Sep 19, 2024, 11:28 PM IST
ಬೆಂಗಳೂರು (ಸೆ.19): ಆಂಧ್ರದಲ್ಲಿ ‘ತಿರುಪತಿ ಲಡ್ಡು’ ಲಡಾಯಿ ಬಿರುಗಾಳಿ ಎಬ್ಬಿಸಿದೆ. ‘ತಿರುಪತಿಯ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ' ಮಾಡಿದ್ದಾರೆ ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದಾರೆ.
ಜಗನ್ ಸರ್ಕಾರದ ವಿರುದ್ಧ CM ನಾಯ್ಡು ಗಂಭೀರ ಆರೋಪದ ಬೆನ್ನಲ್ಲಿಯೇ, ಇಡೀ ರಾಷ್ಟ್ರದಲ್ಲಿ ಈ ವಿಚಾರ ಸಂಚಲನ ಮೂಡಿಸಿದೆ. ಕರ್ನಾಟಕದ ಕೆಎಂಎಫ್ ಬದಲು ತಮಿಳುನಾಡಿನ ಕಂಪನಿಗೆ ಟಿಟಿಡಿಗೆ ತುಪ್ಪ ಪೂರೈಸುವ ಟೆಂಡರ್ ನೀಡಲಾಗಿತ್ತು. ಈ ಕಂಪನಿಯ ತುಪ್ಪದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಹಾಗೂ ಹಂದಿಯ ಕೊಬ್ಬಿನ ಅಂಶಗಳು ಪತ್ತೆಯಾಗಿವೆ.
ಇದನ್ನೂ ಓದಿ: ತಿರುಪತಿ ಲಾಡು ತಯಾರಿಸಲು ದನದ ಕೊಬ್ಬು, ಮೀನೆಣ್ಣೆ ಬಳಕೆ, ಟೆಸ್ಟ್ ರಿಪೋರ್ಟ್‌ನಿಂದ ದೃಢ
ಈ ನಡುವೆ CM ನಾಯ್ಡು ಆರೋಪವನ್ನು ವೈಎಸ್ಆರ್ ಕಾಂಗ್ರೆಸ್ ಅಲ್ಲಗಳೆದಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ರಾ ವೈಎಸ್ಆರ್ ಜಗನ್? ಜಗನ್ ಆಡಳಿತದಲ್ಲಿ ನಂದಿನಿ ತುಪ್ಪ ಖರೀದಿ ನಿಲ್ಲಿಸಿದ್ದೇಕೆ..? ಎನ್ನುವ ಪ್ರಶ್ನೆಗಳು ಎದುರಾಗಿದೆ.
ಇದನ್ನೂ ಓದಿ: History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!