ಒಂದೇ ದಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 35.84 ಲಕ್ಷ ಪ್ರಕರಣಗಳ ಇತ್ಯರ್ಥ: ನ್ಯಾ.ವಿ.ಕಾಮೇಶ್ವರ್ ರಾವ್

By Govindaraj S  |  First Published Sep 20, 2024, 9:43 PM IST

ಸೆ.14ರಂದು ನಡೆದಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 35.84 ಲಕ್ಷ ಪ್ರಕರಣಗಳ ಇತ್ಯರ್ಥವಾಗಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ವಿ.ಕಾಮೇಶ್ವರ್ ರಾವ್ ತಿಳಿಸಿದ್ದಾರೆ. 


ಬೆಂಗಳೂರು (ಸೆ.20): ಸೆ.14ರಂದು ನಡೆದಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 35.84 ಲಕ್ಷ ಪ್ರಕರಣಗಳ ಇತ್ಯರ್ಥವಾಗಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ವಿ.ಕಾಮೇಶ್ವರ್ ರಾವ್ ತಿಳಿಸಿದ್ದಾರೆ. 1008 ಮಧ್ಯಸ್ಥಿಕೆ ಪೀಠಗಳಲ್ಲಿ 34 ಲಕ್ಷ ಪ್ರಕರಣಗಳ ಇತ್ಯರ್ಥವಾಗಿದ್ದು, ಒಟ್ಟು 2.402 ಕೋಟಿ ರೂ.ಪರಿಹಾರ ಮೊತ್ತ ಇತ್ಯರ್ಥವಾಗಿದೆ ಎಂದು ಹೇಳಿದ್ದಾರೆ. 

1669 ವೈವಾಹಿಕ ಪ್ರಕರಣಗಳ ಇತ್ಯರ್ಥ: 1669 ರ ಪೈಕಿ 248 ದಂಪತಿಗಳನ್ನ ರಾಜಿ ಸಂಧಾನ ಮೂಲಕ ಒಂದುಗೂಡಿಸಲಾಗಿದೆ. 2696 ಪಾಲುದಾರಿಕೆ ಪ್ರಕರಣಗಳ ಇತ್ಯರ್ಥವಾಗಿದ್ದು, 3621 ಮೋಟಾರು ವೆಹಿಕಲ್ ಪ್ರಕರಣಗಳ ಇತ್ಯರ್ಥವಾಗಿದೆ. 8517 ಚೆಕ್ ಬೌನ್ಸ್ ಪ್ರಕರಣಗಳು, 389 ಅಮಲ್ಜಾರಿ ಪ್ರಕರಣಗಳ ಇತ್ಯರ್ಥ ಪಡಿಸಲಾಗಿದ್ದು, 196 ಕೋಟಿ ಪರಿಹಾರ ಸಂದಾಯವಾಗಿದೆ. 623 ಎಂ.ವಿ.ಸಿ ಅಮಲ್ಜಾರಿ ಕೇಸ್ಗಳಿ, 2598 ಇತರೆ ಅಮಲ್ಜಾರಿ ಕೇಸ್ ಗಳ ಇತ್ಯರ್ಥವಾಗಿದೆ. 

Tap to resize

Latest Videos

ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ: ವಿಜಯೇಂದ್ರ

ಜೊತೆಗೆ ಒಂದೇ ಪ್ರಕರಣದಲ್ಲಿ 20 ಕೋಟಿ ರೂ. ಗೆ ಇತ್ಯರ್ಥವಾಗಿದೆ. ರಿಲಯನ್ಸ್ ಹೋಮ್ಸ್ ಫೈನಾನ್ಸ್ v/s ಸೈಕಾನ್ ಕಂಷ್ಟ್ರಕ್ಷನ್  ಪ್ರಕರಣದಲ್ಲಿ ಆದೇಶ ಹೊರಡಿಸಲಾಗಿದ್ದು, 26 ವರ್ಷಗಳ ಹಳೆಯ ಪ್ರಕರಣ ರಾಜಿ ಸಂದಾಯ ಇತ್ಯರ್ಥವಾಗಿದೆ. 1022 5 ವರ್ಷಕ್ಕಿಂತ ಹಳೆಯ ಹಾಗೂ 277 ಕೇಸ್‌ಗಳು 10 ವರ್ಷಕ್ಕಿಂತ ಹಳೆಯ ಹಾಗೂ 144 ಕೇಸ್‌ಗಳು 15 ವರ್ಷಕ್ಕಿಂತ ಹಳೆಯ ಕೇಸ್‌ಗಳು ಹಾಗೂ 1365 ಹಿರಿಯ ನಾಗರಿಕರ ಪ್ರಕರಣಗಳ ಇತ್ಯರ್ಥಪಡಿಸಲಾಗಿದೆ.

ಅದಾಲತ್‌ನಲ್ಲಿ ಒಂದಾದ ಅಗಲಿದ್ದ ದಂಪತಿ: ಬಸವನಬಾಗೇವಾಡಿ:ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಲಹದಿಂದ ದೂರವಾಗಿದ್ದ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಸಂಧಾನದಿಂದ ಮತ್ತೆ ಒಂದಾದರು. ಈ ವೇಳೆ ಪರಸ್ಪರ ಸಿಹಿ ತಿನ್ನಿಸಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ಲೋಕ ಅದಾಲತ್‌ನಲ್ಲಿ 72 ಸಿವ್ಹಿಲ್ ದಾವೆಗಳು, 6 ಚೆಕ್ ಬೌನ್ಸ್ ಪ್ರಕರಣ, 6 ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ ಪ್ರಕರಣಗಳು, 1 ಕೌಟುಂಬಿಕ ಪ್ರಕರಣ ಹಾಗೂ 1 ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣ ಸೇರಿ ನ್ಯಾಯಾಲಯದಲ್ಲಿ ಬಾಕಿ ಇದ್ದ 409 ಪ್ರಕರಣಗಳು ಹಾಗೂ 2114 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡವು.

ಒಂದು ದೇಶ, ಒಂದು ಚುನಾವಣೆ ಪ್ರಜಾಪ್ರಭುತ್ವ ವಿರೋಧಿ: ಸಂಸದೆ ಪ್ರಭಾ ಮಲ್ಲಿಕಾರ್ಜುನ

ಹಿರಿಯ ಸಿವ್ಹಿಲ್ ನ್ಯಾ. ತಯ್ಯಾಬಾ ಸುಲ್ತಾನ, ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾ. ಈಶ್ವರ ಮುಸಲ್ಮಾರಿ, ಸಿವ್ಹಿಲ್ ನ್ಯಾ.ತೇಜಶ್ವಿನಿ ಸೊಗಲದ, ಹೆಚ್ಚುವರಿ ಸಿವ್ಹಿಲ್ ನ್ಯಾ.ಸೌಮ್ಯ ಹೂಲಿ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ವಕೀಲರಾದ ಸದಾನಂದ ಬಶೆಟ್ಟಿ, ಮುರಗೇಶ ಯರನಾಳ, ಎಸ್.ಐ.ವಂದಾಲಮಠ, ಮನೋಜ ಕದಂ, ಈಶ್ವರ ಪರಮಗೊಂಡ, ಆರ್.ಜಿ.ಬೀಳಗಿ, ಭಾರತಿ ಪತ್ತಾರ, ಪ್ರಕಾಶ ಸಲಗರ ಇತರರು ಇದ್ದರು.

click me!