ ಹಾಲನ್ನು ಸೇರಿಸಿದರೆ, ಇನ್ನು ಕೆಲವೆಡೆ ಬರೀ ನೀರು, ಚಹಾ ಪುಡಿ ಬಳಸಿ ಸಕ್ಕರೆಯನ್ನು ಸಹ ಸೇರಿಸದೆ ಚಹಾ ತಯಾರಿಸುತ್ತಾರೆ. ಇನ್ನೂ ಕೆಲವೆಡೆ ಶುಂಠಿ (Ginger), ತುಳಸಿ, ಲವಂಗವನ್ನೆಲ್ಲಾ ಬಳಸಿ ಚಹಾವನ್ನು ತಯಾರಿಸುತ್ತಾರೆ. ಟೀ ಸೇವನೆ ಆರೋಗ್ಯ (Health)ಕ್ಕೆ ತಕ್ಕಮಟ್ಟಿಗೆ ಹಾನಿಕರವಾಗಿದ್ದರೂ ಚಳಿಗಾಲದಲ್ಲಂತೂ ಇದನ್ನು ಬೇಡ ಅನ್ನುವವರಿಲ್ಲ. ಅದರಲ್ಲೂ ಹಾಲು ಸೇರಿಸದ ಟೀ, ಚಳಿಗಾಲದ ಹವಾಮಾನಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ಚಹಾ ಸೇವನೆ ದೇಹವನ್ನು ಬೆಚ್ಚಗಾಗಿಡುವುದರಿಂದ ಶೀತ, ಕೆಮ್ಮು, ಜ್ವರಗಳಿಂದ ದೂರವಿರಬಹುದು.

Winter Diet : ಈ ಚಳಿಯಲ್ಲಿ ಉಪಾಹಾರದಲ್ಲಿ ಇದನ್ನು ಸೇವಿಸಿ ಅದ್ಭುತ ಪ್ರಯೋಜನ ಪಡೆಯಿರಿ

ಚಳಿಗಾಲದಲ್ಲಿ ಆಹಾರ (Food)ದ ಆಯ್ಕೆಯ ಬಗ್ಗೆಯೂ ತಿಳಿದುಕೊಳ್ಳಬೇಕಾದುದು ಮುಖ್ಯ. ಚಳಿಯಾದ ವಾತಾವರಣಕ್ಕೆ ಮಾಂಸ, ತುಪ್ಪ, ಒಣ ಹಣ್ಣುಗಳ ಸೇವನೆ ಉತ್ತಮ. ಇದು ಆದಷ್ಟು ದೇಹ ಬೆಚ್ಚಗಾಗಿರುವಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಟೀಯ ಬಗ್ಗೆ ಹೇಳುವುದಾದರೆ ಚಳಿಗಾಲದಲ್ಲಿ ಮಸಾಲ ಟೀ ಅತ್ಯುತ್ತಮ ಆಯ್ಕೆ.

ಸೋಮೆಲಿಯರ್ ಮತ್ತು ಟೀ ಬ್ಲೆಂಡರ್ ಮತ್ತು ಸೆಲ್ಸೆಟೆಯ ಸಂಸ್ಥಾಪಕರಾದ ಅನುಭಾ ಝಾವರ್ ಅವರ ಅಭಿಪ್ರಾಯದಂತೆ, ಚಳಿಗಾಲದಲ್ಲಿ ಮನುಷ್ಯನ ದೇಹಕ್ಕೆ ನಿರಂತರ ಶಾಖ ಬೇಕು. ಹೀಗಾಗಿ ವಿವಿಧ ಗಿಡಮೂಲಿಕೆಗಳು ಮತ್ತು ಮಸಾಲೆಗಳಿಂದ ಸೇರಿದ ಚಹಾ ಸೇವನೆ ಅತ್ಯುತ್ತಮವಾಗಿದೆ. ಪ್ರತಿಯೊಂದು ಗಿಡಮೂಲಿಕೆಯಲ್ಲೂ ಅದರದ್ದೇ ಆದ ಔಷಧೀಯ ಗುಣಗಳಿರುತ್ತವೆ. ಹೀಗಾಗಿ ಚಳಿಗಾಲದಲ್ಲಿ ಯಾವುದೇ ಆಹಾರ ಸೇವನೆಯ ಬಳಿಕ ಇಂಥಹಾ ಮಸಾಲ ಟೀ ಸೇವಿಸುವುದು ಒಳ್ಳೆಯದು.

