ಆರ್‌ಸಿಬಿ ಗೆಲುವಿನ ಬಳಿಕ ಕೊಹ್ಲಿ-ಅನುಷ್ಕಾ ಕೈ ಸನ್ನೆ ಮಾತುಕತೆಯ ಕ್ಯೂಟ್ ವಿಡಿಯೋ!

By Chethan Kumar  |  First Published May 19, 2024, 7:16 PM IST

ಸಿಎಸ್‌‌ಕೆ ಮಣಿಸಿದ ಬಳಿಕ ಆರ್‌ಸಿಬಿ ಸಂಭ್ರಮ ಆಚರಿಸಿತ್ತು. ಇದರ ನಡುವೆ ಕೊಹ್ಲಿ ಹಾಗೂ ಅನುಷ್ಕಾ ಕೈ ಸನ್ನೆ ಮೂಲಕ ನಡೆಸಿದ ಕ್ಯೂಟ್ ಸಂಭಾಷಣೆ ವಿಡಿಯೋ ವೈರಲ್ ಆಗಿದೆ.


ಬೆಂಗಳೂರು(ಮೇ.19) ಐಪಿಎಲ್ ಟೂರ್ನಿಯ ರೋಚಕ ಪಂದ್ಯದಲ್ಲಿ ಮೊದಲ ಸ್ಥಾನಕ್ಕೇರಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಅಮಲು ಇನ್ನೂ ಇಳಿದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದೆ. ಆರ್‌ಸಿಬಿ ತಂಡ ಮೈದಾನದಲ್ಲಿ ಸಂಭ್ರಮ ಆಚರಿಸಿತ್ತು. ಇದರ ನಡುವೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾನ ಕೈ ಸನ್ನೆ ಮೂಲಕ ನಡೆಸಿದ ಸಂಭಾಷಣೆಯ ಕ್ಯೂಟ್ ವಿಡಿಯೋ ವೈರಲ್ ಆಗಿದೆ.

ಆರ್‌ಸಿಬಿ ಗೆಲುವಿನ ಸೆಲೆಬ್ರೇಷನ್‌ನಲ್ಲಿ ಅನುಷ್ಕಾ ಶರ್ಮಾ ಗ್ಯಾಲರಿಯಲ್ಲೇ ಕುಳಿತು ಕೈಜೋಡಿಸಿದ್ದರು. ತಂಡವನ್ನು ಹುರಿದುಂಬಿಸಿದ್ದರು. ಕೆಲ ಹೊತ್ತಿನ ಸಂಭ್ರಮದ ಬಳಿಕ ಅನುಷ್ಕಾ ಶರ್ಮಾ ಕುಳಿತಲ್ಲಿಂದ  ಎದ್ದು, ಕೊಹ್ಲಿಗೆ ಸನ್ನೆ ಮಾಡಿದ್ದಾರೆ. ಇತ್ತ ಕೊಹ್ಲಿ ತಕ್ಷಣವೇ ಪ್ರತಿಕ್ರಿಯೆಸಿದ್ದಾರೆ. ಈ ವೇಳೆ ಅನುಷ್ಕಾ ಶರ್ಮಾ ನಾನು ಕಾಲ್ ಮಾಡುತ್ತೇನೆ, ಬಾಯ್ ಎಂದು ಸನ್ನೆ ಮಾಡಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಕೈ ಸನ್ನೆ ಮೂಲಕ ಒಕೆ ಎಂದಿದ್ದಾರೆ. ಇಷ್ಟೇ ಅಲ್ಲ ಫ್ಲೈಯಿಂಗ್ ಕಿಸ್ ನೀಡಿ ಬಾಯ್ ಎಂದಿದ್ದಾರೆ.

Latest Videos

undefined

ಪಂದ್ಯ ಗೆದ್ದು ಮೈದಾನದಿಂದಲೇ ರಿಷಬ್ ಶೆಟ್ಟಿಗೆ ಆರ್‌ಸಿಬಿ ವೇಗಿ ಸಲ್ಯೂಟ್, ವಿಡಿಯೋ ವೈರಲ್!

ಕೊಹ್ಲಿ ಹಾಗೂ ಅನುಷ್ಕಾ ನಡುವಿ ಸನ್ನೆ ಮಾತುಕತೆಯ ಕ್ಯೂಟ್ ವಿಡಿಯೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದರು. ಇತ್ತ ಅನುಷ್ಕಾ ಶರ್ಮಾ ಕೂಡ ಭಾವುಕರಾಗಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಅನುಷ್ಕಾ ಜೋಡಿಯ ಭಾವುಕ ಕ್ಷಣ ಅಭಿಮಾನಿಗಳನ್ನೂ ಭಾವುಕ ಮಾಡಿತ್ತು. 

 

Found the video😂❤️
absolute cutiess pic.twitter.com/2lalqoPMIm

— Nush (@kyayaarcheeks)

 

ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಮೂಲಕ 218 ರನ್ ಸಿಡಿಸಿತ್ತು. ಸಿಎಸ್‌ಕೆ ತಂಡಕ್ಕೆ ಕೇವಲ ಗೆಲುವು ಸಾಕಿತ್ತು. ಕನಿಷ್ಠ ಗೆಲುವು ಸಿಎಸ್‌ಕೆ ತಂಡವನ್ನು ಪ್ಲೇ ಆಫ್ ಹಂತಕ್ಕೆ ಕೊಂಡೊಯ್ಯುತ್ತಿತ್ತು. ಆದರೆ ಆರ್‌ಸಿಬಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕಿತ್ತು. ಸ್ಫೋಟಕ ಬ್ಯಾಟಿಂಗ್ ಮೂಲಕ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ,ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 191 ರನ್‌ಗೆ ಕಟ್ಟಿ ಹಾಕಿತ್ತು. 

IPL 2024 ಆರ್‌ಸಿಬಿ ಬೆಂಬಲಕ್ಕೆ 'ಕಾಂತಾರಾ ಬಾಸ್' ಜೋಡಿ, ಚಿನ್ನಸ್ವಾಮಿಯಲ್ಲಿ ಸ್ಟಾರ್ಸ್‌ ಕಲವರ!

27 ರನ್ ಅಂತರದ ಗೆಲುವು ಸಾಧಿಸಿದ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದರೆ, ಸಿಎಸ್‌ಕೆ ಟೂರ್ನಿಯಿಂದ ಹೊರಬಿದ್ದಿತು. ಇತ್ತ ಧೋನಿ ಅಭಿಮಾನಿಗಳು ತೀವ್ರ ಬೇಸರ ಗೊಂಡಿದ್ದಾರೆ. ಆದರೆ ಆರ್‌ಸಿಬಿ ಅಭಿಮಾನಿಗಳ ಖುಷಿ ಹೇಳತೀರದು.

click me!