ಪಿರಿಯಡ್ಸ್ ಸಮಯದಲ್ಲಿ ನಿಮಗೂ ನಿದ್ದೆ ಬರಲ್ವಾ? ಯಾಕ್ ಗೊತ್ತ?

Published : Apr 13, 2024, 05:12 PM IST

ಮುಟ್ಟಿನ ಸಮಯದಲ್ಲಿ, ಪಿಎಂಎಸ್ ನ ಹಲವಾರು ಸಮಸ್ಯೆಗಳು ಬಾಧಿಸುತ್ತವೆ, ಈ ಸಮಯದಲ್ಲಿ ಉಂಟಾಗುವ ಅನೇಕ ಸಮಸ್ಯೆಗಳಲ್ಲಿ ಒಂದು ನಿದ್ರೆಯ ಕೊರತೆ. ಮುಟ್ಟಿನ ಸಮಯದಲ್ಲಿ ನಿದ್ರೆಯ ಕೊರತೆ ಏಕೆ ಇರುತ್ತದೆ ಎಂದು ತಿಳಿಯೋಣ.

PREV
17
ಪಿರಿಯಡ್ಸ್ ಸಮಯದಲ್ಲಿ ನಿಮಗೂ ನಿದ್ದೆ ಬರಲ್ವಾ? ಯಾಕ್ ಗೊತ್ತ?

ಪ್ರತಿತಿಂಗಳು ಋತುಚಕ್ರ (periods)ಹೊಂದುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇದು ಸಾಮಾನ್ಯವಾಗಿ ಮೂರರಿಂದ ಏಳು ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ, ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ದೇಹದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ ಮೂಡ್ ಸ್ವಿಂಗ್, ಹೊಟ್ಟೆ ನೋವು, ಬೆನ್ನು ನೋವು, ಜೀರ್ಣಕಾರಿ ತೊಂದರೆಗಳು (digestion problem) ಮತ್ತು ಇತ್ಯಾದಿ... ಈ ಎಲ್ಲಾ ರೋಗಲಕ್ಷಣಗಳು ತುಂಬಾನೆ ಸಮಸ್ಯೆಯನ್ನು ಉಂಟು ಮಾಡುತ್ತೆ.

27

ಪಿರಿಯಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಲ್ಲಿ ಮತ್ತೊಂದು ರೋಗಲಕ್ಷಣ ಸಾಮಾನ್ಯವಾಗಿ ಕಂಡುಬರುತ್ತದೆ. ಋತುಚಕ್ರದ ಮೊದಲು ಮತ್ತು ಪಿರಿಯಡ್ಸ್ ಮುಗಿಯುವವರೆಗೂ ನಿದ್ರೆಯ ಮಾದರಿ ತೊಂದರೆಗೊಳಗಾಗಿರುತ್ತದೆ. ಇದನ್ನು ಋತುಚಕ್ರದ ನಿದ್ರಾಹೀನತೆ (sleeplessness)ಎನ್ನಲಾಗುತ್ತದೆ. ಇದು ಏಕೆ ಸಂಭವಿಸುತ್ತದೆ, ಅದರ ಹಿಂದಿನ ಕಾರಣವೇನು ಅನ್ನೋದನ್ನು ತಿಳಿಯೋಣ.

37

ಆಗಾಗ್ಗೆ ಮಹಿಳೆಯರು ಮುಟ್ಟಿನ ಮೊದಲು ನಿದ್ರಾಹೀನತೆಯಿಂದ ಬಳಲುತ್ತಾರೆ, ಇದು ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತೆ. ತಜ್ಞರ ಪ್ರಕಾರ, ಇದು ಬಹಳ ಸಾಮಾನ್ಯ ಲಕ್ಷಣವಾಗಿದೆ. ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನುಗಳು ಇದಕ್ಕೆ ಕಾರಣ. 
 

47

ಋತುಸ್ರಾವದ ಮೊದಲು ಪ್ರೊಜೆಸ್ಟರಾನ್ (projesterone) ಮಟ್ಟವು ಹೆಚ್ಚಾಗುತ್ತದೆ, ಆದರೆ ಮುಟ್ಟಿನ ಸಮಯದಲ್ಲಿ ಪ್ರೊಜೆಸ್ಟರಾನ್ ಮಟ್ಟವು ಕಡಿಮೆಯಾಗುತ್ತದೆ, ಇದರಿಂದಾಗಿ ನಿದ್ರೆಯ ಮಾದರಿಗೆ ತೊಂದರೆಯಾಗುತ್ತದೆ. ಅದೇ ಸಮಯದಲ್ಲಿ, ಮುಟ್ಟಿನ ಸಮಯದಲ್ಲಿ ದೇಹದ ತಾಪಮಾನದಲ್ಲಿ ಬದಲಾವಣೆ ಇರುತ್ತದೆ. 

57

ಅಂಡೋತ್ಪತ್ತಿಯ ನಂತರ, ಇದು ಸುಮಾರು 0.3 ಡಿಗ್ರಿ ಸೆಲ್ಸಿಯಸ್ ನಿಂದ 0.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ, ಇದು ಪಿರಿಯಡ್ಸ್ ಆರಂಭದವರೆಗೂ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ, ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.

67

ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಸಾಕಷ್ಟು ಸೆಳೆತ ಇರುತ್ತದೆ. ಅದೇ ಸಮಯದಲ್ಲಿ, ಪ್ಯಾಡ್ ಲಿಕೇಜ್ ಆತಂಕವೂ ಇದೆ. ಹಾರ್ಮೋನುಗಳ ಬದಲಾವಣೆಯಿಂದಾಗಿ ಮನಸ್ಥಿತಿ ಕೂಡ ಕೆಟ್ಟದಾಗಿರುತ್ತದೆ. ನಿದ್ರೆಗೆ ಕಾರಣವಾದ ಹಾರ್ಮೋನುಗಳಾದ ಸೆರೊಟೋನಿನ್ ಮತ್ತು ಮೆಲಟೋನಿನ್ ಮಟ್ಟವೂ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ನಿದ್ರಾಹೀನತೆಯ ಸಮಸ್ಯೆಯೂ ಉಂಟಾಗುವ ಸಾಧ್ಯತೆ ಇದೆ.
 

77

ಮುಟ್ಟಿನ ಸಮಯದಲ್ಲಿ ಉತ್ತಮ ನಿದ್ರೆ ಪಡೆಯಲು ಏನು ಮಾಡಬೇಕು
ಸರಿಯಾದ ಕೋಣೆಯ ತಾಪಮಾನವನ್ನು ಇರಿಸಿ ಇದರಿಂದ ನಿಮಗೆ ಉತ್ತಮ ನಿದ್ರೆ (good sleep) ಸಿಗುತ್ತದೆ.
ಮಲಗುವ ಮೊದಲು ಚಹಾ ಅಥವಾ ಕಾಫಿ ಕುಡಿಯಬೇಡಿ.
ಮಲಗುವ ಮೊದಲು ಸ್ವಲ್ಪ ವ್ಯಾಯಾಮವನ್ನು ಸಹ ಮಾಡಬಹುದು.
ಸಮತೋಲಿತ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ.

Read more Photos on
click me!

Recommended Stories