ಗಿಡಮೂಲಿಕೆಗಳು ಮತ್ತು ಮಸಾಲಗಳಿಂದ ಚಹಾ ತಯಾರಿಸುವುದಕ್ಕೆ ಹಲವು ಕಾರಣಗಳು ಸಹ ಇವೆ. ಗಿಡಮೂಲಿಕೆ, ಮಸಾಲಗಳಿಂದ ಸಿದ್ಧಪಡಿಸಿದ ಚಹಾ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಕೆಲವು ಈ ಕೆಳಗಿನಂತಿದೆ..

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡುತ್ತದೆ: ಚಳಿಗಾಲದಲ್ಲಿ ಆಗಾಗ್ಗೆ ಶೀತ ಅಥವಾ ಕೆಮ್ಮು (Cough) ಕಾಣಿಸಿಕೊಳ್ಳುವುದು ಸಹಜ. ಮಸಾಲಯುಕ್ತ ಚಹಾಗಳು ಸಾಮಾನ್ಯ ಕೆಮ್ಮು ಮತ್ತು ಶೀತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶುಂಠಿ, ಅರಿಶಿನ (Turmeric) ಸೇರಿಸಿದ ಚಹಾ ಸೇವಿಸುವುದರಿಂದ ಮೂಗು ಕಟ್ಟುವುದು ನಿಲ್ಲುತ್ತದೆ.

ಉತ್ಕರ್ಷಣ ನಿರೋಧಕಗಳು: ಮಸಾಲಯುಕ್ತ ಚಹಾಗಳು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜ್ವರ (Fever) ಮತ್ತು ಇತರ ವೈರಸ್‌ (Virus)ಗಳಿಂದ ದೇಹವನ್ನು ರಕ್ಷಿಸಲು ಸಹಾಯ (Help) ಮಾಡುತ್ತದೆ.

ಉರಿಯೂತ: ಬೆಚ್ಚಗಿನ ಮಸಾಲಯುಕ್ತ ಚಹಾ ಉರಿಯೂತ ಮತ್ತು ನೋವನ್ನು ನಿವಾರಿಸುತ್ತದೆ. ಚಹಾ ತಯಾರಿಸುವಾಗ ಪಾತ್ರೆಗೆ ಕೆಲವು ಲವಂಗಗಳನ್ನು ಸೇರಿಸಿ ಕುದಿಸುವುದರಿಂದ ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Side effects of peas : ಚಳಿಗಾಲದಲ್ಲಿ ಬಟಾಣಿ ಅತಿಯಾದ ಸೇವನೆಯಿಂದ ಅನಾರೋಗ್ಯ

ಸುಗಮ ಜೀರ್ಣಕ್ರಿಯೆ: ಚಳಿಗಾಲದಲ್ಲಿ ಅತಿಯಾಗಿ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಕೆಡುತ್ತದೆ. ಅಷ್ಟೇ ಅಲ್ಲ ಸುಗಮ ಜೀರ್ಣಕ್ರಿಯೆಗೂ ಅಡ್ಡಿಯುಂಟಾಗುತ್ತದೆ. ಆದರೆ, ಚಳಿಗಾಲದಲ್ಲಿ ಶುಂಠಿ, ಪುದೀನ (MInt), ತುಳಸಿ (Tulsi) ಯನ್ನು ಸೇರಿಸಿ ತಯಾರಿಸಿದ ಚಹಾ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಇಂಥಹಾ ಮಸಾಲ ಟೀ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗೂ ಪರಿಹಾರ ದೊರಕುತ್ತದೆ. ಅದರಲ್ಲೂ ಊಟದ ನಂತರ ಈ ರೀತಿಯ ಮಸಾಲ ಟೀ ಕುಡಿಯುವುದು ಒಳ್ಳೆಯದು.

ರಕ್ತ ಪರಿಚಲನೆ: ಚಳಿಗಾಲದ ತಿಂಗಳುಗಳಲ್ಲಿ ವ್ಯಾಯಾಮದ ಕೊರತೆಯಾಗುವ ಕಾರಣ ಇದು ನಮ್ಮ ದೇಹದ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದಾಲ್ಚಿನ್ನಿ ಚಹಾವನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ಆಂತರಿಕವಾಗಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

click me!