ಉತ್ತಮ ಮಳೆಗೆ ಜೀವಕಳೆ ಪಡೆದ ಕಾವೇರಿ: ಚುರುಕುಗೊಂಡ ಕೊಡಗು ಪ್ರವಾಸೋದ್ಯಮ

By Govindaraj S  |  First Published May 19, 2024, 7:48 PM IST

ಕೊಡಗಿನಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿದು ಲಕ್ಷಾಂತರ ಜನರಿಗೆ ಜೀವ ಜಲ ನೀಡುವ, ಲಕ್ಷಾಂತರ ರೈತರ ಬದುಕನ್ನು ಹಸನು ಮಾಡುವ ಜೀವ ನದಿ ಕಾವೇರಿ ಬತ್ತಿ ಬರಿದಾಗಿ ಉಸಿರೇ ನಿಂತು ಹೋಗಿತ್ತು. ಕಳೆದ ಒಂದು ವಾರದವರೆಗೆ ಹನಿ ನೀರಿಗೂ ಆಹಾಕಾರ ಎನ್ನುವಂತೆ ಆಗಿತ್ತು. 


ಕೊಡಗು (ಮೇ.19): ಕೊಡಗಿನಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿದು ಲಕ್ಷಾಂತರ ಜನರಿಗೆ ಜೀವ ಜಲ ನೀಡುವ, ಲಕ್ಷಾಂತರ ರೈತರ ಬದುಕನ್ನು ಹಸನು ಮಾಡುವ ಜೀವ ನದಿ ಕಾವೇರಿ ಬತ್ತಿ ಬರಿದಾಗಿ ಉಸಿರೇ ನಿಂತು ಹೋಗಿತ್ತು. ಕಳೆದ ಒಂದು ವಾರದವರೆಗೆ ಹನಿ ನೀರಿಗೂ ಆಹಾಕಾರ ಎನ್ನುವಂತೆ ಆಗಿತ್ತು. ಆದರೀಗ ಜಿಲ್ಲೆಯಲ್ಲಿ ಸುರಿದ ಉತ್ತಮ ಮಳೆಗೆ ಕಾವೇರಿ ನದಿಗೆ ಮತ್ತೆ ಜೀವಕಳೆ ಬಂದಿದೆ. ಹೌದು ಮಳೆ ಇಲ್ಲದೆ ಸಂಪೂರ್ಣ ಬತ್ತಿ ಹೋಗಿದ್ದ ಕಾವೇರಿ ನದಿಯಲ್ಲಿ ನೀರು ಹರಿಯಲಾರಂಭಿಸಿದೆ. ಹೀಗಾಗಿ ಕಾವೇರಿ ನದಿಗೆ ಹೊಸ ಜೀವಕಳೆ ಬಂದಿದೆ. ಇಷ್ಟು ದಿನಗಳ ಕಾಲ ಕೊಡಗಿನ ದುಬಾರೆ ಸಾಕಾನೆ ಶಿಬಿರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಬರುತ್ತಿದ್ದ ಸಾವಿರಾರು ಪ್ರವಾಸಿಗರು ನೀರೇ ಇಲ್ಲದ ಕೊಡಗಿನ ಪ್ರವಾಸಿ ತಾಣಗಳನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದರು. 

ಅದೆಷ್ಟೋ ಸಾವಿರಾರು ಪ್ರವಾಸಿಗರು ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬರುವುದಕ್ಕೂ ಹಿಂದೆ ಮುಂದು ನೋಡುವಂತೆ ಆಗಿತ್ತು. ಆದರೆ ಈಗ ತಲಕಾವೇರಿ, ಬ್ರಹ್ಮಗಿರಿ, ಪುಷ್ಪಗಿರಿ ಬೆಟ್ಟ ಪ್ರದೇಶಗಳು ಸೇರಿದಂತೆ ಕಾವೇರಿ ನದಿ ನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಹೀಗಾಗಿ ಬರಿದಾಗಿದ್ದ ಕಾವೇರಿ ಒಡಲಿಗೆ ನೀರು ಹರಿದು ಬಂದಿದ್ದು, ಕಾವೇರಿ ನದಿಗೆ ಹೊಸ ಚೈತನ್ಯ ಬಂದಂತೆ ಆಗಿದೆ. ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರಕ್ಕೆ ಆಗಮಿಸುತ್ತಿರುವ ಸಾವಿರಾರು ಪ್ರವಾಸಿಗರು ಕಾವೇರಿ ನದಿಗೆ ಇಳಿದು ಎಂಜಾಯ್ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳು, ವೃದ್ಧರು ಮಹಿಳೆಯರೂ ಸೇರಿದಂತೆ ಎಲ್ಲಾ ವಯೋಮಾನದ ಜನರು ನದಿಗೆ ಇಳಿದು ಎಂಜಾಯ್ ಮಾಡುತ್ತಿದ್ದಾರೆ. 

