ಕರ್ನಾಟಕ ಉಪ ಚುನಾವಣೆ ಫಲಿತಾಂಶ; ಅಭ್ಯರ್ಥಿಗಳ ಗೆಲುವಿಗಿಂತ ಮುಖ್ಯವಾಗಿ ದೊಡ್ಡವರ ತಲೆದಂಡ ಚಿಂತೆ!

ಕರ್ನಾಟಕ ಉಪ ಚುನಾವಣೆ ಫಲಿತಾಂಶ; ಅಭ್ಯರ್ಥಿಗಳ ಗೆಲುವಿಗಿಂತ ಮುಖ್ಯವಾಗಿ ದೊಡ್ಡವರ ತಲೆದಂಡ ಚಿಂತೆ!

Published : Nov 21, 2024, 08:54 PM IST

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದಿಂದ ದೊಡ್ಡ ರಾಜಕೀಯ ಬದಲಾವಣೆಗಳು ಸಂಭವಿಸಬಹುದು. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಪೈಪೋಟಿ, ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಶಿಗ್ಗಾಂವಿ ಮತ್ತು ಸಂಡೂರಿನ ಫಲಿತಾಂಶಗಳು ಕೂಡ ಪ್ರಮುಖ ನಾಯಕರ ರಾಜಕೀಯದ ಮೇಲೆ ಪ್ರಭಾವ ಬೀರಲಿವೆ.

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶಕ್ಕೆ ಇನ್ನೂ ಒಂದು ದಿನ ಕಾಯಬೇಕಿದೆ. ಆದರೆ, ಚನ್ನಪಟ್ಟಣದಲ್ಲಿ ರಿಸಲ್ಟ್ ಏನೇ ಬಂದರೂ ದೊಡ್ಡ ರಾಜಕೀಯ ಬದಲಾವಣೆಯಂತೂ ಆಗುತ್ತದೆ. ಮಾಜಿ ಶಸಕ ಸಿ.ಪಿ. ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣದ ಶಾಸಕ ಪಟ್ಟ ಬೇಕು. ಇಷ್ಟಕ್ಕೆ ಮಾತ್ರವೇ ಬೊಂಬೆನಾಡಿನ ರಣಾಂಗಣ ಸೀಮಿತವಾಗಿರಲಿಲ್ಲ. ಇವರಬ್ಬರ ಸೋಲು-ಗೆಲುವು ಮತ್ತಿಬ್ಬರು ದಿಗ್ಗಜ ನಾಯಕರ ಪಾಲಿಟಿಕ್ಸ್ ಮೇಲೆ ಪ್ರಭಾವ ಬೀರುತ್ತದೆ.

ಒಂದು ಕಡೆ ಕನಕಪುರ ಬಂಡೆ ಖ್ಯಾತಿಯ ಡಿಸಿಎಂ ಡಿ.ಕೆ. ಶಿವಕುಮಾರ್ ಗಟ್ಟಿಯಾಗೋದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರಿಗೆ ವಿಜಯಮಾಲೆ ಒಲಿಯಲೇಬೇಕು. ಮತ್ತೊಂದೆಡೆ ದಳಪತಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಶಕ್ತಿ ಬೇಕು ಎಂದರೆ ಅವರ ಪುತ್ರನಿಗೆ ಗೆಲವು ಪ್ರಾಪ್ತಿಯಾಗಲೇಬೇಕು. ಇಲ್ಲವಾದರೆ, ಇಬ್ಬರಿಗೂ ಮುಂದೆ ಕಾದಿರೋದು ಮಹಾ ಆಪತ್ತು. ಒಬ್ಬರಿಗೆ ಸಿಎಂ ಕನಸಿನ್ನು ಈಡೇರಿಸಿದರೆ, ಮತ್ತೊಬ್ಬರಿಗೆ ತನ್ನ ನಂತರದ ರಾಜಕೀಯ ರಾಯಭಾರಿ ಹುಟ್ಟಲಿದ್ದಾರೆ.

ಇದು ಚನ್ನಪಟ್ಟಣ ಕಥೆಯಾದರೆ, ಶಿಗ್ಗಾಂವಿ ಹಾಗೂ ಸಂಡೂರಿನ ಫಲಿತಾಂಶವೂ ಕೆಲವು  ದಿಗ್ಗಜರ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಸಂಡೂರು ಹಾಗೂ ಶಿಗ್ಗಾಂವಿ ಚುನಾವಣಾ ರಿಸೆಲ್ಟ್ ಕೇವಲ ಅಭ್ಯರ್ಥಿಗಳಿಗೆ ಮಾತ್ರವೇ ಇಂಪಾರ್ಟೆಂಟ್ ಆಗಿ ಉಳಿದಿಲ್ಲ. ಕೆಲವು ಪ್ರಮುಖ ನಾಯಕರ ಮುಂದಿನ ರಾಜಕೀಯದ ಮೇಲೂ ಇಲ್ಲಿನ ಸೋಲು, ಗೆಲುವಿನ ಫ್ಯಾಕ್ಟರ್ ಪ್ರಭಾವ ಬೀರೋ ಸಾಧ್ಯತೆಯಿದೆ.

21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?