ಬೋರ್‌ವೆಲ್‌ನಲ್ಲಿ ಪೆಟ್ರೋಲ್ ತೈಲ ತೆಗೆಯೋ ಆಸೆ: ಉದ್ಯಮಿಗೆ ಚೊಂಬು ತೋರಿಸಿ 25 ಕೋಟಿ ಪಂಗನಾಮ!

Sep 19, 2024, 7:55 PM IST

ಆತ ಸ್ಥಿತಿವಂತ, ಶಿಕ್ಷಣವಂತ, ಗುಣವಂತ ಹಾಗೂ ಸ್ವಲ್ಪ ಬುದ್ಧಿವಂತ. ಭೂಮಿಯ ಆಳದಲ್ಲಿ ನೀರು ಇದ್ಯೋ ಇಲ್ವೋ ಅಂತ ಪತ್ತೆ ಮಾಡುವ ಕಲೆಯನ್ನೂ ಸಿದ್ಧಿಸಿಕೊಂಡಿದ್ದ. ಬೋರ್​ವೆಲ್​ ಮೂಲಕ ನೀರು ಮೇಲೆ ತಗೆಯೋದು ಇದೇ ಅವನ ಬ್ಯುಸಿನೆಸ್​​. ಆದರೆ, ಈತನಿಗೆ ನಾನು ಇಲ್ಲೀವರೆಗೆ ನೀರನ್ನು ಮಾತ್ರ ತೆಗೆದಿದ್ದೇನೆ. ಅದೇ ರೀತಿ ಭೂಮಿಯಲ್ಲಿರುವ ಪೆಟ್ರೋಲ್​, ಡೀಸಲ್​ ಅನ್ನೂ ಪತ್ತೆ ಮಾಡಬೇಕೆಂಬ ಮಹದಾಸೆಯಿತ್ತು. ಈ ಆಸೆಯನ್ನ ನನಸಾಗಿಸಲು ಪ್ರಧಾನಿ ಮೋದಿವರೆಗೆ ಆತ ಹೋಗಿ ಬಂದಿದ್ದನು. ಆದರೆ, ಭೂಮಿಯಿಂದ ಬೋರ್‌ವೆಲ್ ಮೂಲಕ ಪೆಟ್ರೋಲ್, ಡೀಸೆಲ್ ತೆಗೆಯಬೇಕು ಎಂಬ ಆಸೆಯಿಂದ ತನ್ನ ಆಸ್ತಿ ಪಾಸ್ತಿಯನ್ನೆಲ್ಲಾ ಕಳೆದುಕೊಂಡಿದ್ದಾನೆ. ಇದಕ್ಕಾಗಿ ತನಗೆ ಇದ್ದ ಬದ್ದ ಆಸ್ತಿಯನ್ನೆಲ್ಲಾ ಕಂಡವರ ಪಾಲಾಗುವಂತೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಪೆಟ್ರೋಲ್​​​ ತಯಾರಿಸಲು ಹೋದವನು ಮೋಸ ಹೋಗಿದ್ದೇಗೆ..? ಅವನ ಆಸ್ತಿಯನ್ನ ಬರೆಸಿಕೊಂಡವರು ಯಾರು.? ಕ್ರೂಡ್​ ಆಯಿಲ್​​​ ಆಸೆಗೆ ಬಿದ್ದು ಬರ್ಬಾದ್​​ ಆದ ಬ್ಯುಸಿನೆಸ್​ ಮ್ಯಾನ್ ಕಥೆಯೇ ಇವತ್ತಿನ ಎಫ್​.ಐ.ಆರ್​​..

ತಿರುಪತಿ ಲಾಡು ತಯಾರಿಸಲು ದನದ ಕೊಬ್ಬು, ಮೀನೆಣ್ಣೆ ಬಳಕೆ, ಟೆಸ್ಟ್‌ ರಿಪೋರ್ಟ್‌ನಿಂದ ದೃಢ!

ಕಚ್ಚಾ ತೈಲದ ಬಾವಿ ತೋಡಬೇಕೆಂದು, ದೇಶಕ್ಕೆ ಸೇವೆ ಸಲ್ಲಿಸಬೇಕೆಂದು ಕನಸು ಕಾಣ್ತಿದ್ದ ಉದ್ಯಮಿ ಕಾಂತರಾಜುಗೆ ನಾಗರತ್ನಮ್ಮ ಆ್ಯಂಡ್​​ ಗ್ಯಾಂಗ್​​​ ಸಿಗುತ್ತದೆ. ಇನ್ನೇನು ನಾನು ಪೆಟ್ರೋಲ್​ ಬ್ಯುಸಿನೆಸ್​ ಸ್ಟಾರ್ಟ್​ ಮಾಡಿಬಿಡ್ತೀನಿ ಅಂತ ಖುಷಿಯಲ್ಲಿದ್ದ ಕಾಂತರಾಜು ನಿಧಾನವಾಗಿ ಕೋಟಿ ಕೋಟಿ ಆಸ್ತಿಯನ್ನ ಕಳೆದುಕೊಳ್ಳುತ್ತಾ ಹೋಗಿದ್ದಾರೆ. ನನಗೆ ಯಡಿಯೂರಪ್ಪರಿಂದ ಹಿಡಿದು ಅಮಿತ್​ ಶಾವರೆಗೆ ಎಲ್ಲರೂ ಪರಿಚಯ. ನಿಮಗೆ ಕ್ರೂಡ್​​ ಆಯಿಲ್​​​​ ಬ್ಯುಸಿನೆಸ್‌ಗೆ ನಾನು ಸಹಾಯ ಮಾಡ್ತೀನಿ. ಆದರೆ ನಮ್ಮ ಬಳಿ ಒಂದು ಚೆಂಬು ಇದೆ. ಆ ಚಂಬು ಸೇಲಾಗಬೇಕು. ಅದಕ್ಕೆ ನೀವು ನೆರವಾದರೆ ನಿಮಗೆ ಸಾವಿರ ಕೊಪ್ಪರಿಗೆಯ ಹಣ ಸಿಗುತ್ತೆ ಅಂತ ಪುಂಗೋದಕ್ಕೆ ಶುರು ಮಾಡ್ತಾರೆ. ಅದೊಂದು ಚೊಂಬನ್ನ ನಂಬಿದ ಕಾಂತರಾಜು ಕೋಟಿ ಕೋಟಿ ಬೆಲೆಯ ಆಸ್ತಿಯನ್ನ ಕಳೆದುಕೊಂಡಿದ್ದಾರೆ.

ಇನ್ನು ಕಾಂತರಾಜು ಹೇಳಿಕೊಳ್ಳೋಕೆ ಸುಶಿಕ್ಷಿತರು. ಆದರೆ, ಕೋಟಿ ಕೋಟಿ ಆಸ್ತಿಯನ್ನ ಕಡ್ಲೆಪುರಿ ಹಂಚಿದಂತೆ ಹಂಚಿಬಿಟ್ಟಿದ್ದಾರೆ. ಪೊಲೀಸರು ತನಿಖೆ ಶುರು ಮಾಡುತ್ತಿದ್ದಾರೆ. ಆದಷ್ಟು ಬೇಗ ಇವರ ಆಸ್ತಿ ವಾಪಸ್​ ಸಿಗಲಿ ಎನ್ನುವುದು ಹಾಗೂ ನಿಮ್ಮೆಲ್ಲರಿಗೂ ಪಾಠವಾಗಲಿ ಎನ್ನುವುದು ಈ ಸ್ಟೊರಿ ಆಶಯವಾಗಿದೆ.