ಹಾಟ್ ಡ್ರೆಸ್ಸಲ್ಲಿ ಶ್ವೇತಾ ಪ್ರಸಾದ್, ಸೇಮ್ ಸಮಂತಾ ತರಾನೇ ಕಾಣ್ತೀರಾ ಎಂದ ನೆಟ್ಟಿಗರು!

First Published Oct 4, 2023, 1:17 PM IST

ಕಿರುತೆರೆ ನಟಿ ಶ್ವೇತಾ ಆರ್ ಪ್ರಸಾದ್ ಹೊಸ ಫೋಟೋ ಶೂಟ್ ಮಾಡಿಸಿದ್ದು, ನಟಿಯ ಹಾಟ್ ಫೋಟೋ ಶೂಟ್ ಗೆ ನೆಟ್ಟಿಗರು ಫಿದಾ ಆಗಿದ್ದು, ಸೇಮ್ ಸಮಂತಾ ತರಾನೆ ಕಾಣಿಸ್ತಿದ್ದೀರಾ ಎಂದಿದ್ದಾರೆ. 
 

ಶ್ರೀರಸ್ತು ಶುಭಮಸ್ತು, ರಾಧಾ ರಮಣ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿರುವ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಆರ್ ಪ್ರಸಾದ್ (Shwetha R Prasad). ಇದೀಗ ತಮ್ಮ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ. 
 

ರಾಧಾ ರಮಣ ಸೀರಿಯಲ್ (Radha Ramana serial) ನಿಂದ ಅರ್ಧದಲ್ಲೇ ಹೊರ ಬಂದಿದ್ದ ನಟಿ ಶ್ವೇತಾ, ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ತಮ್ಮ ಸೋಶಿಯಲ್ ವರ್ಕ್ ಮತ್ತು ಟ್ರಾವೆಲ್, ಸೋಶಿಯಲ್ ಮೀಡಿಯಾ ಫೋಟೋಗಳ ಮೂಲಕವೇ ನಟಿ ಜನರಿಗೆ ಹತ್ತಿರವಾಗಿದ್ದರು. 
 

Latest Videos


ನಟನೆಯಿಂದ ದೂರ ಇದ್ದರೂ ನಟಿ ಇಂದಿಗೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮೋಸ್ಟ್ ಡಿಸೈರೇಬಲ್ ವಿಮೆನ್ (Most desirable women) ಲಿಸ್ಟ್ ನಲ್ಲಿ ಇವರ ಹೆಸರು ಇದ್ದೇ ಇರುತ್ತೆ. ಈ ಬಾರಿ ನಟಿ ತಮ್ಮ ಮೂನ್ ಫೋಟೋ ಶೂಟ್ ಮೂಲಕ ಸದ್ದು ಮಾಡ್ತಾ ಇದ್ದಾರೆ. 
 

ಕೆಂಪು ಬಣ್ಣದ ಶಾರ್ಟ್ ಡ್ರೆಸ್ ಧರಿಸಿ, ದೊಡ್ಡದಾದ ಮೂನ್ ಅಂದ್ರೆ ಚಂದ್ರನ ಲೈಟ್ ಮುಂದೆ ನಿಂತು ಎರಡೂ ಕೈಗಳನ್ನು ಚಾಚಿಕೊಂಡು, ಕಣ್ಣು ಮುಚ್ಚಿರುವ ಶ್ವೇತಾ ಫೋಟೋ ಸಖತ್ ವೈರಲ್ ಆಗುತ್ತಿದೆ. ಶ್ವೇತಾ ಈ ಚಿತ್ರದಲ್ಲಿ ನಿಜಕ್ಕೂ ಚಂದ್ರ ಲೋಕದ ಅಪ್ಸರೆಯಂತೆ ಕಾಣಿಸುತ್ತಿದ್ದಾರೆ. 
 

ಶ್ವೇತಾ ಫೋಟೋಗೆ ನೆಟ್ಟಿಗರು ಅಪಾರ ಪ್ರೀತಿ ಹರಿಸಿದ್ದು, ಒಬ್ಬರು ಮೇಡಂ ನೀವು  ಸೇಮ್ ಸಮಂತಾ ತರಾನೇ ಕಾಣ್ತೀರಾ ಎಂದು ಹೇಳಿದ್ದಾರೆ. ಇನ್ನೊಬ್ಬರು ಚಂದ್ರ ಉಸಿರಾಡೋದಿಲ್ಲ, ಆದ್ರೆ ನಿಮ್ಮಂತ ಬ್ಯೂಟಿ ಚಂದ್ರನ ಜೊತೆ ನಿಂತಾಗ ನಮ್ಮ ಉಸಿರಾಟವನ್ನೇ ನಿಲ್ಲಿಸಬಹುದು ಎಂದು ಹೇಳಿದ್ದಾರೆ. 
 

ಇತ್ತೀಚೆಗಷ್ಟೇ ನಟಿ ಗ್ಲೋ ಜ್ಯುವೆಲ್ ಆನ್ ಲೈನ್ ಅವರ ಡೈಮಂಡ್ ಜ್ಯುವೆಲ್ಲರಿಗಳ ಜಾಹೀರಾತಿನಲ್ಲಿ ಸಖತ್ತಾಗಿ ಮಿಂಚಿದ್ದರು. ಇದರ ಲಾಂಚಿಂಗ್ ಕಾರ್ಯಕ್ರಮದಲ್ಲಿ ಶ್ವೇತಾ ಮಿಂಚಿದ್ದರು. ಡೈಮಂಡ್ ಇಯರಿಂಗ್ಸ್, ನೆಕ್ ಪೀಸ್ ಧರಿಸಿ ಸಖತ್ತಾಗಿ ಕಾಣಿಸುತ್ತಿದ್ದರು. 
 

ಸೋಶಿಯಲ್ ಮೀಡಿಯಾದಲ್ಲಿ (Social media) ತುಂಬಾನೆ ಆಕ್ಟೀವ್ ಆಗಿರುವ ಶ್ವೇತಾ ಪ್ರಸಾದ್ ಹೆಚ್ಚಾಗಿ ಫೋಟೋ ಶೂಟ್ ಮಾಡಿಸಿಕೊಂಡು, ತಮ್ಮ ಮಾಡರ್ನ್, ಟ್ರೆಡಿಶನಲ್ ಫೋಟೊ, ವಿಡೀಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

ಸೀರಿಯಲ್ ಗಳಿಂದ ದೂರ ಇದ್ದರೂ ನಟಿ ಹೆಚ್ಚಿನ ಫ್ಯಾಷನ್ ಬ್ರ್ಯಾಂಡ್ (Fashion Brand), ಜ್ಯುವೆಲ್ಲರಿ ಸಂಸ್ಥೆಗಳ ಜೊತೆ ಕೊಲಾಬರೇಶನ್ ಮಾಡಿಕೊಂಡು, ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ಮತ್ತೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 
 

click me!