ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಿಚ್ಚನೇ ಸ್ಪೂರ್ಥಿ ಸಾರಥಿ...ಯಾಕೆ ಕಿಚ್ಚ ಇರ್ತಾರೆ ಇರಲ್ಲ ಅನ್ನೋ ಚರ್ಚೆ ಹೆಚ್ಚಾಗುತ್ತದೆ?
ಕನ್ನಡ ಕಿರುತೆರೆ ಪ್ರೇಕ್ಷಕರ ದೃಷ್ಟಿ ಬಿಗ್ಬಾಸ್ ಸೀಸನ್ 11ರ ಮೇಲಿದೆ, ಬಿಬಿ ಕಾರ್ಯಕ್ರಮಕ್ಕೆ ಕಾಯೋ ಕಣ್ಣುಗಳೇ ಹೆಚ್ಚು. ಈ ಬಾರಿ ಬಿಗ್ ಬಾಸ್ ಯಾರಿರುತ್ತಾರೆ ಅನ್ನೋ ಕುತೂಹಲಕ್ಕಿಂತ ಕಾರ್ಯಕ್ರಮವನ್ನ ಯಾರು ನಡೆಸಿಕೊಡುತ್ತಾರೆ ಅನ್ನೋ ಎಕ್ಸೈಟ್ಮೆಂಟ್ ಹೆಚ್ಚಾಗಿದೆ. ಯಾಕಂದ್ರೆ ಈ ಸಲ ಕಿಚ್ಚ ಸುದೀಪ್ ನಿರೂಪಣೆ ಇರೋಲ್ಲ ಅನ್ನೋ ಮಾತಿತ್ತು. ಈಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ರಿಯಾಲಿಟಿ ಶೋಗಳಲ್ಲಿ ಟಾಪ್ ಕ್ಲಾಸ್ ಕಾರ್ಯಕ್ರಮ ಅನಿಸಿಕೊಂಡಿರುವ ಬಿಗ್ಬಾಸ್ಗಾಗಿ ಕನ್ನಡ ಕಿರುತೆರೆ ಪ್ರೇಕ್ಷಕರು ಕಾಯದೇ ಇರೋ ದಿನಗಳಲ್ಲಿ. ಕಾರ್ಯಕ್ರಮ ಶುರುವಾಗಿ 100 ಆದರೆ ಸಾಕು ಬಿಗ್ ಬಾಸ್ ಮುಗೀತು ಮತ್ತಿನ್ಯಾವಾಗ ಅಂತ ಕಾಯ್ತಾರೆ. ಅಷ್ಟೆ ಅಲ್ಲ ಬಿಗ್ಬಾಸ್ ವಾರ ಕಥೆ, ಕಿಚ್ಚನ ಪಂಚಾಯತಿ ಕಟ್ಟೆಯನ್ನು ನೋಡಿ ಖುಷಿ ಪಡುತ್ತಾರೆ. ಆದರೆ ಈ ಭಾರಿ ಬಿಗ್ಬಾಸ್ ಸೀಸನ್ 11ರಲ್ಲಿ ಸುದೀಪ್ ಇರೋಲ್ಲ ಅಂತ ಹೇಳಲಾಗಿತ್ತು. ಈಗ ಬಿಬಿಕೆ11ರ ಪ್ರೋಮೋ ಹೊರ ಬಂದಿದ್ದು, ಕಿಚ್ಚನಿಲ್ಲದ ಬಿಗ್ಬಾಸ್ ಎಂದವರಿಗೆ ಉತ್ತರ ಸಿಕ್ಕಿದೆ.
BK 11ರ ಈ ಪ್ರೋಮೋದಲ್ಲಿ ಅತಿ ಹೆಚ್ಚು ಹೈಲೈಟ್ ಆಗಿರುವುದು ಕಿಚ್ಚ ಸುದೀಪ್. ಈ ಬಾರಿ ಆ್ಯಂಕರ್ ಬದಲಾಗುತ್ತಾರೆ ಎಂಬ ಗಾಸಿಪ್ ಇತ್ತು. ಗೊಂದಲ ಸೃಷ್ಟಿಸುವ ಪ್ರೋಮೋ ಬಂದಿತ್ತು ಆದರೆ ಈಗ ಬಿಡುಗಡೆ ಆಗಿರುವ ಹೊಸ ಪ್ರೋಮೋದಲ್ಲಿ ಸುದೀಪ್ ವಿಜೃಂಭಿಸಿದ್ದಾರೆ. ಎಲ್ಲ ಅನುಮಾನಗಳು ಬಗೆಹರಿದಿವೆ. ‘ಬಿಬಿಕೆ 11’ ಪ್ರೋಮೋ ನೋಡಿದ ಜನ ಮಹಾಭಾರತಕ್ಕೆ ಕೃಷ್ಣ, ಬಿಗ್ ಬಾಸ್ಗೆ ಕಿಚ್ಚ ಎಂದು ಕೊಂಡಾಡುತ್ತಿದ್ದಾರೆ.
