ಯಾವ ಬಿಪಿಎಲ್ ಕಾರ್ಡ್, ಯಾವ ಗ್ಯಾರಂಟಿ ಕೂಡ ಬಂದ್ ಆಗಲ್ಲ. ಬಿಜೆಪಿಯವರು ಪ್ರತಿಭಟನೆ ಮಾಡುವುದರ ಮೂಲಕ ನಾವು ಬಡವರ ಪರ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಚಾರ ಕೊಡ್ತಾ ಇದ್ದಾರೆ ಎಂದ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಕಾರವಾರ(ನ.21): ಬಿಜೆಪಿ ಸರ್ಕಾರ ಇದ್ದಾಗ ಅವರು ಇನ್ಸ್ಟಿಟ್ಯೂಟ್ ಹಾಗೂ ಪಕ್ಷದ ಕಚೇರಿ ಕಟ್ಟಿಕೊಂಡಿದ್ದಾರೆ. ನಮ್ಮಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು ಬೇರೆ ಕಡೆ ಸ್ಪ್ಲಿಟ್ ಆಗಿದ್ದಾರೆ. ಗಾಂಧೀಜಿ ಕಾಂಗ್ರೆಸ್ ನಾಯಕತ್ವ ವಹಿಸಿ ನೂರು ವರ್ಷ ಆಗ್ತಾ ಇದೆ. ಹಾಗಾಗಿ ಈ ವರ್ಷ ನೂರು ಕಚೇರಿ ಪ್ರಾರಂಭ ಮಾಡಬೇಕು ಅಂತ ತೀರ್ಮಾನ ಮಾಡಿದೇವೆ. ಆ ಉದ್ದೇಶಕ್ಕೆ ಗೃಹ ಸಚಿವ ಪರಮೇಶ್ವರ್ ಹೇಳಿರ್ತಾರೆ ಹೊರೆತು ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
50,100 ಕೋಟಿ ರೂ.ಗೆ ಶಾಸಕರಿಂದ ಸಿಎಂಗೆ ಬ್ಲ್ಯಾಕ್ ಮೇಲ್ ಎಂದು ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಅವರು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳೋಕೆ ಈ ರೀತಿ ಹೇಳ್ತಾ ಇದಾರೆ. ಈ ಹಿಂದೆ ಬಿಜೆಪಿಯ ಯತ್ನಾಳ್ ಸಾವಿರ ಕೋಟಿ ರೂಪಾಯಿ ಕುರಿತು ಆರೋಪ ಮಾಡಿದ್ರು. ಆಗ ಯಾಕೆ ಕೇಂದ್ರ ಗೃಹ ಸಚಿವರು ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ?. ಇ.ಡಿ, ಸಿಬಿಐ ಅಥವಾ ಅವರ ಗೃಹ ಸಚಿವರಾದ್ರೂ ಬಂದು ತನಿಖೆ ಮಾಡಬೇಕಿತಲ್ವಾ?. ಯಾರು ಕೊಟ್ರು ಹೆಂಗೆ, ಎಷ್ಟು ಕೊಟ್ರು ಅಂತಾ ಹೊರಗೆ ಬರ್ತಿತ್ತು ಅಲ್ವಾ?. ಯತ್ನಾಳ್ ಅಂದು ಯಾರ ಮೇಲೆ ಹೇಳಿದ್ದು? ಅದನ್ನು ಮುಚ್ಚಿಕೊಳ್ಳೊಕೆ ಇಂದು ನಮ್ಮವರ ಮೇಲೆ ಹೇಳುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ.
undefined
ಪೈಲಟ್ ಇಲ್ಲದೇ 20 ನಿಮಿಷ ಪರದಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್!
ಯಾವ ಬಿಪಿಎಲ್ ಕಾರ್ಡ್, ಯಾವ ಗ್ಯಾರಂಟಿ ಕೂಡ ಬಂದ್ ಆಗಲ್ಲ. ಬಿಜೆಪಿಯವರು ಪ್ರತಿಭಟನೆ ಮಾಡುವುದರ ಮೂಲಕ ನಾವು ಬಡವರ ಪರ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಚಾರ ಕೊಡ್ತಾ ಇದ್ದಾರೆ ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಪತ್ನಿ ಸಮೇತ ಡಿಕೆಶಿ ಟೆಂಪಲ್ ರನ್: ದೇವಸ್ಥಾನಗಳಲ್ಲಿ ವಿಶೇಷ ಪೂಜೆ!