Tap to resize

Latest Videos

60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು

ಇನ್ನು ಕಾವೇರಿ ನದಿಯಲ್ಲಿ ನೀರು ಹರಿಯಲಾರಂಭಿಸಿರುವುದು ಸ್ಥಗಿತವಾಗಿದ್ದ ರ್ಯಾಫ್ಟಿಂಗ್ ಜಲಕ್ರೀಡೆಗೂ ಮರುಜೀವ ಸಿಗುವಂತೆ ಮಾಡಿದೆ. ರ್ಯಾಫ್ಟಿಂಗ್ ಅನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ನೂರಾರು ಕುಟುಂಬಗಳು ರ್ಯಾಫ್ಟಿಂಗ್ ಇಲ್ಲದೆ ದುಡಿಮೆ ಇಲ್ಲದೆ ಪರದಾಡುವಂತೆ ಆಗಿತ್ತು. ಇದೀಗ ಮೊನ್ನೆಯಿಂದ ರ್ಯಾಫ್ಟಿಂಗ್ ಆರಂಭವಾಗಿರುವುದು ನೂರಾರು ಕುಟುಂಬಗಳು ಸಂತಸ ಪಡುವಂತೆ ಆಗಿದೆ. ಒಂದೆಡೆ ಸಾಕಷ್ಟು ಪ್ರಮಾಣದ ಬಿಸಿಲು ಇರುವುದರಿಂದ ಇದೇ ಸಂದರ್ಭ ಕಾವೇರಿಯಲ್ಲಿ ಹರಿಯುತ್ತಿರುವ ನೀರು ಪ್ರವಾಸಿಗರಿಗೆ ತಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ಕಾವೇರಿ ನದಿಯಲ್ಲಿ ಇಳಿದು ಸ್ನಾನ ಮಾಡುವುದು, ನೀರಿನಲ್ಲಿ ಬಿದ್ದು ಹೊರಳಾಡುವುದು ಹೀಗೆ ಕಾವೇರಿ ನದಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 

ಕರಾವಳಿ ಬಿಜೆಪಿಗರ ಕಡೆಗಣನೆ ವಿರುದ್ಧ ನನ್ನ ಸ್ಪರ್ಧೆ: ರಘುಪತಿ ಭಟ್‌

ಕಳೆದ ಒಂದು ವಾರದ ಹಿಂದೆಯಷ್ಟೇ ಕಾವೇರಿ ನದಿಯಲ್ಲಿ ಹನಿ ನೀರೂ ಇಲ್ಲದೆ ಸಾವಿರಾರು ಮೀನುಗಳು ಸೇರಿದಂತೆ ಹಲವು ಜಲಚರಗಳು ಸಾವನ್ನಪ್ಪಿದ್ದವು. ಜೊತೆಗೆ ಮಳೆಯ ತೀವ್ರ ಕೊರತೆಯಿಂದಾಗಿ ರೈತರು ಕಂಗಾಲಾಗುವಂತೆ ಆಗಿತ್ತು. ಆದರೀಗ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದು ಕಾವೇರಿ ನದಿಗೆ ಹೊಸ ಜೀವಕಳೆ ತಂದಿದೆ. ಇದು ಕೊಡಗಿನ ಜನರಿಗೆ ಅಷ್ಟೇ ಅಲ್ಲದೆ ಹೊರ ಜಿಲ್ಲೆಯ ಲಕಷಾಂತರ ಜನರಿಗೆ ಕುಡಿಯುವ ನೀರು ಪೂರೈಕೆಗೂ ಅನುಕೂಲ ಆಗುವಂತೆ ಮಾಡಿದೆ. ಕಾವೇರಿ ನದಿ ಹರಿಯುತ್ತಿರುವುದು ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯನ್ನು ಇಷ್ಟು ಇಮ್ಮಡಿಗೊಳಿಸಲು ಅನುಕೂಲಕರವಾದಂತೆ ಆಗಿದೆ. ಏನೇ ಆಗಲಿ ಕಳೆದ ಮಳೆಗಾಲದಲ್ಲಿ ತೀವ್ರ ಮಳೆ ಕೊರತೆ ಹಾಗೂ ಪೂರ್ವ ಮುಂಗಾರು ಮಳೆ ಬಾರದಿದ್ದ ಹಿನ್ನೆಲೆಯಲ್ಲಿ ಬರಿದಾಗಿ ಒಂದು ಹನಿ ನೀರಿಲ್ಲದಂತೆ ಆಗಿದ್ದ ಕಾವೇರಿ ನದಿಗೆ ಮರುಜೀವ ಬಂದಂತೆ ಆಗಿದೆ.

click me!