ಲೈವ್ ಇರಲ್ಲ, ಎಕ್ಸಟ್ರಾ ವಿಡಿಯೋ ಕೊಡಲ್ಲ; ಬಿಗ್ ಬಾಸ್ ಸೀಸನ್ 11ರ ಬಗ್ಗೆ ಮುಚ್ಚಿಟ್ಟಿದ್ದ ಬೇಸರದ ಸತ್ಯ ಇಲ್ಲಿದೆ!
ಬಾದ್ ಷಾ ಸುದೀಪ್ ಇಲ್ಲದ ಬಿಗ್ಬಾಸ್ ಅನ್ನು ನಿಜಕ್ಕೂ ಊಹಿಸಿಕೊಳ್ಳಲಾಗಲ್ಲ. ಆದ್ರೂ ಈ ಭಾರಿ ಬಿಗ್ಬಾಸ್ ವಾರದ ಕತೆಯಲ್ಲಿ ಕಿಚ್ಚನ ಸ್ಥಾನಕ್ಕೆ ರಿಷಬ್ ಶೆಟ್ಟಿ ಬರ್ತಾರೆ. ರಮೇಶ್ ಅರವಿಂದ್ ಇರುತ್ತಾರೆ ಅಂತೆಲ್ಲಾ ಟಾಕ್ ಆಗಿತ್ತು. ಆದರೆ ಅದು ಮಾತಷ್ಟೆ. ಬಿಗ್ಬಾಸ್ಗೆ ಸುದೀಪ್ ಇದ್ದರೇನೇ ಅದೊಂದು ಕಾರ್ಯಕ್ರಮ ಅನಿಸಿಕೊಳ್ಳುತ್ತೆ. ಸೆಪ್ಟೆಂಬರ್ 29ರಿಂದ ಬಿಗ್ಬಾಸ್ ಕಾರ್ಯಕ್ರಮ ಶುರುವಾಗುತ್ತಿದೆ.ಇನ್ನು ಸೀಸನ್ 11ರ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವುದು ಗಿಚ್ಚಿ ಗಿಲಿಗಿಲಿ ವಿನ್ನರ್ ಹುಲಿ ಕಾರ್ತಿಕ್, ಗೀತಾ ಸೀರಿಯಲ್ ಭವ್ಯಾ ಗೌಡ, ಪಾರು ಸೀರಿಯಲ್ ಮೋಕ್ಷಿತಾ, ನಮ್ಮನೆ ಯುವರಾಣಿ ನಟ ದೀಪಕ್ ಗೌಡ, ಒಲವಿನ ನಿಲ್ದಾಣ ನಟ ಅಕ್ಷಯ್ ನಾಯಕ್,ಬೈಕ್ ರೈಡರ್ ಲೇಖಿ ಗೋಸ್ವಾಮಿ. ಇವೆರಲ್ಲಾ ಮನೆ ಎಂಟ್ರಿ ಕೊಟ್ಟರೆ ಖಂಡಿತಾ ಟಿಆರ್‌ಪಿ ರೈಸ್ ಆಗುವುದರಲ್ಲಿ ಅನುಮಾನವಿಲ್ಲ.
ಮಗನಿಗೆ ಡ್ರೈಫ್ರೂಟ್ಸ್ ತಂದುಕೊಟ್ಟ ತಾಯಿ ಮೀನಾ ತೂಗುದೀಪ್; ತಬ್ಬಿಕೊಂಡು ಕಣ್ಣೀರಿಟ್ಟ ದರ್ಶನ್!
ಪ್ರತಿ ಸೀಸನ್ ಆರಂಭಕ್ಕೂ ಮುನ್ನ ಸುದೀಪ್ ಇರ್ತಾರೆ ಇರಲ್ಲ ಅನ್ನೋ ಸುದ್ದಿ ಇರುತ್ತದೆ. ಸುದೀಪ್ ಇರ್ತಾರೆ ನಿರೂಪಣೆ ಮಾಡ್ತಾರೆ ಅಂದ್ರೂ ಜನರು ಇರಲ್ಲ ಇರಲ್ಲ ಅನ್ನುತ್ತಿರುವುದು ಯಾಕೆ? ನಮ್ಮ ಕಿಚ್ಚ ಯಾಕೆ ಪದೇ ಪದೇ ಟಾರ್ಗೆಟ್ ಆಗುತ್ತಿರುವುದು ಅಂತ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.