ಕಾರವಾರ: ಉತ್ತರಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಂತಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಶುರು ಮಾಡಿದ್ದಾರೆ. ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಪತ್ನಿ ಜೊತೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಡಗುಂಜಿ ಬಳಿಕ ಮುರುಡೇಶ್ವರ ಕ್ಷೇತ್ರಕ್ಕೂ ಪತ್ನಿ ಸಮೇತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ದರ್ಶನವನ್ನ ಪಡೆದುಕೊಂಡಿದ್ದಾರೆ. ಮುರುಡೇಶ್ವರನಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಭಟ್ಕಳದ ಮುರುಡೇಶ್ವರದಲ್ಲಿ ನಡೆಯುತ್ತಿರುವ ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಬಿಜೆಪಿ MLA ಸಿಕೆ ರಾಮಮೂರ್ತಿ ನನ್ನ ಟೀಕಿಸಿದ್ರು, ಅದಕ್ಕೆ ಜಯನಗರಕ್ಕೆ ಅನುದಾನ ನಿಲ್ಲಿಸಿದ್ದೆ: ಡಿಕೆ ಶಿವಕುಮಾರ್
ಮುರುಡೇಶ್ವರದಲ್ಲಿ ಮತ್ಸ್ಯಮೇಳ-2024 ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಂದಿನಿ ಹಾಲು ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದಾರೆ. ಕರಾವಳಿಯಲ್ಲಿ ಮೀನು ಪ್ರಚಾರ ಮಾಡಲೆಂದು ನಾನು ಮುರುಡೇಶ್ವರ ಬಂದಿದ್ದೇನೆ. ಭಾಷಣದುದ್ದಕ್ಕೂ ಮಾಂಕಾಳು ವೈದ್ಯರನ್ನು ಮಣಕಾಲು ವೈದ್ಯ ಎಂದು ಕರೆದಿದ್ದಾರೆ.
ಮೀನುಗಾರರು ನೀರಿನಲ್ಲಿ, ಸಮುದ್ರದಲ್ಲಿ ಮೀನು ಕೃಷಿ ಮಾಡ್ತಾರೆ. ಮೀನುಗಾರರಿಗೆ ಯಾವುದೇ ಲಂಚ, ಪ್ರಮೋಷನ್ ಇಲ್ಲ. ಸೂರ್ಯ, ಬೆಳಕು, ನೀರನ್ನು ನಂಬಿಕೊಂಡು ಇಡೀ ಸಮಾಜಕ್ಕೆ ಸಹಾಯ ಮಾಡ್ತಿದ್ದಾರೆ. ಮೀನುಗಾರರು ಸ್ವಂತಕ್ಕೇನೂ ಮಾಡ್ತಿಲ್ಲ, ಯಾವ ಮೀನುಗಾರನೂ ಕೋಟ್ಯಾಂತರ ಹಣ ಸಂಪಾದಿಸಿರೋದು ನಾನು ನೋಡಿಲ್ಲ. ಮೀನುಗಾರರ ಬದುಕು ಹಸಿರು ಮಾಡಬೇಕೆಂದು ನನ್ನ ಆಸೆಯಾಗಿದೆ. ಮೀನುಗಾರರ ಸಂಕಷ್ಟ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಜಿಲ್ಲೆಯಲ್ಲಿ ಹಲವು ಬಂದರುಗಳು ನಿರ್ಮಾಣವಾಗಬೇಕು. ಯುವಕರು ಇಲ್ಲಿ ಕೋಮುಗಲಭೆಗಳಲ್ಲಿ ತೊಡಗಿದ್ರು, ಅದನ್ನು ನಾವು ತಪ್ಪಿಸ್ತೇವೆ. ಯುವಕರ ಉತ್ತಮ ಬದುಕು ಸೃಷ್ಠಿಗಾಗಿ ಒಳ್ಳೆಯ ಅವಕಾಶ ಕಲ್ಪಿಸ್ತೇವೆ. ಕರಾವಳಿಗೆ ಪ್ರವಾಸೋದ್ಯಮ ನೀತಿ ಜಾರಿ ತರಲು ನಿರ್ಧರಿಸಿದ್ದೇವೆ. ಕರಾವಳಿಯಲ್ಲಿ ಅಭಿವೃದ್ಧಿ ಹಾಗೂ ದೊಡ್ಡ ಉದ್ಯಮ ಬೆಳೆಸಲು ಯೋಚನೆಯಿದೆ. ಬಂದರು ನಿರ್ಮಾಣದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಸಿಗುತ್ತದೆ ಎಂದು ತಿಳಿಸಿದ್ದಾರೆ.