ವಿಶ್ವದ ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲೊಂದು ಯುಪಿಎಸ್‌ಸಿ.. ಇದರಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಆದರೆ ಬಹುತೇಕರು ಈ ಪರೀಕ್ಷೆ ಪಾಸ್ ಆಗುವುದರಲ್ಲಿ ವಿಫಲರಾಗುತ್ತಾರೆ. ಆದರೆ ಈಕೆ ನಾಲ್ಕಕ್ಕಿಂತ ಹೆಚ್ಚು ಬಾರಿ ಪರೀಕ್ಷೆಯಲ್ಲಿ ವಿಫಲರಾದರೂ ಮತ್ತೆ ಮತ್ತೆ ಪರೀಕ್ಷೆ ಬರೆದು ಐಎಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಆಕೆಯ ಹೆಸರು ಪ್ರಿಯಾಂಕ ಗೋಯಲ್..
ಈಕೆಯನ್ನು ನೋಡಿದರೆ ಐಎಎಸ್ ಆಫೀಸರ್ ಎಂದು ಹೇಳುವುದು ಕಷ್ಟ. ನೋಡಲು ಥೇಟ್ ಮಾಡೆಲ್‌ನಂತಿರೋ ಈ ಬ್ಯೂಟಿಕ್ವೀನ್ ಅಧಿಕಾರಿ ಎಂದರೆ ನಂಬಲು ಸಾಧ್ಯವಿಲ್ಲ.
ಆದರೆ ಪ್ರಿಯಾಂಕ ಹಲವಾರು ಬಾರಿ ಎಕ್ಸಾಂ ಬರೆದು ತಮ್ಮ ಆರನೇ ಅಂಟೆಪ್ಟ್‌ನಲ್ಲಿ ಎಕ್ಸಾಂ ಪಾಸ್ ಮಾಡಿದ್ದಾರೆ. ಹೆಚ್ಚಾಗಿ ಮಾಡರ್ನ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಪ್ರಿಯಾಂಕಾ ಗೋಯೆಲ್ ಹುಟ್ಟಿ ಬೆಳೆದದ್ದು ದೆಹಲಿಯಲ್ಲಿ. ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಮುಗಿಸಿ ನಂತರ UPSC ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಆರಂಭದಲ್ಲಿ ಹಲವಾರು ಬಾರಿ ಎಕ್ಸಾಂ ಬರೆದಾಗಲೂ ಪ್ರಿಯಾಂಕ ಫೇಲ್ ಆದರು. ನಂತರ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ, ಪರೀಕ್ಷೆಯಲ್ಲಿ ಉತ್ತೀರ್ಣರಾದರು. 369 ರ್ಯಾಂಕ್ ಗಳಿಸಿದರು. 2023ರಲ್ಲಿ IAS ಅಧಿಕಾರಿಯಾದರು.
ಅಡೆತಡೆಗಳ ನಡುವೆಯೂ, ಪ್ರಿಯಾಂಕಾ ತನ್ನ ಕನಸನ್ನು ಎಂದಿಗೂ ಬಿಡಲಿಲ್ಲ ಮತ್ತು ತನ್ನ ಸಮರ್ಪಣೆ ಮತ್ತು ದೃಢಸಂಕಲ್ಪದಿಂದ ನಾಗರಿಕ ಸೇವೆ ಪರೀಕ್ಷೆಯನ್ನು ಪಾಸ್ ಮಾಡಿದರು. ತನ್ನ ಆರು ವರ್ಷಗಳ ಪ್ರಯಾಣದ ಅವಧಿಯಲ್ಲಿ, ಪ್ರಿಯಾಂಕ, ಸಾಕಷ್ಟು ಅವಮಾನ ಮತ್ತು ಹಿನ್ನಡೆಗಳನ್ನು ಅನುಭವಿಸಿದರು.
ಆದರೆ ಅವರ ಕಠಿಣ ಪರಿಶ್ರಮವು ಫಲ ನೀಡಿತು. ಪ್ರಿಯಾಂಕಾ ಸಾರ್ವಜನಿಕ ಆಡಳಿತದ ತನ್ನ ಐಚ್ಛಿಕ ವಿಷಯದಲ್ಲಿ 292 ಅಂಕಗಳೊಂದಿಗೆ ಅತ್ಯಧಿಕ ಅಂಕಗಳನ್ನು ಪಡೆದರು. ಅಂತಿಮ ಪಟ್ಟಿಯಲ್ಲಿ, ಒಟ್ಟು 965 ಅಂಕಗಳನ್ನು ಪಡೆದರು.
ತನ್ನ ಸಕ್ರಿಯ ಸಾಮಾಜಿಕ ಮಾಧ್ಯಮ ಉಪಸ್ಥಿತಿಯಿಂದಾಗಿ ಪ್ರಿಯಾಂಕಾ ಗೋಯೆಲ್ Instagramನಲ್ಲಿ 184K ಫಾಲೋವರ್ಸ್‌ನ್ನು ಹೊಂದಿದ್ದಾರೆ. ಪ್ರಿಯಾಂಕಾ ಆಗಾಗ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಫೋಟೋಗಳನ್ನಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.